Apr 12, 2026 Languages : ಕನ್ನಡ | English

"ನಾವಿಬ್ಬರೂ ಮದುವೆಯಾಗಿದ್ವಿ" - ಸಾಯುವ ಮುನ್ನ ಡೆತ್ ನೋಟ್‌ನಲ್ಲಿ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್!!

ಪ್ರೀತಿ ಅಂದ್ರೆ ನಂಬಿಕೆ ಇರಬೇಕು, ಆದರೆ ಇಲ್ಲಿ ಅದೇ ಪ್ರೀತಿ ಒಬ್ಬ ಯುವಕನ ಬಲಿ ಪಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಈ ಘಟನೆ ಈಗ ಸಿಲಿಕಾನ್ ಸಿಟಿಯಲ್ಲಿ ಸಂಚಲನ ಮೂಡಿಸಿದೆ. 23 ವರ್ಷದ ಅಭಿಷೇಕ್ ಎಂಬ ಯುವಕ, ತಾನು ಪ್ರೀತಿಸಿದ ಹುಡುಗಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾಗಿದ್ದಾನೆ.

ಆ ಯುವತಿ ಮಾಡಿದ ಒಂದು ಕೆಲಸಕ್ಕೆ ಪ್ರಾಣವೇ ಹೋಯ್ತು
ಆ ಯುವತಿ ಮಾಡಿದ ಒಂದು ಕೆಲಸಕ್ಕೆ ಪ್ರಾಣವೇ ಹೋಯ್ತು

ಅಭಿಷೇಕ್ ಮತ್ತು ಆ ಯುವತಿ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇವರ ಪ್ರೀತಿಗೆ ಹುಡುಗಿಯ ಮನೆಯಲ್ಲಿ ವಿರೋಧವಿತ್ತು. ಈ ವಿಚಾರವಾಗಿ ಹುಡುಗಿಯ ಪೋಷಕರು ಈ ಹಿಂದೆ ಪೊಲೀಸರಿಗೂ ದೂರು ನೀಡಿದ್ದರು. "ಅಭಿಷೇಕ್ ನಮ್ಮ ಮಗಳ ಹಿಂದೆ ಬಿದ್ದು ಪೀಡಿಸುತ್ತಿದ್ದಾನೆ" ಎಂಬುದು ಅವರ ಆರೋಪವಾಗಿತ್ತು. ಆಗ ಪೊಲೀಸ್ ಸ್ಟೇಷನ್‌ನಲ್ಲಿ ಇಬ್ಬರ ನಡುವೆ ರಾಜಿ ಸಂಧಾನ ಕೂಡ ನಡೆದಿತ್ತು ಎನ್ನಲಾಗಿದೆ.

ಆದರೆ ಅಸಲಿ ಕಥೆಯೇ ಬೇರೆ ಇತ್ತು. ಪೊಲೀಸರ ಮುಂದೆ ರಾಜಿ ಮಾಡಿಕೊಂಡಿದ್ದರೂ, ಇಬ್ರೂ ಕದ್ದುಮುಚ್ಚಿ ಮದುವೆಯಾಗಿದ್ದರು ಎಂಬ ಸ್ಫೋಟಕ ಸತ್ಯ ಈಗ ಹೊರಬಿದ್ದಿದೆ. ಈ ಬಗ್ಗೆ ಅಭಿಷೇಕ್ ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ. "ನಾವಿಬ್ಬರೂ ಮನೆಯವರಿಗೆ ಗೊತ್ತಿಲ್ಲದಂತೆ ಮದುವೆಯಾಗಿದ್ದೆವು" ಎಂದು ಆತ ಬರೆದುಕೊಂಡಿದ್ದಾನೆ ಎನ್ನಲಾಗಿದೆ.

ಸಾವಿಗೂ ಮುನ್ನ ವಿಡಿಯೋ ಕಾಲ್

ಏಪ್ರಿಲ್ 9 ರಂದು ಈ ದುರ್ಘಟನೆ ಸಂಭವಿಸಿದೆ. ಇತ್ತೀಚೆಗೆ ಆ ಯುವತಿ ಅಭಿಷೇಕ್‌ನನ್ನು ಅವಾಯ್ಡ್ ಮಾಡುತ್ತಿದ್ದಳಂತೆ. ಇದರಿಂದ ಮನನೊಂದ ಅಭಿಷೇಕ್, ತನ್ನ ಸಾವಿನ ನಿರ್ಧಾರವನ್ನು ಅವಳಿಗೇ ತಿಳಿಸಲು ಮುಂದಾಗಿದ್ದಾನೆ. ತಾನು ನೇಣು ಹಾಕಿಕೊಳ್ಳುತ್ತಿರುವ ದೃಶ್ಯವನ್ನೇ ಯುವತಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದಾನೆ. ಸಾಯುವ ಮುನ್ನ ಆತ ಮಾಡಿದ ವಿಡಿಯೋ ಕಾಲ್ ಮತ್ತು ಮೆಸೇಜ್‌ಗಳ ಸ್ಕ್ರೀನ್ ಶಾಟ್ ಕೂಡ ಈಗ ಲಭ್ಯವಾಗಿದ್ದು, ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.

ಹೆತ್ತವರಿಗೆ ಉಳಿಯಿತು ಕಣ್ಣೀರು

ಒಬ್ಬನೇ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. "ಹುಡುಗಿಯ ಮೋಸದಿಂದಲೇ ನಮ್ಮ ಮಗ ಸತ್ತಿದ್ದಾನೆ" ಎಂಬುದು ಕುಟುಂಬಸ್ಥರ ಆರೋಪ. ಅಭಿಷೇಕ್ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಮದುವೆಯ ವಿಚಾರ ಮತ್ತು ಯುವತಿಯಿಂದ ತನಗಾದ ಮಾನಸಿಕ ನೋವಿನ ಬಗ್ಗೆ ಬರೆದಿದ್ದಾನೆ ಎನ್ನಲಾಗಿದೆ.

ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆ ಯುವತಿಯನ್ನು ವಿಚಾರಣೆಗೊಳಪಡಿಸಲಾಗುತ್ತಿದ್ದು, ಅಸಲಿಗೆ ಇವರಿಬ್ಬರ ನಡುವೆ ನಡೆದಿದ್ದೇನು? ಆಕೆ ಯಾಕೆ ಆತನನ್ನು ಅವಾಯ್ಡ್ ಮಾಡುತ್ತಿದ್ದಳು? ಮತ್ತು ವಿಡಿಯೋ ಕಾಲ್ ಮಾಡಿದಾಗ ಆಕೆ ಯಾಕೆ ಯಾರನ್ನೂ ಸಂಪರ್ಕಿಸಿ ತಡೆಯಲು ಪ್ರಯತ್ನಿಸಲಿಲ್ಲ? ಎಂಬ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.

ಪ್ರೀತಿಯ ಅಮಲಿನಲ್ಲಿ ಎಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬುದಕ್ಕೆ ಈ ಘಟನೆ ಒಂದು ಕರಾಳ ಸಾಕ್ಷಿ. ಅಭಿಷೇಕ್ ಆತುರದ ನಿರ್ಧಾರದಿಂದ ಇವತ್ತು ಒಂದು ಸುಂದರ ಕುಟುಂಬ ಬೀದಿಗೆ ಬಿದ್ದಿದೆ.