Apr 4, 2026 Languages : ಕನ್ನಡ | English

ನಾನೇ ಫಸ್ಟ್ ಪ್ರಪೋಸ್ ಮಾಡಿದ್ದು - ಸೀರಿಯಲ್ ಜೋಡಿಯ ರಿಯಲ್ ಲವ್ ಸ್ಟೋರಿ ಬಿಚ್ಚಿಟ್ಟ ರಾಧಾ ಭಗವತಿ!!

ಸೀರಿಯಲ್ ಲೋಕದಲ್ಲಿ ರೀಲ್ ಜೋಡಿಗಳು ರಿಯಲ್ ಜೋಡಿಗಳಾಗೋದು ಹೊಸದೇನಲ್ಲ. ಆ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗಿರೋರು ರಾಧಾ ಭಗವತಿ ಮತ್ತು ರಾಣವ್ ಗೌಡ. 'ಅಮೃತಧಾರೆ' ಧಾರಾವಾಹಿಯ ಈ ಜೋಡಿ ಇತ್ತೀಚೆಗಷ್ಟೇ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿರೋದು ನಿಮಗೆಲ್ಲ ಗೊತ್ತೇ ಇದೆ. ಆದರೆ ಈ ಪ್ರೇಮ ಪುರಾಣ ಶುರುವಾಗಿದ್ದು ಹೇಗೆ? ಮೊದಲು ಪ್ರೀತಿ ಹೇಳಿದ್ದು ಯಾರು? ಈ ಎಲ್ಲ ಸೀಕ್ರೆಟ್‌ಗಳನ್ನು ನಟಿ ರಾಧಾ ಭಗವತಿ ಈಗ ರಿವೀಲ್ ಮಾಡಿದ್ದಾರೆ.

ಅಮೃತಧಾರೆ ಸೆಟ್‌ನಲ್ಲಿ ಶುರುವಾದ ಪ್ರೇಮಾಯಣ
ಅಮೃತಧಾರೆ ಸೆಟ್‌ನಲ್ಲಿ ಶುರುವಾದ ಪ್ರೇಮಾಯಣ

ಶೂಟಿಂಗ್ ಸೆಟ್‌ನಲ್ಲಿ ಶುರುವಾದ ಪ್ರೇಮಾಯಣ

ಇವರಿಬ್ಬರ ಪರಿಚಯವಾಗಿದ್ದು ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಸೆಟ್‌ನಲ್ಲಿ. ರಾಣವ್ ಅಲ್ಲಿ ಖಳನಟ 'ಜೆಡಿ' ಪಾತ್ರದಲ್ಲಿ ಅಬ್ಬರಿಸುತ್ತಿದ್ದರೆ, ರಾಧಾ ಅವರು 'ಮಲ್ಲಿ' ಎಂಬ ಸಾಫ್ಟ್ ಪಾತ್ರದಲ್ಲಿ ಮಿಂಚುತ್ತಿದ್ದರು. ಆಮೇಲೆ ರಾಧಾ ಅವರಿಗೆ 'ಭಾರ್ಗವಿ ಎಲ್​​ಎಲ್​​ಬಿ' ಸೀರಿಯಲ್‌ನಲ್ಲಿ ಲೀಡ್ ರೋಲ್ ಸಿಕ್ಕಿದ್ದರಿಂದ ಅಮೃತಧಾರೆ ಬಿಟ್ಟು ಹೊರಬಂದರು. ಆದರೆ ಸೀರಿಯಲ್ ಬಿಟ್ಟರೂ ರಾಣವ್ ಜೊತೆಗಿನ ಸ್ನೇಹ ಮಾತ್ರ ಬಿಡಲಿಲ್ಲ, ಅದು ಪ್ರೀತಿಗೆ ತಿರುಗಿತು.

"ನಾನೇ ಪ್ರಪೋಸ್ ಮಾಡಿದ್ದು!"

ಸಾಮಾನ್ಯವಾಗಿ ಹುಡುಗರು ಮೊದಲು ಪ್ರಪೋಸ್ ಮಾಡ್ತಾರೆ ಅನ್ನೋದು ವಾಡಿಕೆ. ಆದರೆ ಇಲ್ಲಿ ಉಲ್ಟಾ ಆಗಿದೆ! "ನಾನೇ ರಾಣವ್‌ಗೆ ಮೊದಲು ಪ್ರಪೋಸ್ ಮಾಡಿದ್ದು, ನಾನು ಅವರ ದೊಡ್ಡ ಅಭಿಮಾನಿ" ಅಂತ ರಾಧಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ರಾಣವ್ ಕೂಡ ರಾಧಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಇವಳನ್ನು ಮದುವೆಯಾಗ್ತೀನಿ ಅಂತ ನಾನು ಅಂದುಕೊಂಡಿರಲಿಲ್ಲ. ನನಗೆ ನನ್ನನ್ನು ಅರ್ಥ ಮಾಡಿಕೊಳ್ಳುವ ಸ್ಟ್ರಾಂಗ್ ಹುಡುಗಿ ಬೇಕಿತ್ತು. ರಾಧಾ ಹೊರನೋಟಕ್ಕೆ ಸಾಫ್ಟ್ ಅನಿಸಿದರೂ ಮನಸ್ಸಿನಿಂದ ತುಂಬಾ ಸ್ಟ್ರಾಂಗ್. ನನ್ನಲ್ಲಿರೋ ಮೈನಸ್‌ಗಳನ್ನು ಕಂಡು ದೂರ ಹೋಗುವ ಬದಲು, ಅದನ್ನು ತಿದ್ದಿ ನನ್ನ ಜೊತೆ ನಿಲ್ಲೋ ಗುಣ ಅವಳಲ್ಲಿದೆ" ಎಂದು ರಾಣವ್ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಮದುವೆ ಯಾಕೆ ಲೇಟು?

ನಿಶ್ಚಿತಾರ್ಥದ ಫೋಟೋಗಳು ವೈರಲ್ ಆದಾಗಿನಿಂದ ಫ್ಯಾನ್ಸ್ ಕೇಳ್ತಿರೋದು ಒಂದೇ ಪ್ರಶ್ನೆ- "ಮದುವೆ ಯಾವಾಗ?". ಇದಕ್ಕೆ ರಾಧಾ ಅವರು ನಗುನಗುತ್ತಲೇ ಉತ್ತರ ನೀಡಿದ್ದಾರೆ. "ನಮ್ಮ ಮದುವೆ ಫಿಕ್ಸ್ ಆಗಿದೆ, ಆದರೆ ಸ್ವಲ್ಪ ಮುಂದಕ್ಕೆ ಹೋಗಿದೆ. ಅಧಿಕ ಮಾಸ ಬಂತು, ಆಮೇಲೆ ಆಷಾಢ.. ಹೀಗೆ ಸಾಲು ಸಾಲು ಅಡೆತಡೆಗಳು. ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ!" ಅಂತ ತಮಾಷೆ ಮಾಡಿದ್ದಾರೆ. ಶ್ರಾವಣ ಮಾಸ ಮುಗಿದ ಮೇಲಷ್ಟೇ ಈ ಜೋಡಿ ಹಸೆಮಣೆ ಏರೋದು ಪಕ್ಕಾ ಆಗಿದೆ.

ವಿಲನ್ ಈಗ ರಿಯಲ್ ಹೀರೋ!

ಅಮೃತಧಾರೆ ಸೀರಿಯಲ್‌ನಲ್ಲಿ ರಾಣವ್ ಅವರ 'ಜೆಡಿ' ಪಾತ್ರಕ್ಕೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವರು ಮಾಡುತ್ತಿರೋ ವಿಲನ್ ಗತ್ತು ನೋಡಿ ಅನೇಕರು ಅವರ ಫ್ಯಾನ್ ಆಗಿದ್ದಾರೆ. ಆದರೆ ರಿಯಲ್ ಲೈಫ್‌ನಲ್ಲಿ ಮಾತ್ರ ರಾಣವ್ ಸಖತ್ ಕೂಲ್ ಅಂತೆ.

ಸದ್ಯಕ್ಕೆ ಈ ಜೋಡಿ ತಮ್ಮ ಹೊಸ ಜೀವನದ ಆರಂಭಕ್ಕೆ ಸಜ್ಜಾಗುತ್ತಿದ್ದಾರೆ. ರೀಲ್ ಲೈಫ್‌ನಲ್ಲಿ ಒಬ್ಬರು ವಿಲನ್, ಇನ್ನೊಬ್ಬರು ಲಾಯರ್ (ಭಾರ್ಗವಿ ಎಲ್ ಎಲ್ ಬಿ) ಆಗಿದ್ದರೂ, ರಿಯಲ್ ಲೈಫ್‌ನಲ್ಲಿ ಮಾತ್ರ ಕ್ಯೂಟ್ ಕಪಲ್ ಆಗಿ ಎಲ್ಲರ ಮನ ಗೆದ್ದಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಸಪ್ತಪದಿ ತುಳಿಯಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.