Feb 16, 2026 Languages : ಕನ್ನಡ | English

ಬೆಚ್ಚಿ ಬೀಳಿಸಿದ ವಿಜಯನಗರ ಘಟನೆ - ತನ್ನ ತಂದೆ ತಾಯಿ ಹಾಗೂ ತಂಗಿಯ ಪ್ರಾಣ ತೆಗೆದ ಭೂಪ!!

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ಭೀಕರ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಹರಪನಹಳ್ಳಿ ರಸ್ತೆಯ ಎಲ್.ಬಿ ಬಡಾವಣೆಯಲ್ಲಿರುವ ಬಾಡಿಗೆ ಮನೆಯಲ್ಲಿ ಅಕ್ಷಯ್ ಎಂಬ ಯುವಕ ತನ್ನ ತಂದೆ, ತಾಯಿ ಹಾಗೂ ಸಹೋದರಿಯ ಜೀವಹಾನಿ ಮಾಡಿ ಮನೆಯಲ್ಲಿ ಹೂತು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರಾಣ ತೆಗೆದ ಮಗ ಮುಂದೆ ಮಾಡಿದ್ದೆ ಬೇರೆ!!
ಪ್ರಾಣ ತೆಗೆದ ಮಗ ಮುಂದೆ ಮಾಡಿದ್ದೆ ಬೇರೆ!!

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಷಯ್ ತನ್ನ ತಂದೆ ಭೀಮರಾಜ, ತಾಯಿ ಜಯಲಕ್ಷ್ಮಿ, ಹಾಗೂ ತಂಗಿ ಅಮೃತಾ ಅವರನ್ನು ಜೀವಹಾನಿ ಮಾಡಿ ಮನೆಯ ಹಾಲ್‌ನಲ್ಲಿರುವ ಟೈಲ್ಸ್ ತೆಗೆದು, ಮೂವರನ್ನೂ ಹೂತು ಹಾಕಿದ್ದಾನೆ. ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು ಹಾಗೂ ಗೋಡೆಗಳಿಗಳ್ಳಿ ಕಂಡು ಬಂದ ಕೃತ್ಯದ ಕಲೆಗಳು ಘಟನೆಯ ಭೀಕರತೆಯನ್ನು ಬಿಚ್ಚಿಡುತ್ತಿವೆ.

ಈ ಘಟನೆ ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯೊಳಗೆ ಮೂವರ ಸಮಾಧಿ ಮಾಡಿರುವುದನ್ನು ಕಂಡು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಗ್ರಾಮಸ್ಥರು ಈ ಘಟನೆಗೆ ಬೆಚ್ಚಿಬಿದ್ದಿದ್ದು, “ಮಗನಿಂದಲೇ ತಂದೆ, ತಾಯಿ, ಸಹೋದರಿ ಪ್ರಾಣ ಹೋಗಿದೆ” ಎಂಬ ಸುದ್ದಿ ಎಲ್ಲರನ್ನೂ ನಡುಗಿಸಿದೆ. ಕುಟುಂಬದೊಳಗಿನ ಕಲಹವೇ ಇದಕ್ಕೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಅಕ್ಷಯ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಯ ನಿಜವಾದ ಕಾರಣ ತಿಳಿಯಲು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ. ಸ್ಥಳೀಯರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕ್ರೂರ ಕೃತ್ಯಕ್ಕೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೊಟ್ಟೂರು ಪಟ್ಟಣದಲ್ಲಿ ನಡೆದ ಈ ಜೀವಹಾನಿ ಪ್ರಕರಣವು ಮಾನವೀಯತೆಯ ಮಿತಿಗಳನ್ನು ಮೀರಿ ನಡೆದ ಕ್ರೂರ ಕೃತ್ಯವಾಗಿದೆ. ತಂದೆ, ತಾಯಿ, ಸಹೋದರಿಯ ಜೀವ ತೆಗೆದು ಮನೆಯಲ್ಲಿ ಹೂತಿರುವ ಅಕ್ಷಯ್‌ನ ಕೃತ್ಯ ಸಮಾಜವನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸತ್ಯಾಂಶವನ್ನು ಹೊರತರಲು ತನಿಖೆ ಮುಂದುವರೆಸುತ್ತಿದ್ದಾರೆ. 

Latest News