Apr 27, 2026 Languages : ಕನ್ನಡ | English

ಮಗನ ನಟನೆ ಕಂಡು ಕಣ್ಣೀರಿಟ್ಟ ಆಮಿರ್ ಖಾನ್ - ಸಾಯಿ ಪಲ್ಲವಿ ಬಗ್ಗೆ ಆಮಿರ್ ಖಾನ್ ಆಡಿದ ಮಾತುಗಳು ಇಲ್ಲಿದೆ ನೋಡಿ!!

ಸ್ಟಾರ್ ನಟರಾದ್ರೂ ಆಮಿರ್ ಖಾನ್ ಒಬ್ಬ ತಂದೆಯಾಗಿ ಭಾವುಕರಾಗೋದು ಹೊಸದೇನಲ್ಲ. ಇತ್ತೀಚೆಗೆ ತಮ್ಮ ಮಗ ಜುನೈದ್ ಖಾನ್ ನಟನೆಯ ಎರಡನೇ ಸಿನಿಮಾ 'ಏಕ್ ದಿನ್' ಪ್ರಚಾರದ ವೇಳೆ ಆಮಿರ್ ಖಾನ್ ಎಲ್ಲರ ಎದುರೇ ಕಣ್ಣೀರು ಹಾಕಿದ್ದಾರೆ. ಈ ಎಮೋಷನಲ್ ವಿಡಿಯೋ ಈಗ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಶರ್ಟ್‌ನಲ್ಲೇ ಕಣ್ಣೀರು ಒರೆಸಿಕೊಂಡ ಬಾಲಿವುಡ್ ಸ್ಟಾರ್ | Photo Credit: https://www.instagram.com/viralbhayani/
ಶರ್ಟ್‌ನಲ್ಲೇ ಕಣ್ಣೀರು ಒರೆಸಿಕೊಂಡ ಬಾಲಿವುಡ್ ಸ್ಟಾರ್ | Photo Credit: https://www.instagram.com/viralbhayani/

ಏನಿದು 'ಏಕ್ ದಿನ್ ಕಿ ಮೆಹ್ಫಿಲ್'?

ಜುನೈದ್ ಖಾನ್ ಮತ್ತು ನಮ್ಮ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಿರೋ 'ಏಕ್ ದಿನ್' ಸಿನಿಮಾದ ಪ್ರಮೋಷನ್‌ಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾದ ಕೆಲವು ತುಣುಕುಗಳನ್ನು ಪ್ರದರ್ಶಿಸಲಾಯಿತು. ಮಗನ ನಟನೆ ಮತ್ತು ಸಿನಿಮಾದ ಕಥೆಯನ್ನು ಸ್ಕ್ರೀನ್ ಮೇಲೆ ನೋಡುತ್ತಿದ್ದಂತೆ ಆಮಿರ್ ಖಾನ್ ಅವರಿಗೆ ಅಳು ತಡೆಯಲು ಸಾಧ್ಯವಾಗಲಿಲ್ಲ. ಎಷ್ಟರಮಟ್ಟಿಗೆ ಅಂದ್ರೆ, ತಮ್ಮ ಶರ್ಟ್‌ನಿಂದಲೇ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ತಕ್ಷಣ ಪಕ್ಕದಲ್ಲೇ ಇದ್ದ ಸಾಯಿ ಪಲ್ಲವಿ ಮತ್ತು ಮಗ ಜುನೈದ್ ಅವರು ಆಮಿರ್ ಅವರನ್ನು ಸಮಾಧಾನಪಡಿಸಿದ್ದಾರೆ.

View this post on Instagram

A post shared by Viral Bhayani (@viralbhayani)

ಸಾಯಿ ಪಲ್ಲವಿ ನಟನೆಗೆ ಆಮಿರ್ ಶಹಬ್ಬಾಸ್ ಗಿರಿ

ಇದೇ ವೇದಿಕೆಯಲ್ಲಿ ಆಮಿರ್ ಖಾನ್ ಅವರು ಸಾಯಿ ಪಲ್ಲವಿ ಅವರ ಬಗ್ಗೆ ಆಡಿದ ಮಾತುಗಳು ಈಗ ಸಖತ್ ಸೌಂಡ್ ಮಾಡ್ತಿದೆ. "ಸಾಯಿ ಪಲ್ಲವಿ ಇವತ್ತು ನಮ್ಮ ದೇಶದಲ್ಲಿರೋ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಈ ಸಿನಿಮಾದಲ್ಲಿ ಅವರ ನಟನೆ ನೋಡಿ ನೀವು ನಿಜಕ್ಕೂ ಬೆರಗಾಗ್ತೀರಾ" ಅಂತ ಮನಸಾರೆ ಹೊಗಳಿದ್ದಾರೆ. ಸಾಯಿ ಪಲ್ಲವಿಗೆ ಇದು ಚೊಚ್ಚಲ ಬಾಲಿವುಡ್ ಸಿನಿಮಾ ಅನ್ನೋದು ವಿಶೇಷ.

ಮಗ ಜುನೈದ್ ನಟನೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ ಆಮಿರ್, "ಜುನೈದ್ ಕೂಡ ಪರವಾಗಿಲ್ಲ ಅನ್ನೋ ಹಾಗೆ ನಟಿಸಿದ್ದಾನೆ. ಅವನು ನನ್ನ ಮಗ ಅಂತ ನಾನೇ ಜಾಸ್ತಿ ಹೊಗಳೋದು ಅಷ್ಟು ಚೆನ್ನಾಗಿರಲ್ಲ ಅಲ್ವಾ?" ಅಂತ ನಗುತ್ತಲೇ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾದ ಟೈಟಲ್ ಸಾಂಗ್ ಅನ್ನು ವೇದಿಕೆ ಮೇಲೆ ಹಾಡಿ ಎಲ್ಲರನ್ನೂ ರಂಜಿಸಿದ್ದಾರೆ.

ಏನಿದು ಸಿನಿಮಾದ ಕಥೆ?

ಈ ಸಿನಿಮಾ 2016ರ ಜನಪ್ರಿಯ ಥಾಯ್ ಸಿನಿಮಾ 'ಒನ್ ಡೇ' ಚಿತ್ರದ ಅಧಿಕೃತ ರಿಮೇಕ್. ತನ್ನ ಜೊತೆ ಕೆಲಸ ಮಾಡೋ ಹುಡುಗಿಯನ್ನು ಇಷ್ಟಪಡೋ ಯುವಕನಿಗೆ, ಆಕೆಯ ಜೊತೆ ಕೇವಲ ಒಂದು ದಿನ ಕಳೆಯೋಕೆ ಅವಕಾಶ ಸಿಗುತ್ತೆ. ಆ ಒಂದು ದಿನದಲ್ಲಿ ಏನೆಲ್ಲಾ ಆಗುತ್ತೆ ಅನ್ನೋದೇ ಈ ಸಿನಿಮಾದ ಹೂರಣ. ಸುನಿಲ್ ಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಗೆಲುವು ಜುನೈದ್‌ಗೆ ಅನಿವಾರ್ಯ

ಜುನೈದ್ ಖಾನ್ ಅವರ ಮೊದಲ ಸಿನಿಮಾ 'ಲವ್ಯಾಪ' ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಹಾಗಾಗಿ ಈ ಎರಡನೇ ಸಿನಿಮಾ 'ಏಕ್ ದಿನ್' ಅವರಿಗೆ ಬಹಳ ಮುಖ್ಯವಾಗಿದೆ. ಸಿನಿಮಾ ಮೇ 1ರಂದು ರಿಲೀಸ್ ಆಗಲಿದ್ದು, ವಿಶೇಷ ಅಂದ್ರೆ ಸಿನಿಮಾ ಬಿಡುಗಡೆಗೆ 39 ದಿನ ಮೊದಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

ಆಮಿರ್ ಖಾನ್ ಅವರ ಕಣ್ಣೀರು ಈ ಸಿನಿಮಾದಲ್ಲಿ ಅದೆಷ್ಟು ಎಮೋಷನಲ್ ಕಥೆ ಇದೆ ಅನ್ನೋದಕ್ಕೆ ಸಾಕ್ಷಿ ಅಂತಿದ್ದಾರೆ ಫ್ಯಾನ್ಸ್. ಸಾಯಿ ಪಲ್ಲವಿ ಮತ್ತು ಜುನೈದ್ ಜೋಡಿ ಬಾಲಿವುಡ್‌ನಲ್ಲಿ ಮ್ಯಾಜಿಕ್ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Latest News