ರಿಶಾ ಬಿಗ್ ಮನೆಯಿಂದ ಔಟ್!! ಮುಂದಿನ ವಾರ ಈ ಸ್ಪರ್ಧಿ ಹೊರಬರೋದು ಖಚಿತ

ಬಿಗ್ ಬಾಸ್ ಕನ್ನಡ ಸೀಸನ್ 12 ನಿನ್ನೆ ನಡೆದ ಎಪಿಸೋಡ್‌ನಲ್ಲಿ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದ್ದು ಎಲಿಮಿನೇಷನ್ ಪ್ರಕ್ರಿಯೆ. ಪ್ರತಿ ವಾರದಂತೆ ಈ ಬಾರಿ ಕೂಡಾ ಸ್ಪರ್ಧಿಗಳ ನಡುವೆ ತೀವ್ರ ಸ್ಪರ್ಧೆ ಕಂಡುಬಂದಿತು. ಕಿಚ್ಚ ಸುದೀಪ್ ಅವರ ಚರ್ಚೆ ನಿನ್ನೆ ಕೆಲವು ಚಟುವಟಿಕೆ ಮೂಲಕ ಸ್ಪರ್ದಿಗಳ ಒಳ ಮನಸ್ಸಿನ ಅಭಿಪ್ರಾಯ ಹೊರ ಹಾಕುವಂತೆ ಮಾಡಿತು. ಗಿಲ್ಲಿ ಹಾಗು ಅಶ್ವಿನಿ ಗೌಡ ಅವರ ವಿಚಾರವಾಗಿ ಚಟುವಟಿಕೆ ಮೂಲಕ ಅವರ ಅಭಿಪ್ರಾಯ ಎದುರಿರುವ ಸ್ಪರ್ಧಿಗಳ ಆಟದ ಗಮ್ಮತ್ತು ಅದರಲ್ಲಿ ಅಡಗಿತ್ತು. ನಾಮಿನೇಷನ್ ವಿವರ ನೋಡುವುದದಾದ್ರೆ ಈ ವಾರ ಧ್ರುವಂತ್, ಮಾಳು , ಜಾನ್ವಿ ಮತ್ತು ರಿಷಾ ಗೌಡ ನಾಮಿನೇಟ್ ಕೊನೆಯಲ್ಲಿ ಉಳಿದಿದ್ದರು. ಇವರಲ್ಲಿ ಪ್ರೇಕ್ಷಕರ ಮತದಾನವೇ ಅಂತಿಮ ನಿರ್ಧಾರಕ್ಕೆ ಕಾರಣವಾಯಿತು.

Risha Gowda
Risha Gowda

ಎಲಿಮಿನೇಷನ್ ಫಲಿತಾಂಶ ಅಂತಿಮ ಹಂತದಲ್ಲಿ ಧ್ರುವಂತ್ ಮತ್ತು ರಿಷಾ ನಡುವೆ ಕಠಿಣ ಪೈಪೋಟಿ ನಡೆಯಿತು. ಪ್ರೇಕ್ಷಕರ ಮತದಾನದಲ್ಲಿ ಧ್ರುವಂತ್ ಉಳಿದುಕೊಂಡರೆ, ರಿಷಾ ಗೌಡ ಮನೆ ಬಿಟ್ಟರು. ಈ ಎಲಿಮಿನೇಟ್ ಸಾಮಾಜಿಕ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ರಿಷಾ ಗೌಡ ಹೊರಹಾಕಲ್ಪಡುವ ಸಾಧ್ಯತೆಗಳ ಬಗ್ಗೆ ಚರ್ಚೆ ಕೂಡ ನಡೆದಿದ್ದು, ಅವರ ಧೈರ್ಯಶಾಲಿ ಹಾಗೂ ಮುಖಾಮುಖಿ ಶೈಲಿ ಪ್ರೇಕ್ಷಕರ ಗಮನ ಸೆಳೆಯಿತು ಎನ್ನಬಹುದು. ಅದೇ ಕಾರಣದಿಂದಾಗಿ ಕೆಲವರಿಗೆ ಅಸಮಾಧಾನ ಉಂಟಾಯಿತು.

ರಿಷಾ ಗೌಡ ಅವರ ಎಲಿಮಿನೇಷನ್ ಸರಿ ಇದೆ ಎಂದು ಕೆಲವರು ಅವರ ಅಭಿಪ್ರಾಯ ತಿಳಿಸಿದರೆ, ಇನ್ನು ಕೆಲವರು ಈ ನಿರ್ಧಾರ ಅರಗಿಸ್ಕೊಂಡಿಲ್ಲ. ಈಗ ಉಳಿದ ಸ್ಪರ್ಧಿಗಳ ನಡುವೆ ಸ್ಪರ್ಧೆ ಇನ್ನಷ್ಟು ತೀವ್ರವಾಗಲಿದ್ದು, ಮುಂದಿನ ವಾರಗಳು ಪ್ರೇಕ್ಷಕರಿಗೆ ಹೆಚ್ಚಿನ ರೋಚಕತೆಯನ್ನು ನೀಡಲಿವೆ. ಆದರೆ ಧ್ರುವಂತ್ ಮತ್ತೆ ಆಟಕ್ಕೆ ಇಳಿದಂತೆ ಕಂಡು ಬಂದಂತೆ ತೋರುತ್ತಿದೆ. ಮುಂದಿನ ದಿನಗಳಲ್ಲಿ ಸ್ಪಂದನ, ರಾಶಿಕಾ, ಕಾವ್ಯ, ರಕ್ಷಿತಾ ಆಟ ಚುರುಕು ಮಾಡಿಕೊಳ್ಳಲಿಲ್ಲ ಅಂದರೆ, ಅವರು ಬಹು ಬೇಗ ಹೊರಬರುವ ಸಾಧ್ಯತೆ ಇದೆ. ಇದರ ನಡುವೆ ಜಾಹ್ನವಿ ಸಹ ಅಷ್ಟೇನೂ ಆಡುತ್ತಿಲ್ಲ. ಅಭಿಷೇಕ್ ಸಹ ಹೊರಬರುವ ಸಾಧ್ಯತೆ ಇದೆ ಮುಂದಿನ ವಾರ ಕಾದು ನೋಡಬೇಕು. ನಿಮ್ಮ ಪ್ರಕಾರ ಸದ್ಯ ಯಾರು ಹೆಚ್ಚು ಆಕರ್ಷಕವಾಗಿ ಆಟ ಆಡುತ್ತಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಎಂದು ಕಾಮೆಂಟ್ ಮಾಡಿ. ನಿಮಗೆ ಇಷ್ಟವಾದ ಸ್ಪರ್ಧಿ ಈ ಬಾರಿ ಯಾರೆಂದು ತಿಳಿಸಿ ಧನ್ಯವಾದಗಳು.

Latest News