Mar 11, 2026 Languages : ಕನ್ನಡ | English

iPhone 17e ಲಾಂಚ್ ಡೇಟ್ ಲೀಕ್ - ಚಾರ್ಜಿಂಗ್ ಸ್ಪೀಡ್ ಸೇರಿ ಹಲವು ಹೊಸ ಫೀಚರ್ಸ್!

ಆ್ಯಪಲ್‌ನ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ ಎನ್ನಲಾದ iPhone 17e 2026ರ ಫೆಬ್ರವರಿ 19ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಲೀಕ್ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ‘ಆ್ಯಪಲ್ ಟ್ರ್ಯಾಕ್’ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪ್ರಸಿದ್ಧ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಕೂಡ ಇದೇ ದಿನಾಂಕವನ್ನು ದೃಢಪಡಿಸಿದ್ದಾರೆ. ಆದರೆ, ಪ್ರೀಮಿಯಂ ಐಫೋನ್‌ಗಳಂತೆ ವಿಶೇಷ ಲಾಂಚ್ ಕಾರ್ಯಕ್ರಮವನ್ನು ಆ್ಯಪಲ್ ಆಯೋಜಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

ಪ್ರೀಮಿಯಂ ಲಾಂಚ್ ಇಲ್ಲ – iPhone 17e ಸರಳ ಬಿಡುಗಡೆ
ಪ್ರೀಮಿಯಂ ಲಾಂಚ್ ಇಲ್ಲ – iPhone 17e ಸರಳ ಬಿಡುಗಡೆ

ಲೀಕ್ ಮಾಹಿತಿಯ ಪ್ರಕಾರ, iPhone 17e ನಲ್ಲಿ A19 ಬಯೋನಿಕ್ ಚಿಪ್, ಡೈನಾಮಿಕ್ ಐಲ್ಯಾಂಡ್, ಮ್ಯಾಗ್‌ಸೇಫ್ ಚಾರ್ಜಿಂಗ್ ಮತ್ತು C1X (ಸೆಕೆಂಡ್ ಜನರೇಷನ್) ಮೋಡೆಮ್ ಸೇರಿ ಹಲವು ದೊಡ್ಡ ಅಪ್‌ಗ್ರೇಡ್‌ಗಳು ದೊರೆಯಲಿವೆ. ಪ್ರಮುಖವಾಗಿ, ಈ ಬಾರಿ 25W ವರೆಗೆ ವೇಗದ ಮ್ಯಾಗ್‌ಸೇಫ್ ಚಾರ್ಜಿಂಗ್ ಬೆಂಬಲ ದೊರೆಯುವ ನಿರೀಕ್ಷೆ ಇದೆ. ಜೊತೆಗೆ N1 ವೈರ್‌ಲೆಸ್ ನೆಟ್‌ವರ್ಕ್ ಚಿಪ್ ಕೂಡ ಫೋನ್‌ನಲ್ಲಿ ಇರಲಿದೆ ಎನ್ನಲಾಗಿದೆ. 

ಡಿಸ್‌ಪ್ಲೇ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಕಾಣುತ್ತಿದ್ದು, 60Hz ರಿಫ್ರೆಶ್ ರೇಟ್ ಮುಂದುವರಿಯಲಿದೆ ಎಂಬುದು ಕೆಲ ಗ್ರಾಹಕರಿಗೆ ನಿರಾಸೆ ಮೂಡಿಸಬಹುದು. ಕ್ಯಾಮೆರಾ ವಿಚಾರಕ್ಕೆ ಬಂದರೆ, iPhone 17e ನಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಮಾತ್ರ ಇರಲಿದೆ ಎಂದು ಟಿಪ್‌ಸ್ಟರ್‌ಗಳು ಹೇಳಿದ್ದಾರೆ. ಹಿಂದಿನ ಮಾಡೆಲ್ iPhone 16e ನಲ್ಲಿ 7.5W Qi ಚಾರ್ಜಿಂಗ್ ಇದ್ದರೆ, ಈ ಬಾರಿ ಚಾರ್ಜಿಂಗ್ ವಿಭಾಗದಲ್ಲಿ ದೊಡ್ಡ ಅಪ್‌ಗ್ರೇಡ್ ನಿರೀಕ್ಷಿಸಲಾಗಿದ್ದು, ಇದು iPhone 17e ಯ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆ ಇದೆ.

Latest News