Mar 26, 2026 Languages : ಕನ್ನಡ | English

ಹೆಣ್ಣು ಮಕ್ಕಳ ಜೊತೆ ಕೆಟ್ಟದಾಗಿ ಆಟವಾಡಿದ್ರೆ ಅಷ್ಟೇ ಕಥೆ - ಇಲ್ಲಿದೆ ನೋಡಿ ಕಾಮುಕನ ಅಸಲಿ ಚಿಕೆತ್ಸೆ ವಿಡಿಯೋ!!

ಸಮಾಜದಲ್ಲಿ ಜ್ಯೋತಿಷ್ಯ ಅಂದ್ರೆ ಒಂದು ನಂಬಿಕೆ. ಆದ್ರೆ ಅದೇ ನಂಬಿಕೆಯನ್ನ ಬಂಡವಾಳ ಮಾಡ್ಕೊಂಡು ಕೆಟ್ಟ ಕೆಲಸ ಮಾಡೋ ನಾಲಾಯಕ್ ಮಂದಿಗೂ ಈ ಕಾಲದಲ್ಲಿ ಕೊರತೆಯಿಲ್ಲ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಅಂತಹದ್ದೇ ಒಬ್ಬ ಕಾಮುಕ ಜ್ಯೋತಿಷಿ ಅಶೋಕ್ ಖರಾತ್ ಎಂಬುವವನು ಒಬ್ಬ ಮಹಿಳೆಯ ಅಸಹಾಯಕತೆಯನ್ನ ದುರುಪಯೋಗಪಡಿಸಿಕೊಂಡು ಅವಳನ್ನ ಶೋಷಿಸಿದ್ದಾನೆ. ಆದ್ರೆ ಈ ಕೇಸ್‌ನಲ್ಲಿ ನಾಸಿಕ್ ಪೊಲೀಸರು ನೀಡಿರುವ ಎನ್ನಲಾದ 'ಸ್ಪೆಷಲ್ ಟ್ರೀಟ್ಮೆಂಟ್' ಈಗ ಇಡೀ ದೇಶಾದ್ಯಂತ ಸಖತ್ ಸೌಂಡ್ ಮಾಡ್ತಿದೆ. 

ಸೋಶಿಯಲ್ ಮೀಡಿಯಾದಲ್ಲಿ ವೈರಲ್; | Photo Credit: https://x.com/ShrutiDhore
ಸೋಶಿಯಲ್ ಮೀಡಿಯಾದಲ್ಲಿ ವೈರಲ್; | Photo Credit: https://x.com/ShrutiDhore

ಈ ಅಶೋಕ್ ಖರಾತ್ ಅನ್ನೋ ಜ್ಯೋತಿಷಿ, ತನ್ನ ಹತ್ತಿರ ಬಂದ ಮಹಿಳೆಯೊಬ್ಬರಿಗೆ ಪರಿಹಾರದ ಹೆಸರಲ್ಲಿ ನಂಬಿಸಿ, ನಂತರ ಅವಳನ್ನ ಲೈಂ*ಗಿಕವಾಗಿ ಶೋಷಿಸಿದ್ದಾನೆ ಅಂತ ದೂರು ದಾಖಲಾಗಿತ್ತು. ಭಕ್ತರ ನಂಬಿಕೆಯನ್ನ ಮಣ್ಣುಪಾಲು ಮಾಡಿ, ಒಬ್ಬ ಹೆಣ್ಣಿನ ಜೀವನದ ಜೊತೆ ಆಟವಾಡಿದ ಈತನ ವಿರುದ್ಧ ನಾಸಿಕ್ ಪೊಲೀಸರು ಕೇಸ್ ದಾಖಲಿಸಿಕೊಂಡು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿತ್ತು. 

ಈಗ ಲೇಟೆಸ್ಟ್ ಆಗಿ ಒಂದು ವಿಡಿಯೋ ಹೊರಬಂದಿದೆ. ಅದರಲ್ಲಿ ಈ ಜ್ಯೋತಿಷಿ ಅಶೋಕ್ ಖರಾತ್‌ನ ಸ್ಥಿತಿ ನೋಡಿದ್ರೆ ಎಂತವರಿಗಾದ್ರೂ "ಈ ಕೃತ್ಯ ಎಸಗುವ ಇಂತಹವರಿಗೆ ಹೀಗೇ ಆಗಬೇಕು" ಅನಿಸುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನಾಸಿಕ್ ಪೊಲೀಸರು ಈತನನ್ನ ಅರೆಸ್ಟ್ ಮಾಡಿ ಕರ್ಕೊಂಡು ಹೋಗುವಾಗ ಅಥವಾ ಎನ್‌ಕೌಂಟರ್ ತರಹದ ಸನ್ನಿವೇಶದಲ್ಲಿ ಆತನ ಎರಡೂ ಕಾಲುಗಳು ಮತ್ತು ಕೈಯನ್ನ ಮುರಿದು ಹಾಕಿದ್ದಾರೆ ಎನ್ನಲಾಗ್ತಿದೆ. 

ವಿಡಿಯೋದಲ್ಲಿ ಆತ ನಡೆಯೋಕೆ ಆಗದೆ ಒದ್ದಾಡ್ತಿರೋದನ್ನ ನೋಡಿ ಸಾರ್ವಜನಿಕರು ಪೊಲೀಸರ ಈ ಕೆಲಸಕ್ಕೆ ಫುಲ್ ಖುಷಿಯಾಗಿದ್ದಾರೆ. "ಹೆಣ್ಣು ಮಕ್ಕಳ ಜೊತೆ ಆಟವಾಡುವವರಿಗೆ ಇಂತಹದ್ದೇ ಪಾಠ ಕಲಿಸಬೇಕು" ಅನ್ನೋದು ಜನರ ಅಭಿಪ್ರಾಯ.

ಅಶೋಕ್ ಖರಾತ್ ಪೊಲೀಸರ ವಶದಲ್ಲಿ ಕುಂಟುತ್ತಾ ಸಾಗುತ್ತಿರುವ ಈ ಹೊಸ ವಿಡಿಯೋ ಈಗ ಫುಲ್ ವೈರಲ್ ಆಗಿದೆ. ನೆಟ್ಟಿಗರು ನಾಸಿಕ್ ಪೊಲೀಸರಿಗೆ "ಸಿಂಗಂ" ಸ್ಟೈಲ್ ಸಲ್ಯೂಟ್ ಹೊಡಿತಿದ್ದಾರೆ. "ಜೈಲು, ಕೋರ್ಟ್ ಅಂತ ವರ್ಷಗಟ್ಟಲೆ ಅಲೆಯೋ ಬದಲು, ಈ ತರಹದ ಇನ್ಸ್ಟಂಟ್ ನ್ಯಾಯ ಸಿಕ್ಕರೆ ಮಾತ್ರ ಇಂತಹ ಕ್ರಿಮಿನಲ್‌ಗಳಿಗೆ ಭಯ ಇರುತ್ತೆ" ಅಂತ ಜನ ಕಾಮೆಂಟ್ ಮಾಡ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಪೊಲೀಸರು ಜೀರೋ ಟಾಲರೆನ್ಸ್ (Zero Tolerance) ನೀತಿಯನ್ನ ಅನುಸರಿಸುತ್ತಿದ್ದಾರೆ. ಅದರಲ್ಲೂ ಧರ್ಮ ಮತ್ತು ನಂಬಿಕೆಯ ಹೆಸರಲ್ಲಿ ವಂಚನೆ ಮಾಡೋರನ್ನ ಬಿಡೋ ಪ್ರಶ್ನೆಯೇ ಇಲ್ಲ ಅಂತ ತೋರಿಸಿಕೊಟ್ಟಿದ್ದಾರೆ. ಈ ಜ್ಯೋತಿಷಿ ಮಾಡಿರೋ ಕೆಲಸ ಅಕ್ಷಮ್ಯ ಅಪರಾಧ, ಹಾಗಾಗಿ ಆತನಿಗೆ ಸಿಕ್ಕಿರೋ ಈ 'ಗಿಫ್ಟ್' ಸಮಾಜದ ಇತರ ವಂಚಕರಿಗೂ ಒಂದು ಎಚ್ಚರಿಕೆ ಗಂಟೆಯಾಗಿದೆ. 

Latest News