Sunday, Nov 22, 2026
|
Advertisement

ಆನ್‌ಲೈನ್ ಡೆಲಿವರಿ ಬ್ಯಾಗ್‌ಗಳಿಗೂ ಮರುಬಳಕೆ ಭಾಗ್ಯ; ಕಡಲೆಕಾಯಿ ಪರಿಷೆಗೆ ಹೊಸ ಯೋಜನೆ !!

ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಈ ಬಾರಿ ಪರಿಸರ ಸಂರಕ್ಷಣೆಯ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಏಕೆಂದರೆ ಒಂದು ಜಾತ್ರೆಯನ್ನು ನಿಭಾಯಿಸುವುದು ಸುಳ್ಳಬದ  ವಿಷವಲ್ಲ ಏಕೆಂದರೆ ಜಾತ್ರೆಯಾ ಸಮಯದಲ್ಲಿ  ಜನರ ಸಂಭಾಳಿಸುವಿಕೆ ಹಾಗು ಜಾತ್ರೆ ಎಲ್ಲ ವ್ಯವಸ್ಥತೆಯನ್ನು ನಿಭಾಹಿಸುವುದರ ಜೊತೆಗೆ ಪ್ಲಾಸ್ಟಿಕ್ ಬ್ಯಾಗುಗಳು ಬಾಟಲ್ ಗಳಿಂದ ಆಗುವ ಪರಿಸರ ಮಾಲಿನ್ಯ ತಡೆಗೆ   ಸಂಘಟನೆಗಳು ನಿರ್ದರಿಸಿದು  ಜಾತ್ರೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಕಾಗದದ ಚೀಲಗಳನ್ನು ಬಳಸುವಂತೆ ವ್ಯಾಪಾರಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಂಘಟಕರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹಳೆಯ ದಿನಪತ್ರಿಕೆಗಳಿಂದ ಚೀಲಗಳನ್ನು ತಯಾರಿಸಿ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾಗದದ ಚೀಲಗಳನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ. 

ಪ್ಲಾಸ್ಟಿಕ್ ಮುಕ್ತ ಪರಿಷೆ, ಪೇಪರ್ ಬ್ಯಾಗ್ ಅಭಿಯಾನ | Photo Credit: https://www.instagram.com/priyankaavlogs_/
ಪ್ಲಾಸ್ಟಿಕ್ ಮುಕ್ತ ಪರಿಷೆ, ಪೇಪರ್ ಬ್ಯಾಗ್ ಅಭಿಯಾನ | Photo Credit: https://www.instagram.com/priyankaavlogs_/

500 ವರ್ಷಗಳ ಇತಿಹಾಸ ಹೊಂದಿರುವ ಕಡಲೆಕಾಯಿ ಪರಿಷೆ

ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನದ ಸುತ್ತಮುತ್ತ ನಡೆಯುವ ಕಡಲೆಕಾಯಿ ಪರಿಷೆಗೆ ಸುಮಾರು ಐದು ಶತಮಾನಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಹಿಂದೆ ಬಸವನಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಲೆಕಾಯಿ ಬೆಳೆಯುತ್ತಿದ್ದ ರೈತರು, ತಮ್ಮ ಬೆಳೆಗಳನ್ನು ಗೂಳಿಗಳಿಂದ ರಕ್ಷಿಸಲು ಬಸವಣ್ಣನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬ ಜನಪ್ರಿಯ ಕಥೆಯಿದೆ. ಬೆಳೆ ಉತ್ತಮವಾಗಿ ಬಂದ ಬಳಿಕ ಮೊದಲ ಫಸಲನ್ನು ದೇವರಿಗೆ ಅರ್ಪಿಸುವ ಸಂಪ್ರದಾಯದಿಂದ ಈ ಪರಿಷೆ ಆರಂಭವಾಯಿತು ಎಂಬ ನಂಬಿಕೆ ಇಂದಿಗೂ ಜನರಲ್ಲಿ ಜೀವಂತವಾಗಿದೆ.

Advertisement

ರೈತರಿಂದ ನೇರವಾಗಿ ಕಡಲೆಕಾಯಿ ಖರೀದಿಸುವ ಅವಕಾಶ

ಕಡಲೆಕಾಯಿ ಪರಿಷೆಯ ಪ್ರಮುಖ ಆಕರ್ಷಣೆ ಎಂದರೆ ವಿವಿಧ ಪ್ರದೇಶಗಳಿಂದ ಬರುವ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದು. ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ವಿವಿಧ ತಳಿಯ ಕಾಯಿಗಳು ಸೇರಿದಂತೆ ಹಲವು ಬಗೆಯ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ರೈತರು ತಮ್ಮ ಬೆಳೆಗಳನ್ನು ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಾರೆ. ಗ್ರಾಹಕರು ವಿವಿಧ ತಳಿಗಳನ್ನು ನೋಡಿಕೊಂಡು, ರುಚಿ ಪರೀಕ್ಷಿಸಿ ಖರೀದಿಸುವ ಅವಕಾಶವೂ ಇರುತ್ತದೆ. ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಈ ಪರಿಷೆ ಸ್ಥಳೀಯ ವ್ಯಾಪಾರಕ್ಕೂ ಉತ್ತೇಜನ ನೀಡುತ್ತದೆ.

ಜಾತ್ರೆಯಲ್ಲಿ ಏನೆಲ್ಲಾ ಇರುತ್ತದೆ?

ಕಡಲೆಕಾಯಿ ಮಳಿಗೆಗಳ ಜೊತೆಗೆ ಬಳೆ, ಆಟಿಕೆಗಳು, ಮಣ್ಣಿನ ಗೊಂಬೆಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳು ಮತ್ತು ವಿವಿಧ ತಿಂಡಿ-ತಿನಿಸುಗಳ ಮಳಿಗೆಗಳು ಜಾತ್ರೆಯ ಆಕರ್ಷಣೆಯಾಗಿರುತ್ತವೆ. ಬತ್ತಾಸು, ಬೆಂಡು, ಮಂಡಕ್ಕಿ, ಬಜ್ಜಿ, ಬೋಂಡಾ, ಸಿಹಿತಿಂಡಿಗಳು ಹಾಗೂ ಪಾನೀಯಗಳ ಮಳಿಗೆಗಳು ಜನರನ್ನು ಸೆಳೆಯುತ್ತವೆ. ಸಂಜೆ ವೇಳೆಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟ ರಸ್ತೆಗಳು ಹಬ್ಬದ ವಾತಾವರಣ ಸೃಷ್ಟಿಸುತ್ತವೆ. ಕುಟುಂಬ ಸಮೇತ ಬರುವವರು ಖರೀದಿ, ಆಹಾರ ಮತ್ತು ಜಾತ್ರೆಯ ಸಂಭ್ರಮವನ್ನು ಆಸ್ವಾದಿಸುತ್ತಾರೆ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು 4 ಲಕ್ಷ ಕಾಗದದ ಚೀಲ

ಈ ಬಾರಿ ಜಾತ್ರೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿ ಅಭಿಯಾನ ಕೈಗೊಳ್ಳಲಾಗಿದೆ. ಹಳೆಯ ದಿನಪತ್ರಿಕೆಗಳನ್ನು ಸಂಗ್ರಹಿಸಿ ಅವುಗಳಿಂದ ಕಾಗದದ ಚೀಲಗಳನ್ನು ತಯಾರಿಸಿ ವ್ಯಾಪಾರಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಇದರ ಜೊತೆಗೆ ಮನೆಗಳಲ್ಲಿ ಆನ್‌ಲೈನ್ ವಸ್ತುಗಳು, ದಿನಸಿ ಮತ್ತು ಆಹಾರ ವಿತರಣೆಯಿಂದ ಬಂದಿರುವ ಸ್ವಚ್ಛ ಹಾಗೂ ಬಳಕೆಯಾಗದ ಕಾಗದದ ಚೀಲಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಯೋಜನೆಯೂ ರೂಪಿಸಲಾಗಿದೆ. ಈ ಎರಡು ಪ್ರಯತ್ನಗಳ ಮೂಲಕ ಸುಮಾರು 4 ಲಕ್ಷ ಕಾಗದದ ಚೀಲಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.

ಕಳೆದ ವರ್ಷ 12 ಲಕ್ಷಕ್ಕೂ ಹೆಚ್ಚು ಜನರ ಭೇಟಿ

ಕಳೆದ ವರ್ಷದ ಕಡಲೆಕಾಯಿ ಪರಿಷೆಗೆ 12 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು, 2 ಲಕ್ಷಕ್ಕೂ ಅಧಿಕ ಕಾಗದದ ಚೀಲಗಳನ್ನು ವಿತರಿಸಲಾಗಿತ್ತು ಎಂದು ಆಯೋಜಕರ ಮಾಹಿತಿ ಉಲ್ಲೇಖಿಸಿದೆ. ಜಾತ್ರೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳೂ ನಡೆದಿದ್ದವು. ಈ ವರ್ಷ ಚೀಲ ವಿತರಣೆಯಷ್ಟೇ ಅಲ್ಲದೆ, ಸಾರ್ವಜನಿಕರು ಸ್ವಂತ ಚೀಲಗಳನ್ನು ತರುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದರ ಮೇಲೂ ಒತ್ತು ನೀಡಲಾಗುತ್ತಿದೆ.

Advertisement

2025ರ  ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ 700 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 200 ಕೆ.ಜಿ. ಬಳಕೆಯಾಗದ ಪ್ಲಾಸ್ಟಿಕ್ ಕೂಡ ಸೇರಿತ್ತು ಎಂದು ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ

ಪರಿಷೆಯನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಸಾರ್ವಜನಿಕರು, ವಿದ್ಯಾರ್ಥಿಗಳು, ಕಾಲೇಜುಗಳು, ಸಂಘ-ಸಂಸ್ಥೆಗಳು, ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ವ್ಯಾಪಾರಿಗಳು ಕೈಜೋಡಿಸುವಂತೆ ಮನವಿ ಮಾಡಲಾಗಿದೆ. ಸಂಪ್ರದಾಯವನ್ನು ಉಳಿಸಿಕೊಂಡು ಪರಿಸರದ ಮೇಲಿನ ಹೊಣೆಗಾರಿಕೆಯನ್ನು ನಿಭಾಯಿಸುವ ಮೂಲಕ ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆಯನ್ನು ಸ್ವಚ್ಛವಾಗಿ ಆಚರಿಸುವ ಆಶಯ ಹೊಂದಲಾಗಿದೆ.

Comments