ಬೆಂಗಳೂರು ಅಂದ್ರೆನೆ ಸಾಫ್ಟ್‌ವೇರ್, ಐಟಿ ಕಂಪನಿಗಳು, ಕೋಡಿಂಗ್ ಅನ್ನೋ ಕಾಲ ಇತ್ತು. ಆದ್ರೆ, ಈ ಸಿಲಿಕಾನ್ ಸಿಟಿಯ ಉದ್ಯೋಗ ಮಾರುಕಟ್ಟೆಯಲ್ಲಿ ಈಗ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಹೌದು, ವೃತ್ತಿಪರರ ಜಾಗತಿಕ ನೆಟ್‌ವರ್ಕಿಂಗ್ ದೈತ್ಯ ಲಿಂಕ್ಡ್‌ಇನ್ (LinkedIn) ತನ್ನ 'ಟಾಪ್ ಕಂಪನಿಗಳು 2026'ರ (Top Companies 2026) ಬೆಂಗಳೂರಿನ ಲಿಸ್ಟ್ ಅನ್ನು ರಿಲೀಸ್ ಮಾಡಿದೆ. ಈ ಬಾರಿ ಕೇವಲ ಐಟಿ ಕಂಪನಿಗಳಷ್ಟೇ ಅಲ್ಲ, ಜಾಗತಿಕ ಹಣಕಾಸು ಸೇವೆಗಳ (BFSI) ಅಂದ್ರೆ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಕಂಪನಿಗಳು ಬೆಂಗಳೂರಿನಲ್ಲಿ ಭರ್ಜರಿ ಪಾರುಪತ್ಯ ಮೆರೆದಿವೆ.
ನಿಮ್ಮ ಕೆರಿಯರ್ ಬೆಳೆಸಿಕೊಳ್ಳಲು, ಕೈತುಂಬಾ ಸಂಬಳ ತಗೋಳಲು ಮತ್ತು ಬೆಸ್ಟ್ ಪ್ರಮೋಷನ್ ಪಡೆಯಲು ಬೆಂಗಳೂರಿನಲ್ಲಿ ಯಾವೆಲ್ಲಾ ಕಂಪನಿಗಳು ಟಾಪ್‌ನಲ್ಲಿವೆ ಅಂತ ಈ ವರದಿ ಬಿಚ್ಚಿಟ್ಟಿದೆ. ಉದ್ಯೋಗ ಹುಡುಕುತ್ತಿರುವ ಫ್ರೆಶರ್ಸ್ ಹಾಗೂ ಎಕ್ಸ್‌ಪೀರಿಯನ್ಸ್ ಇರೋ ವೃತ್ತಿಪರರಿಗೆ ಯಾವ ಕಂಪನಿಯನ್ನು ಟಾರ್ಗೆಟ್ ಮಾಡಬೇಕು ಅನ್ನೋದಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್.
ಲಿಂಕ್ಡ್‌ಇನ್ 2026ರ ವರದಿಯ ಪ್ರಮುಖ ಮುಖ್ಯಾಂಶಗಳು (Highlights):
ಫೈನಾನ್ಸ್ ಪಾರುಪತ್ಯ - ಜೆಪಿ ಮಾರ್ಗನ್ ಚೇಸ್ ಮತ್ತು ಮಾರ್ಗನ್ ಸ್ಟಾನ್ಲಿ ಕಂಪನಿಗಳು ದೊಡ್ಡ ದೊಡ್ಡ ಟೆಕ್ ದೈತ್ಯರನ್ನೇ ಹಿಂದಿಕ್ಕಿ ಮೊದಲ ಎರಡು ಸ್ಥಾನಗಳನ್ನು ಗಿಟ್ಟಿಸಿಕೊಂಡಿವೆ.
ಟೆಕ್ ಕಿಂಗ್ಸ್ - ತಂತ್ರಜ್ಞಾನ ವಿಭಾಗದಲ್ಲಿ ಐಬಿಎಂ (IBM) ಹಾಗೂ ಅಮೆಜಾನ್ (Amazon) ತಮ್ಮ ಖದರ್ ಅನ್ನು ಹಾಗೇ ಉಳಿಸಿಕೊಂಡಿವೆ.
ವೈವಿಧ್ಯಮಯ ಉದ್ಯೋಗ - ಫಾರ್ಮಾ ವಲಯದ ಎಲಿ ಲಿಲ್ಲಿ ಹಾಗೂ ಆಟೊಮೇಷನ್ ವಲಯದ ಷ್ನೀಡರ್ ಎಲೆಕ್ಟ್ರಿಕ್ ಕೂಡ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
2026ರ ಬೆಂಗಳೂರಿನ ಟಾಪ್ 10 ಪ್ರಮುಖ ಕಂಪನಿಗಳ ಪೂರ್ಣ ಪಟ್ಟಿ ಇಲ್ಲಿದೆ:
ಲಿಂಕ್ಡ್‌ಇನ್ ಪ್ಲಾಟ್‌ಫಾರ್ಮ್‌ನಲ್ಲಿರುವ ಲಕ್ಷಾಂತರ ಉದ್ಯೋಗಿಗಳ ಡೇಟಾ, ಕೌಶಲ್ಯದ ಬೆಳವಣಿಗೆ ಹಾಗೂ ಉದ್ಯೋಗಿ-ಕಂಪನಿಯ ಬಾಂಧವ್ಯ ಸೇರಿದಂತೆ 8 ಪ್ರಮುಖ ಮಾನದಂಡಗಳನ್ನು ರಿಸರ್ಚ್ ಮಾಡಿ ಈ ಲಿಸ್ಟ್ ರೆಡಿ ಮಾಡಲಾಗಿದೆ.
- ಜೆ ಪಿ ಮಾರ್ಗನ್ ಚೇಸ್ (JPMorgan Chase)
- ಮಾರ್ಗನ್ ಸ್ಟಾನ್ಲಿ (Morgan Stanley)
- ಐಬಿಎಂ (IBM)
- ಅಮೆಜಾನ್ (Amazon)
- ವೆಲ್ಸ್ ಫಾರ್ಗೋ (Wells Fargo)
- ಎಚ್ ಎಸ್ ಬಿ ಸಿ (HSBC)
- ಜಂಪ್ ಕ್ಲೌಡ್ (JumpCloud)
- ಎಸ್ಎಪಿ (SAP)
- ಎಲಿ ಲಿಲ್ಲಿ ಆಂಡ್ ಕಂಪನಿ (Eli Lilly and Company)
- ಷ್ನೀಡರ್ ಎಲೆಕ್ಟ್ರಿಕ್ (Schneider Electric)
ಉದ್ಯೋಗ ಸಿಗಬೇಕಾ? ಲಿಂಕ್ಡ್‌ಇನ್ ಎಕ್ಸ್‌ಪರ್ಟ್ ಕೊಟ್ಟ ಸೂಪರ್ ಟಿಪ್ಸ್!
ಲಿಂಕ್ಡ್‌ಇನ್‌ನ ಭಾರತದ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಅವರ ಪ್ರಕಾರ, ಇನ್ಮುಂದೆ ಕಂಪನಿಗಳು ಕೇವಲ ಕೋಡಿಂಗ್ (Coding) ಗೊತ್ತಿರೋರಿಗಿಂತ, ಬಿಸಿನೆಸ್ ಮತ್ತು ಕಾಮರ್ಸ್ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಇಂತಹ ಟಾಪ್ ಕಂಪನಿಗಳಲ್ಲಿ ಈಸಿಯಾಗಿ ಜಾಬ್ ಗಿಟ್ಟಿಸಿಕೊಳ್ಳಲು ಅವರು ನೀಡಿರುವ ಬೆಸ್ಟ್ ಟಿಪ್ಸ್ ಇಲ್ಲಿದೆ ನೋಡಿ:
ಪ್ರೊಫೈಲ್ ಕದರ್ ಆಗಿರಲಿ - ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಕೇವಲ ತಾಂತ್ರಿಕ ಕೌಶಲ್ಯಗಳನ್ನಷ್ಟೇ ಅಲ್ಲದೆ, ನಿಮ್ಮ ಕಮ್ಯುನಿಕೇಶನ್ ಮತ್ತು ಮಾನವೀಯ ಕೌಶಲ್ಯಗಳನ್ನು (Soft Skills) ಸ್ಪಷ್ಟವಾಗಿ ಹೈಲೈಟ್ ಮಾಡಿ. ರಿಕ್ರೂಟರ್‌ಗಳು ಸದಾ ಇಂತಹ ಪ್ರೊಫೈಲ್‌ಗಳನ್ನೇ ಹುಡುಕುತ್ತಿರುತ್ತಾರೆ.
ಕುರುಡಾಗಿ ಅಪ್ಲೈ ಮಾಡಬೇಡಿ - ಸಿಕ್ಕಸಿಕ್ಕ ನೂರಾರು ಕಂಪನಿಗಳಿಗೆ ಕುರುಡಾಗಿ ಅರ್ಜಿ ಸಲ್ಲಿಸುವ ಬದಲು, ಲಿಂಕ್ಡ್‌ಇನ್‌ನ 'Job Match' ಫೀಚರ್ ಬಳಸಿ. ನಿಮ್ಮ ಕೌಶಲ್ಯಕ್ಕೆ ನೂರಕ್ಕೆ ನೂರು ಮ್ಯಾಚ್ ಆಗುವ ಹುದ್ದೆಗಳ ಮೇಲೆ ಮಾತ್ರ ಫೋಕಸ್ ಮಾಡಿ.
ನೆಟ್‌ವರ್ಕ್ ಬಿಲ್ಡ್ ಮಾಡಿ - ನೀವು ಯಾವ ಕಂಪನಿ ಸೇರಬೇಕು ಅನ್ಕೊಂಡಿದ್ದೀರೋ, ಆ ಕಂಪನಿಯ ಹಾಲಿ ಮತ್ತು ಮಾಜಿ ಉದ್ಯೋಗಿಗಳ ಜೊತೆ ಲಿಂಕ್ಡ್‌ಇನ್‌ನಲ್ಲಿ ವೃತ್ತಿಪರ ಬಾಂಧವ್ಯ ಬೆಳೆಸಿ. ಅವರ ಪೋಸ್ಟ್‌ಗಳಿಗೆ ಕಮೆಂಟ್ ಮಾಡಿ ಆಕ್ಟಿವ್ ಆಗಿರಿ. ಇದರ ಮೂಲಕ ನಿಮಗೆ ರೆಫರಲ್ ಸಿಗುವ ಚಾನ್ಸ್ ಜಾಸ್ತಿ ಇರುತ್ತೆ.
ಫಾಲೋ-ಅಪ್ ಮರೆಯಬೇಡಿ - ದೊಡ್ಡ ದೊಡ್ಡ ಕಂಪನಿಗಳ ಹೈರಿಂಗ್ ಪ್ರೊಸೆಸ್ ಸ್ವಲ್ಪ ನಿಧಾನವಾಗಿ ಇರುತ್ತೆ. ಹಾಗಾಗಿ ಅರ್ಜಿ ಸಲ್ಲಿಸಿದ ತಕ್ಷಣ ಸುಮ್ಮನೆ ಕೂರದೆ, ಆಗಾಗ ಸ್ಟೇಟಸ್ ಚೆಕ್ ಮಾಡಿ ಮತ್ತು ಎಚ್‌ಆರ್ ಜೊತೆ ಪ್ರೀತಿಯಿಂದ ಫಾಲೋ-ಅಪ್ ಮಾಡ್ತಾ ಇರಿ.
ಒಟ್ಟಾರೆಯಾಗಿ ಹೇಳೋದಾದ್ರೆ, ಬೆಂಗಳೂರು ಈಗ ಕೇವಲ ಐಟಿ ಹಬ್ ಅಷ್ಟೇ ಅಲ್ಲ, ಜಾಗತಿಕ ಫೈನಾನ್ಸ್ ಸಾಮ್ರಾಜ್ಯಕ್ಕೂ ದೊಡ್ಡ ಹೆಡ್‌ಕ್ವಾರ್ಟರ್ಸ್ ಆಗ್ತಾ ಇದೆ. ನೀವೂ ಕೂಡ ನಿಮ್ಮ ಕೆರಿಯರ್‌ನಲ್ಲಿ ಬಿಗ್ ಜಂಪ್ ಮಾಡಬೇಕು ಅನ್ಕೊಂಡಿದ್ರೆ, ಇವತ್ತೇ ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಅಪ್ಡೇಟ್ ಮಾಡಿ ಈ ಕಂಪನಿಗಳಿಗೆ ಟ್ರೈ ಮಾಡಿ! ಉದ್ಯೋಗ ಮಾರುಕಟ್ಟೆಯ ಇಂತಹದ್ದೇ ಲೇಟೆಸ್ಟ್ ಕೆರಿಯರ್ ಗೈಡ್ ಹಾಗೂ ಬ್ರೇಕಿಂಗ್ ಅಪ್ಡೇಟ್ಸ್‌ಗಳಿಗಾಗಿ ಸದಾ ನೋಡ್ತಾ ಇರಿ ನಮ್ಮ 'ಸಪ್ತಾಶ್ವ ಟಿವಿ'!