60ರ ಪ್ರಾಯದಲ್ಲಿ ಮತ್ತೆ ಲವ್ವಲ್ಲಿ ಬಿದ್ದ ಅಮೀರ್ ಖಾನ್‌ - ಜುಲೈನಲ್ಲಿ ಗೌರಿ ಸ್ಪ್ರ್ಯಾಟ್ ಜೊತೆ 3ನೇ ಮದುವೆ ಸಂಭ್ರಮ!!

ಬಾಲಿವುಡ್ ಅಂಗಳದಿಂದ ಇವತ್ತು ಮತ್ತೊಂದು ಮಸ್ತ್ ಮಸಾಲಾ ನ್ಯೂಸ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ! ನಮ್ಮ ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್' ಅಮೀರ್ ಖಾನ್ (Aamir Khan) ಈಗ ಮತ್ತೆ ಮದುವೆ ಆಗ್ತಾರಾ ಅನ್ನೋ ಚರ್ಚೆ ಬಿ-ಟೌನ್‌ನಲ್ಲಿ ಸಖತ್ ಜೋರಾಗಿದೆ. ತಮ್ಮ ಗರ್ಲ್‌ಫ್ರೆಂಡ್ ಗೌರಿ ಸ್ಪ್ರ್ಯಾಟ್ (Gauri Spratt) ಜೊತೆ ಅಮೀರ್ ಮೂರನೇ ಬಾರಿಗೆ ಹಸೆಮಣೆ ಏರಲಿದ್ದಾರೆ ಅನ್ನೋ ಗಾಸಿಪ್ಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಜುಲೈ 5 ರಂದು ಗರ್ಲ್‌ಫ್ರೆಂಡ್ ಗೌರಿ ಸ್ಪ್ರ್ಯಾಟ್ ಜೊತೆ ಸೈಲೆಂಟ್ ಆಗಿ ಹಸೆಮಣೆ ಏರಲಿದ್ದಾರಾ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್!
ಜುಲೈ 5 ರಂದು ಗರ್ಲ್‌ಫ್ರೆಂಡ್ ಗೌರಿ ಸ್ಪ್ರ್ಯಾಟ್ ಜೊತೆ ಸೈಲೆಂಟ್ ಆಗಿ ಹಸೆಮಣೆ ಏರಲಿದ್ದಾರಾ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್!

ಸಿನಿಮಾ ಪ್ರೇಮಿಗಳೇ, ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಮತ್ತೆ ಸಸೆಮಣೆ ಏರಲು ರೆಡಿಯಾಗಿದ್ದಾರೆ ಅನ್ನೋ ಬ್ರೇಕಿಂಗ್ ನ್ಯೂಸ್ ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡ್ತಾ ಇದೆ. ಮೂಲಗಳ ಪ್ರಕಾರ, ಇದೇ ಬರುವ ಜುಲೈ 5 ರಂದು ಅಮೀರ್ ಖಾನ್ ಅವರು ತಮ್ಮ ಪ್ರೇಯಸಿ ಗೌರಿ ಸ್ಪ್ರ್ಯಾಟ್ ಜೊತೆ ಪಕ್ಕಾ ಪ್ರೈವೇಟ್ ಆಗಿ, ಕೇವಲ ಹತ್ತಿರದ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸಮ್ಮುಖದಲ್ಲಿ ಸಿಂಪಲ್ ಆಗಿ ಮದುವೆಯಾಗಲಿದ್ದಾರೆ ಅಂತ ಹೇಳಲಾಗ್ತಿದೆ.

ಇದುವರೆಗೂ ಅಮೀರ್ ಖಾನ್ ಆಗ್ಲಿ ಅಥವಾ ಗೌರಿ ಆಗಲಿ ಈ ಮ್ಯಾಟರ್ ಬಗ್ಗೆ ಯಾವುದೇ ಅಫೀಷಿಯಲ್ ಅನೌನ್ಸ್‌ಮೆಂಟ್ ಮಾಡಿಲ್ಲ. ಆದ್ರೆ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತು ಫ್ಯಾನ್ಸ್ ವಲಯದಲ್ಲಿ ಮಾತ್ರ ಈ ಸುದ್ದಿ ಭಾರಿ ಕುತೂಹಲ ಮೂಡಿಸಿದೆ. ಒಂದು ವೇಳೆ ಇದು ನಿಜ ಆದ್ರೆ, ಇದು ಅಮೀರ್ ಖಾನ್ ಅವರ ಲೈಫ್‌ನ ಮೂರನೇ ಮದುವೆ ಆಗಿರುತ್ತೆ. ಈ ಮುಂಚೆ ಅವರು ರೀನಾ ದತ್ತಾ ಮತ್ತು ಸಿನಿಮಾ ಡೈರೆಕ್ಟರ್ ಕಿರಣ್ ರಾವ್ ಅವರನ್ನು ಮದುವೆಯಾಗಿ ಡಿವೋರ್ಸ್ ಪಡೆದಿದ್ದರು.

60ನೇ ಬರ್ತ್‌ಡೇ ದಿನವೇ ಅಫೀಷಿಯಲ್ ಆಗಿದ್ದ ಲವ್ ಸ್ಟೋರಿ

ನಿಮಗೆ ಗೊತ್ತಿರಲಿ, ಕಳೆದ ವರ್ಷ ಅಂದರೆ 2025ರ ಮಾರ್ಚ್ ತಿಂಗಳಲ್ಲಿ ಅಮೀರ್ ಖಾನ್ ತಮ್ಮ 60ನೇ ವರ್ಷದ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಳ್ಳುವಾಗ ಮೊದಲ ಬಾರಿಗೆ ಮೀಡಿಯಾ ಮುಂದೆ ಗೌರಿ ಸ್ಪ್ರ್ಯಾಟ್ ಅವರನ್ನು ಇಂಟ್ರೊಡ್ಯೂಸ್ ಮಾಡಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಅಮೀರ್, "ನಮ್ಮಿಬ್ಬರಿಗೂ ಸರಿಸುಮಾರು 25 ವರ್ಷಗಳಿಂದ ಪರಿಚಯ ಇದೆ. ಆದ್ರೆ ಲೈಫ್‌ನ ಕಡೇ ಹಂತದಲ್ಲಿ ನಾವಿಬ್ಬರೂ ಮತ್ತೆ ಒಂದಾಗಿದ್ದೇವೆ" ಅಂತ ಹೇಳಿದ್ರು.

ಅಷ್ಟೇ ಅಲ್ಲ, ಮೀಡಿಯಾ ಮುಂದೆ ಬರೋದಕ್ಕೂ ಮುನ್ನವೇ ಇವರಿಬ್ಬರೂ ಸುಮಾರು 18 ತಿಂಗಳುಗಳಿಂದ ಸೈಲೆಂಟಾಗಿ ಲವ್ ಮಾಡ್ತಾ ಇದ್ರಂತೆ! ಆಮೇಲೆ ತಾವೇ ಆಫೀಷಿಯಲ್ ಆಗಿ ರಿಲೇಶನ್‌ಶಿಪ್ ಒಪ್ಪಿಕೊಂಡ್ರು. ಆದ್ರೆ ಲವ್ ಮ್ಯಾಟರ್ ರಿವೀಲ್ ಆದ್ಮೇಲೂ ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ತಮ್ಮ ಪರ್ಸನಲ್ ಲೈಫ್ ಅನ್ನು ಮೀಡಿಯಾ ಕಣ್ಣಿನಿಂದ ತುಂಬಾ ದೂರ ಇಟ್ಟಿದ್ದರು.

“ಮನಸ್ಸಿನಲ್ಲೇ ಅವಳನ್ನು ಮದುವೆಯಾಗಿದ್ದೇನೆ…”

ಹಲವಾರು ಇಂಟರ್ವ್ಯೂಗಳಲ್ಲಿ ಅಮೀರ್ ಖಾನ್ ಅವರು ಗೌರಿ ಬಗ್ಗೆ ತುಂಬಾ ಪ್ರೀತಿಯಿಂದ ಮಾತನಾಡಿದ್ದಾರೆ. "ಅವಳು ನನ್ನ ಲೈಫ್‌ಗೆ ಬಂದ್ಮೇಲೆ ನಾನು ತುಂಬಾ ನಿರಾಳವಾಗಿದ್ದೀನಿ. ನನ್ನ ಜೀವನದಲ್ಲಿ ಸ್ಥಿರತೆ ಮತ್ತು ಪ್ರೀತಿ ತಂದಿದ್ದು ಗೌರಿ. ಅವಳನ್ನು ನಾನು ಪೂರ್ತಿಯಾಗಿ ನಂಬುತ್ತೇನೆ" ಅಂತ ಅಮೀರ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷವೇ ಅವರು "ನಾನು ಈಗಾಗಲೇ ನನ್ನ ಮನಸ್ಸಿನಲ್ಲೇ ಅವಳನ್ನು ಮದುವೆಯಾಗಿದ್ದೇನೆ" ಅಂತ ಹೇಳಿ ಭಾರಿ ಸಂಚಲನ ಮೂಡಿಸಿದ್ರು. ಅಂದಿನಿಂದಲೇ ಫ್ಯಾನ್ಸ್ ಇವರಿಬ್ಬರ ರಿಯಲ್ ಮದುವೆಗೆ ದಿನಗಣನೆ ಶುರು ಮಾಡಿದ್ರು.

ರೀನಾ ದತ್ತಾ ಜೊತೆ ಮೊದಲ ಮದುವೆ

ಬಾಲಿವುಡ್‌ನಲ್ಲಿ ದೊಡ್ಡ ಹೀರೋ ಆಗುವುದಕ್ಕೂ ಮುನ್ನವೇ ಅಂದರೆ 1986 ರಲ್ಲಿ ಅಮೀರ್ ಖಾನ್ ಅವರು ರೀನಾ ದತ್ತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಾಲಿವುಡ್‌ನ ಬೆಸ್ಟ್ ಲವ್ ಸ್ಟೋರಿಗಳಲ್ಲಿ ಇವರದೂ ಒಂದಾಗಿತ್ತು. ಸುಮಾರು 16 ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದ ಈ ಜೋಡಿ, ಕೆಲವು ಭಿನ್ನಾಭಿಪ್ರಾಯಗಳಿಂದ 2002 ರಲ್ಲಿ ದೂರಾದರು. ಇವರಿಗೆ ಜುನೈದ್ ಖಾನ್ ಅನ್ನೋ ಮಗ ಮತ್ತು ಇರಾ ಖಾನ್ ಅನ್ನೋ ಮಗಳಿದ್ದಾಳೆ. ಡಿವೋರ್ಸ್ ಆದ್ರೂ ಕೂಡ ಅಮೀರ್ ಮತ್ತು ರೀನಾ ಇವತ್ತಿಗೂ ಒಳ್ಳೆ ಫ್ರೆಂಡ್ಸ್ ಆಗಿ ಉಳಿದಿದ್ದಾರೆ.

ಕಿರಣ್ ರಾವ್ ಜೊತೆ ಎರಡನೇ ಇನ್ನಿಂಗ್ಸ್

ರೀನಾ ದತ್ತಾ ಅವರಿಂದ ದೂರಾದ ಮೇಲೆ ಅಮೀರ್ ಖಾನ್ ಲೈಫ್‌ಗೆ ಬಂದಿದ್ದು ಕಿರಣ್ ರಾವ್. ಸೂಪರ್ ಹಿಟ್ 'ಲಗಾನ್' ಸಿನಿಮಾ ಶೂಟಿಂಗ್ ನಡೆಯುವಾಗ ಕಿರಣ್ ರಾವ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ರು. ಅಲ್ಲಿ ಶುರುವಾದ ಇವರ ಫ್ರೆಂಡ್‌ಶಿಪ್ ಆಮೇಲೆ ಪ್ರೀತಿಯಾಗಿ ಬದಲಾಯಿತು. 2005 ರ ಡಿಸೆಂಬರ್‌ನಲ್ಲಿ ಇವರಿಬ್ಬರು ಮದುವೆಯಾದರು. 2011 ರಲ್ಲಿ ಬಾಡಿಗೆ ತಾಯ್ತನದ (Surrogacy) ಮೂಲಕ 'ಆಜಾದ್ ರಾವ್ ಖಾನ್' ಅನ್ನೋ ಮಗ ಹುಟ್ಟಿದ. ಆದರೆ 16 ವರ್ಷಗಳ ಸಂಸಾರ ಮುಗಿಸಿ 2021 ರಲ್ಲಿ ಇವರಿಬ್ಬರು ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡರು. ಆದರೂ ಮಗನಿಗಾಗಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ತಾರೆ.

ಜುಲೈ 5 ಕ್ಕೆ ಗಿಫ್ಟ್ ಕೊಡ್ತಾರಾ ಅಮೀರ್?

ಸದ್ಯಕ್ಕಂತೂ ಜುಲೈ 5ರ ಮದುವೆ ಗಾಸಿಪ್ ಇಂಟರ್ನೆಟ್‌ನಲ್ಲಿ ಬೆಂಕಿ ತರ ಹರಡ್ತಾ ಇದೆ. ಮದುವೆಗೆ ಸಲ್ಮಾನ್ ಖಾನ್, ಶಾರುಖ್ ಖಾನ್ ಮುಂತಾದ ಬಾಲಿವುಡ್ ಬಿಗ್ ಬಾಸ್‌ಗಳು ಬರ್ತಾರೆ ಅನ್ನೋ ಟಾಕ್ ಕೂಡ ಇದೆ. ಅಮೀರ್ ಖಾನ್ ಯಾವಾಗಲೂ ತಮ್ಮ ಪರ್ಸನಲ್ ಲೈಫ್ ನಿರ್ಧಾರಗಳಿಂದ ಜನರಿಗೆ ಸರ್ಪ್ರೈಸ್ ಕೊಡ್ತಾ ಇರ್ತಾರೆ. ಹಾಗಾಗಿ, ಈ ಬಾರಿ ಕೂಡ ಜುಲೈ 5 ರಂದು ಅಮೀರ್ ಖಾನ್ ತಮ್ಮ ಮೂರನೇ ಮದುವೆ ಸುದ್ದಿಯನ್ನು ಅಫೀಷಿಯಲ್ ಮಾಡಿ ತಮ್ಮ ಲೈಫ್‌ನ ಹೊಸ ಅಧ್ಯಾಯ ಶುರು ಮಾಡ್ತಾರಾ ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ!

Latest News