Apr 5, 2026 Languages : ಕನ್ನಡ | English

ಕೆಲಸದಲ್ಲಿ ಬದಲಾವಣೆ ಬೇಕೆನ್ನುವವರಿಗೆ ಈ ವಾರ ಶುಭಕಾಲ? ವಾರ ಭವಿಷ್ಯದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!!

ಹೊಸ ತಿಂಗಳು ಶುರುವಾಗಿದೆ, ಅದರ ಜೊತೆಗೆ ಹೊಸ ಸವಾಲುಗಳು ಕೂಡ ಎದುರಾಗುತ್ತಿವೆ. ಏಪ್ರಿಲ್ 05ರಿಂದ 11ರ ವರೆಗಿನ ಈ ವಾರ ಉದ್ಯೋಗದ ದೃಷ್ಟಿಯಿಂದ ಕೆಲವರಿಗೆ ಬಡ್ತಿಯ ಸಂಭ್ರಮ ತಂದರೆ, ಇನ್ನು ಕೆಲವರಿಗೆ ತಾಳ್ಮೆಯ ಪರೀಕ್ಷೆ ನಡೆಸಲಿದೆ. ನಿಮ್ಮ ರಾಶಿಯ ಪ್ರಕಾರ ಈ ವಾರ ಆಫೀಸ್‌ನಲ್ಲಿ ನಿಮ್ಮ ಹವಾ ಹೇಗಿರುತ್ತೆ? ಇಲ್ಲಿದೆ ನೋಡಿ ಸಿಂಪಲ್ ಮಾಹಿತಿ:

ಸಿಂಹ ರಾಶಿಗೆ ರಾಜಯೋಗ
ಸಿಂಹ ರಾಶಿಗೆ ರಾಜಯೋಗ

ಮೇಷ: ಜವಾಬ್ದಾರಿ ಜಾಸ್ತಿ

ಈ ವಾರ ನಿಮ್ಮ ಹೆಗಲ ಮೇಲೆ ಹೊಸ ಕೆಲಸಗಳ ಲೋಡ್ ಬೀಳಲಿದೆ. ಭಯ ಪಡಬೇಡಿ, ನಿಮ್ಮ ಶ್ರಮಕ್ಕೆ ಬಾಸ್‌ ಕಡೆಯಿಂದ 'ಶಹಬ್ಬಾಶ್' ಗ್ಯಾರಂಟಿ. ಸಹೋದ್ಯೋಗಿಗಳ ಜೊತೆ ಸಣ್ಣಪುಟ್ಟ ಕಿರಿಕಿರಿ ಆಗಬಹುದು, ಬಾಯಿ ಮುಚ್ಚಿಕೊಂಡು ಕೆಲಸ ಮುಗಿಸುವುದು ಜಾಣತನ.

ವೃಷಭ: ಹೊಸ ಕೆಲಸದ ಹುಟುಕಾಟಕ್ಕೆ ಬ್ರೇಕ್

ಕೆಲಸ ಇಲ್ಲದೆ ಇರೋರಿಗೆ ಈ ವಾರ ಒಳ್ಳೆ ನ್ಯೂಸ್ ಸಿಗಲಿದೆ. ಇಂಟರ್ವ್ಯೂ ಕರೆಗಳು ಬರಬಹುದು. ಹಣದ ಹಿಂದೆ ಬೀಳುವ ಬದಲು, ನಿಮ್ಮ ಕೆಲಸದ ಕ್ವಾಲಿಟಿ ಕಡೆ ಗಮನ ಕೊಡಿ. ಹಳೆ ಟೆನ್ಷನ್ ಪೂರ್ತಿ ರಿಲೀಸ್ ಆಗುತ್ತೆ.

ಮಿಥುನ: ಬದಲಾವಣೆಯ ಸಮಯ

ಸದ್ಯ ಇರೋ ಕೆಲಸ ಸಾಕಪ್ಪಾ ಅನ್ಸೋರಿಗೆ ಈ ವಾರ ಹೊಸ ಆಫರ್ ಸಿಗುವ ಚಾನ್ಸ್ ಇದೆ. ನಿಮ್ಮ ಮಾತುಗಾರಿಕೆಯೇ ನಿಮಗೆ ಪ್ಲಸ್ ಪಾಯಿಂಟ್. ದೂರದ ಊರಿಗೆ ಕೆಲಸದ ಮೇಲೆ ಹೋಗಬೇಕಾಗಿ ಬರಬಹುದು, ರೆಡಿಯಾಗಿರಿ.

ಕರ್ಕಾಟಕ: ಆತುರ ಬೇಡ

ಎಲ್ಲವನ್ನೂ ಫಟಾಫಟ್ ಮಾಡೋಕೆ ಹೋಗಿ ತಪ್ಪು ಮಾಡಿಕೊಳ್ಳಬೇಡಿ. ಕಚೇರಿಯಲ್ಲಿ ಫೋಕಸ್ ಮಿಸ್ ಆಗದಂತೆ ನೋಡಿಕೊಳ್ಳಿ. ಫ್ರೆಂಡ್ಸ್ ಅಥವಾ ಮನೆಯವರ ಸಹಾಯದಿಂದ ದೊಡ್ಡ ಪ್ರಾಜೆಕ್ಟ್ ಮುಗಿಸ್ತೀರಾ. ಸರ್ಕಾರಿ ಕೆಲಸಕ್ಕೆ ಟ್ರೈ ಮಾಡೋರಿಗೆ ಗುಡ್ ನ್ಯೂಸ್ ಇದೆ.

ಸಿಂಹ: ರಾಜಯೋಗದ ಸಮಯ

ಆಫೀಸ್‌ನಲ್ಲಿ ನಿಮ್ಮ ಪ್ರಭಾವ ಜೋರಾಗಿರುತ್ತೆ. ಪ್ರಮೋಷನ್ ಬೇಕು ಅನ್ನೋರಿಗೆ ಈ ವಾರ ಸಿಹಿ ಸುದ್ದಿ ಸಿಗಬಹುದು. ಬಿಸಿನೆಸ್ ಮಾಡೋರಿಗೆ ಲಾಭ ಡಬಲ್ ಆಗೋ ಕಾಲ ಇದು. ಹೊಸ ಇನ್ವೆಸ್ಟ್‌ಮೆಂಟ್ ಮಾಡೋಕೆ ಇದು ಬೆಸ್ಟ್ ಟೈಮ್.

ಕನ್ಯಾ: ಹುಷಾರಾಗಿರಿ

ನಿಮ್ಮ ಬೆನ್ನ ಹಿಂದೆ ಕಾಲೆಳೆಯುವವರ ಬಗ್ಗೆ ಸ್ವಲ್ಪ ಎಚ್ಚರವಿರಲಿ. ನಿಮ್ಮ ಕೆಲಸ ನೀಟಾಗಿದ್ರೆ ಯಾರೂ ಏನೂ ಮಾಡೋಕೆ ಆಗಲ್ಲ. ಫ್ರೀಲಾನ್ಸ್ ಮಾಡೋರಿಗೆ ಹೊಸ ಕ್ಲೈಂಟ್ ಸಿಗ್ತಾರೆ. ಈಗಲೇ ಕೆಲಸ ಬಿಡೋ ನಿರ್ಧಾರ ಮಾಡಬೇಡಿ, ಸ್ವಲ್ಪ ದಿನ ವೇಟ್ ಮಾಡಿ.

ತುಲಾ: ಲೀಡರ್ ಶಿಪ್ ಕ್ವಾಲಿಟಿ

ಕೆಲಸದಲ್ಲಿ ಈಗೊಂದು ಸ್ಟೆಬಿಲಿಟಿ ಸಿಗಲಿದೆ. ಟೀಮ್ ಲೀಡರ್ ಆಗೋ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬರಬಹುದು. ಆಫೀಸ್‌ನಲ್ಲಿ ಇರೋ ಮಹಿಳೆಯರಿಗೆ ಈ ವಾರ ಸಖತ್ ಸಪೋರ್ಟ್ ಸಿಗುತ್ತೆ. ಫಾರಿನ್ ಕಂಪನಿ ಕೆಲಸಕ್ಕೆ ಅಪ್ಲೈ ಮಾಡೋರು ಧೈರ್ಯವಾಗಿ ಮುನ್ನಡೆಯಿರಿ.

ವೃಶ್ಚಿಕ: ಫುಲ್ ಸ್ಪೀಡ್

ಬಾಕಿ ಉಳಿದಿರೋ ಫೈಲ್ಸ್‌ಗಳನ್ನೆಲ್ಲಾ ಈ ವಾರ ಕ್ಲಿಯರ್ ಮಾಡ್ತೀರಾ. ವೃತ್ತಿಜೀವನದಲ್ಲಿ ಒಂದು ದೊಡ್ಡ ಟರ್ನಿಂಗ್ ಪಾಯಿಂಟ್ ಸಿಗಬಹುದು. ಕ್ರಿಯೇಟಿವ್ ಫೀಲ್ಡ್‌ನಲ್ಲಿ ಇರೋರಿಗೆ ಹೆಸರು ಮತ್ತು ದುಡ್ಡು ಎರಡೂ ಸಿಗುತ್ತೆ. ಚಿಕ್ಕಪುಟ್ಟ ವಿಷಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ.

ಧನು: ಮನಸ್ಸಿಗೆ ಒಪ್ಪುವ ಕೆಲಸ

ನಿಮ್ಮ ಆಸೆಗೆ ತಕ್ಕಂತ ಕೆಲಸ ಸಿಗುವ ಕಾಲ ಹತ್ತಿರ ಬಂದಿದೆ. ಟೀಚರ್ ಅಥವಾ ಬ್ಯಾಂಕ್ ಕೆಲಸದಲ್ಲಿ ಇರೋರಿಗೆ ಈ ವಾರ ಸಖತ್ ಅದೃಷ್ಟ ಇದೆ. ಆಫೀಸ್ ಪಾಲಿಟಿಕ್ಸ್‌ನಿಂದ ಎಷ್ಟು ದೂರ ಇರ್ತೀರೋ ಅಷ್ಟು ನಿಮಗೇ ಒಳ್ಳೇದು.

ಮಕರ: ಜಾಗ ಬದಲಾವಣೆ

ವರ್ಗಾವಣೆ ಅಥವಾ ಬೇರೆ ಬ್ರಾಂಚ್‌ಗೆ ಹೋಗೋ ಚಾನ್ಸ್ ಇದೆ. ಇದು ನಿಮ್ಮ ಫ್ಯೂಚರ್‌ಗೆ ಒಳ್ಳೇದೇ ಮಾಡುತ್ತೆ. ನೀವು ಮಾಡೋ ಶಿಸ್ತಿನ ಕೆಲಸಕ್ಕೆ ಎಲ್ಲರೂ ಫಿದಾ ಆಗ್ತಾರೆ. ಓದುತ್ತಾ ಕೆಲಸ ಮಾಡೋರಿಗೆ ವಾರ ಪೂರ್ತಿ ಸಪೋರ್ಟಿವ್ ಆಗಿರುತ್ತೆ.

ಕುಂಭ: ಐಡಿಯಾಗಳೇ ಬಂಡವಾಳ

ನಿಮ್ಮ ಹೊಸ ಪ್ಲಾನ್ ನೋಡಿ ಬಾಸ್ ಖುಷಿಯಾಗ್ತಾರೆ. ಐಟಿ ಅಥವಾ ಟೆಕ್ನಾಲಜಿ ಫೀಲ್ಡ್‌ನಲ್ಲಿ ಇರೋರಿಗೆ ಈ ವಾರ ಮನ್ನಣೆ ಸಿಗಲಿದೆ. ಹಳೆ ಸಾಲಗಳು ವಸೂಲಿ ಆಗಲಿವೆ. ಎಂತದ್ದೇ ಕಷ್ಟ ಬಂದ್ರೂ ಕೂಲ್ ಆಗಿ ಹ್ಯಾಂಡಲ್ ಮಾಡಿ ಗೆಲ್ತೀರಾ.

ಮೀನ: ರೆಸ್ಪಾನ್ಸಿಬಿಲಿಟಿ ಹೆಚ್ಚು

ಕೆಲಸ ಜಾಸ್ತಿ ಇದೆ ಅಂತ ಅಪ್ಸೆಟ್ ಆಗ್ಬೇಡಿ. ಟೈಮ್ ಸೆನ್ಸ್ ಪಾಲನೆ ಮಾಡಿದ್ರೆ ಎಲ್ಲವೂ ಸುಲಭ. ನಿಮ್ಮ ಶ್ರಮಕ್ಕೆ ತಕ್ಕ ಗೌರವ ಸಿಗೋ ಸಮಯ ಇದು. ಫ್ಯಾಮಿಲಿ ಸಪೋರ್ಟ್ ಇರೋದ್ರಿಂದ ಯಾವುದೇ ಕೆಲಸವನ್ನೂ ಧೈರ್ಯವಾಗಿ ಮಾಡ್ತೀರಾ.