ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾಗೆ ಇದೀಗ ಆಟಗಾರರ ಆಯ್ಕೆಗಿಂತ ಹವಾಮಾನವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಬೀಸುವ ಬಲವಾದ ಗಾಳಿ ವೇಗದ ಬೌಲರ್‌ಗಳ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್ ಚಿಕ್ಕಮಕ್ಕಳಿಂದ ವಯಸದವರ ವರೆಗೂ ಕ್ರಿಕೆಟ್ ಕ್ರೇಸ್ ಕಡಿಮೆ ಆಗದು ಅದರಲ್ಲೂ ಐಪಿಎಲ್ ಬಂದರಂತೂ ಜನ ಗಂಟೆಗೆ ಮನೆ ಸೇರುತರೆ ಐಪಿಎಲ್ ಈ ವರ್ಷದ ಅರಂಭಕೆ ಸಾಕುಷ್ಟು ಕಾಲವಿದು ಕ್ರಿಕೆಟ್ ಪ್ರೇಮಿಗಲ್ಲಿಗೇ ಮನೋರಂಜನೆಗೆ ಅಂತಲೆ ಟೆಸ್ಟ್ ಪಂದ್ಯಗಳು ಆರಂಭವಾಗಿದು ಅತ್ಯಂತ ಮುಖ್ಯವಾದ ಪದ್ಯಗಳನೊಂದು ಭಾರತ ಮಾತ್ತು ನ್ಯೂಜಿಲೆಂಡ್ ವಿರುದ್ಧದ ಈ ಎರಡು ಪಂದ್ಯಗಳ ಟೆಸ್ಟ್ ಸರಣಿ ಮಹತ್ವದ್ದಾಗಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಫೈನಲ್ ಪ್ರವೇಶಿಸುವ ಗುರಿ ಹೊಂದಿರುವ ಭಾರತಕ್ಕೆ ಈ ಸರಣಿಯ ಫಲಿತಾಂಶ ನಿರ್ಣಾಯಕವಾಗಿದೆ ಆದರೇ ಈ ಪಂದ್ಯಾಕೆ ಗಾಳಿಯೇ ಶತ್ರುವಾಗಿದು ಹಾಗು ಪಿಚ್ ಬದಲಿಸುವ ಯೋಚನೆಯಲ್ಲಿದೆ icc
ನವೆಂಬರ್ 19ರಿಂದ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಮಾತನಾಡಿರುವ ಶುಭಮನ್ ಗಿಲ್, ಈ ಬಾರಿ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಅಂತಿಮವಾಗಿ ಯಾವ ನಾಲ್ವರು ವೇಗಿಗಳು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.
ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ ಭಾರತ!
ನ್ಯೂಜಿಲೆಂಡ್ ಪರಿಸ್ಥಿತಿಗೆ ಅನುಗುಣವಾಗಿ ಭಾರತ ತನ್ನ ಬೌಲಿಂಗ್ ಸಂಯೋಜನೆಯನ್ನು ಸಿದ್ಧಪಡಿಸುತ್ತಿದೆ. ಜಸ್ಪ್ರೀತ್ ಬುಮ್ರಾ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದು, ಉಳಿದ ಸ್ಥಾನಗಳಿಗಾಗಿ ಹಲವು ಆಟಗಾರರ ನಡುವೆ ಪೈಪೋಟಿ ಇದೆ.
ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಅಂಶುಲ್ ಕಾಂಬೋಜ್ ಮತ್ತು ಗುರ್‌ನೂರ್ ಬ್ರಾರ್ ಅವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲವಿದೆ. ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆಯುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಮತ್ತೊಂದೆಡೆ, ಯುವ ವೇಗಿ ಅಂಶುಲ್ ಕಾಂಬೋಜ್ ಕೂಡ ಕೋಚ್ ಗೌತಮ್ ಗಂಭೀರ್ ಮತ್ತು ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವರ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗಿಲ್, ತಂಡದ ಎಲ್ಲ ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ನಾಲ್ವರನ್ನು ಆಯ್ಕೆ ಮಾಡುವುದು ಸ್ವಲ್ಪ ತಲೆನೋವಿನ ವಿಚಾರವಾದರೂ, ಇದು ಒಳ್ಳೆಯ ರೀತಿಯ ತಲೆನೋವು ಎಂದು ಹೇಳಿದ್ದಾರೆ.
ಆಟಗಾರರಿಗಿಂತ ಗಾಳಿಯೇ ದೊಡ್ಡ ಸವಾಲು!
ವೆಲ್ಲಿಂಗ್ಟನ್‌ನಲ್ಲಿ ಬೀಸುವ ಬಲವಾದ ಗಾಳಿ ವೇಗದ ಬೌಲರ್‌ಗಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ವಿಶೇಷವಾಗಿ ಗಾಳಿಗೆ ವಿರುದ್ಧವಾಗಿ ಬೌಲಿಂಗ್ ಮಾಡುವಾಗ ಬೌಲರ್‌ಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಇದರಿಂದ ಅವರ ವೇಗ, ರನ್‌ಅಪ್ ಮತ್ತು ಬೌಲಿಂಗ್ ಲಯದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಈ ವಿಚಾರದ ಬಗ್ಗೆ ಗಿಲ್ ಎಚ್ಚರಿಕೆ ನೀಡಿದ್ದಾರೆ. ಗಾಳಿಯ ದಿಕ್ಕು ಮತ್ತು ವೇಗವನ್ನು ಗಮನದಲ್ಲಿಟ್ಟುಕೊಂಡು ಯಾವ ಬೌಲರ್‌ಗೆ ಯಾವ ರೀತಿಯ ಜವಾಬ್ದಾರಿ ನೀಡಬೇಕು ಎಂಬುದನ್ನು ತಂಡ ನಿರ್ಧರಿಸಬೇಕಿದೆ. ಹೀಗಾಗಿ ಬೌಲಿಂಗ್ ಸಂಯೋಜನೆಯನ್ನು ಅಂತಿಮಗೊಳಿಸುವಾಗ ಹವಾಮಾನವೂ ಪ್ರಮುಖ ಪಾತ್ರ ವಹಿಸಲಿದೆ.
ಆಕಾಶ್ ದೀಪ್, ಅಂಶುಲ್ ಕಾಂಬೋಜ್‌ಗೆ ಬ್ಯಾಟಿಂಗ್ ಜವಾಬ್ದಾರಿ!
ಟೀಂ ಇಂಡಿಯಾ ಕೇವಲ ಬೌಲಿಂಗ್ ಸಾಮರ್ಥ್ಯವನ್ನಷ್ಟೇ ಪರಿಗಣಿಸುತ್ತಿಲ್ಲ. ಕೆಳ ಕ್ರಮಾಂಕದಲ್ಲೂ ರನ್ ಗಳಿಸಬಲ್ಲ ಆಟಗಾರರಿಗೆ ಆದ್ಯತೆ ನೀಡಲು ಯೋಜಿಸಿದೆ. ಈ ಬಗ್ಗೆ ಮಾತನಾಡಿರುವ ಗಿಲ್, ಆಕಾಶ್ ದೀಪ್ ಮತ್ತು ಅಂಶುಲ್ ಕಾಂಬೋಜ್ ಇಬ್ಬರೂ ಸ್ವಲ್ಪಮಟ್ಟಿಗೆ ಬ್ಯಾಟಿಂಗ್ ಮಾಡಬಲ್ಲರು ಎಂದು ಹೇಳಿದ್ದಾರೆ.
ಭಾರತ ಏಳು ಪ್ರಮುಖ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಎಂಟು ಮತ್ತು ಒಂಬತ್ತನೇ ಕ್ರಮಾಂಕದಲ್ಲಿ ಯಾರು ಆಡಬೇಕು ಎಂಬುದು ಬೌಲಿಂಗ್ ಸಂಯೋಜನೆಯನ್ನು ಅವಲಂಬಿಸಿರುತ್ತದೆ. ನಿತೀಶ್ ಕುಮಾರ್ ರೆಡ್ಡಿ ಕೂಡ ಬ್ಯಾಟಿಂಗ್ ಆಯ್ಕೆಯಾಗಿದ್ದಾರೆ.
ಇನ್ನು ಟೆಸ್ಟ್ ಪಂದ್ಯ ಮುಂದುವರಿದಂತೆ ಪಿಚ್‌ನ ಸ್ವರೂಪವೂ ಬದಲಾಗಬಹುದು. ಮೊದಲ ಎರಡು ದಿನಗಳಲ್ಲಿ ವೇಗದ ಬೌಲರ್‌ಗಳಿಗೆ ನೆರವು ಸಿಗುವ ಸಾಧ್ಯತೆಯಿದ್ದರೆ, ಮೂರನೇ ದಿನದಿಂದ ಐದನೇ ದಿನದವರೆಗೆ ಪಿಚ್ ಹೆಚ್ಚು ಸಮತಟ್ಟಾಗಬಹುದು. ಹೀಗಾಗಿ ಹಳೆಯ ಚೆಂಡಿನಲ್ಲಿಯೂ ಉತ್ತಮ ವೇಗ ಮತ್ತು ಬೌನ್ಸ್ ಪಡೆಯಬಲ್ಲ ಬೌಲರ್ ತಂಡಕ್ಕೆ ಅಗತ್ಯವಾಗಿದ್ದಾರೆ ಎಂದು ಗಿಲ್ ವಿವರಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮೇಲೆ ಕಣ್ಣು
ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧದ ಈ ಎರಡು ಪಂದ್ಯಗಳ ಟೆಸ್ಟ್ ಸರಣಿ ಮಹತ್ವದ್ದಾಗಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಫೈನಲ್ ಪ್ರವೇಶಿಸುವ ಗುರಿ ಹೊಂದಿರುವ ಭಾರತಕ್ಕೆ ಈ ಸರಣಿಯ ಫಲಿತಾಂಶ ನಿರ್ಣಾಯಕವಾಗಬಹುದು.
ಈ ಕಾರಣದಿಂದಲೇ ತಂಡ ಟೆಸ್ಟ್ ಪಂದ್ಯಗಳ ತಯಾರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಆಟಗಾರರಿಗೆ ಅಗತ್ಯವಾದ ಅಭ್ಯಾಸ ಮತ್ತು ವಿಶ್ರಾಂತಿ ಒದಗಿಸುವ ನಿಟ್ಟಿನಲ್ಲಿ ಏಕದಿನ ಸರಣಿಯಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ.
ಒಟ್ಟಿನಲ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ಪಾಲಿಗೆ ಎದುರಾಗಿರುವುದು ಕೇವಲ ಎದುರಾಳಿ ತಂಡದ ಸವಾಲಲ್ಲ. ವೆಲ್ಲಿಂಗ್ಟನ್‌ನ ಗಾಳಿ, ಪಿಚ್‌ನ ಬದಲಾವಣೆ ಮತ್ತು ವೇಗದ ಬೌಲರ್‌ಗಳ ಆಯ್ಕೆ ಎಲ್ಲವೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಶುಭಮನ್ ಗಿಲ್ ಯಾವ ನಾಲ್ವರು ವೇಗದ ಬೌಲರ್‌ಗಳಿಗೆ ಅವಕಾಶ ನೀಡುತ್ತಾರೆ ಎಂಬುದು ಇದೀಗ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
Comments