ಮಗನ ಭವಿಷ್ಯಕ್ಕಾಗಿ ತಾಯಿಯ ಸಾಹಸ - ಕ್ಲಾಸ್ ಮಿಸ್ ಆಗುತ್ತೆ ಎಂದು ಬಸ್ ಹಿಂದೆ ಓಡಿದ ವಿಡಿಯೋ ವೈರಲ್!!

ಈ ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ಯಾವುದಾದರೂ ಒಂದಿದ್ದರೆ ಅದು ತಾಯಿಯ ಪ್ರೀತಿ ಮಾತ್ರ   ಮಾತ್ರವೇ  ಆಗಿರುತ್ತದೆ. ಒಬ್ಬ ತನ್ನ ಮಕ್ಕಳ ಏಳಿಗೆಗಾಗಿ ಇಡೀ ಬದುಕನ್ನು ಧಾರೆ ಎರೆಯುವವಳು ತಾಯಿ. ಅವಳು ತನ್ನ ಖುಷಿಯನ್ನು ಮರೆತು ಮಕ್ಕಳ ಗೌರವಕ್ಕಾಗಿ ಶ್ರಮಿಸುತ್ತಾಳೆ. ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದು ಅಮ್ಮನ ಅಪಾರ ಕಾಳಜಿಯನ್ನು ಎತ್ತಿ ತೋರಿಸುತ್ತಿದ್ದು, ಅದನ್ನು ನೋಡಿದ ಪ್ರತಿಯೊಬ್ಬರ ಕಣ್ಣುಗಳಲ್ಲಿ ಕಣ್ಣೀರು ತರಿಸುತ್ತಿದೆ.

ಮಗನಿಗಾಗಿ ಬಸ್ ಹಿಂದೆ ಓಡಿದ ತಾಯಿ – ವೈರಲ್ ವಿಡಿಯೋ
ಮಗನಿಗಾಗಿ ಬಸ್ ಹಿಂದೆ ಓಡಿದ ತಾಯಿ – ವೈರಲ್ ವಿಡಿಯೋ

ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯ ಎಂಬುದು ಒಬ್ಬ ತಾಯಿಗೆ ಚೆನ್ನಾಗಿ ತಿಳಿದಿರುತ್ತದೆ. ಮಗನ ಶಾಲೆಗೆ ತಡವಾಗಬಾರದು ಅಥವಾ ಒಂದು ದಿನದ ಪಾಠ ತಪ್ಪಬಾರದು ಎಂಬ ಕಾಳಜಿಯಿಂದ ತಾಯಿಯೊಬ್ಬಳು ಮಾಡಿದ ಸಾಹಸ ಈಗ ಎಲ್ಲರ ಗಮನ ಸೆಳೆದಿದೆ. ವಿಡಿಯೋದಲ್ಲಿರುವಂತೆ, ಮಗನ ಸ್ಕೂಲ್ ಬಸ್ ತಡವಾಗಿ ಬಂದ ಕಾರಣವೋ ಅಥವಾ ಮಗು ಸಿದ್ಧವಾಗುವುದು ವಿಳಂಬವಾದ ಕಾರಣವೋ, ಬಸ್ ನಿಲ್ದಾಣದಿಂದ ಹೊರಟು ಬಿಡುತ್ತದೆ. ಆಗ ಆ ತಾಯಿ ಕಿಂಚಿತ್ತೂ ಯೋಚಿಸದೆ, ಮಗನ ಭಾರವಾದ ಶಾಲಾ ಬ್ಯಾಗ್ ಅನ್ನು ತನ್ನ ಹೆಗಲಿಗೇರಿಸಿಕೊಂಡು ರಸ್ತೆಯಲ್ಲಿ ಓಡಲು ಶುರು ಮಾಡುತ್ತಾಳೆ.

ತನ್ನ ಮಗನ ಕೈಹಿಡಿದು ಬಸ್ಸನ್ನು ತಲುಪಲು ಅವಳು ಪಡುತ್ತಿರುವ ಪೇಚಾಟ ಆಕೆಯ ಪ್ರೀತಿಯನ್ನು ತೋರಿಸುತ್ತದೆ. ಮಗನು ಕೂಡ ತನ್ನ ತಾಯಿಯ ಜೊತೆ ಓಡುತ್ತಿದ್ದು, ಕೊನೆಗೂ ಆ ತಾಯಿ ಬಸ್ಸನ್ನು ತಲುಪಿ, ಚಾಲಕನಿಗೆ ವಿನಂತಿಸಿ ಮಗನನ್ನು ಬಸ್ ಹತ್ತಿಸುವಲ್ಲಿ ಯಶಸ್ವಿಯಾಗುತ್ತಾಳೆ. ಈ ದೃಶ್ಯವು ಕೇವಲ ಒಂದು ಓಟವಲ್ಲ, ಬದಲಾಗಿ ಮಗನ ಭವಿಷ್ಯಕ್ಕಾಗಿ ಒಬ್ಬ ತಾಯಿ ಪಡುವ ಶ್ರಮದ ಸಂಕೇತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ

'ಟಿವಿ ಇಶಾ ಟ್ರಾವೆಲ್ ಡೈರಿ' ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, "ಈ ಜಗತ್ತಿನಲ್ಲಿ ತಾಯಿಗೆ ಸರಿಸಾಟಿ ಯಾರೂ ಇಲ್ಲ" ಎಂದು ಬರೆದಿದ್ದರೆ, ಮತ್ತೊಬ್ಬರು "ಮಕ್ಕಳಿಗಾಗಿ ಅಮ್ಮ ಏನೆಲ್ಲಾ ಕಷ್ಟ ಸಹಿಸುತ್ತಾಳೆ ಎಂಬುದಕ್ಕೆ ಇದು ಸಾಕ್ಷಿ" ಎಂದು ಕಣ್ಣೀರಿನ ಎಮೋಜಿಗಳನ್ನು ಹಾಕಿದ್ದಾರೆ.

ಮಕ್ಕಳೇ ತಾಯಿಯ ಪ್ರಪಂಚ

ತಾಯಿಯಾದವಳು ತಾನು ಎಷ್ಟೇ ಕಷ್ಟದಲ್ಲಿದ್ದರೂ ಮಕ್ಕಳ ಹೊಟ್ಟೆ ತುಂಬಿಸಿ, ಅವರಿಗೆ ಒಳ್ಳೆಯ ಬಟ್ಟೆ ಕೊಡಿಸಿ, ಗುಣಮಟ್ಟದ ಶಿಕ್ಷಣ ನೀಡಲು ಹಗಲಿರುಳು ಒದ್ದಾಡುತ್ತಾಳೆ. ಮಕ್ಕಳ ಗೆಲುವಿನಲ್ಲೇ ತನ್ನ ಗೆಲುವನ್ನು ಕಾಣುವವಳು ತಾಯಿ ಮಾತ್ರ. ಈ ವಿಡಿಯೋದಲ್ಲಿ ಆಕೆ ಬಸ್ ಹಿಂದೆ ಓಡುತ್ತಿರುವಾಗ ಅವಳ ಮುಖದಲ್ಲಿ ದಣಿವಿಗಿಂತ ಹೆಚ್ಚಾಗಿ, ಮಗನು ಶಾಲೆಗೆ ಹೋಗಲೇಬೇಕು ಎನ್ನುವ ಹಂಬಲ ಎದ್ದು ಕಾಣುತ್ತಿತ್ತು.

View this post on Instagram

A post shared by Tvi | Vacation Stay Hotel Travel Food Reviews (@tvishatraveldiary)

ಅಮ್ಮ ಅಂದರೆ ಕೇವಲ ಎರಡಕ್ಷರದ ಪದವಲ್ಲ ಅದೊಂದು ಅದ್ಭುತ ಶಕ್ತಿ. ಪ್ರತಿಯೊಬ್ಬ ಮಗುವಿನ ಯಶಸ್ಸಿನ ಹಿಂದೆ ಇಂತಹ ಎಲೆಮರೆಯ ಕಾಯಿಯಂತೆ ಶ್ರಮಿಸುವ ತಾಯಿಯ ಹೋರಾಟ ಇದ್ದೇ ಇರುತ್ತದೆ ಎಂದು ಈ ವಿಡಿಯೋ ನಮಗೆಲ್ಲರಿಗೂ ನಮ್ಮ ತಾಯಂದಿರ ತ್ಯಾಗವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ. 

Latest News