ಹೀಗಾಗಿ ಡಿಸೆಂಬರ್ 12ರಂದು ನಡೆಯಲಿರುವ ಕಾರ್ಯಕ್ರಮವು ಕೇವಲ ಮೂರು ಸ್ಟ್ಯಾಂಡ್‌ಗಳ ಉದ್ಘಾಟನೆಗೆ ಸೀಮಿತವಾಗದೆ, ತಮಿಳುನಾಡಿನ ಕ್ರಿಕೆಟ್ ಇತಿಹಾಸದ ಮೂರು ಪ್ರಮುಖ ಅಧ್ಯಾಯಗಳಿಗೆ ನೀಡುತ್ತಿರುವ ಗೌರವವಾಗಲಿದೆ. ಕ್ರಿಕೆಟ್ ದಿಗ್ಗಜರ ಸಮ್ಮುಖದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚೆಪಾಕ್ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.