Sunday, Nov 22, 2026
|
Advertisement

ಭಾರತ ತಂಡಕ್ಕೆ ದೊಡ್ಡ ಹೊಡೆತ: ಹೆನ್ರಿ ನಿಕೋಲ್ಸ್ ಕ್ಯಾಚ್ ಬಿಟ್ಟ ಪಡಿಕ್ಕಲ್, ವಿಡಿಯೊ ವೈರಲ್ !!

ಪಂದ್ಯ ದ  ಗೆಲುವು  ಕೇವಲ್ಲ ಬ್ಯಾಟಿಂಗ್ ಸಮಯದಲ್ಲಿನ ಒಟ್ಟು ಮೊತ್ತದ ಮೇಲೆ ನಿಲ್ಲುವುದಿಲ್ಲ ಯಾಕೆಂದರೆ  ಕ್ರಿಕೆಟ್ ನಲ್ಲಿನ ಗೆಲುವು ಒಂದು ಸರಿ ಮೊತ್ತದ ಮೇಲೆ ನಿಂತರೆ ಇನ್ನೊಂದು ಬರಿ ಅಟ್ಟದಲಿನ ಎಲ್ಲಭಾಗಗಳ್ಲಲು ಕೂಡ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ ಎಷ್ಟೊಂದ್ ಪದ್ಯಗಳು ಉತ್ತಮ ಮೊತ್ತವನ್ನು ಕಲೆಹಾಕಿದರು ಕೊನೆಗೆ ಸೊಲುತಾರೆ ಈಗ ಭಾರತವು  ಕೂಡ ಇಂಥದೆ ತಪ್ಪೊಂದನ್ನು ಮಾಡಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಹೇಳುತ್ತಿದು ಅದು ಭಾರತ–ನ್ಯೂಜಿಲೆಂಡ್ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ನಡೆದ ಸಣ್ಣ ಗೊಂದಲ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ ಅನ್ನು ದೇವದತ್ ಪಡಿಕ್ಕಲ್ ಕೈಚೆಲ್ಲಿದ್ದುಈ  ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಯಕ ಶುಭಮನ್ ಗಿಲ್ ಅವರ ಅಸಮಾಧಾನವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್ ವಿಡಿಯೊ, ಭಾರತ ಕ್ರಿಕೆಟ್ ಸುದ್ದಿ | Photo Credit: https://x.com/SonySportsNetwk
ವೈರಲ್ ವಿಡಿಯೊ, ಭಾರತ ಕ್ರಿಕೆಟ್ ಸುದ್ದಿ | Photo Credit: https://x.com/SonySportsNetwk

ಕ್ಯಾಚ್ ಕೈಚೆಲ್ಲಿದ್ದೇಗೆ? ಪಂತ್–ಪಡಿಕ್ಕಲ್ ನಡುವೆ ಗೊಂದಲ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನ್ಯೂಜಿಲೆಂಡ್ ತಂಡ ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ತಂಡಕ್ಕೆ ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ಆಸರೆಯಾಗಿದ್ದರು.

Advertisement

74ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ ಶಾರ್ಟ್ ಪಿಚ್ ಎಸೆತವನ್ನು ಹೆನ್ರಿ ನಿಕೋಲ್ಸ್ ಪುಲ್ ಮಾಡಲು ಪ್ರಯತ್ನಿಸಿದರು. ಆದರೆ ಬ್ಯಾಟ್‌ನ ಮೇಲ್ಭಾಗಕ್ಕೆ ತಾಗಿ ಚೆಂಡು ಗಾಳಿಯಲ್ಲಿ ಹಾರಿತು. ಚೆಂಡು ದೇವದತ್ ಪಡಿಕ್ಕಲ್ ಇದ್ದ ಫೀಲ್ಡಿಂಗ್ ಪ್ರದೇಶದ ಕಡೆಗೆ ಬರುತ್ತಿತ್ತು. ಕ್ಯಾಚ್ ಹಿಡಿಯಲು ಪಡಿಕ್ಕಲ್ ಮುಂದಾದರು. ಇದೇ ವೇಳೆ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಚೆಂಡಿನತ್ತ ಓಡಿಬಂದಿದ್ದರಿಂದ ಇಬ್ಬರ ನಡುವೆ ಕ್ಷಣಿಕ ಗೊಂದಲ ಉಂಟಾಯಿತು.

ಪಂತ್ ಮುಂದೆ ಬಂದಿದ್ದನ್ನು ಕಂಡ ಪಡಿಕ್ಕಲ್ ಕ್ಷಣಕಾಲ ಹಿಂಜರಿದರು. ಪಂತ್ ಕೂಡ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರು. ಈ ಗೊಂದಲದಿಂದ ಪಡಿಕ್ಕಲ್ ಸರಿಯಾಗಿ ಕ್ಯಾಚ್ ಹಿಡಿಯುವ ಸ್ಥಿತಿಗೆ ಬರಲಾಗದೆ ಚೆಂಡು ಕೈಗೆ ತಾಗಿ ಕೆಳಗೆ ಬಿತ್ತು. ನ್ಯೂಜಿಲೆಂಡ್ ಬ್ಯಾಟರ್‌ಗೆ ಮತ್ತೊಂದು ಅವಕಾಶ ಸಿಕ್ಕಿತು. 


ಗಿಲ್ ಅಸಮಾಧಾನ, ಪ್ರಸಿದ್ಧ್ ಕೃಷ್ಣ ನಿರಾಸೆ

ಕ್ಯಾಚ್ ಕೈಚೆಲ್ಲಿದ ತಕ್ಷಣ ಭಾರತದ ನಾಯಕ ಶುಭಮನ್ ಗಿಲ್ ಅಸಮಾಧಾನ ವ್ಯಕ್ತಪಡಿಸಿದರು. ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ ನಿರಾಶೆಯಿಂದ ಪ್ರತಿಕ್ರಿಯಿಸಿದರು. ಪಂತ್ ಮತ್ತು ಪಡಿಕ್ಕಲ್ ನಡುವಿನ ಮಾತುಕತೆ ಹಾಗೂ ಪ್ರತಿಕ್ರಿಯೆಗಳು ಪ್ರಸಾರದಲ್ಲಿ ಕಾಣಿಸಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಚರ್ಚೆಗೆ ಕಾರಣವಾಗಿದೆ.

Advertisement

ಈ ಘಟನೆಯ ವಿಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫೀಲ್ಡಿಂಗ್ ಸಂವಹನದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಇಂತಹ ಸಂದರ್ಭಗಳಲ್ಲಿ ಯಾರು ಕ್ಯಾಚ್ ತೆಗೆದುಕೊಳ್ಳಬೇಕು ಎಂಬ ಸ್ಪಷ್ಟ ಕರೆ ಹಾಗೂ ಪರಸ್ಪರ ಸಂವಹನ ಬಹಳ ಮುಖ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 


ನಿಕೋಲ್ಸ್–ಫಿಲಿಪ್ಸ್ ಜೊತೆಯಾಟದಿಂದ ನ್ಯೂಜಿಲೆಂಡ್‌ಗೆ ಬಲ

ಕ್ಯಾಚ್ ಕೈಚೆಲ್ಲಿದ ಬಳಿಕ ಹೆನ್ರಿ ನಿಕೋಲ್ಸ್ ಭಾರತದ ಬೌಲರ್‌ಗಳಿಗೆ ಮತ್ತಷ್ಟು ಸವಾಲಾದರು. ಗ್ಲೆನ್ ಫಿಲಿಪ್ಸ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ತಂಡ ಈ ಇಬ್ಬರ ಜೊತೆಯಾಟದಿಂದ ಚೇತರಿಸಿಕೊಂಡಿತು.

ಮೊದಲ ದಿನದಾಟ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ 82 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು. ಹೆನ್ರಿ ನಿಕೋಲ್ಸ್ 113 ರನ್ ಗಳಿಸಿ ಅಜೇಯರಾಗಿದ್ದರೆ, ಗ್ಲೆನ್ ಫಿಲಿಪ್ಸ್ 94 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇವರಿಬ್ಬರ ನಡುವೆ 173 ರನ್‌ಗಳ ಜೊತೆಯಾಟ ಮೂಡಿತ್ತು. ಹೀಗಾಗಿ ಭಾರತದ ಕೈಗೆ ಸಿಕ್ಕಿದ್ದ ಪ್ರಮುಖ ಅವಕಾಶ ಕೈಚೆಲ್ಲಿದ್ದು ತಂಡಕ್ಕೆ ದುಬಾರಿಯಾಗುವ ಸಾಧ್ಯತೆ ಎದುರಾಗಿದೆ. 

ಪಡಿಕ್ಕಲ್ ಮತ್ತು ಪಂತ್ ನಡುವಿನ ಈ ಸಣ್ಣ ಗೊಂದಲ ಈಗ ಕ್ರಿಕೆಟ್ ಅಭಿಮಾನಿಗಳ ನಡುವೆ ದೊಡ್ಡ ಚರ್ಚೆಯಾಗಿದೆ. ಪಂದ್ಯದಲ್ಲಿ ಈ ಕ್ಯಾಚ್ ಕೈಚೆಲ್ಲಿದ ಘಟನೆ ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಮುಂದಿನ ದಿನದ ಆಟ ನಿರ್ಧರಿಸಲಿದೆ.

Comments