ನಮ್ಮ ಜೀವನದಲ್ಲಿ ಎಷ್ಟೇ ಜನ ಬರಲಿ, ಹೋಗಲಿ.. ಆದರೆ ಒಬ್ಬ ವ್ಯಕ್ತಿ ಮಾತ್ರ ಯಾವಾಗಲೂ ನಮ್ಮ ಜೊತೆಗಿರುತ್ತಾರೆ. ನಮ್ಮ ಕಷ್ಟಕ್ಕೆ ಹೆಗಲಾಗೋದು ಅವರೇ, ನಮ್ಮ ಕಾಲೆಳೆದು ಕಾಟ ಕೊಡೋದು ಅವರೇ! ಅವರೇ ನಮ್ಮ 'ಸಹೋದರರು'. ಅಪ್ಪ-ಅಮ್ಮನ ಹತ್ತಿರ ಬಯಸೋಕೆ ಆಗದಿದ್ದಾಗ, ಫ್ರೆಂಡ್ಸ್ ಹತ್ತಿರ ಹೇಳಿಕೊಳ್ಳೋಕೆ ಆಗದಿದ್ದಾಗ ನಮಗೆ ನೆನಪಾಗೋದೇ ಅಣ್ಣ ಅಥವಾ ತಮ್ಮ. ಇಂತಹ ಅದ್ಭುತ ಬಾಂಧವ್ಯವನ್ನು ಸೆಲೆಬ್ರೇಟ್ ಮಾಡೋದಕ್ಕೆ ಅಂತಾನೇ 'ನ್ಯಾಷನಲ್ ಬ್ರದರ್ಸ್ ಡೇ' (National Brother's Day) ಬಂದಿದೆ.
ಪ್ರತಿ ವರ್ಷ ಮೇ 24 ರಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2026 ರಲ್ಲಿ, ಮೇ 24 ಭಾನುವಾರ ಬಂದಿದೆ. ವೀಕೆಂಡ್ ಆಗಿರೋದ್ರಿಂದ ನಿಮ್ಮ ಅಣ್ಣ ಅಥವಾ ತಮ್ಮನ ಜೊತೆ ಟ್ರಿಪ್ ಹೋಗೋಕೋ ಅಥವಾ ಮನೆಯಲ್ಲೇ ಪಾರ್ಟಿ ಮಾಡೋಕೋ ಒಳ್ಳೆ ಚಾನ್ಸ್ ಸಿಕ್ಕಂತಾಗಿದೆ.
ಈ ಬ್ರದರ್ಸ್ ಡೇ ಆಚರಣೆ ಶುರುವಾಗಿದ್ದು ಅಮೆರಿಕಾದಲ್ಲಿ. 2005 ರಲ್ಲಿ ಅಲಬಾಮಾದ ಸಿ. ಡೇನಿಯಲ್ ರೋಡ್ಸ್ ಎಂಬುವವರು ಈ ದಿನವನ್ನು ಮೊದಲ ಬಾರಿಗೆ ಆಚರಿಸಲು ಕರೆ ನೀಡಿದರು. ಅಣ್ಣ-ತಮ್ಮಂದಿರ ನಡುವಿನ ಪ್ರೀತಿ, ಕಿರಿಕಿರಿ ಮತ್ತು ಕೇರಿಂಗ್ ಅನ್ನು ಜಗತ್ತಿಗೆ ತೋರಿಸುವುದು ಅವರ ಉದ್ದೇಶವಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರಪಂಚದಾದ್ಯಂತ ಈ ದಿನ ಸಖತ್ ಫೇಮಸ್ ಆಗಿದೆ.
ಸಹೋದರ ಅಂದ್ರೆ ಬರೀ ರಕ್ತದ ಸಂಬಂಧ ಮಾತ್ರವಲ್ಲ, ಅವನು ನಮ್ಮ ಮೊದಲ ಬೆಸ್ಟ್ ಫ್ರೆಂಡ್.
ಕ್ರೈಮ್ ಪಾರ್ಟ್ನರ್: ಮನೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಅಪ್ಪನ ಏಟಿನಿಂದ ತಪ್ಪಿಸೋದು ಅಥವಾ ಜೊತೆಯಾಗಿ ಪ್ಲಾನ್ ಮಾಡೋದು ಇವರೇ.
ಬೆನ್ನೆಲುಬು: ಹೊರಗಡೆ ಯಾರಾದರೂ ನಮಗೆ ಬೈದರೆ ಅಥವಾ ತೊಂದರೆ ಕೊಟ್ಟರೆ ಮೊದಲು ಎದೆಕೊಟ್ಟು ನಿಲ್ಲೋದು ನಮ್ಮ ಅಣ್ಣ ಅಥವಾ ತಮ್ಮ.
ಟೆನ್ಷನ್ ಫ್ರೀ: ನಮಗೆ 8 ವರ್ಷ ಇರಲಿ ಅಥವಾ 80 ವರ್ಷ, ಅವರ ಮುಂದೆ ಹೋದಾಗ ನಾವೆಲ್ಲಾ ಮರೆತು ಮತ್ತೆ ಸಣ್ಣ ಮಕ್ಕಳಾಗಿ ಬಿಡುತ್ತೇವೆ. ದಿನಗಳ ಕಾಲ ಮಾತನಾಡದಿದ್ದರೂ, ಸಿಕ್ಕಾಗ ಮಾತ್ರ ಅದೇ ಹಳೇ ಖದರ್ ಇರುತ್ತದೆ.
ನಿಮ್ಮ ಸಹೋದರನಿಗೆ ಕಳುಹಿಸಲು ಇಲ್ಲಿವೆ ಸೂಪರ್ ಶುಭಾಶಯಗಳು:
ನೀವು ಜಾಸ್ತಿ ಎಮೋಷನಲ್ ಆಗಿ ಮಾತಾಡೋರಲ್ಲ ಅಂದ್ರೂ ಪರವಾಗಿಲ್ಲ, ಈ ಕೆಳಗಿನ ಯಾವುದಾದರೂ ಒಂದು ಮೆಸೇಜ್ ಕಳುಹಿಸಿ ಅವರ ಮುಖದಲ್ಲಿ ನಗು ತರಿಸಿ:
"ಹ್ಯಾಪಿ ಬ್ರದರ್ಸ್ ಡೇ ಮಗನೇ! ನೀನು ನನ್ನ ಅಣ್ಣ ಮಾತ್ರವಲ್ಲ, ನನ್ನ ಲೈಫ್‌ನ ಬೆಸ್ಟ್ ಫ್ರೆಂಡ್. ಈ ಕಾಟ ಹೀಗೇ ಮುಂದುವರಿಯಲಿ!"
"ನನ್ನ ಎಲ್ಲಾ ಸೀಕ್ರೆಟ್ಸ್ ಗೊತ್ತಿದ್ರೂ ಇನ್ನು ನನ್ನ ಜೊತೆಗಿದ್ದೀಯಲ್ಲ, ಅಷ್ಟೇ ಸಾಕು! ಜಗತ್ತಿನ ಬೆಸ್ಟ್ ಬ್ರದರ್‌ಗೆ ಶುಭಾಶಯಗಳು."
"ಬಾಲ್ಯದಲ್ಲಿ ಜಗಳ ಆಡೋದ್ರಿಂದ ಹಿಡಿದು, ಈಗ ದೊಡ್ಡವರಾದ ಮೇಲೆ ಕನಸುಗಳನ್ನು ಹಂಚಿಕೊಳ್ಳುವವರೆಗೆ.. ನನ್ನ ಜೊತೆಗಿದ್ದಕ್ಕೆ ಥ್ಯಾಂಕ್ಸ್ ಬ್ರೋ!"
"ನನ್ನ ಹೀರೋ, ನನ್ನ ಸಪೋರ್ಟ್ ಸಿಸ್ಟಮ್.. ನಿನಗೆ ರಾಷ್ಟ್ರೀಯ ಸಹೋದರರ ದಿನದ ಹಾರ್ದಿಕ ಶುಭಾಶಯಗಳು."
"ಯಾವಾಗ್ಲೂ ನನ್ನ ಕಾಲೆಳಿತಾ ಇರು, ಆದ್ರೆ ಯಾವತ್ತೂ ನನ್ನ ಕೈ ಬಿಡಬೇಡ. ಲವ್ ಯು ಬ್ರದರ್!"
ಈ ದಿನವನ್ನು ಹೇಗೆ ಸ್ಪೆಷಲ್ ಮಾಡಬಹುದು?
ಹಳೇ ಫೋಟೋ ಶೇರ್ ಮಾಡಿ: ನೀವು ಸಣ್ಣವರಿದ್ದಾಗ ತಗಿಸಿದ ಯಾವುದಾದರೂ ಕಾಮಿಡಿ ಫೋಟೋ ಇದ್ರೆ ಅದನ್ನು ಇನ್‌ಸ್ಟಾಗ್ರಾಮ್ ಅಥವಾ ವಾಟ್ಸಾಪ್ ಸ್ಟೇಟಸ್ ಹಾಕಿ ಸರ್ಪ್ರೈಸ್ ಕೊಡಿ.
ಒಂದು ಸಣ್ಣ ಗಿಫ್ಟ್: ಅವರಿಗೆ ಇಷ್ಟವಾದ ವಾಚ್, ಟೀ ಶರ್ಟ್ ಅಥವಾ ಬರೀ ಒಂದು ಚಾಕೊಲೇಟ್ ಕೊಟ್ಟರೂ ಅವರಿಗೆ ಖುಷಿಯಾಗುತ್ತೆ.
ಫೇವರೆಟ್ ಫುಡ್: ಹೊರಗಡೆ ಹೋಗಿ ಅವರ ಇಷ್ಟದ ಹೋಟೆಲ್‌ನಲ್ಲಿ ಊಟ ಮಾಡಿಸಿ ಅಥವಾ ಮನೆಯಲ್ಲೇ ಏನಾದ್ರೂ ಸ್ಪೆಷಲ್ ಅಡುಗೆ ಮಾಡಿ.