ಇತ್ತೀಚಿಗೆ ಪ್ರೀತಿ ಪ್ರೇಮ ವಿಚಾರಕ್ಕೆ ಅಹಿತಹಕರ ಘಟನೆ ನಡೆಯುತ್ತಲೇ ಇವೆ. ಪ್ರಾಣಗಳು ಸಹ ಹೋಗುತ್ತಲೇ ಇವೆ. ಹೆಣ್ಣುಮಕ್ಕಳು ತುಂಬಾನೇ ಕೆಲವು ವಿಷಯಗಳನ್ನು ಮನಸ್ಸಿಗೆ ತೆಗದುಕೊಳ್ಳುತ್ತಾರೆ, ಮನೆಯಲ್ಲಿ ಅವರ ವಿರುದ್ಧ ಹೋದಾಗ ಅವರ ನಿರ್ಧಾರಕ್ಕೆ ಒಪ್ಪಿಗೆ ನೀಡದೆ ಇದ್ದಾಗ ಅಥವಾ ಇನ್ನೇನೋ ಕೆಲವು ವಿಷಯಗಳಿಗೆ ದುಡುಕಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತಹದೇ ಒಂದು ಘಟನೆ ಇದೀಗ ಅತ್ತ ನಂಜನಗೂಡಿನಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ ನೋಡಿ. ನಂಜನಗೂಡಿನಲ್ಲಿ ನಡೆದ ಯುವತಿಯ ಜೀವಹಾನಿ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಜೀವಹಾನಿ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣದಲ್ಲಿ ಹಲವು ಮಾಹಿತಿಗಳು ಹೊರಬಂದಿವೆ.
ಈ ಮೃತ ದಿವ್ಯಾ ಹಾಗೂ ಆದಿತ್ಯ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಓದು ಮುಗಿದ ನಂತರ ಮದುವೆಯಾಗುವುದಾಗಿ ಆದಿತ್ಯ ಹೇಳಿದ್ದನಂತೆ. ಆದರೆ, ಯುವತಿಯ ಮದುವೆಗೆ ಪೋಷಕರ ವಿರೋಧ ಮಾತುಗಳು ಕೇಳಿ ಬಂದಿದ್ದವು ಎನ್ನಲಾಗಿದೆ. ಈ ಕುರಿತು ಆದಿತ್ಯ ಆಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾನೆ. ದಿವ್ಯಾ ಮತ್ತು ಆದಿತ್ಯ ಇಬ್ಬರು ಪ್ರೀತಿಸುತ್ತಿದ್ದರೆಂದು ಈ ಯುವಕ ಫೋಟೋಸ್ ಶೇರ್ ಮಾಡಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾನೆ . ದಿವ್ಯಾಳಿಗೆ ವಯಸ್ಸು ಇನ್ನೂ ಚಿಕ್ಕದು, 18 ವರ್ಷದ ಬಳಿಕ ವಿದ್ಯಾಭ್ಯಾಸ ಮುಗಿಸಿ ಮದುವೆಯಾಗುವ ಪ್ಲಾನ್ ಇತ್ತು ಎಂದು ಕೇಳಿಬಂದಿದೆ.
ಹುಡುಗಿ ಮನೆಯಲ್ಲಿ ಬೇರೆಯವರ ಜೊತೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಗಿ ಕೇಳಿ ಬಂದಿದೆ. ಈ ವಿಷಯದ ಬಗ್ಗೆ ಸಿದ್ಧತೆಗಳು ನಮ್ಮ ಮನೆಯಲ್ಲಿ ನಡೆಯುತ್ತಿದ್ದವು ಎಂದು ದಿವ್ಯಾ ಈ ಆದಿತ್ಯನಿಗೆ ಹೇಳಿದ್ದಳು. ಇದರಿಂದಾಗಿ ದಿವ್ಯಾ ಮಾನಸಿಕವಾಗಿ ನೊಂದು ಜೀವಹಾನಿ ಮಾಡಿಕೊಂಡಿದ್ದಾಳಾ ಅಥವಾ ಮನೆಯವರೇ ಏನಾದರೂ ಮಾಡಿದ್ದಾರೆಯೆ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಬೇರೆಯವರ ಜೊತೆ ಮದುವೆ ಮಾಡ್ತಾರೆ ಎಂದು ದಿವ್ಯಾ ಹೇಳುತ್ತಿದ್ದಳು. ಪ್ರಕರಣದ ಆರೋಪಿ ಆದಿತ್ಯ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ಕಾದು ನೋಡಬೇಕು.