ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀಸನ್ ೧೨ ಕನ್ನಡದ ಬಿಗ್ ಬಾಸ್ ಈ ಬಾರಿಯೂ ನಿರೀಕ್ಷೆಗೂ ಮೀರಿ ಸಕತ್ ಸೌಂಡ್ ಮಾಡುತ್ತಿದೆ. ಪ್ರತಿ ಸ್ಪರ್ಧಿಗಳು ಅವರ ೧೦೦ ಪರ್ಸೆಂಟ್ ಕೊಟ್ಟು ಗೇಮ್ ನ ಅರ್ಥ ಮಾಡಿಕೊಂಡು ಆಡ್ತಿದ್ದಾರೆ. ಇನ್ನು ಕೆಲವರು ಹೇಗೆ ಆಟ ಆಡಬೇಕು ಎಂದು ಗೊತ್ತಾಗದೆ ತುಂಬಾ ಕನ್ಫ್ಯೂಜ್ಡ್ ಆಗಿ ಇದ್ದಾರೆ. ಈ ಸೀಸನ್‌ನಲ್ಲಿ ಸ್ಪರ್ಧಿಗಳ ಪ್ಲಾನ್ ಗಳು ನಿರಂತರವಾಗಿ ಬದಲಾಗುತ್ತಿವೆ. ಮನೆಯಲ್ಲಿ ಸ್ಪರ್ಧಿಗಳು ಒಕ್ಕೂಟಗಳನ್ನು ರಚಿಸಿ, ಮುರಿದು, ಪ್ರತೀ ವಾರ ತಮ್ಮ ಆಟದ ಶೈಲಿಯ ಬದಲಾಯಿಸುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ಎಲ್ಲರಿಗೂ ಭಾರೀ ಒತ್ತಡ ಉಂಟಾಗಿದೆ.
ಈ ವಾರದ ನಾಮಿನೇಷನ್ ಪಟ್ಟಿಯಲ್ಲಿ ಅಶ್ವಿನಿ ಗೌಡ, ಜಾನ್ವಿ, ಅಭಿಷೇಕ್ ಶ್ರೀಕಾಂತ್, ಧ್ರುವಂತ್, ಮಾಳು ನಿಪನಾಳ, ರಕ್ಷಿತಾ ಶೆಟ್ಟಿ, ರಶಿಕಾ ಶೆಟ್ಟಿ, ರಿಷಾ ಗೌಡ, ಸ್ಪಂದನಾ ಸೋಮಣ್ಣ ಮತ್ತು ಸುರಜ್ ಸಿಂಗ್ ಸೇರಿದ್ದಾರೆ. ಈ ಅಚ್ಚರಿಯ ನಾಮಿನೇಷನ್ ಪಟ್ಟಿ ಸೀಸನ್‌ಗೆ ಇನ್ನಷ್ಟು ಕುತೂಹಲವನ್ನು ತಂದಿದೆ. ಬಿಗ್ ಮನೆಯ ನೆಚ್ಚಿನ ಆಟಗಾರರ ಅಭಿಮಾನಿಗಳು ಆನ್‌ಲೈನ್‌ನಲ್ಲಿ ವೋಟಿಂಗ್ ಮಾಡುತ್ತಿದ್ದು, ಈ ವಾರದ ಎಲಿಮಿನೇಷನ್ ಬಗ್ಗೆ ತಮ್ಮ ಊಹಾಪೋಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದ ಕೆಲವರ ಅಭಿಪ್ರಾಯ ಪ್ರಕಾರ ಪ್ರಾರಂಭಿಕ ಟ್ರೆಂಡ್‌ಗಳಲ್ಲಿ ಸ್ಪಂದನಾ ಮುಂಚೂಣಿಯಲ್ಲಿದ್ದಾರೆ. ಅಶ್ವಿನಿ ಮತ್ತು ರಕ್ಷಿತಾ ಉತ್ತಮ ಪ್ರದರ್ಶನ ಹಾಗೂ ಅಭಿಮಾನಿಗಳ ಬೆಂಬಲದಿಂದ ಹತ್ತಿರದಲ್ಲಿದ್ದಾರೆ.
ಮಾಳು, ಜಾನ್ವಿ, ಧ್ರುವಂತ್ ಮತ್ತು ಸುರಜ್ ಮಧ್ಯಮ ಸ್ಥಾನಗಳಲ್ಲಿ ಇದ್ದರೆ, ಅಭಿಷೇಕ್, ರಶಿಕಾ ಹಾಗು ಈ ರಿಷಾ ತಳದಲ್ಲಿದ್ದಾರೆ ಎನ್ನಬಹುದು. ಈ ಅಂಕಿಅಂಶಗಳು ಅಧಿಕೃತವಾಗಿಲ್ಲದಿದ್ದರೂ, ಇವತ್ತಿನ ಎಪಿಸೋಡ್‌ಗಾಗಿ ಕುತೂಹಲವನ್ನು ಹೆಚ್ಚಿಸಿವೆ. ಒಬ್ಬ ಸ್ಪರ್ಧಿ ಭಾವನಾತ್ಮಕವಾಗಿ ಮನೆಯಿಂದ ಹೊರಗುಳಿಯುವ ನಿರೀಕ್ಷೆಯಿದೆ. ಎಲಿಮಿನೇಷನ್ ಹತ್ತಿರವಾಗುತ್ತಿರುವುದರಿಂದ ಮನೆಯಲ್ಲಿ ಕೊನೆಯ ಕ್ಷಣದ ಪ್ಲಾನ್ ಸಹ ನಡೆಯುತ್ತಿವೆ. ಸ್ಪರ್ಧಿಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಆದರೆ ಸ್ಪರ್ಧಿ ಅಭಿಷೇಕ್ ಮತ್ತು ರಿಷಾ ಬಾಟಮ್ 2ರಲ್ಲಿ ಇರಬಹುದೆಂದು ನಿರೀಕ್ಷಿಸಲಾಗಿದ್ದು, ಡಬಲ್ ಎವಿಕ್ಷನ್ ನಡೆದರೆ ಇಬ್ಬರೂ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ದೃವಂತ್ ಈ ವಾರದ ಎಲಿಮಿನೇಷನ್ ಅಲ್ಲಿ ಹೊರ ಬರಬಹುದು ಎಂದು ಬಿಗ್ಬಾಸ್ ಪ್ರೇಕ್ಷಕರು ಊಹಿಸಿದ್ದಾರೆ.