ಪಶ್ಚಿಮ ಬಂಗಾಳದ ರಾಜಕೀಯ ಅಂದ್ರೆ ಅಲ್ಲಿ ಸದಾ ಏನಾದರೊಂದು ಸೆನ್ಸೇಷನ್ ನಡಿತಾನೇ ಇರುತ್ತೆ. ಸದ್ಯ ಈಗ ಸುದ್ದಿಯಲ್ಲಿರೋದು ಸಿಎಂ ಮಮತಾ ಬ್ಯಾನರ್ಜಿ ಅವರ ಹೊಸ ಅವತಾರ. ಹೌದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೋಲ್ಕತ್ತಾ ಹೈಕೋರ್ಟ್‌ಗೆ ಒಬ್ಬ ಸಾಮಾನ್ಯ ವಕೀಲರಂತೆ 'ಬ್ಲ್ಯಾಕ್ ಗೌನ್' ಧರಿಸಿ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಏನಿದು ಹೈಕೋರ್ಟ್ ಕೇಸ್?
ಅಷ್ಟಕ್ಕೂ ಮಮತಾ ಬ್ಯಾನರ್ಜಿ ಅವರು ಯಾಕೆ ಲಾಯರ್ ಕೋಟ್ ಹಾಕಿಕೊಂಡಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈ ಬಾರಿಯ ಚುನಾವಣೆಯ ನಂತರ ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (TMC) ಒಂದು ಪ್ರಮುಖ ಕೇಸ್ ದಾಖಲಿಸಿದೆ. ಈ ಪ್ರಕರಣದಲ್ಲಿ ತಾವೇ ಖುದ್ದಾಗಿ ವಾದ ಮಂಡಿಸಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.
ಅವರ ಜೊತೆಗೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಇತರ ಹಿರಿಯ ವಕೀಲರ ತಂಡವೂ ಇತ್ತು. ಮುಖ್ಯಮಂತ್ರಿಯೊಬ್ಬರು ಹೀಗೆ ವಕೀಲರ ಉಡುಪಿನಲ್ಲಿ ಕೋರ್ಟ್ ಮೆಟ್ಟಿಲೇರೋದು ನಿಜಕ್ಕೂ ಅಪರೂಪದ ದೃಶ್ಯ.
ಮಮತಾ ಬ್ಯಾನರ್ಜಿ ಲಾಯರ್ ಕೂಡ ಹೌದು!
ನಮಗೆಲ್ಲಾ ಮಮತಾ ಬ್ಯಾನರ್ಜಿ ಅಂದ್ರೆ ಒಬ್ಬರು ಫೈರ್ ಬ್ರಾಂಡ್ ಲೀಡರ್ ಅಂತಷ್ಟೇ ಗೊತ್ತು. ಆದರೆ ಅವರು ಒಬ್ಬರು ಕಾನೂನು ಪದವೀಧರೆ ಕೂಡ ಹೌದು.
ಮಮತಾ ಅವರು 1982ರಲ್ಲಿ 'ಜೋಗೇಶ್ ಚಂದ್ರ ಕಾಲೇಜ್ ಆಫ್ ಲಾ' ನಿಂದ ಕಾನೂನು ಪದವಿ (Law Degree) ಪಡೆದಿದ್ದಾರೆ.
ಅವರು ರಾಜಕೀಯಕ್ಕೆ ಬರುವ ಆರಂಭದ ದಿನಗಳಲ್ಲಿ ಅಂದ್ರೆ 1980ರ ದಶಕದಲ್ಲಿ ಹಲವು ಬಾರಿ ಕೋರ್ಟ್‌ನಲ್ಲಿ ವಾದ ಮಂಡಿಸಿದ ಉದಾಹರಣೆಗಳಿವೆ.
ಹಳೆಯ ನೆನಪುಗಳ ಮೆಲುಕು: ಅಂದು ಕಾರ್ಯಕರ್ತರಿಗಾಗಿ ವಾದ ಮಾಡಿದ್ದರು
ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನಲ್ಲಿದ್ದಾಗ ತಮ್ಮ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದಾಗಲೆಲ್ಲಾ ಲಾಯರ್ ಕೋಟ್ ಹಾಕಿ ಕೋರ್ಟ್‌ಗೆ ನಿಲ್ಲುತ್ತಿದ್ದರು.
1984ರ ಘಟನೆ: ದಕ್ಷಿಣ ದಿನಾಜ್‌ಪುರದಲ್ಲಿ ಗಲಾಟೆ ನಡೆದಾಗ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಜೈಲಿಗೆ ಹಾಕಿದ್ದರು. ಆಗ ಮಮತಾ ಬ್ಯಾನರ್ಜಿ ಅವರೇ ಸ್ವತಃ ವಾದ ಮಾಡಿ ತಮ್ಮ ಹುಡುಗರಿಗೆ ಜಾಮೀನು (Bail) ಕೊಡಿಸಿದ್ದರು. ಆಗಿನ ನಾಯಕ ಶಂಕರ್ ಚಕ್ರವರ್ತಿ ಹೇಳುವಂತೆ, ಮಮತಾ ಅವರೇ ಫೋನ್ ಮಾಡಿ "ನನಗೊಂದು ಕಪ್ಪು ಗೌನ್ ರೆಡಿ ಮಾಡಿ ಇಡಿ, ನಾನೇ ವಾದ ಮಾಡ್ತೀನಿ" ಅಂದಿದ್ದರಂತೆ!
1996ರ ಘಟನೆ: ಕೋಲ್ಕತ್ತಾದ ಬ್ಯಾಂಕ್ಷಾಲ್ ಕೋರ್ಟ್‌ನಲ್ಲಿ 40ಕ್ಕೂ ಹೆಚ್ಚು ಕಾರ್ಯಕರ್ತರ ಪರವಾಗಿ ಮಮತಾ ವಾದ ಮಾಡಿದ್ದರು. ಸುಳ್ಳು ಕೇಸ್ ಹಾಕಿ ನಮ್ಮವರನ್ನು ಬಂಧಿಸಲಾಗಿದೆ ಎಂದು ಅಂದು ಅವರು ಕೋರ್ಟ್‌ನಲ್ಲಿ ಗುಡುಗಿದ್ದರು.
ಈ ಸಲದ ವಾದದ ಹೂರಣವೇನು?
ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಪಶ್ಚಿಮ ಬಂಗಾಳವನ್ನೇ ಟಾರ್ಗೆಟ್ ಮಾಡಿದೆ ಎಂಬುದು ಮಮತಾ ಅವರ ಮುಖ್ಯ ಆರೋಪ. ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲೂ ಈ ಬಗ್ಗೆ ಧ್ವನಿ ಎತ್ತಿದ್ದರು. ಈಗ ರಾಜ್ಯ ಹೈಕೋರ್ಟ್‌ನಲ್ಲಿ ಚುನಾವಣೋತ್ತರ ಹಿಂಸಾಚಾರದ ಕೇಸ್‌ಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಗಟ್ಟಿಯಾಗಿ ಮಂಡಿಸಲು ಸಜ್ಜಾಗಿದ್ದಾರೆ.
Our Hon’ble Chairperson Smt @MamataOfficial personally reached the Calcutta High Court today to argue in a matter concerning the widespread post-poll violence unleashed across Bengal by @BJP4Bengal.
— All India Trinamool Congress (@AITCofficial) May 14, 2026
Once again, she has shown what truly sets her apart -
She NEVER abandons the… pic.twitter.com/8OkszMxaYa
ಜನರ ರಿಯಾಕ್ಷನ್ ಹೇಗಿದೆ?
ಮುಖ್ಯಮಂತ್ರಿಯಾಗಿ ಬಿಡುವಿಲ್ಲದ ಕೆಲಸಗಳ ನಡುವೆಯೂ, ಮಮತಾ ಬ್ಯಾನರ್ಜಿ ಅವರು ತಮ್ಮ ಹಳೆಯ ವೃತ್ತಿಯ ಉಡುಪು ಧರಿಸಿ ಕೋರ್ಟ್‌ಗೆ ಬಂದಿರುವುದು ಅವರ ಬೆಂಬಲಿಗರಲ್ಲಿ ಹೊಸ ಹುಮ್ಮಸ್ಸು ತಂದಿದೆ. "ದೀದಿ ಯಾವತ್ತಿದ್ದರೂ ಫೈಟರ್, ಅವರು ಬೀದಿಯಲ್ಲೂ ಹೋರಾಡ್ತಾರೆ, ಕೋರ್ಟ್‌ನಲ್ಲೂ ಹೋರಾಡ್ತಾರೆ" ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಬಂಗಾಳದ ರಾಜಕೀಯ ಈಗ ಬೀದಿಯಿಂದ ಕೋರ್ಟ್ ರೂಮಿಗೆ ಶಿಫ್ಟ್ ಆಗಿದೆ. ಒಬ್ಬ ಲಾಯರ್ ಆಗಿ ಮಮತಾ ಬ್ಯಾನರ್ಜಿ ಅವರು ಈ ಕೇಸ್‌ನಲ್ಲಿ ಜಯ ಸಾಧಿಸ್ತಾರಾ? ಅಥವಾ ವಿರೋಧ ಪಕ್ಷಗಳು ಇದಕ್ಕೆ ಹೇಗೆ ಟಕ್ಕರ್ ಕೊಡ್ತವೆ ಅನ್ನೋದನ್ನ ಕಾದು ನೋಡಬೇಕು.