ಆಟೋ ಸೀಟಿನ ಕೆಳಗೆ ಅಡಗಿಸಿಟ್ಟಿದ್ದ ರಹಸ್ಯ ಪತ್ರ ಸಿಕ್ಕಿತು - ಅದನ್ನು ಓದಿದ ಯುವತಿ ಶಾಕ್!!

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಬರಬೇಕೆಂದರೆ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಹಗಲಿರಲಿ, ರಾತ್ರಿಯಿರಲಿ ಒಂಟಿಯಾಗಿ ಪ್ರಯಾಣ ಮಾಡುವುದು ಅಂದ್ರೆ ಒಂದು ರೀತಿಯ ಆತಂಕ. ಕ್ಯಾಬ್ ಅಥವಾ ಆಟೋ ಹತ್ತಿದಾಗಲೂ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಭಯ ಇದ್ದೇ ಇರುತ್ತದೆ. ಆದರೆ, ಇಂತಹ ಕಾಲದಲ್ಲೂ ಎಲ್ಲೋ ಒಬ್ಬರು ಒಳ್ಳೆಯವರು ಸಿಕ್ಕಾಗ "ಇನ್ನೂ ಮನುಷ್ಯತ್ವ ಸತ್ತಿಲ್ಲ" ಅನ್ನೋ ಭರವಸೆ ಮೂಡುತ್ತದೆ. ಸದ್ಯ ಅಂತಹದ್ದೇ ಒಂದು ಸಣ್ಣ ಘಟನೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ.

ಮುಂಬೈ ಪೊಲೀಸರಿಗಿಂತಲೂ ಹೆಚ್ಚು ಸೇವೆ ಮಾಡ್ತಿದ್ದಾರೆ ಈ ಆಟೋ ಚಾಲಕ | Photo Credit: https://www.instagram.com/_star._.belt_/
ಮುಂಬೈ ಪೊಲೀಸರಿಗಿಂತಲೂ ಹೆಚ್ಚು ಸೇವೆ ಮಾಡ್ತಿದ್ದಾರೆ ಈ ಆಟೋ ಚಾಲಕ | Photo Credit: https://www.instagram.com/_star._.belt_/

ಮುಂಬೈನ ಆಟೋ ಚಾಲಕನೊಬ್ಬ ತನ್ನ ಆಟೋದ ಸೀಟಿನ ಹಿಂಭಾಗದಲ್ಲಿ ಬರೆಸಿರುವ ಸಾಲುಗಳು ಈಗ ವೈರಲ್ ಆಗಿವೆ. ಅದರಲ್ಲಿ ಏನಿದೆ ಗೊತ್ತಾ? "ನಾನೂ ಒಬ್ಬ ತಂದೆ ಮತ್ತು ಸಹೋದರ. ನನ್ನ ಆಟೋದಲ್ಲಿ ನೀವು ಸುರಕ್ಷಿತವಾಗಿದ್ದೀರಿ, ಯಾವುದೇ ಭಯ ಬೇಡ, ಆರಾಮವಾಗಿ ಕುಳಿತುಕೊಳ್ಳಿ" ಎಂಬ ಮಾತುಗಳು ಅಲ್ಲಿವೆ. ಕೇವಲ ಎರಡು ಸಾಲುಗಳಾದರೂ, ಆ ಆಟೋ ಹತ್ತುವ ಹೆಣ್ಣುಮಕ್ಕಳಿಗೆ ಅದು ನೀಡುವ ಧೈರ್ಯ ಅಷ್ಟಿಷ್ಟಲ್ಲ.

ಉನ್ನತಿ ದೇವಲಿಯಾ ಎಂಬ ಯುವತಿ ಈ ಆಟೋದಲ್ಲಿ ಪ್ರಯಾಣಿಸುವಾಗ ಆ ಬರಹವನ್ನು ನೋಡಿ ಭಾವುಕರಾಗಿದ್ದಾರೆ. ಇಂದಿನ ದಿನಗಳಲ್ಲಿ ಇಂತಹ ಸಣ್ಣ ಕಾಳಜಿಯೇ ಒಂದು ದೊಡ್ಡ 'ಲಕ್ಸುರಿ' ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. "ಎಲ್ಲಾ ಪುರುಷರೂ ಅಪಾಯಕಾರಿಯಲ್ಲ, ಕೆಲವರು ನಮಗೆ ಸುರಕ್ಷಿತ ಭಾವನೆ ಮೂಡಿಸುತ್ತಾರೆ ಎಂಬುದಕ್ಕೆ ಈ ಆಟೋ ಚಾಲಕನೇ ಸಾಕ್ಷಿ" ಎಂದು ಅವರು ಬರೆದುಕೊಂಡಿದ್ದಾರೆ.

ಜನರ ಮೆಚ್ಚುಗೆಯ ಸುರಿಮಳೆ
ಈ ವಿಡಿಯೋ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಜನರನ್ನು ತಲುಪಿದೆ. ಈ ಬಗ್ಗೆ ಕಾಮೆಂಟ್ ಮಾಡಿರುವ ಜನರು, "ಇವರೊಬ್ಬರು ದೊಡ್ಡ ಮನಸ್ಸಿನ ಮನುಷ್ಯ" ಎಂದು ಹೊಗಳಿದ್ದಾರೆ. "ಪ್ರತಿಯೊಬ್ಬ ಆಟೋ ಚಾಲಕನೂ ಇವರಂತೆ ಯೋಚಿಸಿದ್ದರೆ ನಮ್ಮ ಭಾರತ ಎಷ್ಟೋ ಸುಂದರವಾಗಿರುತ್ತಿತ್ತು" ಎಂದು ಇನ್ನು ಕೆಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಕೇವಲ ಹಣ ಮಾಡುವುದೊಂದೇ ಜೀವನವಲ್ಲ, ತನ್ನ ಕೆಲಸದಲ್ಲಿ ಬೇರೆಯವರಿಗೆ ಹೇಗೆ ಧೈರ್ಯ ತುಂಬಬಹುದು ಎಂಬುದನ್ನು ಈ ಆಟೋ ಚಾಲಕ ತೋರಿಸಿಕೊಟ್ಟಿದ್ದಾರೆ. ಇಂತಹ ಪ್ರೀತಿ ಮತ್ತು ಗೌರವ ಪ್ರತಿಯೊಬ್ಬರಿಂದಲೂ ಸಿಕ್ಕರೆ ಹೆಣ್ಣುಮಕ್ಕಳ ಭಯ ದೂರವಾಗುವುದರಲ್ಲಿ ಸಂಶಯವೇ ಇಲ್ಲ.

Latest News