ಇಂದು 2026ರ ಏಪ್ರಿಲ್ 4, ಶನಿವಾರ. ಹಿಂದೂ ಪಂಚಾಂಗದ ಪ್ರಕಾರ ಇಂದು ಬಹಳ ವಿಶೇಷವಾದ ದಿನ. ಯಾಕೆಂದರೆ ಇಂದು ಕರ್ಮಫಲದಾತ, ನ್ಯಾಯದ ದೇವರೆಂದೇ ಕರೆಸಿಕೊಳ್ಳುವ ಶನೈಶ್ಚರ ಸ್ವಾಮಿಯ ಆರಾಧನೆಗೆ ಹೇಳಿಮಾಡಿಸಿದ ದಿನ. ಅದರಲ್ಲೂ ಇಂದಿನ ಗ್ರಹಗತಿಗಳ ಸಂಯೋಜನೆಯಿಂದ ‘ಹರ್ಷಣ ಯೋಗ’ ಕೂಡಿಬಂದಿದೆ. ಇದರ ನೇರ ಲಾಭ ಕೆಲವು ರಾಶಿಗಳಿಗಂತೂ ಭರ್ಜರಿಯಾಗಿ ಸಿಗಲಿದೆ. ಸಾಲದ ಬಾಧೆ, ಹಣಕಾಸಿನ ಕಿರಿಕಿರಿ ಅನುಭವಿಸುತ್ತಿದ್ದವರಿಗೆ ಇವತ್ತು ಶನಿದೇವನ ಕೃಪೆಯಿಂದ ಬಂಪರ್ ಲಾಭ ಕಾದಿದೆ. ಹಾಗಾದರೆ, ಇವತ್ತು ನಿಮ್ಮ ರಾಶಿ ಫಲ ಹೇಗಿದೆ? ಯಾವ ಕೆಲಸ ಮಾಡಿದರೆ ಕೈಗೂಡುತ್ತೆ? ಎಲ್ಲಿ ಎಚ್ಚರಿಕೆ ಇರಬೇಕು? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಇಂದಿನ ಪಂಚಾಂಗದ ಹೈಲೈಟ್ಸ್
ಇಂದು ಶ್ರೀ ಪರಾಭವ ನಾಮ ಸಂವತ್ಸರ, ಚೈತ್ರ ಮಾಸದ ಕೃಷ್ಣ ಪಕ್ಷ. ಸೂರ್ಯೋದಯ 06:14ಕ್ಕೆ ಆದರೆ, ಸೂರ್ಯಾಸ್ತ 06:31ಕ್ಕೆ. ಸೂರ್ಯ ಈಗ ಮೀನ ರಾಶಿಯಲ್ಲಿದ್ದಾನೆ, ಚಂದ್ರ ತುಲಾ ರಾಶಿಯಲ್ಲಿ ಅಡ್ಡಾಡುತ್ತಿದ್ದಾನೆ. ಇವತ್ತು ರಾತ್ರಿ 09:35ರವರೆಗೆ ಸ್ವಾತಿ ನಕ್ಷತ್ರ ಇರಲಿದ್ದು, ಆಮೇಲೆ ವಿಶಾಖ ನಕ್ಷತ್ರ ಶುರುವಾಗುತ್ತೆ.
ನೆನಪಿರಲಿ: ಬೆಳಿಗ್ಗೆ 09:19 ರಿಂದ 10:51 ರವರೆಗೆ ರಾಹುಕಾಲ ಇರುವುದರಿಂದ, ಈ ಸಮಯದಲ್ಲಿ ಯಾವುದೇ ಹೊಸ ಕೆಲಸ ಅಥವಾ ದೊಡ್ಡ ವ್ಯವಹಾರಕ್ಕೆ ಕೈ ಹಾಕಬೇಡಿ.
ದ್ವಾದಶ ರಾಶಿಗಳ ಇಂದಿನ ಫಲಾಫಲ
ಮೇಷ ರಾಶಿ (Aries): ಮೇಷ ರಾಶಿಯವರೇ, ಇವತ್ತು ಸ್ವಲ್ಪ ಆರೋಗ್ಯದ ಕಡೆ ನೋಟ ಇರಲಿ. ಅದರಲ್ಲೂ ಕಣ್ಣಿನ ಉರಿ ಅಥವಾ ಇನ್ಫೆಕ್ಷನ್ ಬಗ್ಗೆ ಜಾಗ್ರತೆ ಇರಲಿ. ಆರ್ಥಿಕವಾಗಿ ಮನೆಯಲ್ಲಿ ಹಿರಿಯರ ಜೊತೆ ಕೂತು ಪ್ಲಾನ್ ಮಾಡಿ, ಸುಖಾಸುಮ್ಮನೆ ಖರ್ಚು ಮಾಡಬೇಡಿ. ಲವರ್ಸ್ ವಿಷಯಕ್ಕೆ ಬಂದ್ರೆ, ಬೇರೆಯವರ ಮಾತು ಕೇಳಿ ಕೆಡಬೇಡಿ, ನಿಮ್ಮ ನಿರ್ಧಾರ ನೀವೇ ತಗೊಳ್ಳಿ.
ವೃಷಭ ರಾಶಿ (Taurus): ನಿಮಗೆ ಇವತ್ತು ಸ್ವಲ್ಪ ರಿಲೀಫ್ ಸಿಗುವ ದಿನ. ಹಣದ ಟೆನ್ಶನ್ ಕಡಿಮೆ ಆಗುತ್ತೆ. ಆದರೆ ಒಂದು ವಿಷಯ ನೆನಪಿಡಿ, ಇವತ್ತು ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ವಾಪಸ್ ಬರೋದು ಡೌಟು. ಆಫೀಸ್‌ನಲ್ಲಿ ನಿಮ್ಮ ಕೆಲಸಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತೆ. ಬಾಸ್ ನಿಮ್ಮನ್ನ ಮೆಚ್ಚಿಕೊಳ್ಳಬಹುದು!
ಮಿಥುನ ರಾಶಿ (Gemini): ಹಳೆ ಕಾಯಿಲೆಯಿಂದ ಬೇಸತ್ತವರಿಗೆ ಇವತ್ತು ಹೊಸ ಚೈತನ್ಯ ಸಿಗುತ್ತೆ. ಮನಸ್ಸು ಫುಲ್ ಖುಷಿಯಾಗಿರುತ್ತೆ. ಅನಿರೀಕ್ಷಿತವಾಗಿ ಯಾವುದೋ ಒಂದು ಗುಡ್ ನ್ಯೂಸ್ ನಿಮ್ಮ ಬಾಗಿಲು ತಟ್ಟಬಹುದು. ಸಂಜೆ ಫ್ಯಾಮಿಲಿ ಜೊತೆ ವಾಕಿಂಗ್ ಅಥವಾ ಸಿನಿಮಾ ಅಂತ ಟೈಮ್ ಸ್ಪೆಂಡ್ ಮಾಡೋಕೆ ಒಳ್ಳೆ ದಿನ.
ಕರ್ಕಾಟಕ ರಾಶಿ (Cancer): ನೀವು ಇವತ್ತು ಮನೆಯಲ್ಲೇ ಕೂರೋದಕ್ಕಿಂತ ಹೊರಗಡೆ ಹೋದರೆ ಹೆಚ್ಚು ಸಕ್ಸಸ್ ಸಿಗುತ್ತೆ. ಫೀಲ್ಡ್ ವರ್ಕ್ ಮಾಡುವವರಿಗೆ ಇವತ್ತು ಅದೃಷ್ಟದ ದಿನ. ಬ್ಯಾಂಕ್ ಅಥವಾ ಅಕೌಂಟ್ಸ್ ಕೆಲಸ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಲೆಕ್ಕ ಹಾಕಿ. ಮನೆಯವರ ಸಪೋರ್ಟ್ ನಿಮಗೆ ಫುಲ್ ಆಗಿ ಸಿಗಲಿದೆ.
ಸಿಂಹ ರಾಶಿ (Leo): ಸಿಂಹ ರಾಶಿಯವರೇ, ನಿಮ್ಮ ಕೋಪ ಸ್ವಲ್ಪ ಕಮ್ಮಿ ಮಾಡಿ. ನಿಮ್ಮ ನಗುವೇ ನಿಮ್ಮ ದೊಡ್ಡ ಶಕ್ತಿ. ಇವತ್ತು ಯಾರೋ ಅನುಭವಿಗಳ ಸಲಹೆ ಕೇಳಿ ಹಣ ಹೂಡಿಕೆ ಮಾಡಿ, ಸುಮ್ಮನೆ ರಿಸ್ಕ್ ತಗೋಬೇಡಿ. ಸಂಜೆ ಸಂಗಾತಿ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗಬಹುದು, ಆದ್ರೆ ಪ್ರೀತಿಯಿಂದ ಅದನ್ನ ಸರಿಪಡಿಸಿಕೊಳ್ಳಿ.
ಕನ್ಯಾ ರಾಶಿ (Virgo): ಇವತ್ತು ನಿಮಗೆ "ನನ್ನ ಫ್ಯೂಚರ್ ಏನು?" ಅನ್ನೋ ಚಿಂತೆ ಕಾಡಬಹುದು. ಬೇರೆಯವರಿಗೆ ಹೆಲ್ಪ್ ಮಾಡಿ ನಿಮಗೆ ಕ್ರೆಡಿಟ್ ಸಿಗಲಿಲ್ಲ ಅಂತ ಬೇಜಾರು ಮಾಡ್ಕೋಬೇಡಿ. ಹೊಸದೇನನ್ನಾದರೂ ಕಲಿಯಲು ಇವತ್ತು ಬೆಸ್ಟ್ ಟೈಮ್. ಲವರ್ಸ್ ಮಧ್ಯೆ ಮಾತುಕತೆ ಚೆನ್ನಾಗಿರುತ್ತೆ.
ತುಲಾ ರಾಶಿ (Libra): ತುಲಾ ರಾಶಿಯವರಿಗೆ ಇವತ್ತು ಎನರ್ಜಿ ಜಾಸ್ತಿ ಇರುತ್ತೆ. ಅರ್ಧಕ್ಕೆ ನಿಂತ ಕೆಲಸ ಇವತ್ತು ಪೂರ್ತಿ ಆಗುತ್ತೆ. ದುಡ್ಡು ಬರುತ್ತೆ ನಿಜ, ಆದ್ರೆ ಅಷ್ಟೇ ಸ್ಪೀಡ್ ಆಗಿ ಖರ್ಚೂ ಆಗುತ್ತೆ. ಒಡವೆ ಅಥವಾ ಬೆಲೆಬಾಳುವ ವಸ್ತುಗಳ ಬಗ್ಗೆ ಸ್ವಲ್ಪ ಕಣ್ಣಿರಲಿ, ಕಳೆದುಹೋಗುವ ಚಾನ್ಸ್ ಇದೆ.
ವೃಶ್ಚಿಕ ರಾಶಿ (Scorpio): ಇವತ್ತು ಯಾರೋ ದೊಡ್ಡ ವ್ಯಕ್ತಿಗಳನ್ನ ಮೀಟ್ ಮಾಡುವ ಚಾನ್ಸ್ ಇದೆ. ಮಾತು ಕೊಡುವಾಗ ಸ್ವಲ್ಪ ಯೋಚಿಸಿ ಕೊಡಿ. ವ್ಯಾಪಾರದಲ್ಲಿ ಬಂಡವಾಳ ಹಾಕೋಕೆ ಇದು ಒಳ್ಳೆ ಸಮಯ. ಆಫೀಸ್‌ನಲ್ಲಿ ಕೆಲಸದ ಒತ್ತಡ ಜಾಸ್ತಿ ಇರುತ್ತೆ, ಆರೋಗ್ಯವನ್ನೂ ನೋಡಿಕೊಳ್ಳಿ.
ಧನು ರಾಶಿ (Sagittarius): ನಿಮ್ಮಿಷ್ಟದ ಕೆಲಸ ಮಾಡೋಕೆ ಇವತ್ತು ಟೈಮ್ ಸಿಗುತ್ತೆ. ಆರ್ಥಿಕ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಬಗೆಹರಿಯಲಿವೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಬಂದ ಹಣವನ್ನ ಸುಮ್ಮನೆ ಖರ್ಚು ಮಾಡದೆ, ಉಳಿತಾಯದ ಬಗ್ಗೆನೂ ಸ್ವಲ್ಪ ಗಮನ ಕೊಡಿ.
ಮಕರ ರಾಶಿ (Capricorn): ಮಕರ ರಾಶಿಯವರಿಗೆ ಹೆಲ್ತ್ ವಿಷಯದಲ್ಲಿ ಗುಡ್ ನ್ಯೂಸ್ ಇದೆ. ಬಾಡಿ ಫುಲ್ ಫಿಟ್ ಆಗಿರುತ್ತೆ. ವ್ಯಾಪಾರದಲ್ಲಿ 'ಉದ್ರಿ' ವ್ಯವಹಾರ ಮಾಡಬೇಡಿ, ನಗದಿಗೆ ಮಾತ್ರ ಇಂಪಾರ್ಟೆನ್ಸ್ ಕೊಡಿ. ಲೇಡೀಸ್ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಚಾಕು ಅಥವಾ ಬೆಂಕಿಯಿಂದ ಸ್ವಲ್ಪ ಹುಷಾರಾಗಿರಿ.
ಕುಂಭ ರಾಶಿ (Aquarius): ನನ್ನ ಮಾತೇ ನಡೆಯಬೇಕು ಅಂತ ಹಠ ಹಿಡಿಯಬೇಡಿ. ಶನಿದೇವನ ಮೇಲೆ ಭಾರ ಹಾಕಿ ನಿಮ್ಮ ಕೆಲಸ ನೀವು ಮಾಡಿ. ಮ್ಯೂಚುವಲ್ ಫಂಡ್ ಅಥವಾ ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್‌ಗೆ ಇವತ್ತು ಸೂಕ್ತ ದಿನ. ಹಳೆ ಕಹಿ ನೆನಪುಗಳನ್ನ ಮರೆತುಬಿಡಿ, ಹೊಸ ಲೈಫ್ ಎಂಜಾಯ್ ಮಾಡಿ.
ಮೀನ ರಾಶಿ (Pisces): ಮೀನ ರಾಶಿಯವರಿಗೆ ಇವತ್ತು ಫುಲ್ ರೆಸ್ಟ್ ಸಿಗಲಿದೆ. ಮಕ್ಕಳ ಎಜುಕೇಶನ್ ಬಗ್ಗೆ ಸ್ವಲ್ಪ ಟೆನ್ಶನ್ ಆಗಬಹುದು. ಮದುವೆ ಫಿಕ್ಸ್ ಆಗದವರಿಗೆ ಇವತ್ತು ಒಳ್ಳೆ ಸಂಬಂಧ ಬರುವ ಸಾಧ್ಯತೆ ಇದೆ. ನೀವು ಹಿಂದೆ ಪಟ್ಟ ಕಷ್ಟಕ್ಕೆ ಇವತ್ತು ಫಲ ಸಿಗುವ ಕಾಲ ಬಂದಿದೆ.
ಸಲಹೆ: ಶನಿವಾರದ ದಿನವಾದ್ದರಿಂದ ಹತ್ತಿರದ ಶನಿದೇವನ ದೇವಸ್ಥಾನಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದೀಪ ಹಚ್ಚುವುದು ನಿಮ್ಮ ಸಕಲ ಕಷ್ಟಗಳಿಗೆ ಪರಿಹಾರ ನೀಡಬಲ್ಲದು. ಶುಭವಾಗಲಿ.