Apr 14, 2026 Languages : ಕನ್ನಡ | English

ಬೆಡ್ ಬಾಕ್ಸ್ ಒಳಗಡೆ ತಾಯಿಯ ಕೊಳೆತ ಮೃತದೇಹ - ಮನೆಗೆ ಬಂದ ಮಕ್ಕಳಿಗೆ ಕಾದಿತ್ತು ಘೋರ ಆಘಾತ; ಪೊಲೀಸರೇ ಬೆಚ್ಚಿದ ಘಟನೆ!!

ಕ್ರೈಂ ಲೋಕದ ಸುದ್ದಿಗಳು ಅಂದ್ರೆ ಕೇಳೋಕೆ ಭಯ ಆಗುತ್ತೆ. ಇವತ್ತು ಅಂತಹದ್ದೇ ಒಂದು ಘೋರ ಘಟನೆ ಬಗ್ಗೆ ನಾವು ಹೇಳ್ತಿದ್ದೇವೆ. ಹತ್ತತ್ತು ದಿನಗಳಿಂದ ತಾಯಿಯ ಫೋನ್ ಸ್ವಿಚ್ಡ್ ಆಫ್ ಆಗಿತ್ತು ಅಂತ ಹುಡುಕಿಕೊಂಡು ಮನೆಗೆ ಬಂದ ಮಕ್ಕಳಿಗೆ, ಬೆಡ್ ಬಾಕ್ಸ್ ಒಳಗೆ ತಮ್ಮ ತಾಯಿಯ ಕೊಳೆತ ಶ*ವ ಸಿಕ್ಕಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಈಗ ಇಡೀ ರಾಜ್ಯವನ್ನೇ ನಡುಗಿಸಿದೆ.

ಸಾಗರ್ ಜಿಲ್ಲೆ ನಡುಗಿಸಿದ ಬೆಡ್ ಬಾಕ್ಸ್ ಕೊ*ಲೆ; | Photo Credit: https://x.com/HateDetectors
ಸಾಗರ್ ಜಿಲ್ಲೆ ನಡುಗಿಸಿದ ಬೆಡ್ ಬಾಕ್ಸ್ ಕೊ*ಲೆ; | Photo Credit: https://x.com/HateDetectors

ಸಾಗರ್ ಜಿಲ್ಲೆಯ ಸಹೋದರ ರೈ ವಾರ್ಡ್ ನಿವಾಸಿ ಮಮತಾ ಅಹಿರ್ವಾರ್ (45) ಎನ್ನುವವರು ಈ ಕೊ*ಲೆಯಾದ ದುರ್ದೈವಿ. ಮಮತಾ ಅವರು ವೃತ್ತಿಯಲ್ಲಿ ಡ್ಯಾನ್ಸರ್ ಆಗಿದ್ದರು, ಮದುವೆ ಮತ್ತು ಜಾತ್ರೆಗಳಲ್ಲಿ ಡ್ಯಾನ್ಸ್ ಮಾಡಿ ಜೀವನ ಸಾಗಿಸುತ್ತಿದ್ದರು. ಸುಮಾರು 15 ವರ್ಷಗಳ ಹಿಂದೆಯೇ ಇವರ ಪತಿ ತೀರಿಹೋಗಿದ್ದರು. ಕಳೆದ ಹತ್ತು ದಿನಗಳಿಂದ ಮಮತಾ ಅವರ ಮಕ್ಕಳಾದ ದೇವ್ ಮತ್ತು ಮುಸ್ಕಾನ್ ತಮ್ಮ ಅಕ್ಕನ ಮನೆಗೆ ಕೆಲಸ ಹುಡುಕಲು ಅಂತ ವಿದಿಶಾಗೆ ಹೋಗಿದ್ದರು ಎನ್ನಲಾಗಿದೆ. 

ಕಳೆದ ಒಂದು ವಾರದಿಂದ ತಾಯಿಗೆ ಫೋನ್ ಮಾಡಿದ್ರೆ ಸ್ವಿಚ್ಡ್ ಆಫ್ ಬರ್ತಿತ್ತು. ಏಪ್ರಿಲ್ 5ರ ನಂತರ ತಾಯಿಯ ಜೊತೆ ಯಾವುದೇ ಮಾತುಕತೆ ಆಗಿರಲಿಲ್ಲ. ಗಾಬರಿಯಾದ ಮಕ್ಕಳು ಭಾನುವಾರ ವಿದಿಶಾದಿಂದ ಸಾಗರ್‌ನಲ್ಲಿರುವ ತಮ್ಮ ಮನೆಗೆ ವಾಪಸ್ ಬಂದಿದ್ದಾರೆ.

ಮಕ್ಕಳು ಮನೆಗೆ ಬಂದಾಗ ಬಾಗಿಲು ಹೊರಗಡೆಯಿಂದ ಲಾಕ್ ಆಗಿತ್ತು. ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋದಾಗ ಮನೆಯೊಳಗೆ ವಿಪರೀತವಾದ ದುರ್ವಾಸನೆ ಬರುತ್ತಿತ್ತು. ಇಡೀ ಮನೆ ಹುಡುಕಾಡಿದಾಗ ಸಂಶಯ ಬಂದು ಬೆಡ್ ಬಾಕ್ಸ್ (Bed Box) ತೆರೆದು ನೋಡಿದ್ದಾರೆ. ಅಲ್ಲಿ ಕಂಡ ದೃಶ್ಯವನ್ನ ನೋಡಿ ಮಕ್ಕಳು ಕಿರುಚಾಡಿದ್ದಾರೆ. ಮಮತಾ ಅವರ ಶ*ವ ಅರ್ಧದಷ್ಟು ಕೊಳೆತ ಸ್ಥಿತಿಯಲ್ಲಿ ಆ ಬೆಡ್ ಬಾಕ್ಸ್ ಒಳಗಡೆ ಬಚ್ಚಿಡಲಾಗಿತ್ತು. 

ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮಮತಾ ಅವರನ್ನ ಕನಿಷ್ಠ 5-6 ದಿನಗಳ ಹಿಂದೆಯೇ ಕೊ*ಲೆ ಮಾಡಿ ಬೆಡ್ ಬಾಕ್ಸ್ ಒಳಗೆ ಹಾಕಿರಬಹುದು ಎಂದು ಶಂಕಿಸಲಾಗಿದೆ. ಮನೆಯ ಬಾಗಿಲು ಹೊರಗಡೆಯಿಂದ ಲಾಕ್ ಆಗಿರೋದ್ರಿಂದ, ಕೊ*ಲೆಗಾರ ಮಮತಾ ಅವರಿಗೆ ಪರಿಚಯ ಇರೋನೇ ಇರಬಹುದು ಎನ್ನುವ ಸಂಶಯ ಪೊಲೀಸರಿಗಿದೆ. ಸದ್ಯಕ್ಕೆ ಕೊ*ಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಅಸ್ಥಾನ ಅವರು, "ಇದು ಮೇಲ್ನೋಟಕ್ಕೆ ಕೊ*ಲೆಯಂತೆಯೇ ಕಾಣುತ್ತಿದೆ. ಶ*ವ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿನ ಸಮಯ ಮತ್ತು ಕಾರಣ ತಿಳಿಯಲಿದೆ" ಎಂದು ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರು ಮಮತಾ ಅವರ ಫೋನ್ ಕಾಲ್ ರೆಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದು, ಅವರು ಕೊನೆಯದಾಗಿ ಯಾರ ಜೊತೆ ಮಾತನಾಡಿದ್ದರು ಎನ್ನುವುದರ ಮೇಲೆ ತನಿಖೆ ನಡೆಸುತ್ತಿದ್ದಾರೆ.

ಇವತ್ತಿನ ಕಾಲದಲ್ಲಿ ಒಂಟಿಯಾಗಿರುವ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ. ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮಮತಾ ಅವರಿಗೆ ಯಾರಾದರೂ ಶತ್ರುಗಳಿದ್ದರಾ? ಅಥವಾ ಹಣಕಾಸಿನ ವಿಚಾರಕ್ಕೆ ಈ ಕೊ*ಲೆ ನಡೆದಿದೆಯಾ? ಅನ್ನೋದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಕೈಗೆ ಬಂದ ಮಕ್ಕಳು ತಾಯಿಯನ್ನ ಈ ಸ್ಥಿತಿಯಲ್ಲಿ ನೋಡಿರೋದು ನಿಜಕ್ಕೂ ಕರುಳು ಹಿಂಡುವಂತಿದೆ.

ಕೊ*ಲೆಗಾರ ಎಷ್ಟೇ ಬುದ್ಧಿವಂತನಾಗಿದ್ದರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ. ಸದ್ಯದಲ್ಲೇ ಈ ಕೇಸ್ ಸರಿಹೋಗುತ್ತೆ ಅಂತ ನಂಬೋಣ. ಈ ಘಟನೆಯ ಬಗ್ಗೆ ನಿಮಗೇನನಿಸುತ್ತೆ? ಇಂತಹ ಘಟನೆಗಳು ನಡೆಯದಂತೆ ತಡೆಯೋದು ಹೇಗೆ? ಕಮೆಂಟ್ ಮಾಡಿ ತಿಳಿಸಿ. 

Latest News