May 5, 2026 Languages : ಕನ್ನಡ | English

ಅಕ್ರಮ ಸಂಬಂಧಕ್ಕೋಸ್ಕರ ಇಂಥಾ ಮಟ್ಟಕ್ಕೆ ಇಳೀತಾರ? ಸತ್ಯ ಮುಚ್ಚಿಡಲು ಮಕ್ಕಳಿಗೆ ಸುಳ್ಳು ಹೇಳಿಕೊಟ್ಟ ಪಾಪಿ ತಂದೆ; ಮಾಡಿದ್ದೆ ಬೇರೆ!!

ಸಂಬಂಧಗಳ ನಡುವೆ ನಂಬಿಕೆ ದ್ರೋಹ ಮತ್ತು ಅಕ್ರಮ ಸಂಬಂಧ ನುಸುಳಿದರೆ ಎಂತಹ ಅನಾಹುತ ಆಗುತ್ತೆ ಅನ್ನೋದಕ್ಕೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಹೆಂಡತಿಯನ್ನು ಅತಿ ಕ್ರೂರವಾಗಿ ಕೊ*ಲೆ ಮಾಡಿರುವ ಘಟನೆ ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಅಕ್ರಮ ಸಂಬಂಧದ ಬೆಲೆ – ಕುಟುಂಬವೇ ನಾಶ!! | Photo Credit: https://x.com/HateDetectors
ಅಕ್ರಮ ಸಂಬಂಧದ ಬೆಲೆ – ಕುಟುಂಬವೇ ನಾಶ!! | Photo Credit: https://x.com/HateDetectors

ಪೇಪರ್ ಕಟರ್‌ನಿಂದ ಕುತ್ತಿಗೆ ಸೀಳಿದ ಪತಿ!

ಈ ಘಟನೆ ನಡೆದಿದ್ದು ಮೀರತ್‌ನ ಲಿಸಾರಿ ಗೇಟ್ ಎಂಬ ಪ್ರದೇಶದಲ್ಲಿ. ಕೌಸರ್ ಎಂಬ ಮಹಿಳೆ ಶುಕ್ರವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲೇ ರಕ್ತದ ಮಡುವಿನಲ್ಲಿ ಶ*ವವಾಗಿ ಪತ್ತೆಯಾಗಿದ್ದರು. ಪೊಲೀಸರು ತನಿಖೆ ನಡೆಸಿದಾಗ ತಿಳಿದುಬಂದ ವಿಷಯ ಏನೆಂದರೆ, ಕೌಸರ್ ಅವರ ಪತಿ ಸಾಕಿಬ್ ಎಂಬಾತನೇ ಈ ಕೊ*ಲೆಗಡುಕ! ಹೆಂಡತಿ ಗಾಢ ನಿದ್ರೆಯಲ್ಲಿದ್ದಾಗ ಸಾಕಿಬ್ ಪೇಪರ್ ಕಟರ್ ಬಳಸಿ ಆಕೆಯ ಕುತ್ತಿಗೆ ಸೀಳಿ ಕೊ*ಲೆ ಮಾಡಿದ್ದಾನೆ.

ಕಳ್ಳತನದ ನಾಟಕ ಆಡಿದ ಕಿರಾತಕ!

ಕೊ*ಲೆ ಮಾಡಿದ ನಂತರ ಸಾಕಿಬ್ ಬಹಳ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿದ್ದ. ಪೊಲೀಸರಿಗೆ ಮತ್ತು ಮನೆಯವರಿಗೆ ಇದು ಕಳ್ಳತನದ ವೇಳೆ ನಡೆದ ಕೊ*ಲೆ ಎಂದು ನಂಬಿಸಲು ಯತ್ನಿಸಿದ್ದ. "ಯಾರೋ ಕಪ್ಪು ಬಟ್ಟೆ ಹಾಕಿಕೊಂಡಿದ್ದ ಅಪರಿಚಿತ ವ್ಯಕ್ತಿ ಬಂದು ಕೊ*ಲೆ ಮಾಡಿ ಪರಾರಿಯಾಗಿದ್ದಾನೆ" ಎಂದು ಕಥೆ ಕಟ್ಟಿದ್ದ. ಅಷ್ಟೇ ಅಲ್ಲದೆ, ತನಗೇನೂ ತಿಳಿಯದಂತೆ ಸುಳ್ಳು ಕಣ್ಣೀರು ಹಾಕಿ ನಾಟಕವಾಡಿದ್ದ.

ಪುಟ್ಟ ಮಕ್ಕಳಿಗೆ ಸುಳ್ಳು ಹೇಳಿಕೊಟ್ಟ ‘ಪಾಪಿ’ ತಂದೆ!

ಈ ಇಡೀ ಘಟನೆಯಲ್ಲಿ ಅತ್ಯಂತ ನೋವಿನ ಸಂಗತಿ ಅಂದ್ರೆ, ಕೊ*ಲೆ ನಡೆದಾಗ ಮನೆಯಲ್ಲಿ ಮೂವರು ಪುಟ್ಟ ಹೆಣ್ಣುಮಕ್ಕಳು ಇದ್ದರು. ಪೊಲೀಸರು ಬಂದಾಗ ಸಾಕಿಬ್ ತನ್ನ ಮಕ್ಕಳಲ್ಲಿ ಒಬ್ಬಳಿಗೆ, "ಮನೆಗೆ ಕಳ್ಳರು ಬಂದು ಅಮ್ಮನನ್ನು ಕೊಂ*ದರು ಅಂತ ಪೊಲೀಸ್ ಅಂಕಲ್ ಬಳಿ ಹೇಳು" ಎಂದು ಬೆದರಿಸಿ ಸುಳ್ಳು ಹೇಳಿಕೊಟ್ಟಿದ್ದ. ತನ್ನ ಸ್ವಂತ ತಾಯಿಯ ಕೊ*ಲೆಯನ್ನು ನೋಡಿದ ಮಕ್ಕಳ ಕೈಯಲ್ಲೇ ಸುಳ್ಳು ಹೇಳಿಸಲು ಈತ ಯತ್ನಿಸಿದ್ದಾನೆ ಎಂದರೆ ಆತನ ಕ್ರೌರ್ಯ ಎಷ್ಟಿರಬಹುದು ನೀವೇ ಯೋಚಿಸಿ.

ಕೊ*ಲೆಗೆ ಅಸಲಿ ಕಾರಣವೇನು?

ಪೊಲೀಸರ ತನಿಖೆಯ ಪ್ರಕಾರ, ಸಾಕಿಬ್‌ಗೆ ಬೇರೊಬ್ಬ ಮಹಿಳೆಯ ಜೊತೆ ಅ*ಕ್ರಮ ಸಂಬಂಧವಿತ್ತು. ಈ ವಿಷಯ ಕೌಸರ್ ಅವರಿಗೆ ತಿಳಿದುಬಂದಿತ್ತು. ಈ ವಿಚಾರವಾಗಿ ದಂಪತಿಗಳ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಹೆಂಡತಿಯ ಕಾಟ ತಪ್ಪಿಸಿಕೊಂಡು ಪ್ರೇಯಸಿಯ ಜೊತೆ ಸುಖವಾಗಿರಲು ಈತ ಈ ಸ್ಕೆಚ್ ಹಾಕಿದ್ದ. ಅಷ್ಟೇ ಅಲ್ಲದೆ, ಈ ಹಿಂದೆ ಕೂಡ ಕೌಸರ್ ಅವರಿಗೆ ಆತ್ಮಹ*ತ್ಯೆ ಮಾಡಿಕೊಳ್ಳುವಂತೆ ಈತ ಪದೇ ಪದೇ ಪ್ರಚೋದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?

ಪೊಲೀಸರು ಸಾಕಿಬ್‌ನನ್ನು ವಿಚಾರಣೆ ನಡೆಸಿದಾಗ ಆತ ಹೇಳುತ್ತಿದ್ದ ಮಾತುಗಳಲ್ಲಿ ಗೊಂದಲವಿತ್ತು. ಪದೇ ಪದೇ ತನ್ನ ಹೇಳಿಕೆಯನ್ನು ಬದಲಿಸುತ್ತಿದ್ದ. ಮೀರತ್ ಎಸ್‌ಪಿ ವಿನಾಯಕ ಗೋಪಾಲ್ ಭೋಸಲೆ ಅವರ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಸಾಕಿಬ್ ಬಾಯಿಬಿಟ್ಟಿದ್ದಾನೆ. ಆತ ತೋರಿಸಿದ ಜಾಗದಲ್ಲೇ ಕೊ*ಲೆಗೆ ಬಳಸಿದ ಪೇಪರ್ ಕಟರ್ ಕೂಡ ಪತ್ತೆಯಾಗಿದೆ.

ಸಾಕಿಬ್ ಹಗಲಿನಲ್ಲಿ ಮೊಬೈಲ್ ಟವರ್ ಕೆಲಸ ಮಾಡುತ್ತಿದ್ದರೆ, ರಾತ್ರಿ ಮಂಡಿಯಲ್ಲಿ ರಿಕ್ಷಾ ಓಡಿಸುತ್ತಿದ್ದ. ಆದರೆ ಈ ಅಕ್ರಮ ಸಂಬಂಧ ಆತನ ಇಡೀ ಸಂಸಾರವನ್ನೇ ಬೀದಿಗೆ ತಂದಿದೆ.

ಅನಾಥರಾದ ಮೂವರು ಹೆಣ್ಣುಮಕ್ಕಳು

ಈ ಘಟನೆಯಿಂದಾಗಿ ಮೂವರು ಪುಟ್ಟ ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ. ಅಮ್ಮ ಸಾವನ್ನಪ್ಪಿದ್ದರೆ, ಜನ್ಮ ನೀಡಿದ ತಂದೆ ಈಗ ಜೈಲು ಪಾಲಾಗಿದ್ದಾನೆ. ಆ ಮಕ್ಕಳ ಭವಿಷ್ಯ ಈಗ ಅತಂತ್ರವಾಗಿದ್ದು, ಅವರನ್ನು ಯಾರು ಸಾಕುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಆ ಕ್ಷಣದ ಸಿಟ್ಟು ಮತ್ತು ಅಕ್ರಮ ಸಂಬಂಧ ಒಂದು ಸುಂದರ ಸಂಸಾರವನ್ನು ಹೇಗೆ ಸ್ಮಶಾನ ಮಾಡಬಲ್ಲದು ಎಂಬುದಕ್ಕೆ ಇದೊಂದು ಆಘಾತಕಾರಿ ಉದಾಹರಣೆ.

Latest News