Sunday, Nov 22, 2026
|
Advertisement

ಐಫೋನ್ ಕಾರ್ಖಾನೆಯಲ್ಲಿ ಸಾ*ವಿನ ದು*ರಂತ! ಟ್ಯಾಂಕ್ ಪರಿಶೀಲನೆಗೆ ಇಳಿದ ಮೂವರು ಕಾರ್ಮಿಕರು ಮೃ*ತ್ಯು

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಐಫೋನ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ಸಂಭವಿಸಿದ ದು*ರಂತದಲ್ಲಿ ಮೂವರು ಗುತ್ತಿಗೆ ಕಾರ್ಮಿಕರು ಮೃ*ತಪಟ್ಟಿದ್ದಾರೆ. ನವೆಂಬರ್ 9ರ ಸೋಮವಾರ ಸಂಜೆ ಕಾರ್ಖಾನೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ನಿರ್ವಹಣಾ ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಅನಿಲವನ್ನು ಉಸಿರಾಡಿದ್ದರಿಂದ ಈ ದು*ರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಘಟನೆ ಕೈಗಾರಿಕಾ ಘಟಕಗಳಲ್ಲಿನ ಕಾರ್ಮಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಬೆಂಗಳೂರು ಗಡಿ ದುರಂತ , ವಿಷಕಾರಿ ಅನಿಲ ಸೋರಿಕೆ | Photo Credit: https://www.magnific.com/
ಬೆಂಗಳೂರು ಗಡಿ ದುರಂತ , ವಿಷಕಾರಿ ಅನಿಲ ಸೋರಿಕೆ | Photo Credit: https://www.magnific.com/

ಘಟನೆ ನಡೆದಿದ್ದೆಲ್ಲಿ?

ಈ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದ ವನ್ನಿಯಪುರಂ ಪ್ರದೇಶದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ನಡೆದಿದೆ. ಈ ಘಟಕದಲ್ಲಿ ಆಪಲ್ ಐಫೋನ್‌ಗಳಿಗೆ ಅಗತ್ಯವಿರುವ ಹಿಂಭಾಗದ ಪ್ಯಾನೆಲ್‌ಗಳು ಮತ್ತು ಲೋಹದ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ.

Advertisement

ಇದು ಬೆಂಗಳೂರಿನ ಗಡಿಯ ಸಮೀಪವಿರುವ ಕೈಗಾರಿಕಾ ಪ್ರದೇಶವಾಗಿರುವುದರಿಂದ ಈ ಘಟನೆ ಕರ್ನಾಟಕದಲ್ಲಿಯೂ ಗಮನ ಸೆಳೆದಿದೆ. ಆದರೆ ಕಾರ್ಖಾನೆ ಇರುವುದು ಕರ್ನಾಟಕದಲ್ಲಲ್ಲ, ತಮಿಳುನಾಡಿನಲ್ಲಾಗಿದೆ.

ಮೂವರು ಕಾರ್ಮಿಕರು ಮೃ*ತಪಟ್ಟಿದ್ದು ಹೇಗೆ?

ಜಿಲ್ಲಾಧಿಕಾರಿ ಸಿ. ದಿನೇಶ್ ಕುಮಾರ್ ನೀಡಿರುವ ಮಾಹಿತಿಯ ಪ್ರಕಾರ, ನಾಲ್ವರು ಕಾರ್ಮಿಕರ ತಂಡವೊಂದು ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನ್ಯಾನೋ ಫಿಲ್ಟ್ರೇಷನ್ ಟ್ಯಾಂಕ್‌ನಲ್ಲಿ ನಿರ್ವಹಣಾ ಕೆಲಸ ಮಾಡುತ್ತಿತ್ತು.

ಈ ವೇಳೆ ಬಿ. ಅಕ್ಮಲ್ ಎಂಬ ಕಾರ್ಮಿಕ ಮೊದಲು ಟ್ಯಾಂಕ್ ಪರಿಶೀಲಿಸಲು ಮುಂದಾದಾಗ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಎಂ. ಶರತ್ ಕುಮಾರ್ ಮತ್ತು ಪಿ. ಕಾವೇರಿ ಕೂಡ ಅಸ್ವಸ್ಥರಾಗಿದ್ದಾರೆ. ನಾಲ್ಕನೇ ಕಾರ್ಮಿಕ ತಕ್ಷಣ ಸಹಾಯಕ್ಕಾಗಿ ಮಾಹಿತಿ ನೀಡಿದ್ದಾರೆ. ಕಾರ್ಖಾನೆಯ ಸಿಬ್ಬಂದಿ ಮೂವರನ್ನು ಹೊರತೆಗೆದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೊಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರು ಮೃ*ತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 

ಮೃ*ತಪಟ್ಟ ಕಾರ್ಮಿಕರ ವಿವರ

  • ಬಿ. ಅಕ್ಮಲ್ (28) - ತಿನ್ನೂರು ಗ್ರಾಮದ ನಿವಾಸಿ.
  • ಪಿ. ಕಾವೇರಿ (30) -  ಹನುಮಂತಪುರಂ ನಿವಾಸಿ.
  • ಎಂ. ಶರತ್ ಕುಮಾರ್ (25) - ಬೆಲರಂಪಟ್ಟಿ ನಿವಾಸಿ.

ಮೂವರೂ ಧರ್ಮಪುರಿ ಜಿಲ್ಲೆಯವರಾಗಿದ್ದು, ಗುತ್ತಿಗೆ ಆಧಾರದಲ್ಲಿ ನಿರ್ವಹಣಾ ಕೆಲಸ ಮಾಡುತ್ತಿದ್ದರು. 

Advertisement

ಅನಿಲ ಸೋರಿಕೆಗೆ ಕಾರಣವೇನು?

ಪ್ರಾಥಮಿಕ ತನಿಖೆಯ ಪ್ರಕಾರ, ಟ್ಯಾಂಕ್ ಒಳಗೆ ಸಂಗ್ರಹವಾಗಿದ್ದ ತ್ಯಾಜ್ಯ ಮತ್ತು ರಾಸಾಯನಿಕ ಪದಾರ್ಥಗಳ ನಡುವಿನ ಪ್ರತಿಕ್ರಿಯೆಯಿಂದ ವಿಷಕಾರಿ ಅನಿಲ ಉತ್ಪತ್ತಿಯಾಗಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಟ್ಯಾಂಕ್‌ನಲ್ಲಿದ್ದ ಕೆಸರು ಅಥವಾ ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸವನ್ನು ಹೊರಗಿನಿಂದಲೇ ಮಾಡಬಹುದಾಗಿದ್ದರೂ ಕಾರ್ಮಿಕರು ಒಳಗೆ ಹೋಗಬೇಕಾದ ಪರಿಸ್ಥಿತಿ ಏಕೆ ಎದುರಾಯಿತು ಎಂಬ ಪ್ರಶ್ನೆಯೂ ತನಿಖೆಯಲ್ಲಿದೆ. ಸೂಕ್ತ ಸುರಕ್ಷತಾ ಕ್ರಮಗಳು, ಅಗತ್ಯ ರಕ್ಷಣಾ ಸಾಧನಗಳು ಮತ್ತು ಸೀಮಿತ ಜಾಗದಲ್ಲಿ ಕೆಲಸ ಮಾಡುವ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬುದನ್ನು ಕೈಗಾರಿಕಾ ಸುರಕ್ಷತಾ ಇಲಾಖೆ ಹಾಗೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅನಿಲದ ನಿಖರ ಸ್ವರೂಪ ಮತ್ತು ಸಾ*ವಿನ ಅಂತಿಮ ಕಾರಣವನ್ನು ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ಮೂಲಕ ಖಚಿತಪಡಿಸಬೇಕಿದೆ. 

ಕಂಪನಿಗಳಿಂದ ತನಿಖೆ, ಕುಟುಂಬಗಳಿಗೆ ಪರಿಹಾರ

ಘಟನೆಯ ಕುರಿತು ತಮಿಳುನಾಡು ಸರ್ಕಾರ ತನಿಖೆಗೆ ಮುಂದಾಗಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಆಪಲ್ ಕಂಪನಿಗಳೂ ತಮ್ಮದೇ ಆದ ಆಂತರಿಕ ತನಿಖೆ ನಡೆಸಲಿವೆ ಎಂದು ವರದಿಯಾಗಿದೆ.

ಇದಲ್ಲದೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ನಿರ್ವಹಿಸುತ್ತಿದ್ದ ಅಮೆರಿಕ ಮೂಲದ ಇಕೋಲ್ಯಾಬ್ ಕಂಪನಿಯ ಅಂಗಸಂಸ್ಥೆ ನಾಲ್ಕೊ ವಾಟರ್ (Nalco Water) ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದೆ. ವಿಮಾ ನೆರವಿನ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಐಫೋನ್ ಉತ್ಪಾದನೆಗೆ ತೊಂದರೆಯಾಗಿದೆಯೇ?

ಈ ದು*ರಂತ ಸಂಭವಿಸಿದ ಸಮಯದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾರ್ಖಾನೆ ಈಗಾಗಲೇ ಮುಚ್ಚಲಾಗಿತ್ತು. ಹೀಗಾಗಿ ಘಟನೆಯಿಂದ ಐಫೋನ್ ಬಿಡಿಭಾಗಗಳ ಉತ್ಪಾದನೆಗೆ ತಕ್ಷಣದ ಪರಿಣಾಮ ಉಂಟಾಗಿಲ್ಲ ಎಂದು ಉದ್ಯಮ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಭಾರತದಲ್ಲಿ ಐಫೋನ್ ಉತ್ಪಾದನಾ ವಲಯದಲ್ಲಿ ಟಾಟಾ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದ ಐಫೋನ್ ಉತ್ಪಾದನೆಯಲ್ಲಿ ಟಾಟಾ ಸುಮಾರು ಶೇ.40ರಷ್ಟು ಪಾಲು ಹೊಂದಿದ್ದು, ಫಾಕ್ಸ್‌ಕಾನ್ ಕೂಡ ಪ್ರಮುಖ ಉತ್ಪಾದನಾ ಪಾಲುದಾರ ಸಂಸ್ಥೆಯಾಗಿದೆ. 

ಕಾರ್ಮಿಕರ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆ

ಕೈಗಾರಿಕಾ ಘಟಕಗಳಲ್ಲಿ ನಿರ್ವಹಣಾ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ತರಬೇತಿ, ರಕ್ಷಣಾ ಸಾಧನಗಳು ಮತ್ತು ಮೇಲ್ವಿಚಾರಣೆ ಅತ್ಯಗತ್ಯ. ವಿಶೇಷವಾಗಿ ಟ್ಯಾಂಕ್‌ಗಳು ಮತ್ತು ಸೀಮಿತ ಗಾಳಿಯಾಡುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಹೊಸೂರಿನ ಈ ದುರಂತವು ಗುತ್ತಿಗೆ ಕಾರ್ಮಿಕರ ಸುರಕ್ಷತೆ ಮತ್ತು ಕೈಗಾರಿಕಾ ನಿರ್ವಹಣಾ ವ್ಯವಸ್ಥೆಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ತನಿಖೆಯ ಅಂತಿಮ ವರದಿಯಲ್ಲಿ ಅಪ*ಘಾತಕ್ಕೆ ನಿಖರ ಕಾರಣವೇನು ಮತ್ತು ಸುರಕ್ಷತಾ ಲೋಪಗಳಿವೆಯೇ ಎಂಬುದು ಸ್ಪಷ್ಟವಾಗಬೇಕಿದೆ.

Comments