ಆಗಸ್ಟ್ 18ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಶ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್!!

ಮಿಡ್-ಸೈಜ್ ಸೆಡಾನ್ ಕಾರುಗಳ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ಕೋಡಾ (Škoda) ಕಂಪನಿಯು, ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಮತ್ತೊಂದು ಸಪ್ರೈಸ್ ನೀಡಲು ಸಜ್ಜಾಗಿದೆ. ಶ್ಕೋಡಾ ಆಟೋ ಇಂಡಿಯಾ ನಡೆಸಿದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ತನ್ನ ಜನಪ್ರಿಯ 'ಸ್ಲಾವಿಯಾ' (Slavia) ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು ಆಗಸ್ಟ್ 18ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಸ್ಪೋರ್ಟಿ ಲುಕ್ ಹಾಗೂ ನವೀಕರಿಸಿದ ಇಂಟೀರಿಯರ್ | Photo Credit: pexels.com
ಸ್ಪೋರ್ಟಿ ಲುಕ್ ಹಾಗೂ ನವೀಕರಿಸಿದ ಇಂಟೀರಿಯರ್ | Photo Credit: pexels.com

ಈ ಹೊಸ ಆವೃತ್ತಿಯು ಇದುವರೆಗಿನ ಅತ್ಯಂತ ಸುಂದರ, ಕ್ಲಾಸಿಕ್ ಮತ್ತು ತಾಂತ್ರಿಕವಾಗಿ ಬಲಶಾಲಿಯಾದ ಕಾರಾಗಿ ಹೊರಹೊಮ್ಮಲಿದೆ ಎಂದು ಕಂಪನಿ ತಿಳಿಸಿದೆ. ಹೊಸ ವಿನ್ಯಾಸ, ಮೇಲ್ದರ್ಜೆಗೇರಿಸಿದ ಇಂಟೀರಿಯರ್ ಹಾಗೂ ಹೊಸ ಗೇರ್‌ಬಾಕ್ಸ್‌ನೊಂದಿಗೆ ಬರುವ ಈ ಕಾರು, ವಾಹನ ಪ್ರಿಯರ ಚಾಲನಾ ಅನುಭವವನ್ನು ಮತ್ತಷ್ಟು ಮಜವಾಗಿಸಲಿದೆ.

ಬಾಹ್ಯ ವಿನ್ಯಾಸದ (Exterior) ವಿಚಾರಕ್ಕೆ ಬಂದರೆ, ಹೊಸ ಸ್ಲಾವಿಯಾ ಫೇಸ್‌ಲಿಫ್ಟ್ ಕಾರಿನಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದ್ದು, ಹೆಚ್ಚು ಸ್ಪೋರ್ಟಿ ಹಾಗೂ ಪ್ರೀಮಿಯಂ ಲುಕ್ ನೀಡಲಾಗಿದೆ. ಇದರ ಜೊತೆಗೆ, ಹಿಂಭಾಗದ ಎಲ್‍ಇಡಿ ಟೇಲ್ ಲ್ಯಾಂಪ್‌ಗಳನ್ನು ಹೊಸ ಲುಕ್‌ಗೆ ತಕ್ಕಂತೆ ರೀಡಿಸೈನ್ ಮಾಡಲಾಗಿದ್ದು, ಆಕರ್ಷಕ ಅಲೋಯ್ ವೀಲ್ಸ್‌ಗಳನ್ನು ನೀಡಲಾಗಿದೆ. ಮುಂಭಾಗದ ಗ್ರಿಲ್ ಮತ್ತು ಬಂಪರ್ ಜೋಡಣೆಯು ಕಾರಿಗೆ ರಸ್ತೆಯಲ್ಲಿ ಮತ್ತಷ್ಟು ಬೋಲ್ಡ್ ಹಾಗೂ ರಗಡ್ ನೋಟವನ್ನು ಒದಗಿಸುತ್ತದೆ.

ಇನ್ನು ಕಾರಿನ ಒಳಗಿನ (Interior) ಕ್ಯಾಬಿನ್‌ ಅನುಭವವನ್ನು ಉತ್ತಮಗೊಳಿಸಲು ಶ್ಕೋಡಾ ಹೆಚ್ಚು ಗಮನಹರಿಸಿದೆ. ಡ್ಯಾಶ್‌ಬೋರ್ಡ್‌ನ ಮೂಲ ವಿನ್ಯಾಸವು ಹಳೆಯ ಮಾದರಿಯಂತೆಯೇ ಇದ್ದರೂ, ಇನ್-ಕ್ಯಾಬಿನ್ ಟೆಕ್ನಾಲಜಿ ಮತ್ತು ಪ್ರಯಾಣಿಕರ ಆರಾಮದಾಯಕತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೊಸ ಕುಶಾಕ್ ಕಾರಿನಿಂದ ಎರವಲು ಪಡೆದ ದೊಡ್ಡ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ನವೀಕರಿಸಿದ ಸೀಟ್ ಅಪೋಲ್ಸ್ಟರಿ ಹಾಗೂ ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಇದರಲ್ಲಿ ನೀಡಲಾಗುತ್ತಿದೆ.

ಅಷ್ಟೇ ಅಲ್ಲದೆ, ಹಿಂಭಾಗದ ಸೀಟ್‌ಗಳಿಗೆ ಮಸಾಜ್ ಫೀಚರ್ ಸಿಗಬಹುದು ಎಂಬ ನಿರೀಕ್ಷೆಯೂ ಇದೆ. ಪ್ರಸ್ತುತ ಮಾದರಿಯಲ್ಲಿರುವ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಸನ್‌ರೂಫ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ 6 ಏರ್‌ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್‌ ಸಿಸ್ಟಮ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳು ಈ ಆವೃತ್ತಿಯಲ್ಲೂ ಮುಂದುವರಿಯಲಿವೆ.

ಈ ಬಾರಿಯ ಫೇಸ್‌ಲಿಫ್ಟ್‌ನಲ್ಲಿ ಆಗಿರುವ ಅತಿ ದೊಡ್ಡ ಮತ್ತು ಪ್ರಮುಖ ಬದಲಾವಣೆ ಎಂದರೆ ಅದು ಇಂಜಿನ್ ಮತ್ತು ಗೇರ್‌ಬಾಕ್ಸ್ ವಿಭಾಗದಲ್ಲಾಗಿದೆ. ಕಂಪನಿಯು ಜನಪ್ರಿಯ 1.0-ಲೀಟರ್ TSI ಮತ್ತು 1.5-ಲೀಟರ್ TSI ಟರ್ಬೊ-ಪೆಟ್ರೋಲ್ ಇಂಜಿನ್ ಕಾಯ್ದುಕೊಂಡಿದೆ. ಆದರೆ 1.0-ಲೀಟರ್ ಇಂಜಿನ್‌ನಲ್ಲಿದ್ದ ಹಳೆಯ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಬದಲಿಗೆ, ಅತ್ಯಾಧುನಿಕ '8-ಸ್ಪೀಡ್ ಆಟೋಮ್ಯಾಟಿಕ್' ಗೇರ್‌ಬಾಕ್ಸ್ ನೀಡಲಾಗುತ್ತಿದೆ.

ಇದು ಹೊಸ ಕುಶಾಕ್‌ನಲ್ಲಿಯೂ ಪರಿಚಯಿಸಲ್ಪಟ್ಟಿದ್ದು, ನಗರಗಳಲ್ಲಿ ಸ್ಮೂತ್ ಆಕ್ಸಿಲರೇಷನ್ ಹಾಗೂ ಹೈವೇಗಳಲ್ಲಿ ಆರಾಮದಾಯಕ ಚಾಲನೆಗೆ ನೆರವಾಗಲಿದೆ. ಇನ್ನು ಪರ್ಫಾರ್ಮೆನ್ಸ್ ಪ್ರಿಯರಿಗಾಗಿ ಇರುವ 1.5-ಲೀಟರ್ TSI ಇಂಜಿನ್ ಯಥಾವತ್ತಾಗಿ 7-ಸ್ಪೀಡ್ DSG ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿಯೇ ಸಿಗಲಿದೆ. ಬೆಲೆಯ ವಿಷಯಕ್ಕೆ ಬಂದರೆ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಶ್ಕೋಡಾ ಸ್ಲಾವಿಯಾ ಕಾರಿನ ಶೋರೂಂ ಬೆಲೆ 10 ಲಕ್ಷ ರೂ.ನಿಂದ 18.19 ಲಕ್ಷ ರೂ.ವರೆಗಿದೆ. ಹೊಸ ಫೇಸ್‌ಲಿಫ್ಟ್ ಆವೃತ್ತಿಯು ಹೊಸ ಫೀಚರ್‌ಗಳು ಮತ್ತು ತಾಂತ್ರಿಕ ಬದಲಾವಣೆಗಳೊಂದಿಗೆ ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಹೊರಬರುವ ಸಾಧ್ಯತೆಯಿದೆ.

ಆಗಸ್ಟ್ 18ರಂದು ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಕಾರು, ಮಿಡ್-ಸೈಜ್ ಸೆಡಾನ್ ವಿಭಾಗದಲ್ಲಿ ತನ್ನ ಸಾಂಪ್ರದಾಯಿಕ ಸ್ಪರ್ಧಿಗಳಾದ ವೋಕ್ಸ್‌ವ್ಯಾಗನ್ ವರ್ಟಸ್ (Volkswagen Virtus), ಹ್ಯುಂಡೈ ವೆರ್ನಾ (Hyundai Verna) ಮತ್ತು ಹೋಂಡಾ ಸಿಟಿ (Honda City) ಕಾರುಗಳಿಗೆ ಕಠಿಣ ಸವಾಲು ಒಡ್ಡಲು ಸಜ್ಜಾಗಿದೆ. ಹೊಸ ಲುಕ್ ಮತ್ತು 8-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುವ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಈ ಹೊಸ ಆವೃತ್ತಿಯು ಇದುವರೆಗಿನ ಅತ್ಯಂತ ಸುಂದರ, ಕ್ಲಾಸಿಕ್ ಮತ್ತು ತಾಂತ್ರಿಕವಾಗಿ ಬಲಶಾಲಿಯಾದ ಕಾರಾಗಿ ಹೊರಹೊಮ್ಮಲಿದೆ ಎಂದು ಕಂಪನಿ ತಿಳಿಸಿದೆ. ಹೊಸ ವಿನ್ಯಾಸ, ಮೇಲ್ದರ್ಜೆಗೇರಿಸಿದ ಇಂಟೀರಿಯರ್ ಹಾಗೂ ಹೊಸ ಗೇರ್‌ಬಾಕ್ಸ್‌ನೊಂದಿಗೆ ಬರುವ ಈ ಕಾರು, ವಾಹನ ಪ್ರಿಯರ ಚಾಲನಾ ಅನುಭವವನ್ನು ಮತ್ತಷ್ಟು ಮಜವಾಗಿಸಲಿದೆ.

Latest News