ಇಂದಿನ ದಿನವು ಕೇವಲ ಬಣ್ಣಗಳ ಸಂಭ್ರಮದ ಹೋಳಿ ಹುಣ್ಣಿಮೆಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ, ನಭೋಮಂಡಲದಲ್ಲಿ ಒಂದು ಅತ್ಯಂತ ಅಪರೂಪದ ಖಗೋಳ ಘಟನೆಗೆ ಸಾಕ್ಷಿಯಾಗುತ್ತಿದೆ. ಹೌದು, 2026ನೇ ಸಾಲಿನ ಮೊಟ್ಟಮೊದಲ ಖಗ್ರಾಸ ಚಂದ್ರ ಗ್ರಹಣ ಇಂದು ಸಂಭವಿಸುತ್ತಿದೆ. ವಿಜ್ಞಾನ ಮತ್ತು ಜ್ಯೋತಿಷ್ಯ ಎರಡರ ದೃಷ್ಟಿಯಿಂದಲೂ ಈ ದಿನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.
ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ, ಆಕಾಶದಲ್ಲಿ ನಡೆಯುವ ಇಂತಹ ಗ್ರಹಣಗಳು ಮಾನವ ರಾಶಿಯ ಮೇಲೆ ಗಾಢವಾದ ಪರಿಣಾಮಗಳನ್ನ ಬೀರುತ್ತವೆ. ಗ್ರಹಗಳ ಈ ಪಲ್ಲಟವು ವ್ಯಕ್ತಿಯ ಜೀವನದ ಸುಖ ಕಷ್ಟಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹಿರಿಯರು ಮತ್ತು ಶಾಸ್ತ್ರಜ್ಞರು ಹೇಳುತ್ತಾರೆ. ಅದರಲ್ಲೂ ಇಂದು ಸಂಜೆ 6:33 ರಿಂದ 6:47 ರವರೆಗಿನ 14 ನಿಮಿಷಗಳ ಕಾಲಾವಧಿಯು ಅತ್ಯಂತ ಜಾಗರೂಕತೆಯಿಂದ ಇರಬೇಕಾದ ಸಮಯವಾಗಿದೆ.
ರಾಶಿಗಳ ಮೇಲೆ ಗ್ರಹಣದ ಪ್ರಭಾವ
ಗ್ರಹಣದ ನೆರಳು ದ್ವಾದಶ ರಾಶಿಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಬೀಳಲಿದೆ. ಮುಖ್ಯವಾಗಿ ವೃಷಭ, ಸಿಂಹ, ಕನ್ಯಾ, ಮಕರ ರಾಶಿಯವರಿಗೆ ಈ ಗ್ರಹಣವು ಅಲ್ಪಮಟ್ಟಿನ ದೋಷವನ್ನು ತಂದೊಡ್ಡಲಿದೆ. ಆದ್ದರಿಂದ ಈ ರಾಶಿಯವರು ಇಂದು ಯಾವುದೇ ಹೊಸ ಸಾಹಸಕ್ಕೆ ಕೈಹಾಕದೇ, ತಾಳ್ಮೆಯಿಂದ ಇರುವುದು ಒಳ್ಳೆಯದು.
ಮೇಷ ಮತ್ತು ವೃಷಭ ರಾಶಿ: ಮೇಷ ರಾಶಿಯವರು ಇಂದು ತಮ್ಮ ಸಿಟ್ಟನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು. ಸಣ್ಣ ವಿಷಯಕ್ಕೆ ಜಗಳವಾಡುವುದು ಆರ್ಥಿಕ ನಷ್ಟಕ್ಕೆ ದಾರಿಯಾಗಬಹುದು. ಇನ್ನು ವೃಷಭ ರಾಶಿಯವರಿಗೆ ಗ್ರಹಣ ದೋಷವಿರುವುದರಿಂದ ಪ್ರಯಾಣ ಮಾಡುವಾಗ ಜಾಗರೂಕತೆ ಅವಶ್ಯಕ ಆಗಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಮಿಥುನ ಮತ್ತು ಕರ್ಕಾಟಕ ರಾಶಿ: ಮಿಥುನ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭದಾಯಕ ದಿನವಿದು. ಆದರೆ ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ, ಇವರಿಗೆ ಮಾನಸಿಕವಾಗಿ ಸ್ವಲ್ಪ ಅಶಾಂತಿ ಕಾಡಬಹುದು. ಮನಸ್ಸನ್ನು ಶಾಂತವಾಗಿರಿಸಲು ಧ್ಯಾನ ಮಾಡಿ.
ಸಿಂಹ ಮತ್ತು ಕನ್ಯಾ ರಾಶಿ: ಸಿಂಹ ರಾಶಿಯವರು ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು. ವಾಹನ ಚಲಾಯಿಸುವಾಗ ಜಾಗ್ರತೆ ಇರಲಿ. ಕನ್ಯಾ ರಾಶಿಯವರಿಗೆ ಆರ್ಥಿಕವಾಗಿ ಸ್ವಲ್ಪ ಹಿನ್ನಡೆಯಾಗುವ ಸೂಚನೆ ಇದೆ, ಆದ್ದರಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ತುಲಾ ಮತ್ತು ವೃಶ್ಚಿಕ ರಾಶಿ: ಈ ಎರಡೂ ರಾಶಿಯವರಿಗೆ ಗ್ರಹಣದ ನಡುವೆಯೂ ಶುಭ ಫಲಗಳಿವೆ. ತುಲಾ ರಾಶಿಯವರಿಗೆ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವೃಶ್ಚಿಕ ರಾಶಿಯವರಿಗೆ ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ.
ಧನು ಮತ್ತು ಮಕರ ರಾಶಿ: ಧನು ರಾಶಿಯವರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವಂತಾಗಬಹುದು. ಹಣಕಾಸಿನ ಸೋರಿಕೆ ತಪ್ಪಿಸಿ. ಮಕರ ರಾಶಿಯವರಿಗೆ ಗ್ರಹಣ ದೋಷವಿರುವುದರಿಂದ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ಮಾಡಬೇಡಿ.
ಕುಂಭ ಮತ್ತು ಮೀನ ರಾಶಿ: ಕುಂಭ ರಾಶಿಯವರಿಗೆ ಇಂದು ಅತ್ಯಂತ ಅದೃಷ್ಟದ ದಿನ. ನೀವು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಖಚಿತ. ಮೀನ ರಾಶಿಯವರು ಮಾತನಾಡುವಾಗ ಮೃದುವಾಗಿರಿ, ನಿಮ್ಮ ಮಾತುಗಳು ಇತರರಿಗೆ ನೋವುಂಟು ಮಾಡದಂತೆ ನೋಡಿಕೊಳ್ಳಿ.
ದೋಷ ನಿವಾರಣೆಗೆ ಏನು ಮಾಡಬೇಕು?
ಗ್ರಹಣ ಮುಗಿದ ನಂತರ ಅಂದರೆ ಸಂಜೆ 6:47ರ ಬಳಿಕ ಸ್ನಾನ ಮಾಡಿ ಶುದ್ಧರಾಗುವುದು ಮುಖ್ಯ. ಗ್ರಹಣ ದೋಷವಿರುವ ರಾಶಿಯವರು ಅಕ್ಕಿ, ಗೋಧಿ, ಎಳ್ಳು ಅಥವಾ ಎಣ್ಣೆಯನ್ನು ದಾನ ಮಾಡುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಇಂದು ಯಾವುದೇ ಹೊಸ ಒಪ್ಪಂದಗಳಿಗೆ ಸಹಿ ಹಾಕಬೇಡಿ ಅಥವಾ ಭೂಮಿ ಖರೀದಿಯಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಮನೆಯಲ್ಲೇ ಕುಳಿತು 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸುವುದು ಗ್ರಹಣದ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ಕಾಪಾಡುತ್ತದೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಇಂದಿನ ದಿನವು ಎಚ್ಚರಿಕೆ ಮತ್ತು ಭಕ್ತಿಯ ಸಂಕೇತವಾಗಿದೆ. ನಂಬಿಕೆ ಮತ್ತು ಧನಾತ್ಮಕ ಚಿಂತನೆಯಿಂದ ಯಾವುದೇ ಕಂಟಕವನ್ನು ಎದುರಿಸಬಹುದು ಎಂದು ಹೇಳಲಾಗುತ್ತಿದೆ.