May 9, 2026 Languages : ಕನ್ನಡ | English

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ - ಈ ರಸ್ತೆಗಳಲ್ಲಿ ಹೋಗುವ ಮುನ್ನ ಎಚ್ಚರ, ಟ್ರಾಫಿಕ್ ಪ್ಲಾನ್ ಇಲ್ಲಿದೆ!!

ಬೆಂಗಳೂರು ಅಂದ್ರೆ ಟ್ರಾಫಿಕ್, ಟ್ರಾಫಿಕ್ ಅಂದ್ರೆ ಬೆಂಗಳೂರು ಅನ್ನೋದು ನಮಗೆಲ್ಲ ಗೊತ್ತೇ ಇದೆ. ಅದರಲ್ಲೂ ನಾಳೆ (ಮೇ 10, ಶನಿವಾರ) ನಮ್ಮ ಸಿಲಿಕಾನ್ ಸಿಟಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ವಾಹನ ಸವಾರರೇ ಗಮನಿಸಿ | Photo Credit: https://x.com/DCPSouthTrBCP | CANVA
ವಾಹನ ಸವಾರರೇ ಗಮನಿಸಿ | Photo Credit: https://x.com/DCPSouthTrBCP | CANVA

ನೀವೇನಾದರೂ ನಾಳೆ ಕೆಲಸದ ಮೇಲೆ ಅಥವಾ ಟ್ರಿಪ್ ಅಂತ ಹೊರಗೆ ಹೋಗೋ ಪ್ಲಾನ್ ಹಾಕಿಕೊಂಡಿದ್ದರೆ, ಟ್ರಾಫಿಕ್ ಜಂಪ್‌ನಲ್ಲಿ ಸಿಲುಕಿಕೊಳ್ಳುವ ಮುನ್ನ ಈ ಪರ್ಯಾಯ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

ಸಂಚಾರ ನಿರ್ಬಂಧ ಎಲ್ಲೆಲ್ಲಿ?

ಮುಖ್ಯವಾಗಿ HAL ವಿಮಾನ ನಿಲ್ದಾಣದ ಹತ್ತಿರ ಮತ್ತು ನೈಸ್ (NICE) ರಸ್ತೆಯ ಸುತ್ತಮುತ್ತ ನಾಳೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಿದ್ದಾರೆ.

1. HAL ಏರಿಯಾದಲ್ಲಿ ಅಲರ್ಟ್:

ನಾಳೆ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ HAL ಗೇಟ್ ನಂ.30ರ ಮುಂಭಾಗ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ:

ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಹಿಡಿದು ಡಿ.ಜಿ.ಸಿ.ಎ ಕಚೇರಿವರೆಗೆ ವಾಹನ ಸಂಚಾರ ಇರುವುದಿಲ್ಲ.

ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ.30ರ ವರೆಗೂ ಎರಡೂ ಕಡೆ ಸಂಚಾರ ಬಂದ್ ಇರಲಿದೆ.

2. ನೈಸ್ ರಸ್ತೆಯಲ್ಲೂ ನಿರ್ಬಂಧ:

ಮತ್ತೊಂದು ಮುಖ್ಯವಾದ ಅಪ್‌ಡೇಟ್ ಅಂದ್ರೆ, ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನೈಸ್ ರಸ್ತೆಯಲ್ಲೂ ವಾಹನ ಸಂಚಾರ ಇರುವುದಿಲ್ಲ. ದೂರ ಪ್ರಯಾಣ ಮಾಡುವವರು ಗಮನಿಸಿ!

ಪಾರ್ಕಿಂಗ್ ಎಲ್ಲಿ ಮಾಡಬೇಕು? ಎಲ್ಲಿ ಮಾಡಬಾರದು?

ಸುಮ್ಮನೆ ರಸ್ತೆ ಬದಿಯಲ್ಲಿ ಕಾರ್ ಪಾರ್ಕ್ ಮಾಡಿದರೆ ನಾಳೆ ಪೊಲೀಸರು ಟೋಯಿಂಗ್ ಮಾಡಬಹುದು ಅಥವಾ ದಂಡ ಹಾಕಬಹುದು.

ಇಲ್ಲಿ ಪಾರ್ಕಿಂಗ್ ಬೇಡ: ಹಳೆ ವಿಮಾನ ನಿಲ್ದಾಣ ರಸ್ತೆ (ಎಸ್.ಡಿ ರಸ್ತೆ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್‌ವರೆಗೆ) ಮತ್ತು HAL ಎಕ್ಸಿಟ್ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲ.

ಇಲ್ಲಿ ಪಾರ್ಕಿಂಗ್ ಮಾಡಬಹುದು:

HAL ಟ್ರಾನ್ಸ್‌ಪೋರ್ಟ್ ಡಿಪಾರ್ಟ್‌ಮೆಂಟ್ ಪಾರ್ಕಿಂಗ್.

ಸರ್ ಎಸ್.ಎಂ.ವಿ ಕಾಲೇಜು ಮೈದಾನ.

HAL ಬಸ್ ಯಾರ್ಡ್.

ಪರ್ಯಾಯ ಮಾರ್ಗಗಳು (Alternative Routes)

ನೈಸ್ ರಸ್ತೆ ಬಂದ್ ಇರೋದ್ರಿಂದ ಸವಾರರಿಗೆ ಸ್ವಲ್ಪ ಕಿರಿಕಿರಿ ಆಗಬಹುದು. ಪೊಲೀಸರು ಸೂಚಿಸಿರುವ ಪರ್ಯಾಯ ದಾರಿ ಇಲ್ಲಿದೆ:

ತುಮಕೂರು ರಸ್ತೆಯಿಂದ ಕನಕಪುರ ರಸ್ತೆಗೆ ಹೋಗುವವರು: ನೀವು ನೈಸ್ ರೋಡ್ ಬಳಸುವ ಬದಲು, ಸಿಎಂಟಿಐ (CMTI) ಜಂಕ್ಷನ್ ಹತ್ತಿರ ಬಲ ತಿರುವು ಪಡೆದು, ಡಾ. ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಮುಂದೆ ಸಾಗಬಹುದು.

ನಗರದ ಒಳಗಿನಿಂದ ಬರುವವರೂ ಸಹ ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆಯನ್ನೇ ಬಳಸಲು ಸೂಚಿಸಲಾಗಿದೆ.

Latest News