Feb 16, 2026 Languages : ಕನ್ನಡ | English

ಬೆಂಗಳೂರಿನ ನಂತರ ತುಮಕೂರಿನಲ್ಲೂ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ - ಅಸಲಿ ವಿಷಯ ಇಲ್ಲಿದೆ!!

ತುಮಕೂರು ಜಿಲ್ಲೆಯಲ್ಲಿ ನಡೆದ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ನಂತರ ಇದೀಗ ತುಮಕೂರಿನಲ್ಲೂ ಕೂಡ ಲೋಕಾಯುಕ್ತ ಬಲೆಗೆ ಪಿಎಸ್ಐ ಸಿಕ್ಕಿರುವುದು ದೊಡ್ಡ ಸುದ್ದಿಯಾಗಿದೆ.  

ತುಮಕೂರು – ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಪ್ರಕರಣ
ತುಮಕೂರು – ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಪ್ರಕರಣ

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ 'ಸಬ್ ಇನ್ಸ್ಪೆಕ್ಟರ್ ಚೇತನ್' ಲೋಕಾಯುಕ್ತ ಬಲೆಗೆ ಸಿಕ್ಕಿದ್ದಾರೆ. ಹಲವಾರು ದಿನಗಳಿಂದ 'ಕೆಸರು ಮಡು ದರ್ಗಾ' ಮುಂದೆ ನಿಂತಿದ್ದ ಕಾರನ್ನು ವಶಕ್ಕೆ ಪಡೆದಿದ್ದ ಚೇತನ್, ಕಾರು ಮಾಲೀಕರಿಗೆ ಮಾದಕ ವಸ್ತುಗಳ ಸಾಗಾಟ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 

ಈ ಕಾರು ಬೆಂಗಳೂರು ಮೂಲದ ವಕೀಲ ಶ್ರಿಧರ್ ಅವರಿಗೆ ಸೇರಿದ ಕಿಯಾ ಕಾರು. ಕಾರು ಬಿಡಲು 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪ. ನಂತರ ಮಾತುಕತೆ 1 ಲಕ್ಷಕ್ಕೆ ತೀರ್ಮಾನಗೊಂಡಿದ್ದು, ಕಳೆದ ರಾತ್ರಿ 40 ಸಾವಿರ ರೂಪಾಯಿ ಅಡ್ವಾನ್ಸ್ ಹಣ ಪಡೆದಾಗಲೇ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗುತ್ತಿದೆ. 

ಚೇತನ್ ಹಣವನ್ನು 'ನಮಸ್ತೆ ಹೋಟೆಲ್ ಮಾಲೀಕನ ಮೂಲಕ' ಪಡೆದಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಈ ಹಣ ಸ್ವೀಕರಿಸಿದ ನಂತರ ಲೋಕಾಯುಕ್ತ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮದ್ಯರಾತ್ರಿಯಲ್ಲಿ ಪಿಎಸ್ಐ ಚೇತನ್ ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದಾರೆ.  

ಈ ಸಂಪೂರ್ಣ ಕಾರ್ಯಾಚರಣೆಯನ್ನು 'ಲೋಕಾಯುಕ್ತ ಪೊಲೀಸ್ ಮಂಜೇಗೌಡ' ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಅಧಿಕಾರಿಗಳು ಚೇತನ್ ವಿರುದ್ಧ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಹೌದು, ಈ ಘಟನೆ, ಪೊಲೀಸ್ ಇಲಾಖೆಯಲ್ಲಿನ ಅಕ್ರಮ ಮತ್ತು ಲಂಚದ ಪ್ರಕರಣಗಳ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ ಎನ್ನಬಹುದು. ಜನರ ವಿಶ್ವಾಸ ಕಾಪಾಡಲು ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ. 

ಲೋಕಾಯುಕ್ತ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಪಿಎಸ್ಐ ಚೇತನ್ ಅವರನ್ನು ಬಲೆಗೆ ಸಿಕ್ಕಿಸುವ ಮೂಲಕ, ಅಕ್ರಮದ ವಿರುದ್ಧ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಘಟನೆ ಕುರಿತು ಯಾವ ರೀತಿ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು. 

Latest News