May 6, 2026 Languages : ಕನ್ನಡ | English

ರಾಜಕೀಯದ "ಬ್ಯಾಂಡೇಜ್ ರಾಣಿ" ಬಣ್ಣ ಬಯಲು - ಸುಳ್ಳು ಗಾಯದ ನಾಟಕವಾಡಿದ ಟಿಎಂಸಿ ಕಾರ್ಯಕರ್ತೆ!!

ರಾಜಕೀಯ ಅಂದ್ರೆ ಕೇವಲ ಭಾಷಣ, ಭರವಸೆ ಅಷ್ಟೇ ಅಂದುಕೊಂಡಿದ್ದೀರಾ? ಹಾಗಿದ್ದರೆ ನೀವು ತಪ್ಪು. ಇಲ್ಲಿ ನಟನೆ ಇದೆ, ಆಕ್ಷನ್ ಇದೆ, ಅದರಲ್ಲೂ ಚುನಾವಣೆ ಹತ್ತಿರ ಬಂತು ಅಂದ್ರೆ ಸಾಕು, ಪ್ರತಿ ಗಲ್ಲಿಯಲ್ಲೂ ಒಂದೊಂದು 'ಆಸ್ಕರ್' ರೇಂಜ್ ಪರ್ಫಾರ್ಮೆನ್ಸ್ ನೋಡಬಹುದು. ಇತ್ತೀಚೆಗೆ ನಡೆದ ಈ "ಬ್ಯಾಂಡೇಜ್ ರಾಣಿ"ಯ ಕಥೆ ಕೇಳಿದ್ರೆ ನೀವು ಅಚ್ಚರಿ ಪಡೋದಂತೂ ಗ್ಯಾರಂಟಿ.

ಸ್ಕ್ರಿಪ್ಟ್ ಉಲ್ಟಾ ಹೊಡೆಯಿತು | Photo Credit: https://x.com/Incognito_qfs
ಸ್ಕ್ರಿಪ್ಟ್ ಉಲ್ಟಾ ಹೊಡೆಯಿತು | Photo Credit: https://x.com/Incognito_qfs

ಸ್ಕ್ರಿಪ್ಟ್ ಸಿದ್ಧವಾಗಿತ್ತು: ಎಂಟ್ರಿ ಕೊಟ್ಟ ನಾಯಕಿ!

ಒಬ್ಬ ಟಿಎಂಸಿ ಕಾರ್ಯಕರ್ತೆ ಸಡನ್ ಆಗಿ ರಂಗಪ್ರವೇಶ ಮಾಡಿದರು. ತಲೆಗೆ ಬಿಳಿ ಬಣ್ಣದ ದಪ್ಪ ಬ್ಯಾಂಡೇಜ್, ಮುಖದಲ್ಲಿ ನೋವಿನ ಎಕ್ಸ್‌ಪ್ರೆಶನ್. ಕ್ಯಾಮೆರಾ ಕಂಡೊಡನೆ ಶುರುವಾಯ್ತು ನೋಡಿ ರೋದನ! "ಅಯ್ಯೋ.. ಈ ಬಿಜೆಪಿ ನಾಯಕರು ನನ್ನ ಮೇಲೆ ಹಲ್ಲೆ ಮಾಡಿದ್ರು, ನನ್ನ ತಲೆ ಒಡೆದ್ರು" ಅಂತ ಆಕೆ ಆರೋಪ ಮಾಡ್ತಿದ್ರೆ, ಸುತ್ತಮುತ್ತಲಿನವರು ನಿಜವೇ ಇರಬೇಕು ಅಂತ ಮರುಕಪಟ್ಟರು.

ಪರಿಶೀಲನೆಗೆ ಇಳಿದ 'ಬಿಜೆಪಿ' ವೈದ್ಯರು!

ಆದರೆ, ಎದುರಾಳಿಗಳು ಸುಮ್ಮನೆ ಬಿಡ್ತಾರಾ? ಈ 'ಬ್ಯಾಂಡೇಜ್ ರಹಸ್ಯ' ಏನು ಅಂತ ತಿಳಿಯಲು ಬಿಜೆಪಿ ಕಾರ್ಯಕರ್ತರು ಮುಂದೆ ಬಂದರು. ಗಲಾಟೆ ನಡುವೆಯೇ ಅವರು ಮಾಡಿದ್ದು ಒಂದೇ ಕೆಲಸ; ಆ ಮಹಿಳೆಯ ತಲೆಗಿದ್ದ ಬ್ಯಾಂಡೇಜ್ ಅನ್ನು ಮೆಲ್ಲನೆ ಬಿಚ್ಚಿದರು.

ಟ್ವಿಸ್ಟ್ ಅಂದ್ರೆ ಇದು: ಬ್ಯಾಂಡೇಜ್ ಬಿಚ್ಚಿದಾಗ ಅಲ್ಲಿ ಕಂಡಿದ್ದು ಗಾಯವಲ್ಲ, ಬದಲಿಗೆ ನೀಟಾಗಿ ಬಾಚಿದ ಕೂದಲು ಮತ್ತು ಸ್ವಚ್ಛವಾದ ಚರ್ಮ! ಒಂದು ಸಣ್ಣ ಗೀಚಿದ ಗುರುತು ಕೂಡ ಅಲ್ಲಿರಲಿಲ್ಲ. ಅಂದರೆ, ಅದೆಲ್ಲವೂ ಕೇವಲ ಸಿಂಪತಿ ಪಡೆಯಲು ಮಾಡಿದ 'ಬಣ್ಣದ ಆಟ' ಎಂದು ಅಲ್ಲಿಗೆ ಸಾಬೀತಾಯಿತು. ಸುಳ್ಳು ಸಿಕ್ಕಿಬಿದ್ದಾಗ ಆ ತಂಡದ ಮುಖ ನೋಡಬೇಕಿತ್ತು!

"ಸುಳ್ಳು ಯಾಕೆ ಹೇಳ್ತೀಯಮ್ಮಾ? ನಾವೇ ನಿಜ ಮಾಡ್ತೀವಿ ತಗೋ!"

ಇಲ್ಲಿಗೆ ಕಥೆ ಮುಗಿಯಬೇಕಿತ್ತು. ಆದರೆ ಅಲ್ಲಿ ನಡೆದ ಮುಂದಿನ ದೃಶ್ಯ ಅಸಲಿ ಕ್ಲೈಮ್ಯಾಕ್ಸ್. "ಅಕ್ಕಾ, ಬರೀ ಬ್ಯಾಂಡೇಜ್ ಹಾಕಿಕೊಂಡ್ರೆ ಜನ ನಂಬಲ್ಲ, ಗಾಯ ಇರಬೇಕು" ಅಂತ ಹೇಳಿದ ಬಿಜೆಪಿ ಕಾರ್ಯಕರ್ತರು, ಆಕೆಗೆ ಸರಿಯಾಗಿ ಎರಡು ಏಟು ಕೊಟ್ಟುಬಿಟ್ಟರು! ಮೊದಲು ಸುಳ್ಳು ಸುಳ್ಳೇ ಬ್ಯಾಂಡೇಜ್ ಹಾಕಿಕೊಂಡಿದ್ದ ಜಾಗದಲ್ಲಿ ಈಗ ನಿಜವಾಗಿಯೂ ಗಾಯವಾಗಿತ್ತು.

"ಈಗ ಹೋಗಿ ಜನರಿಗೆ ತೋರಿಸು, ಈಗ ಜನ ನಿನ್ನನ್ನು ನಂಬ್ತಾರೆ" ಅಂತ ಹೇಳಿ ಅವರು ಕಳುಹಿಸಿಕೊಟ್ಟಾಗ, ಆ ಕಾರ್ಯಕರ್ತೆಗಾದ ಪರಿಸ್ಥಿತಿ ಹೇಳತೀರದು.

Latest News