"ನನ್ನ ಮಾವನೇ ನನ್ನ ಮೇಲೆ ಅ*ತ್ಯಾಚಾರ ಎಸಗಿದ್ದಾನೆ... ಆದರೆ ಪೊಲೀಸರು ಇದಕ್ಕೆ ಸಾಕ್ಷಿ ತನ್ನಿ ಅಂತ ಹೇಳ್ತಿದ್ದಾರೆ! ಕಳೆದ 4 ದಿನಗಳಿಂದ ನಾನು ಪೊಲೀಸ್ ಸ್ಟೇಷನ್‌ಗೆ ಅಲೆಯುತ್ತಿದ್ದೇನೆ, ಆದರೂ ನನ್ನ ಕೇಸ್ ರಿಜಿಸ್ಟರ್ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ನನಗೇ ಬೆದರಿಕೆ ಹಾಕಲಾಗುತ್ತಿದೆ. ಇಡೀ ಪೊಲೀಸ್ ಸ್ಟೇಷನ್ ಅನ್ನೇ ಅವರು ದುಡ್ಡು ಕೊಟ್ಟು ಖರೀದಿ ಮಾಡಿದ್ದಾರೆ..."
ಇದು ಬೇರೆ ಯಾರೋ ಸಾಮಾನ್ಯ ಹೆಣ್ಣುಮಗಳು ಹೇಳುತ್ತಿರುವ ಕಣ್ಣೀರಿನ ಕಥೆಯಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ, ಜನರಿಗೆ ನ್ಯಾಯ ಕೊಡಿಸಬೇಕಾದ ಉತ್ತರ ಪ್ರದೇಶದ (UP) ಪ್ರಯಾಗ್‌ರಾಜ್‌ನಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಮಹಿಳಾ ಸಬ್ ಇನ್ಸ್‌ಪೆಕ್ಟರ್ (PSI) ಸ್ವತಃ ತನಗಾದ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಧ್ವನಿ! ತನ್ನದೇ ಮಾವ ತನ್ನ ಮೇಲೆ ಅ*ತ್ಯಾಚಾರ ಮಾಡಿದ್ದಾನೆ ಎಂದು ಆಕೆ ಸ್ವಂತ ಇಲಾಖೆಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ಮದುವೆಯಾದ ದಿನದಿಂದಲೇ ಶುರುವಾಯ್ತು ನರಕಯಾತನೆ!
ಸಂತ್ರಸ್ತ ಮಹಿಳಾ ಅಧಿಕಾರಿಯ ಕಣ್ಣೀರಿನ ಕಥೆ ನಿಜಕ್ಕೂ ಎದೆ ನಡುಗಿಸುವಂತಿದೆ. ಆಕೆ ಮಾಧ್ಯಮಗಳ ಮುಂದೆ ಹಂಚಿಕೊಂಡಿರುವ ವಿವರಗಳ ಪ್ರಕಾರ, ಮದುವೆಯಾದ ಮೊದಲ ದಿನದಿಂದಲೇ ಗಂಡನ ಮನೆಯವರು ಆಕೆಗೆ ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ದಿನಗಳು ಉರುಳಿದಂತೆ ಮನೆಯಲ್ಲೇ ಇದ್ದ ಮಾವ ಆಕೆಯ ಮೇಲೆ ಕಣ್ಣು ಹಾಕಿ, ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿ ಕೇಳಿಬಂದಿದೆ.
ಯಾವಾಗ ಆಕೆ ಈ ಅ*ತ್ಯಾಚಾರ ಪ್ರವೃತ್ತಿಯನ್ನು ತಡೆದು, ಬಲವಾಗಿ ಪ್ರತಿರೋಧ ಒಡ್ಡಿದ್ದಾಳೋ, ಆಗ ಆಕೆಗೆ ಬಲವಂತವಾಗಿ ಇಲಿ ಪಾ*ಷಾಣ ತಿನ್ನಿಸಲು ಯತ್ನಿಸಲಾಗಿದೆ. ಅಷ್ಟೇ ಅಲ್ಲದೆ, ಗನ್ ತೋರಿಸಿ ಒಂದು ವೇಳೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಪ್ರಾಣ ತೆಗೆಯುವುದಾಗಿ ಜೀವ ಬೆದರಿಕೆ ಕೂಡ ಹಾಕಿದ್ದಾರೆ.
"ನನ್ನದೇ ಇಲಾಖೆ ನನಗೆ ನ್ಯಾಯ ಕೊಡುತ್ತಿಲ್ಲ"
ತಾನು ಅನುಭವಿಸಿದ ನರಕಯಾತನೆಗೆ ನ್ಯಾಯ ಸಿಗಬಹುದು ಎಂಬ ಆಸೆಯಿಂದ ಆಕೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ ಅಲ್ಲಾದ ಅನುಭವ ಆಕೆಯನ್ನು ಮತ್ತಷ್ಟು ಕುಗ್ಗಿಸಿದೆ. ಒಬ್ಬ ಮಹಿಳಾ ಸಬ್ ಇನ್ಸ್‌ಪೆಕ್ಟರ್ ದೂರು ನೀಡಲು ಬಂದರೂ ಸಹ, ಅಲ್ಲಿನ ಸಿಬ್ಬಂದಿ ಎಫ್‌ಐಆರ್ (FIR) ದಾಖಲಿಸಲು ಸತತ 4 ದಿನಗಳಿಂದ ನಿರಾಕರಿಸಿದ್ದಾರೆ.
ಬದಲಿಗೆ, "ನೀನು ಅ*ತ್ಯಾಚಾರಕ್ಕೊಳಗಾಗಿದ್ದೀಯ ಅನ್ನೋದಕ್ಕೆ ಮೊದಲು ಸಾಕ್ಷಿ ತಂದುಕೊಡು" ಎಂದು ಕೇಳಿ ಅವಮಾನಿಸಿದ್ದಾರೆ. ಅಲ್ಲದೆ ದೂರು ಹಿಂಪಡೆಯುವಂತೆ ಆಕೆಗೆ ಸ್ಟೇಷನ್‌ನಲ್ಲೇ ಬೆದರಿಕೆ ಹಾಕಲಾಗಿದೆ. ಆರೋಪಿಗಳ ಪರವಾಗಿ ನಿಂತಿರುವ ಪೊಲೀಸರು, ವಿರೋಧ ಪಕ್ಷದ ನಾಯಕರಿಂದ ಭಾರಿ ಪ್ರಮಾಣದ ಲಂಚ ಪಡೆದು ಕೇಸ್ ಮುಚ್ಚಿಹಾಕಲು ಮತ್ತು ಆರೋಪಿಗಳು ಎಸ್ಕೇಪ್ ಆಗಲು ಸಹಾಯ ಮಾಡುತ್ತಿದ್ದಾರೆ ಎಂದು ಆಕೆ ಗಂಭೀರವಾಗಿ ಆರೋಪಿಸಿದ್ದಾರೆ.
ससुर द्वारा मेरा बLaत्कार किया गया है..पुलिस
— Rahul Saini (@JtrahulSaini) May 29, 2026
कह रही है सबूत लाकर दो...!
4 दिन से थाने आ रही हूं..मेरा मुकदमा नहीं लिखा जा रहा है..मुझे डराया..धमकाया जा रहा है..पूरा थाना बिक चुका है..!
विपक्षियों से पैसा लेकर उन्हें भगाने का आरोप..!
ये आरोप यूपी के प्रयागराज में दरोगा के पद… pic.twitter.com/pdvxfbmcmJ
ಇಡೀ ದೇಶದಲ್ಲೇ ಭಾರಿ ಆಕ್ರೋಶ
ಒಬ್ಬ ಪೊಲೀಸ್ ಅಧಿಕಾರಿಗೆ, ಅದೂ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ಗೇ ಸ್ವಂತ ಇಲಾಖೆಯಲ್ಲಿ ಈ ಪರಿಸ್ಥಿತಿ ಬಂದಿದೆ ಅಂದರೆ ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಗತಿ ಏನು? ಅನ್ನೋ ದೊಡ್ಡ ಪ್ರಶ್ನೆ ಈಗ ಇಡೀ ದೇಶವನ್ನು ಕಾಡುತ್ತಿದೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ತಕ್ಷಣವೇ ಆರೋಪಿ ಮಾವನನ್ನು ಬಂಧಿಸಬೇಕು ಮತ್ತು ಕರ್ತವ್ಯ ಲೋಪ ಎಸಗಿದ ಸ್ಟೇಷನ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.