May 9, 2026 Languages : ಕನ್ನಡ | English

ಥಿಯೇಟರ್‌ನಲ್ಲಿ ನೋಡದ ಸೀನ್‌ಗಳು ಈಗ OTTಯಲ್ಲಿ ಲಭ್ಯ! ಮೇ 15ಕ್ಕೆ 'ಧುರಂಧರ್-2' ಡಿಜಿಟಲ್ ಎಂಟ್ರಿ - ಎಲ್ಲಿ ವೀಕ್ಷಿಸಬಹುದು ಗೊತ್ತಾ?

ರಣವೀರ್ ಸಿಂಗ್ ಅವರ ಹವಾ ಅಂದ್ರೆ ಸುಮ್ನೆನಾ? ಅಂದು ‘ಧುರಂಧರ್’ ಪಾರ್ಟ್-1 ರಿಲೀಸ್ ಆದಾಗ ಸೃಷ್ಟಿಯಾಗಿದ್ದ ಕ್ರೇಜ್ ನಮಗೆಲ್ಲಾ ನೆನಪೇ ಇದೆ. ಆದರೆ ಈಗ ಬಂದಿರೋ ‘ಧುರಂಧರ್-2: ದಿ ರಿವೇಂಜ್’ ಮಾಡಿರೋ ಸಾಹಸಗಳ ಮುಂದೆ ಮೊದಲ ಭಾಗ ಏನೇನೂ ಅಲ್ಲ ಅನ್ಸೋ ರೇಂಜ್‌ಗೆ ಈ ಸಿನಿಮಾ ಸದ್ದು ಮಾಡಿದೆ. ಹೌದು, ಈಗ ಎಲ್ಲಿ ನೋಡಿದ್ರೂ ಬರೀ ಇದೇ ಸಿನಿಮಾದ್ದೇ ಮಾತು.

‘ಧುರಂಧರ್-2’ ಈಗ OTTಯಲ್ಲಿ ರಾ ವರ್ಶನ್ ಜೊತೆ ರಿಲೀಸ್ | Photo Credit: RanveerOfficial
‘ಧುರಂಧರ್-2’ ಈಗ OTTಯಲ್ಲಿ ರಾ ವರ್ಶನ್ ಜೊತೆ ರಿಲೀಸ್ | Photo Credit: RanveerOfficial

 1700 ಕೋಟಿ ಸುನಾಮಿ

ಒಂದು ಸಿನಿಮಾ ಹಿಟ್ ಆಗೋದು ಗೊತ್ತು, ಆದ್ರೆ ಈ ರೇಂಜ್‌ಗೆ ದಾಖಲೆ ಧೂಳಿಪಟ ಮಾಡೋದು ಅಂದ್ರೆ ಸಾಮಾನ್ಯ ವಿಷಯವಲ್ಲ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಅಕ್ಷರಶಃ ಧೂಳೆಬ್ಬಿಸಿದೆ. ಬರೋಬ್ಬರಿ 1700 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇಂಡಿಯನ್ ಸಿನಿಮಾದ ತಾಕತ್ತು ಏನೆಂದು ತೋರಿಸಿದೆ. ಬರೀ ಸಾಮಾನ್ಯ ಜನರಷ್ಟೇ ಅಲ್ಲ, ಸೆಲೆಬ್ರೆಟಿಗಳಿಂದ ಹಿಡಿದು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಈ ಸಿನಿಮಾ ನೋಡಿ, “ವಾಹ್” ಅಂತ ಬೆನ್ನು ತಟ್ಟಿದ್ದಾರೆ. ದೇಶಭಕ್ತಿಯ ಕಿಚ್ಚು ಹಚ್ಚುವ ಈ ಸಿನಿಮಾದ ಗಾಂಭೀರ್ಯವೇ ಅಂತಹುದು.

ಈಗ ನಿಮ್ಮ ಮನೆಯೇ ಸಿನಿಮಾ ಥಿಯೇಟರ್

ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಸಂಭ್ರಮಿಸಿದ್ದಾಯ್ತು. ಈಗೇನಿದ್ರೂ ಆರಾಮಾಗಿ ಮನೆಯಲ್ಲಿ ಕುಳಿತು, ಫ್ಯಾಮಿಲಿ ಜೊತೆ ಈ ಆಕ್ಷನ್ ಪ್ಯಾಕ್ಡ್ ಸಿನಿಮಾವನ್ನು ಕಣ್ತುಂಬಿಕೊಳ್ಳೋ ಸಮಯ ಬಂದಿದೆ. ‘ಧುರಂಧರ್-2’ ಒಟಿಟಿಗೆ ಯಾವತ್ತು ಬರುತ್ತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೀತಿತ್ತು. ಅದಕ್ಕೀಗ ಅಧಿಕೃತ ಉತ್ತರ ಸಿಕ್ಕಿದೆ.

ಬರುವ ಮೇ 15, 2026 ರಂದು ಸಿನಿಮಾ ಒಟಿಟಿಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಭಾರತದಲ್ಲಿ: ಜಿಯೋ ಹಾಟ್​​ಸ್ಟಾರ್‌ನಲ್ಲಿ ನೀವು ಈ ಸಿನಿಮಾವನ್ನು ವೀಕ್ಷಿಸಬಹುದು.

ವಿದೇಶದಲ್ಲಿ: ನೆಟ್​​ಫ್ಲಿಕ್ಸ್ ಮೂಲಕ ಗ್ಲೋಬಲ್ ಪ್ರೇಕ್ಷಕರಿಗೆ ಸಿನಿಮಾ ಲಭ್ಯವಾಗಲಿದೆ.

ಭಾಷೆಗಳ ಹಬ್ಬ: ಕನ್ನಡದವರಿಗೆ ಸಿಹಿ ಸುದ್ದಿ ಏನೆಂದರೆ, ನಮ್ಮ ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ! ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ದಕ್ಷಿಣ ಭಾರತದ ಉಳಿದ ಭಾಷೆಗಳಲ್ಲೂ ಇದು ಸ್ಟ್ರೀಮ್ ಆಗಲಿದೆ.

ಒಟಿಟಿಯಲ್ಲಿ ಏನಿದೆ ಸರ್ಪ್ರೈಸ್?

ನೀವು ಈಗಾಗಲೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ್ರೂ, ಒಟಿಟಿಯಲ್ಲಿ ನೋಡಲೇಬೇಕಾದ ಒಂದು ಮುಖ್ಯ ಕಾರಣವಿದೆ. ಅದುವೇ ‘ರಾ ಆಂಡ್ ಅನ್​​ದೇಕಾ’ ಆವೃತ್ತಿ. ಚಿತ್ರಮಂದಿರದಲ್ಲಿ ಇದ್ದಿದ್ದಕ್ಕಿಂತ ಹೆಚ್ಚುವರಿಯಾಗಿ ಸಖತ್ ರೋಚಕವಾಗಿರೋ ದೃಶ್ಯಗಳನ್ನು ಇಲ್ಲಿ ಸೇರಿಸಲಾಗಿದೆ. ಅಂದರೆ ಕತ್ತರಿ ಬೀಳದ ಅಪ್ಪಟ ಆಕ್ಷನ್ ದೃಶ್ಯಗಳನ್ನು ನೀವು ಎಂಜಾಯ್ ಮಾಡಬಹುದು.

Latest News