ಫ್ರಾನ್ಸ್‌ನಲ್ಲಿ ಜರುಗಿದ ಜಗತ್ತಿನ ಬಿಗ್ಗೆಸ್ಟ್ ಫ್ಯಾಷನ್ ಮತ್ತು ಸಿನಿಮಾ ಹಬ್ಬ '79 ನೇ ಕೇನ್ಸ್ ಚಲನಚಿತ್ರೋತ್ಸವ' (Cannes 2026) ಅದ್ಧೂರಿಯಾಗಿ ತೆರೆಬಿದ್ದಿದೆ. ಎಷ್ಟೇ ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ಬಂದರೂ, ಕೇನ್ಸ್ ಅಂದಾಕ್ಷಣ ಭಾರತೀಯರಿಗೆ ಮೊದಲು ನೆನಪಾಗುವುದೇ ಬಾಲಿವುಡ್ ಕ್ವೀನ್ ಐಶ್ವರ್ಯಾ ರೈ ಬಚ್ಚನ್. ಪ್ರತಿ ವರ್ಷದಂತೆ ಈ ಬಾರಿಯೂ ಐಶ್ ತಮ್ಮ ವಿಶಿಷ್ಟ ಉಡುಪಿನಿಂದಲೇ ಇಂಟರ್ನ್ಯಾಷನಲ್ ಮೀಡಿಯಾಗಳ ಹೆಡ್‌ಲೈನ್ಸ್ ಆಕ್ರಮಿಸಿಕೊಂಡಿದ್ದಾರೆ. ಆದರೆ ಈ ಸಲದ ಹೈಲೈಟ್ ಐಶ್ವರ್ಯಾ ಮಾತ್ರವಲ್ಲ, ಅವರ ಜೊತೆ ಹೆಜ್ಜೆ ಹಾಕಿದ ಮುದ್ದಿನ ಮಗಳು ಆರಾಧ್ಯ ಬಚ್ಚನ್!
ಅಮ್ಮ-ಮಗಳ ಈ ಸ್ಟೈಲಿಶ್ ಜೋಡಿ ಫ್ರಾನ್ಸ್ ಅಂಗಳದಲ್ಲಿ ಹೇಗೆ ಧೂಳೆಬ್ಬಿಸಿತು? ಐಶ್ವರ್ಯಾ ರೈ ಅವರ ಈ ಹೊಸ ಲುಕ್‌ನ ವಿಶೇಷತೆಯೇನು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಗೌನ್ ಬಿಟ್ಟು 'ಬಾಸ್ ಲೇಡಿ' ಅವತಾರದಲ್ಲಿ ಮಿಂಚಿದ ಮಾಜಿ ವಿಶ್ವ ಸುಂದರಿ!
ಸಾಮಾನ್ಯವಾಗಿ ಕೇನ್ಸ್ ಹಬ್ಬದ ಸಮಾರೋಪ ಸಮಾರಂಭ ಅಂದ್ರೆ ನಟಿಯರು ಭಾರಿ ತೂಕದ, ನೆರಲಿಗೆ ಹರಡುವ ಗೌನ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಐಶ್ವರ್ಯಾ ಕೂಡ ಮೊದಲ ದಿನ ಹಸಿರು ಮತ್ತು ನೀಲಿ ಬಣ್ಣದ ಭಾರಿ ಗಾತ್ರದ ಗೌನ್‌ನಲ್ಲಿಯೇ ಮಿಂಚಿದ್ದರು. ಆದರೆ, ಕ್ಲೈಮ್ಯಾಕ್ಸ್ ಪಾರ್ಟಿಗೆ ಐಶ್ವರ್ಯಾ ಎಲ್ಲರಿಗೂ ಬಿಗ್ ಸರ್ಪ್ರೈಸ್ ಕೊಟ್ಟರು.
ಅವರು ಯಾರೂ ಊಹಿಸದ ಕಂಪ್ಲೀಟ್ ವೈಟ್ ಕಟ್‌ಔಟ್ ಪ್ಯಾಂಟ್‌ಸೂಟ್ (White Pantsuit) ಧರಿಸಿ 'ಬಾಸ್ ಲೇಡಿ' ತರಹ ಎಂಟ್ರಿ ಕೊಟ್ಟರು. ಚೀನಾದ ಲೆಜೆಂಡರಿ ಫ್ಯಾಷನ್ ಡಿಸೈನರ್ ಚೆನ್ನಿ ಚಾನ್ ಡಿಸೈನ್ ಮಾಡಿದ್ದ ಈ ಪವರ್ ಸೂಟ್‌ನಲ್ಲಿ ಅದ್ಭುತ ಕಸೂತಿ ಕೆಲಸವಿತ್ತು. ಕೋಟ್‌ನ ಹಿಂಭಾಗ ಮತ್ತು ಬದಿಗಳಲ್ಲಿ ವಿನ್ಯಾಸಗೊಳಿಸಲಾಗಿದ್ದ ಬಿಳಿ ಗರಿಗಳು (Feathers) ಐಶ್ವರ್ಯಾ ಅವರ ರಾಯಲ್ ಲುಕ್ ಅನ್ನು ಮತ್ತೊಂದು ಲೆವೆಲ್‌ಗೆ ತಕೊಂಡು ಹೋಗಿದ್ದವು. ಮುಕ್ತವಾದ ಹೇರ್‌ಸ್ಟೈಲ್ ಮತ್ತು ಸಿಂಪಲ್ ಮೇಕಪ್‌ನಲ್ಲಿ ಐಶ್ವರ್ಯಾ ದೇವತೆಯಂತೆ ಕಾಣುತ್ತಿದ್ದರು.
ಅಮ್ಮನ ಹಾದಿಯಲ್ಲೇ ಆರಾಧ್ಯ;
ಈ ಬಾರಿಯ ಕೇನ್ಸ್‌ನ ರಿಯಲ್ ಸ್ಟಾರ್ ಅಂದ್ರೆ ಅದು ಆರಾಧ್ಯ ಬಚ್ಚನ್ ಅಣ್ಣಬಹುದು. ಅಮ್ಮ ಐಶ್ವರ್ಯಾ ಕೈ ಹಿಡಿದು ರೆಡ್ ಕಾರ್ಪೆಟ್ ಮೇಲೆ ಬಂದ ಆರಾಧ್ಯ, ಸ್ಟಾರ್ ಹೀರೋಯಿನ್‌ಗಳಿಗೂ ಟಕ್ಕರ್ ಕೊಡುವಂತೆ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾಳೆ.
ಕಡು ಕೆಂಪು ಬಣ್ಣದ ಸಿಲ್ಕ್ ಗೌನ್, ಅದಕ್ಕೆ ಮ್ಯಾಚಿಂಗ್ ರೆಡ್ ಲಿಪ್‌ಸ್ಟಿಕ್ ಹಾಗೂ ಸೈಡ್-ಪಾರ್ಟೆಡ್ ಹೇರ್‌ಸ್ಟೈಲ್‌ನಲ್ಲಿ ಆರಾಧ್ಯ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದಳು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂಟರ್ನ್ಯಾಷನಲ್ ಕ್ಯಾಮೆರಾಗಳ ಮುಂದೆ ಆಕೆ ತೋರಿದ ಕಾನ್ಫಿಡೆನ್ಸ್ ನೋಡಿ, "ಮುಂದೊಂದು ದಿನ ಆರಾಧ್ಯ ಬಾಲಿವುಡ್ ಅಷ್ಟೇ ಅಲ್ಲ, ಗ್ಲೋಬಲ್ ಲೆವೆಲ್‌ನಲ್ಲಿ ಸ್ಟಾರ್ ಆಗೋದು ಗ್ಯಾರಂಟಿ" ಅಂತ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಬಾಲಿವುಡ್‌ನಿಂದ ಐಶ್ವರ್ಯಾ ಬ್ರೇಕ್ ತಗೊಂಡಿದ್ದೇಕೆ?
ಐಶ್ವರ್ಯಾ ರೈ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು ಮಣಿರತ್ನಂ ಅವರ ದೃಶ್ಯಕಾವ್ಯ 'ಪೊನ್ನಿಯಿನ್ ಸೆಲ್ವನ್ 2' (2023) ಚಿತ್ರದಲ್ಲಿ. ಆ ಸಿನಿಮಾದಲ್ಲಿ ನಂದಿನಿ ಪಾತ್ರಕ್ಕೆ ಐಶ್ವರ್ಯಾ ಜೀವ ತುಂಬಿದ್ದರು. ಆದರೆ, ಆ ಚಿತ್ರ ಸೂಪರ್ ಹಿಟ್ ಆದ ಮೇಲೂ ಅವರು ಬೇರೆ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.
ಬಿ-ಟೌನ್ ಗಾಳಿಮಾತಿನ ಪ್ರಕಾರ, ಐಶ್ವರ್ಯಾ ಸದ್ಯಕ್ಕೆ ಮಗಳು ಆರಾಧ್ಯಳ ಹೈಯರ್ ಎಜುಕೇಶನ್ ಮತ್ತು ಪಾಲನೆಗೆ ಮೊದಲ ಆದ್ಯತೆ ನೀಡಿದ್ದಾರಂತೆ. ಹಾಗಾಗಿ, ಸಿನಿಮಾ ಸ್ಕ್ರಿಪ್ಟ್‌ಗಳು ಸಾಲು ಸಾಲಾಗಿ ಬರುತ್ತಿದ್ದರೂ ತಮಗೆ ನೂರಕ್ಕೆ ನೂರು ಮ್ಯಾಚ್ ಆಗುವ ಮತ್ತು ಕ್ಯಾರೆಕ್ಟರ್‌ಗೆ ಹೆಚ್ಚು ಸ್ಕೋಪ್ ಇರುವ ಸಿನಿಮಾ ಸಿಗುವವರೆಗೂ ಕ್ಯಾಮೆರಾ ಮುಂದೆ ಬರದಿರಲು ನಿರ್ಧರಿಸಿದ್ದಾರಂತೆ.
ಬೆಳ್ಳಿ ತೆರೆಯಿಂದ ಸ್ವಲ್ಪ ಬ್ರೇಕ್ ತಗೊಂಡಿದ್ದರೂ, ಕೇವಲ ಒಂದೇ ಒಂದು ಅಂತರಾಷ್ಟ್ರೀಯ ವೇದಿಕೆಯ ಅಪೀಯರೆನ್ಸ್ ಮೂಲಕ ಇಡೀ ಸೋಶಿಯಲ್ ಮೀಡಿಯಾವನ್ನು ಹೇಗೆ ಟ್ರೆಂಡ್ ಮಾಡಬಹುದು ಎಂಬುದನ್ನು ಐಶ್ವರ್ಯಾ ರೈ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಇದನ್ನೇ ಅಲ್ವಾ ಅಸಲಿ ಸ್ಟಾರ್ ಡಮ್ ಅನ್ನೋದು!