10,000 ಎಲೆಕ್ಟ್ರಿಕ್ ಕ್ಯಾಬ್‌ಗಳು ರಸ್ತೆಗಿಳಿಯಲು ಸಜ್ಜು - ಡ್ರೈವರ್‌ಗಳಿಗೆ ತಿಂಗಳ ಸಂಬಳ ₹40,000 ವರೆಗೆ ಫಿಕ್ಸೆಡ್ ಇರುತ್ತದಂತೆ!!

ನಿಮಗೆ ಕಾರ್ ಡ್ರೈವಿಂಗ್ ಗೊತ್ತಿ ದ್ದು, ಒಂದು ಕೈತುಂಬಾ ಸಂಬಳ ಬರುವ ಕಾಯಂ ಕೆಲಸಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸೂಪರ್ ಗುಡ್ ನ್ಯೂಸ್ ಇಲ್ಲಿದೆ. ವಿಯೆಟ್ನಾಂ ಮೂಲದ ಪ್ರಖ್ಯಾತ ಎಲೆಕ್ಟ್ರಿಕ್ ಕಾರ್ ಕಂಪನಿ 'ವಿನಫಾಸ್ಟ್' (VinFast) ಇದೀಗ ಭಾರತದ ಮಾರುಕಟ್ಟೆಗೆ ಭರ್ಜರಿಯಾಗಿ ಕಾಲಿಟ್ಟಿದ್ದು, ಬೃಹತ್ ಮಟ್ಟದಲ್ಲಿ ಚಾಲಕರ ನೇಮಕಾತಿಯನ್ನು (Driver Recruitment) ಆರಂಭಿಸಿದೆ.

ಓಲಾ-ಉಬರ್ ಕಮಿಷನ್ ಕಿರಿಕಿರಿ ಇಲ್ಲ: VinFast ಹೊಸ ಅವಕಾಶ; | Photo Credit: https://cleantechnica.com
ಓಲಾ-ಉಬರ್ ಕಮಿಷನ್ ಕಿರಿಕಿರಿ ಇಲ್ಲ: VinFast ಹೊಸ ಅವಕಾಶ; | Photo Credit: https://cleantechnica.com

ಓಲಾ, ಉಬರ್‌ನಂತಹ ಕ್ಯಾಬ್‌ಗಳಲ್ಲಿ ಕಮಿಷನ್ ಕಿರಿಕಿರಿ ಮತ್ತು ಇಂಧನ ಬೆಲೆ ಏರಿಕೆಯಿಂದ ಬೇಸತ್ತಿರುವ ಡ್ರೈವರ್‌ಗಳಿಗೆ ಈ ಹೊಸ ಇವಿ ಟ್ಯಾಕ್ಸಿ ಸೇವೆ ಒಂದು ದೊಡ್ಡ ಆಶಾಕಿರಣವಾಗಿ ಮೂಡಿಬಂದಿದೆ. ಈ ಉದ್ಯೋಗಾವಕಾಶದ ಕಂಪ್ಲೀಟ್ ಮಾಹಿತಿ ಮತ್ತು ನೀವು ಹೇಗೆ ಲಾಭ ಪಡೆಯಬಹುದು ಎಂಬ ವಿವರ ಇಲ್ಲಿದೆ:

ಓಲಾ, ಉಬರ್ ಕಮಿಷನ್ ಕಿರಿಕಿರಿ ಇರಲ್ಲ: ಸಿಗಲಿದೆ 'ಫಿಕ್ಸೆಡ್' ಸಂಬಳ!

ಸಾಮಾನ್ಯವಾಗಿ ಇವತ್ತು ಟ್ಯಾಕ್ಸಿ ಓಡಿಸುವ ಚಾಲಕರು ದಿನವಿಡೀ ದುಡಿದರೂ ಅದರಲ್ಲಿ ಅರ್ಧದಷ್ಟು ಹಣ ಕಂಪನಿಯ ಕಮಿಷನ್‌ ಹಾಗೂ ಪೆಟ್ರೋಲ್-ಡೀಸೆಲ್ ಖರ್ಚಿಗೇ ಹೋಗಿಬಿಡುತ್ತದೆ. ಆದರೆ ವಿನಫಾಸ್ಟ್ ಕಂಪನಿಯು 'ಗ್ರೀನ್ ಎಸ್‌ಎಂ' (Green SM India) ಸಂಸ್ಥೆಯೊಂದಿಗೆ ಸೇರಿ ತರುತ್ತಿರುವ ಈ ಯೋಜನೆಯಲ್ಲಿ ಚಾಲಕರಿಗೆ ಯಾವುದೇ ಕಮಿಷನ್ ಟೆನ್ಷನ್ ಇರುವುದಿಲ್ಲ.

ಬದಲಿಗೆ, ಈ ಎಲೆಕ್ಟ್ರಿಕ್ ಕಾರುಗಳನ್ನು ಓಡಿಸುವ ಚಾಲಕರಿಗೆ ತಿಂಗಳಿಗೆ ₹35,000 ದಿಂದ ₹40,000 ವರೆಗೆ ಫಿಕ್ಸೆಡ್ (Fixed) ಸಂಬಳವನ್ನು ನೀಡಲಾಗುತ್ತಿದೆ! ಅಂದರೆ, ತಿಂಗಳ ಕೊನೆಗೆ ನಿಮ್ಮ ಕೈ ಸೇರಬೇಕಾದ ಸಂಬಳ ಖಚಿತವಾಗಿರುತ್ತದೆ. ಕಮರ್ಷಿಯಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಯುವಕರಿಗೆ ಇದೊಂದು ಅತ್ಯುತ್ತಮ ಮತ್ತು ಭದ್ರತೆಯ ಉದ್ಯೋಗಾವಕಾಶವಾಗಿದೆ.

ಮೊದಲ ಹಂತದಲ್ಲೇ 10,000 ಇವಿ ಕಾರುಗಳು ರಸ್ತೆಗಿಳಿಯಲು ಸಜ್ಜು!

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋಗಳ ಪ್ರಕಾರ, ಹಳದಿ ಮತ್ತು ಕಪ್ಪು ಬಣ್ಣದ ಕಮರ್ಷಿಯಲ್ ನಂಬರ್ ಪ್ಲೇಟ್ ಹೊಂದಿರುವ ನೂರಾರು ‘ವಿನಫಾಸ್ಟ್ ಲಿಮೋ ಗ್ರೀನ್ MPV’ ಕಾರುಗಳು ಈಗಾಗಲೇ ಯಾರ್ಡ್‌ನಲ್ಲಿ ಸಿದ್ಧವಾಗಿ ನಿಂತಿವೆ.

ಪ್ರಾರಂಭದ ಗುರಿ: ಮೊದಲ ಹಂತದಲ್ಲಿ ಉತ್ತರ ಭಾರತದಾದ್ಯಂತ 10,000 ಎಲೆಕ್ಟ್ರಿಕ್ ಕ್ಯಾಬ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ.

ಮುಂದಿನ ಪ್ಲಾನ್: ಮುಂದಿನ ದಿನಗಳಲ್ಲಿ ಇದರ ಸಂಖ್ಯೆಯನ್ನು ಬರೋಬ್ಬರಿ 1 ಲಕ್ಷಕ್ಕೆ ಹೆಚ್ಚಿಸುವ ದೊಡ್ಡ ಪ್ಲಾನ್ ಕಂಪನಿಯದ್ದಾಗಿದೆ.

ಕಂಪನಿಯ ಬಂಡವಾಳ: ಹರಿಯಾಣದ ಗುರುಗ್ರಾಮದಲ್ಲಿ ಮುಖ್ಯ ಕಚೇರಿ ಹೊಂದಿರುವ ಗ್ರೀನ್ ಎಸ್‌ಎಂ ಇಂಡಿಯಾ ಸಂಸ್ಥೆಯು ಬರೋಬ್ಬರಿ ₹254 ಕೋಟಿ ಅಧಿಕೃತ ಬಂಡವಾಳದೊಂದಿಗೆ ಈ ಬೃಹತ್ ನೆಟ್‌ವರ್ಕ್ ಆರಂಭಿಸಿದೆ.

ಕಮರ್ಷಿಯಲ್ ಮಾರುಕಟ್ಟೆಯಲ್ಲಿ ಇವಿ ಕ್ರಾಂತಿ!

ಭಾರತದ ಟ್ಯಾಕ್ಸಿ ಮಾರುಕಟ್ಟೆ ಈಗ ಅತಿ ವೇಗವಾಗಿ ‘ಇವಿ-ಒನ್ಲಿ’ (EV-Only) ಮಾದರಿಗೆ ಬದಲಾಗುತ್ತಿದೆ. ಮಾಲಿನ್ಯ ಮುಕ್ತ ಸಾರಿಗೆಗೆ ಸರ್ಕಾರಗಳು ಕೂಡ ಒತ್ತು ನೀಡುತ್ತಿರುವುದರಿಂದ, ಈ ವಿನಫಾಸ್ಟ್ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಮುಂದಿನ ದಿನಗಳಲ್ಲಿ ಭಾರಿ ಡಿಮ್ಯಾಂಡ್ ಬರಲಿದೆ.

ಪ್ರತಿದಿನದ ಇಂಧನ ದರದ ಏರಿಕೆಯ ತಲೆನೋವಿಲ್ಲದೆ, ನೆಮ್ಮದಿಯಾಗಿ ತಿಂಗಳಿಗೆ ₹40,000 ವರೆಗೆ ಸ್ಥಿರ ಆದಾಯ ಗಳಿಸಲು ಬಯಸುವ ಚಾಲಕರಿಗೆ ಇದು ನಿಜಕ್ಕೂ ಸುವರ್ಣಾವಕಾಶ. ನಿಮಗೇನಾದರೂ ಡ್ರೈವಿಂಗ್ ಗೊತ್ತಿದ್ದರೆ ಅಥವಾ ನಿಮ್ಮ ಪರಿಚಯದವರು ಕೆಲಸ ಹುಡುಕುತ್ತಿದ್ದರೆ ಈ ಮಾಹಿತಿ ಅವರಿಗೆ ತಕ್ಷಣವೇ ಶೇರ್ ಮಾಡಿ! 

Latest News