Mar 29, 2026 Languages : ಕನ್ನಡ | English

28 ವರ್ಷಗಳ ಬಳಿಕ ಮತ್ತೆ ಒಂದಾದ ಬಾರ್ಡರ್ ಜೋಡಿ - ಅಕ್ಷಯ್ ಖನ್ನಾ-ಸನ್ನಿ ಡಿಯೋಲ್ ಮುಖಾಮುಖಿ!!

ಬಾಲಿವುಡ್‌ನ ಪ್ರತಿಭಾನ್ವಿತ ನಟ ಅಕ್ಷಯ್ ಖನ್ನಾ ಅವರ ರೇಂಜ್ ಈಗ ಜೋರಾಗಿದೆ. ‘ಧುರಂಧರ್’ ಸಿನಿಮಾದಲ್ಲಿ ರೆಹಮಾನ್ ಡಕಾಯತ್ ಆಗಿ ಮ್ಯಾಜಿಕ್ ಮಾಡಿದ್ದ ಅಕ್ಷಯ್ ಖನ್ನಾ, ಈಗ ಮತ್ತೊಂದು ವಿಭಿನ್ನ ಹಾಗೂ ಪವರ್‌ಫುಲ್ ಪಾತ್ರಕ್ಕೆ ರೆಡಿಯಾಗಿದ್ದಾರೆ. ಅಕ್ಷಯ್ ಖನ್ನಾ ಹುಟ್ಟುಹಬ್ಬದ ಸಂಭ್ರಮದಲ್ಲಿ, ಅವರು ನಟಿಸುತ್ತಿರುವ ಹೊಸ ಚಿತ್ರದ ಲುಕ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ!

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಅಕ್ಷಯ್ ಖನ್ನಾ ಎಂಟ್ರಿ
ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಅಕ್ಷಯ್ ಖನ್ನಾ ಎಂಟ್ರಿ

‘ಹನುಮಾನ್’ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದ ನಿರ್ದೇಶಕ ಪ್ರಶಾಂತ್ ವರ್ಮಾ, ತಮ್ಮ ಹೊಸ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಅಕ್ಷಯ್ ಖನ್ನಾಗೆ ಒಂದು ಸ್ಪೆಷಲ್ ರೋಲ್ ಕೊಟ್ಟಿದ್ದಾರೆ. ಅದೇ ‘ಮಹಾಕಾಳಿ’. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅಸುರರ ಗುರು ಶುಕ್ರಾಚಾರ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಕ್ಷಯ್ ಖನ್ನಾ ಅವರ ಈ ಲುಕ್ ಹೇಗಿದೆ ಗೊತ್ತಾ? ಉದ್ದನೆಯ ಬಿಳಿ ಗಡ್ಡ, ಅದೇ ಶೈಲಿಯ ಕೂದಲು, ಕಣ್ಣಲ್ಲಿ ಒಂದು ರೀತಿಯ ತೇಜಸ್ಸು... ಅಕ್ಷಯ್ ಅವರನ್ನು ಈ ಅವತಾರದಲ್ಲಿ ನೋಡ್ತಿದ್ರೆ ಅಪ್ಪಟ ಸನ್ಯಾಸಿ ಅಥವಾ ಒಬ್ಬ ಶಕ್ತಿಯುತ ಗುರು ಎಂಬ ಭಾವನೆ ಬರುತ್ತದೆ. ಪ್ರಶಾಂತ್ ವರ್ಮಾ ಅವರು ಸ್ವತಃ ಅಕ್ಷಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, "ಯಾವುದೇ ಸದ್ದು-ಗದ್ದಲ ಇಲ್ಲದೆ ತನ್ನ ಪ್ರತಿಭೆಯನ್ನು ತೋರಿಸುವ ನಟ ನೀವು, ನಿಮ್ಮ ಜೊತೆ ಕೆಲಸ ಮಾಡೋದು ಗೌರವದ ವಿಷಯ" ಅಂತ ಹೇಳಿದ್ದಾರೆ. ಅಕ್ಷಯ್ ಖನ್ನಾ ಅವರ ತೆಲುಗು ಸಿನಿಮಾ ಎಂಟ್ರಿಗೆ ಇದಕ್ಕಿಂತ ದೊಡ್ಡ ಓಪನಿಂಗ್ ಇನ್ನೇನು ಬೇಕು?

ಮಹಿಳಾ ಪ್ರಧಾನ ಸೂಪರ್ ಹೀರೋ ಸಿನಿಮಾ

‘ಮಹಾಕಾಳಿ’ ಬಗ್ಗೆ ಹೇಳೋದಾದ್ರೆ, ಇದು ಮಹಿಳಾ ಪ್ರಧಾನ ಸೂಪರ್ ಹೀರೋ ಸಿನಿಮಾ. ಪೂಜಾ ಕೊಲ್ಲೂರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ, ನಮ್ಮ ಕನ್ನಡದ ನಟಿ ಭೂಮಿ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ವರ್ಮಾ ಅವರ ಈ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಈಗಾಗಲೇ 'ಜೈ ಹನುಮಾನ್', 'ಅಧೀರ'ದಂತಹ ಸಿನಿಮಾಗಳು ಬರ್ತಿರೋದ್ರಿಂದ, 'ಮಹಾಕಾಳಿ' ಮೇಲೆ ಸಿಕ್ಕಾಪಟ್ಟೆ ಎಕ್ಸ್‌ಪೆಕ್ಟೇಷನ್ಸ್ ಇದೆ.

28 ವರ್ಷಗಳ ಬಳಿಕ ಬಾರ್ಡರ್ ಜೋಡಿ ಮುಖಾಮುಖಿ!

ಅಕ್ಷಯ್ ಖನ್ನಾ ಅವರ ಕ್ರೇಜ್ ಇಲ್ಲಿಗೆ ನಿಲ್ಲಲ್ಲ! ‘ಮಹಾಕಾಳಿ’ ಮಾತ್ರವಲ್ಲದೆ, ಅಕ್ಷಯ್ ಖನ್ನಾ ಸಿದ್ಧಾರ್ಥ್ ಪಿ. ಮಲ್ಹೋತ್ರಾ ಅವರ ‘ಇಕ್ಕಾ’ ಚಿತ್ರದಲ್ಲೂ ಬ್ಯುಸಿ ಇದ್ದಾರೆ. ಇಲ್ಲಿ ಅಕ್ಷಯ್ ಖನ್ನಾ ಎದುರು ನಿಲ್ಲುತ್ತಿರುವುದು ಬಾಲಿವುಡ್‌ನ ಧಕ್-ಧಕ್ ಸ್ಟಾರ್ ಸನ್ನಿ ಡಿಯೋಲ್.

ಇದರಲ್ಲೇನಿದೆ ವಿಶೇಷ ಅಂತೀರಾ? 28 ವರ್ಷಗಳ ಹಿಂದೆ ಇವರಿಬ್ಬರೂ ಸೂಪರ್ ಹಿಟ್ ಚಿತ್ರ ‘ಬಾರ್ಡರ್’ನಲ್ಲಿ ಒಟ್ಟಿಗೆ ನಟಿಸಿದ್ದರು. ಅಂದು ಸೈನಿಕರಾಗಿ ಕಾಣಿಸಿಕೊಂಡಿದ್ದವರು, ಈಗ ಇಕ್ಕಾ ಸಿನಿಮಾದಲ್ಲಿ ಪ್ರಬಲ ವಿಲನ್ ಮತ್ತು ಹೀರೋ ಆಗಿ ಮುಖಾಮುಖಿ ಆಗ್ತಿದ್ದಾರೆ. ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ.

ವಿಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುವ ಮೂಲಕ ಅಕ್ಷಯ್ ಖನ್ನಾ ತಾವು ಬಾಲಿವುಡ್‌ನ ನಿಜವಾದ 'ಧುರಂಧರ' ಅನ್ನೋದನ್ನ ಮತ್ತೆ ಸಾಬೀತುಪಡಿಸ್ತಿದ್ದಾರೆ.