ರಣವೀರ್ ಸಿಂಗ್ 'ಧುರಂಧರ್' ಟು ಸೈಫ್ ಅಲಿ ಖಾನ್ 'ಕರ್ತವ್ಯ' - ಒಟಿಟಿಯಲ್ಲಿ ಈ ವಾರ 15 ಹೊಸ ಸಿನಿಮಾಗಳ ಭರ್ಜರಿ ಎಂಟ್ರಿ!!

ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್ ಬೇಕು ಅನ್ನಿಸ್ತಿದೆಯಾ? ಹಾಗಾದರೆ ಈ ವೀಕೆಂಡ್ ನಿಮ್ಮದಾಗಿಸಿಕೊಳ್ಳಿ. ಈ ವಾರ ನಿಮ್ಮನ್ನು ರಂಜಿಸಲು ಹೊಸ ಹೊಸ ಕಥೆಗಳು ನಿಮ್ಮ ಸ್ಕ್ರೀನ್ ಮೇಲೆ ಬರ್ತಿವೆ. ತಮಿಳಿನ ಸಸ್ಪೆನ್ಸ್ ಥ್ರಿಲ್ಲರ್‌ನಿಂದ ಹಿಡಿದು ಬಾಲಿವುಡ್‌ನ ಆಕ್ಷನ್ ಸಿನಿಮಾಗಳವರೆಗೆ ಎಲ್ಲವೂ ಇವೆ.

OTT ವೀಕೆಂಡ್: ಮೇ 12–15 ರ ಹಾಟ್ ರಿಲೀಸ್‌ಗಳು! | Photo Credit: https://www.imdb.com/de/news/ni65573528/
OTT ವೀಕೆಂಡ್: ಮೇ 12–15 ರ ಹಾಟ್ ರಿಲೀಸ್‌ಗಳು! | Photo Credit: https://www.imdb.com/de/news/ni65573528/

ಮೇ 12 ರ ರಿಲೀಸ್ (ಇವತ್ತಿನಿಂದಲೇ ಸ್ಟ್ರೀಮಿಂಗ್!)

ಕಾಳಿದಾಸ್ 2 (ತಮಿಳು): ಜಿಯೋಹಾಟ್‌ಸ್ಟಾರ್‌ನಲ್ಲಿ ಇನ್ಸ್ಪೆಕ್ಟರ್ ಕಾಳಿದಾಸ್ ಮತ್ತೆ ಬಂದಿದ್ದಾರೆ. ಒಂದು ಮಗು ನಾಪತ್ತೆಯಾಗುವ ಬೆನ್ನಲ್ಲೇ ಹೆಣಗಳ ರಾಶಿ ಬೀಳುತ್ತೆ. ಈ ನಿಗೂಢ ಕೊ*ಲೆಗಳ ಹಿಂದೆ ಇರುವ ಕ್ರಿಮಿನಲ್ ಲೋಕವನ್ನು ಭರತ್ ಹೇಗೆ ಬೇಧಿಸುತ್ತಾರೆ ಅನ್ನೋದೇ ಈ ಸಿನಿಮಾದ ಹೈಲೈಟ್.

ಅನ್‌ಟೋಲ್ಡ್ ಯುಕೆ: ಜೇಮಿ ವಾರ್ಡಿ (ಇಂಗ್ಲಿಷ್): ಫುಟ್ಬಾಲ್ ಪ್ರೇಮಿಗಳಿಗಾಗಿ ನೆಟ್‌ಫ್ಲಿಕ್ಸ್ ತರುತ್ತಿರುವ ಡಾಕ್ಯುಮೆಂಟರಿ. ಒಬ್ಬ ಸಣ್ಣ ಆಟಗಾರ ಪ್ರೀಮಿಯರ್ ಲೀಗ್ ಲೆಜೆಂಡ್ ಆಗಿ ಬೆಳೆದ ಕಥೆ ಇಲ್ಲಿದೆ.

ಡೆವಿಲ್ ಮೇ ಕ್ರೈ: ಸೀಸನ್ 2 (ಇಂಗ್ಲಿಷ್): ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿರುವ ಈ ಆನಿಮೇಟೆಡ್ ಸರಣಿಯಲ್ಲಿ ದಾಂತೆ ಮತ್ತು ಆತನ ಅವಳಿ ಸಹೋದರ ವರ್ಜಿಲ್ ನಡುವಿನ ಮಹಾಯುದ್ಧ ಶುರುವಾಗಲಿದೆ.

ಮೇ 13 ರಂದು ಏನಿದೆ?

ಒರು ದುರೂಹ ಸಾಹಚರ್ಯತ್ತಿಲ್ (ಮಲಯಾಳಂ): ನೆಟ್‌ಫ್ಲಿಕ್ಸ್‌ನಲ್ಲಿ ಕುಂಚಾಕೊ ಬೋಬನ್ ನಟನೆಯ ಸಿನಿಮಾ ಬಿಡುಗಡೆಯಾಗುತ್ತಿದೆ. ವಯನಾಡ್‌ನ ಒಬ್ಬ ವೈದ್ಯಕೀಯ ಸಿಬ್ಬಂದಿ, ತನ್ನ ಕಷ್ಟದ ಜೀವನದ ನಡುವೆ ಒಬ್ಬ ಗನ್ ಹಿಡಿದು ಬಂದ ಕ್ರಿಮಿನಲ್ ಕೈಗೆ ಸಿಕ್ಕಿಹಾಕಿಕೊಂಡರೆ ಏನಾಗುತ್ತದೆ? ನಿಜಕ್ಕೂ ಇದು ಉಗುರು ಕಚ್ಚುವಂತಹ ಸಸ್ಪೆನ್ಸ್ ಸಿನಿಮಾ.

ಪರ್ಫೆಕ್ಟ್ ಮ್ಯಾಚ್: ಸೀಸನ್ 4: ರಿಯಾಲಿಟಿ ಶೋ ಪ್ರಿಯರಿಗೆ ಇದು ಹಬ್ಬ. ಪ್ರೀತಿ ಮತ್ತು ಡ್ರಾಮಾ ಎರಡೂ ಇಲ್ಲಿ ತುಬಾ ಇದೆ.

ಮೇ 14 ರ ಸ್ಪೆಷಲ್

ಸೋಲ್ ಮೇಟ್ (ಇಂಗ್ಲಿಷ್): ಜಪಾನ್‌ನಿಂದ ಬರ್ಲಿನ್‌ಗೆ ಓಡಿಹೋಗುವ ಯುವಕ ಮತ್ತು ಒಬ್ಬ ಕೊರಿಯನ್ ಬಾಕ್ಸರ್ ನಡುವಿನ ವಿಧಿಬರಹದ ಕಥೆ ಇದು. ನೆಟ್‌ಫ್ಲಿಕ್ಸ್‌ನಲ್ಲಿ ನೀವು ಇದನ್ನು ನೋಡಬಹುದು.

ನೆಮೆಸಿಸ್: ಎಲ್‌ಎಪಿಡಿ ಪೊಲೀಸ್ ಮತ್ತು ಒಬ್ಬ ಮಾಸ್ಟರ್ ಕಳ್ಳನ ನಡುವಿನ ಜಿದ್ದಾಜಿದ್ದಿನ ಕಥೆ ಇಲ್ಲಿದೆ.

ಮೇ 15: ವೀಕೆಂಡ್ ಅಸಲಿ ಮಜಾ!

ಧುರಂಧರ್: ದಿ ರಿವೇಂಜ್ (ಹಿಂದಿ): ರಣವೀರ್ ಸಿಂಗ್, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ನಟನೆಯ ಬಹುನಿರೀಕ್ಷಿತ ಸಿನಿಮಾ. ಕರಾಚಿಯ ಅಂಡರ್‌ವರ್ಲ್ಡ್‌ಗೆ ನುಗ್ಗುವ ಇಂಡಿಯನ್ ಸ್ಪೈ ಕಥೆ ಇದು. ನೆಟ್‌ಫ್ಲಿಕ್ಸ್ ಮತ್ತು ಜಿಯೋಹಾಟ್‌ಸ್ಟಾರ್ ಎರಡರಲ್ಲೂ ಇದು ಲಭ್ಯ.

ಎಕ್ಸಾಮ್: ದಿ ಸಿಸ್ಟಮ್ ಎಕ್ಸ್‌ಪೋಸ್ಡ್ (ತಮಿಳು/ಹಿಂದಿ/ತೆಲುಗು): ಪ್ರೈಮ್ ವಿಡಿಯೋದಲ್ಲಿ ಶಿಕ್ಷಣ ಕ್ಷೇತ್ರದ ದಂಧೆಯ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ ಬರುತ್ತಿದೆ. ಎಕ್ಸಾಮ್ ಪೇಪರ್ ಲೀಕ್ ಹಗರಣದ ಹಿಂದಿನ ಕರಾಳ ಮುಖವನ್ನು ಇದು ತೋರಿಸಲಿದೆ.

ತಿಮ್ಮರಾಜುಪಲ್ಲಿ ಟಿವಿ (ತೆಲುಗು): 'ಆಹಾ' ವಿಡಿಯೋದಲ್ಲಿ ಒಂದು ಹಳ್ಳಿ ಮತ್ತು ಅಲ್ಲಿ ಕಳೆದುಹೋದ ಟಿವಿಯ ಸುತ್ತ ನಡೆಯುವ ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾ ಇದು. ಸಾಯಿ ತೇಜ್ ಇಲ್ಲಿ ಸತೀಶ್ ಆಗಿ ನಟಿಸಿದ್ದಾರೆ.

ಕರ್ತವ್ಯ (ಹಿಂದಿ): ಸೈಫ್ ಅಲಿ ಖಾನ್ ಇಲ್ಲಿ ಇನ್ಸ್ಪೆಕ್ಟರ್ ಅವತಾರದಲ್ಲಿ ಮಿಂಚಲಿದ್ದಾರೆ. ಕುಟುಂಬ ಮತ್ತು ಕರ್ತವ್ಯದ ನಡುವೆ ಸಿಕ್ಕಿಬಿದ್ದ ಮನುಷ್ಯನ ಸಂಘರ್ಷ ಇಲ್ಲಿದೆ.

ಇನ್ಸ್ಪೆಕ್ಟರ್ ಅವಿನಾಶ್: ಸೀಸನ್ 2 (ಹಿಂದಿ): ರಣದೀಪ್ ಹೂಡಾ ನಟನೆಯ ಈ ಸರಣಿ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಉತ್ತರ ಪ್ರದೇಶದ ಒಬ್ಬ ಖಡಕ್ ಇನ್ಸ್ಪೆಕ್ಟರ್‌ಗೆ ತನ್ನ ಮಗನೇ ಆರೋಪಿಯಾದಾಗ ಎದುರಾಗುವ ಸಂಕಷ್ಟಗಳೇ ಈ ಸೀಸನ್‌ನ ಜೀವಾಳ.

ನೋಡಿದ್ರಲ್ಲ, ಸಸ್ಪೆನ್ಸ್, ಆಕ್ಷನ್, ಕಾಮಿಡಿ ಮತ್ತು ಎಮೋಷನಲ್ ಸ್ಟೋರಿಗಳ ದೊಡ್ಡ ಲಿಸ್ಟ್ ನಿಮ್ಮ ಮುಂದಿದೆ. ನಿಮ್ಮ ನೆಚ್ಚಿನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ವಾರಾಂತ್ಯವನ್ನು ಎಂಜಾಯ್ ಮಾಡಿ!

ನಿಮಗೆ ಇವುಗಳಲ್ಲಿ ಯಾವ ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಇದೆ? ಕಾಮೆಂಟ್ ಮಾಡಿ ತಿಳಿಸಿ. 

Latest News