ತಾಳಿ ಎಲ್ಲಿದೆ? ತಾಳಿನೇ ಕಾಣುತ್ತಿಲ್ಲ ಎಂದವರಿಗೆ ಖಡಕ್ ರಿಪ್ಲೈ ಕೊಟ್ಟ ಅನುಶ್ರೀ! ಅಸಲಿಗೆ ಹೇಳಿದ್ದೆ ಬೇರೆ

ಕನ್ನಡದ ಜನಪ್ರಿಯ ಆಂಕರ್ ಅನುಶ್ರೀ ಸೋಶಿಯಲ್ ಮೀಡಿಯಾದಲ್ಲಿ ಹಂಚಿದ ಫೋಟೊಗಳಿಗೆ ಅಭಿಮಾನಿಗಳಿಂದ ಯಾವಾಗಲೂ ಕೆಲವು ಪ್ರಶ್ನೆಗಳು ಅವರ ವಿಚಾರವಾಗಿ ಬಂದೆ ಬರುತ್ತವೆ, ಅವರ ವೈಯಕ್ತಿಕ ವಿಚಾರಗಳ ಪ್ರಶ್ನೆಗಳು ಅವರ ಪ್ರೀತಿ ಪಾತ್ರರಾದ ಅವರ ಫ್ಯಾನ್ಸ್ ಗಳಿಂದ  ಬಂದೆ ಬರುತ್ತವೆ. ಇದೀಗ ಮತ್ತೆ ಅವರ ವಿವಾಹದ ಬಳಿಕ, ಅವರು ಹಾಕಿಕೊಳ್ಳುವ ತಾಳಿ ಕಾಣುವ ವಿಚಾರವಾಗಿ ಕೆಲ ಪ್ರಶ್ನೆ ಕಂಡು ಬಂದಿದೆ. “ತಾಳಿ ಕಾಣ್ತಿಲ್ಲವಲ್ಲ?”. ಈ ಬಾರಿ ಕೂಡಾ ಅದೇ ಪ್ರಶ್ನೆ ಕೇಳಿದವರಿಗೆ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ. ಮದುವೆಯಾದ ನಂತರ ಅನುಶ್ರೀ ಯಾವಾಗ ಫೋಟೊಗಳನ್ನು ಶೇರ್ ಮಾಡಿದರೂ ಅಥವಾ ವೇದಿಕೆಯಲ್ಲಿ ಕಾಣಿಸಿಕೊಂಡರೂ, ಜನರ ಕಣ್ಣು ಸದಾ ಅವರ ತಾಳಿ ಮೇಲೆಯೇ ಇರುತ್ತದೆ. ತಾಳಿ ಕಾಣದಿದ್ದರೆ, ಅಭಿಮಾನಿಗಳು ತಕ್ಷಣವೇ ಕಾಮೆಂಟ್ ಹಾಕಿ ಪ್ರಶ್ನಿಸುತ್ತಾರೆ.

ಕನ್ನಡದ ಜನಪ್ರಿಯ ಆಂಕರ್ ಅನುಶ್ರೀ | Photo Credit: https://www.instagram.com/p/DRd1mkHE2vg/
ಕನ್ನಡದ ಜನಪ್ರಿಯ ಆಂಕರ್ ಅನುಶ್ರೀ | Photo Credit: https://www.instagram.com/p/DRd1mkHE2vg/

ಇತ್ತೀಚೆಗೆ ಅನುಶ್ರೀ ಹಂಚಿದ ಫೋಟೊಗೆ ಒಬ್ಬ ಅಭಿಮಾನಿ “ಫೋಟೊ ಸೂಪರ್, ಆದರೆ ತಾಳಿ ಕಾಣ್ತಿಲ್ಲವಲ್ಲ” ಎಂದು ಕಾಮೆಂಟ್ ಮಾಡಿದರು. ಅದಕ್ಕೆ ಅನುಶ್ರೀ ಖಡಕ್ ಉತ್ತರ ನೀಡಿದರು. “ಎಲ್ಲರಿಗೂ ಕಾಣ್ಲಿ ಅಂತ ತಾಳಿ ಹಾಕೋದಲ್ಲ ಸೀಮ… ನನಗೆ ಕಂಡ್ರೆ ಸಾಕು”. ಅಂದರೆ, ತಾಳಿ ಧರಿಸುವುದು ತಮ್ಮ ವೈಯಕ್ತಿಕ ನಂಬಿಕೆ ಮತ್ತು ಸಂತೋಷಕ್ಕೆ ಸಂಬಂಧಿಸಿದ ವಿಷಯ, ಜನರಿಗೆ ತೋರಿಸುವುದಕ್ಕಾಗಿ ಅಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಅನುಶ್ರೀ ಇನ್ನೂ ಸೇರಿಸಿ ಹೇಳಿದ್ದು, “ಕೆಲವೊಂದು ಡ್ರೆಸ್‌ಗಳಿಗೆ ತಾಳಿ ಕಾಣಲ್ಲ, ಅದರಿಂದ ತಾಳಿ ಹಾಕಿಲ್ಲ ಅನ್ನೋದು ತಪ್ಪು”. ಈ ಮೂಲಕ ಅವರು ಅಭಿಮಾನಿಗಳ ಕುತೂಹಲಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಅನುಶ್ರೀ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಆಂಕರ್. ಹಲವು ವರ್ಷಗಳಿಂದ ಟಿವಿ ಶೋಗಳು, ರಿಯಾಲಿಟಿ ಕಾರ್ಯಕ್ರಮಗಳು, ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ತಮ್ಮ ನಿರೂಪಣಾ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರ ನಗುವು, ಮಾತಿನ ಚಾತುರ್ಯ, ಹಾಗೂ ಪ್ರೇಕ್ಷಕರನ್ನು ಸೆಳೆಯುವ ಶೈಲಿ ಅವರನ್ನು ಮನೆಮಾತು ಮಾಡಿದೆ. ಅಭಿಮಾನಿಗಳ ಕ್ರೇಜ್ ಅನುಶ್ರೀಗೆ ಅಪಾರ. ಅವರು ಯಾವ ಫೋಟೊ ಹಾಕಿದರೂ, ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ, ಅಭಿಮಾನಿಗಳು ತಕ್ಷಣ ಪ್ರತಿಕ್ರಿಯಿಸುತ್ತಾರೆ. ಕೆಲವರು ಅವರ ತಾಳಿ, ಕರಿಮಣಿ, ಹಾಗೂ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಬಾರಿ ತಾಳಿ ಕಾಣಲ್ವಲ್ಲ ಎಂದವರಿಗೆ ಅನುಶ್ರೀ ನೀಡಿದ ಉತ್ತರ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಅನುಶ್ರೀ ಹೇಳಿದ ಮಾತು ಸಮಾಜಕ್ಕೆ ಒಂದು ಸಂದೇಶ. ಮದುವೆಯ ಸಂಕೇತವಾದ ತಾಳಿ ಸರವನ್ನು ಧರಿಸುವುದು ಮಹಿಳೆಯ ವೈಯಕ್ತಿಕ ಆಯ್ಕೆ. ಅದನ್ನು ಜನರಿಗೆ ತೋರಿಸಬೇಕೆಂಬ ಒತ್ತಡ ಇಲ್ಲ. ತಮ್ಮ ಜೀವನದಲ್ಲಿ ತಾವು ಸಂತೋಷವಾಗಿದ್ದರೆ, ಅದೇ ಮುಖ್ಯ ಎಂಬುದನ್ನು ಅನುಶ್ರೀ ತಮ್ಮ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳ ಕ್ರೇಜ್ ಹಾಗೂ ಅನುಶ್ರೀ ನೀಡಿದ ಉತ್ತರದಿಂದ, ಅವರು ಕೇವಲ ಆಂಕರ್ ಮಾತ್ರವಲ್ಲ, ಸಮಾಜಕ್ಕೆ ಸಂದೇಶ ನೀಡುವ ವ್ಯಕ್ತಿ ಎಂಬುದೂ ಸ್ಪಷ್ಟವಾಗಿದೆ. ಅವರ ಧೈರ್ಯಶಾಲಿ ಉತ್ತರ ಅಭಿಮಾನಿಗಳಲ್ಲಿ ಮತ್ತಷ್ಟು ಗೌರವವನ್ನು ತಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ನೀವು ಕೂಡ ಅನುಶ್ರೀ ಅವರ ಫ್ಯಾನ್ ಆಗಿದ್ದರೆ ಈ ಮಾಂಗಲ್ಯ ವಿಚಾರವಾಗಿ ಅವರು ನೀಡಿರುವ  ಪ್ರತಿಕ್ರಿಯೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.

Latest News

Related News