ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿಯಾಗಿ ಅಧಿಕಾರಕ್ಕೆ ಬಂದು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದೇ ತಡ, ಆಗಲೇ ಆಡಳಿತ ಪಕ್ಷದಲ್ಲಿ ಖಾತೆ ಹಂಚಿಕೆಯ ಕಿಚ್ಚು ಜೋರಾಗಿ ಹೊತ್ತಿಕೊಂಡಿದೆ. ಹೊಸ ಸಂಪುಟದ ಸಚಿವರ ನಡುವೆ ಈಗ ಪವರ್‌ಫುಲ್ ಖಾತೆಗಳಿಗಾಗಿ ಒಳಗೊಳಗೆ ದೊಡ್ಡ ಫೈಟ್ ಆರಂಭವಾಗಿದ್ದು, ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ತಮಗೆ 'ಬೆಂಗಳೂರು ನಗರಾಭಿವೃದ್ಧಿ' (Bengaluru Development) ಖಾತೆಯೇ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಅಂದುಕೊಂಡ ಖಾತೆ ಸಿಗದಿದ್ದಕ್ಕೆ ಫುಲ್ ಬೇಸರಗೊಂಡಿರುವ ಅವರು, ಸಚಿವ ಸ್ಥಾನಕ್ಕೆ ರಿಸೈನ್ ಮಾಡಲು ರೆಡಿಯಾಗಿದ್ದಾರೆ ಎನ್ನುವ ಸ್ಫೋಟಕ ಸುದ್ದಿ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಅಸಮಾಧಾನಕ್ಕೆ ಕಾರಣವಾದ 'ಜಲಸಂಪನ್ಮೂಲ' ಖಾತೆ
ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ಹಾಗೂ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರ ರಾಜಕಾರಣವನ್ನು ಬೆರಳು ತುದಿಯಲ್ಲಿ ಇಟ್ಟುಕೊಂಡಿರುವವರು. ಹಾಗಾಗಿ ಮೊದಲಿನಿಂದಲೂ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆಯೇ ಕಣ್ಣಿಟ್ಟಿದ್ದರು. ಆದರೆ, ಲೇಟೆಸ್ಟ್ ಆಗಿ ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೊಡದೆ 'ಜಲಸಂಪನ್ಮೂಲ' (Water Resources) ಖಾತೆಯನ್ನು ಹಂಚಿಕೆ ಮಾಡಲು ನಿರ್ಧಾರ ಮಾಡಲಾಗಿದೆಯಂತೆ. ಇದು ಹಿರಿಯ ಸಚಿವರ ಕೆಂಡಾಮಂಡಲಕ್ಕೆ ಕಾರಣವಾಗಿದೆ.
ಖಾತೆ ಹಂಚಿಕೆಯ ಈ ಲಿಸ್ಟ್ ತಿಳಿಯುತ್ತಿದ್ದಂತೆ ಅಲರ್ಟ್ ಆದ ರಾಮಲಿಂಗಾರೆಡ್ಡಿ ಅವರು, ಇಂದು ನೇರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. "ಕೊಟ್ಟರೆ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ಕೊಡಿ, ಇಲ್ಲದಿದ್ದರೆ ನನಗೆ ನಿಮ್ಮ ಸಚಿವ ಸ್ಥಾನವೇ ಬೇಡ" ಎಂದು ಮುಖದ ಮುಖದ ಮುಂದೆಯೇ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ, ಅವರು ಈಗಾಗಲೇ ತಮ್ಮ ಸಚಿವ ಸ್ಥಾನದ ರಾಜೀನಾಮೆ ಪತ್ರವನ್ನು ಕೂಡ ಸಿದ್ಧಪಡಿಸಿಕೊಂಡು ಹೋಗಿದ್ದರು ಎಂಬ ಬಿಸಿ ಬಿಸಿ ಸುದ್ದಿ ಸದ್ಯ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಡಿಕೆಶಿ ಕೊಟ್ಟಿದ್ದ ಹಳೇ ಮಾತು ಏನಾಗಿತ್ತು? ಫ್ಲ್ಯಾಶ್‌ಬ್ಯಾಕ್ ಇಲ್ಲಿದೆ
ರಾಮಲಿಂಗಾರೆಡ್ಡಿ ಅವರು ಈ ರೇಂಜ್‌ಗೆ ಪಟ್ಟು ಹಿಡಿಯುವುದರ ಹಿಂದೆ ಒಂದು ದೊಡ್ಡ ಫ್ಲ್ಯಾಶ್‌ಬ್ಯಾಕ್ ಕಥೆಯೇ ಇದೆ. ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತಿದ್ದ ಸಂದರ್ಭದಲ್ಲೂ ಹೈಕಮಾಂಡ್ ನಾಯಕರು ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಲು ಬಹುತೇಕ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ಆಗ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರವೇಶಿಸಿ ರಾಮಲಿಂಗಾರೆಡ್ಡಿ ಅವರ ಮನವೊಲಿಸಿದ್ದರು.
"ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಾನು ಇಟ್ಟುಕೊಳ್ಳುತ್ತೇನೆ. ಮುಂದೆ ನಾನು ಮುಖ್ಯಮಂತ್ರಿಯಾದ ನಂತರ ಈ ಪ್ರಮುಖ ಖಾತೆಯನ್ನು ಖಂಡಿತ ನಿಮಗೇ ಬಿಟ್ಟುಕೊಡುತ್ತೇನೆ" ಎಂದು ಡಿಕೆಶಿ ಅವರು ರಾಮಲಿಂಗಾರೆಡ್ಡಿ ಅವರಿಗೆ ಖುದ್ದಾಗಿ ಮಾತು ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಈಗ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯ ಗದ್ದುಗೆ ಏರಿದ್ದರೂ, ತಮಗೆ ಮಾತು ಕೊಟ್ಟಂತೆ ಬೆಂಗಳೂರು ಖಾತೆ ನೀಡದೆ ಜಲಸಂಪನ್ಮೂಲ ಖಾತೆ ನೀಡುತ್ತಿರುವುದು ರಾಮಲಿಂಗಾರೆಡ್ಡಿ ಅವರ ಹಳೇ ಬೇಸರವನ್ನು ಮತ್ತೆ ಕೆರಳಿಸುವಂತೆ ಮಾಡಿದೆ.
ಸಚಿವ ಸ್ಥಾನವೇ ಬೇಡ, ಸಾಮಾನ್ಯ ಕಾರ್ಯಕರ್ತನಾಗಿ ಇರ್ತೇನೆ
ಡಿಕೆಶಿ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಮಲಿಂಗಾರೆಡ್ಡಿ ಅವರು, "ನನಗೆ ಯಾವುದೇ ಸಚಿವ ಸ್ಥಾನದ ಹಪಾಹಪಿತನ ಇಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ನನಗೆ ಸಚಿವ ಗಿರಿಯೇ ಬೇಡ. ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಉಳಿದು ಜನರ ಕೆಲಸ ಮಾಡುತ್ತೇನೆ" ಎಂದು ಸಿಎಂ ಶಿವಕುಮಾರ್ ಅವರಿಗೆ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ತಮ್ಮ ಸಚಿವ ಸ್ಥಾನದ ರಾಜೀನಾಮೆ ಪತ್ರವನ್ನು ಅವರ ಕೈಗೆ ಇಟ್ಟು ಬಂದಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಸಖತ್ ಚರ್ಚೆಯಾಗುತ್ತಿದೆ.
ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ 24 ಗಂಟೆ ಕಳೆದಿಲ್ಲ, ಅದ ಆಗಲೇ ಹಿರಿಯ ನಾಯಕರೊಬ್ಬರು ಈ ರೀತಿ ಬಂಡಾಯದ ಬಾವುಟ ಹಾರಿಸಿ ರಾಜೀನಾಮೆಗೆ ಮುಂದಾಗಿರುವುದು ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹೈವೋಲ್ಟೇಜ್ ಖಾತೆ ಯುದ್ಧವನ್ನು ಸಿಎಂ ಹೇಗೆ ಶಮನ ಮಾಡಲಿದ್ದಾರೆ, ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನ ಪಡಿಸಲು ಯಾವ ಹೊಸ ಫಾರ್ಮುಲಾ ಬಳಸಲಿದ್ದಾರೆ ಎಂದು ಇಡೀ ಕರ್ನಾಟಕ ಕುತೂಹಲದಿಂದ ನೋಡ್ತಿದೆ.