ಪರೀಕ್ಷೆ ಬರೆಯೋ ಭಯ ಬೇಡ - ಕೇಂದ್ರ ಸರ್ಕಾರಿ ಸಂಸ್ಥೆ ಮೆಕಾನ್‌ನಲ್ಲಿ 103 ಹುದ್ದೆಗಳಿಗೆ ನೇರ ನೇಮಕಾತಿ!!

ಸಾಮಾನ್ಯವಾಗಿ ಕೇಂದ್ರ ಸರ್ಕಾರಿ ಕೆಲಸ ಅಂದಾಕ್ಷಣ ತಿಂಗಳುಗಟ್ಟಲೆ ಓದಿ, ಕಠಿಣವಾದ ಲಿಖಿತ ಪರೀಕ್ಷೆ ಬರೆಯಬೇಕು ಎಂಬ ಭಯ ಇರುತ್ತೆ. ಆದರೆ ಈ ಕೆಲಸಕ್ಕೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ! ಕೇವಲ ಸಂದರ್ಶನದ ಮೂಲಕವೇ ನೀವು ಆಯ್ಕೆಯಾಗಬಹುದು. ಬೆಂಗಳೂರಿನಲ್ಲೇ ಸಂದರ್ಶನ ನಡೆಯುತ್ತಿರುವುದು ನಮ್ಮ ಕನ್ನಡಿಗರಿಗೆ ಪ್ಲಸ್ ಪಾಯಿಂಟ್.

ಬೆಂಗಳೂರಿನಲ್ಲೇ ನಡೆಯಲಿದೆ ಇಂಟರ್ವ್ಯೂ
ಬೆಂಗಳೂರಿನಲ್ಲೇ ನಡೆಯಲಿದೆ ಇಂಟರ್ವ್ಯೂ

ಹುದ್ದೆಗಳ ವಿವರ ಏನಿದೆ?
ಮೆಕಾನ್ (MECON) ಲಿಮಿಟೆಡ್ ಒಟ್ಟು 103 ವೃತ್ತಿಪರ (Professional) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇವುಗಳು ಪೂರ್ಣ ಸಮಯದ ಸ್ಥಿರ-ಅವಧಿಯ ಒಪ್ಪಂದದ (FTFT - Full Time Fixed Tenure) ಆಧಾರದ ಮೇಲೆ ಇರುವ ಹುದ್ದೆಗಳಾಗಿವೆ. ಅಂದರೆ ಒಂದು ನಿರ್ದಿಷ್ಟ ಅವಧಿಗೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ವಿವಿಧ ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇವೆ.

ಅರ್ಹತೆ ಮತ್ತು ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 11, 2026.

ವಿದ್ಯಾರ್ಹತೆ - ಪ್ರತಿ ಹುದ್ದೆಗೆ ತಕ್ಕಂತೆ ಇಂಜಿನಿಯರಿಂಗ್ ಅಥವಾ ಸಂಬಂಧಪಟ್ಟ ಪದವಿ ಹಾಗೂ ಅನುಭವದ ಅವಶ್ಯಕತೆ ಇರುತ್ತದೆ. ಇದರ ಪೂರ್ಣ ವಿವರಗಳಿಗಾಗಿ ನೀವು ಮೆಕಾನ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಚೆಕ್ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ - ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಇಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ನಿಮ್ಮ ಅರ್ಜಿಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ನೇರವಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಇಂಟರ್ವ್ಯೂ ನಡೆಯಲಿದೆ:

  • ಬೆಂಗಳೂರು
  • ದೆಹಲಿ
  • ರಾಂಚಿ
  • ಕೋಲ್ಕತ್ತಾ

ನಿಮ್ಮ ಸಂದರ್ಶನದ ದಿನಾಂಕ ಮತ್ತು ನಿಖರವಾದ ಸ್ಥಳವನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ ಅಥವಾ ನಿಮ್ಮ ಇಮೇಲ್‌ಗೆ ಮಾಹಿತಿ ಬರಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲಿಗೆ MECON ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.

ಅಲ್ಲಿ 'Careers' ಅಥವಾ 'Recruitment' ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅಗತ್ಯವಿರುವ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಅರ್ಜಿ ಸಲ್ಲಿಕೆ ಮುಗಿದ ನಂತರ ಆ ಫಾರ್ಮ್ ಅನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳಿ.

ಸಂದರ್ಶನಕ್ಕೆ ಹೋಗುವಾಗ ನಿಮ್ಮ ಒರಿಜಿನಲ್ ದಾಖಲೆಗಳು (Original Documents) ಮತ್ತು ಅವುಗಳ ಜೆರಾಕ್ಸ್ ಪ್ರತಿಗಳನ್ನು ಮರೆಯದೆ ತೆಗೆದುಕೊಂಡು ಹೋಗಿ. ಸಂದರ್ಶನದಲ್ಲಿ ನೀವು ತೋರುವ ಪ್ರತಿಭೆ ಮತ್ತು ದಕ್ಷತೆಯ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.

ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಅನ್ನೋ ಆಸೆ ಇರೋರಿಗೆ ಇದು ನಿಜಕ್ಕೂ ಸುವರ್ಣಾವಕಾಶ. ಲೇಟ್ ಮಾಡದೆ ಕೂಡಲೇ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ. ನಿಮ್ಮ ಸ್ನೇಹಿತರಿಗೂ ಈ ಮಾಹಿತಿ ಶೇರ್ ಮಾಡಿ!

Latest News