ನಮ್ಮ ರಾಜ್ಯದ ಹೆಮ್ಮೆಯ KSRTC ಬಗ್ಗೆ ಈಗ ಎಲ್ಲೆಡೆ ಭಾರಿ ಚರ್ಚೆ ನಡೀತಿದೆ. "ಶಕ್ತಿ" ಯೋಜನೆ ಬಂದ್ಮೇಲೆ ಜನರಿಗಂತೂ ಫ್ರೀ ಪ್ರಯಾಣ ಸಿಕ್ಕಿದೆ ಅನ್ನೋದು ಖುಷಿಯ ವಿಷಯವೇ. ಆದ್ರೆ, ಈ ಫ್ರೀ ಅನ್ನೋ ಹೆಸರಲ್ಲಿ ಸರ್ಕಾರ ಜನರನ್ನು ನಡೆಸಿಕೊಳ್ತಿರೋ ರೀತಿ ನೋಡಿದ್ರೆ "ಇದೇನಾ ನಮಗೆ ಸಿಗಬೇಕಾದ ಗೌರವ?" ಅನ್ನೋ ಪ್ರಶ್ನೆ ಮೂಡೋದು ಗ್ಯಾರಂಟಿ.
ಬಸ್ಸೋ ಅಥವಾ ಕುರಿ ಗಾಡಿಯೋ?
ಇತ್ತೀಚಿನ ದಿನಗಳಲ್ಲಿ ನೀವು ಯಾವುದಾದ್ರೂ ಸರ್ಕಾರಿ ಬಸ್ ನಿಲ್ದಾಣಕ್ಕೆ ಹೋದ್ರೆ ಅಲ್ಲಿನ ಸ್ಥಿತಿ ನೋಡೋಕೆ ಆಗಲ್ಲ. ಬಸ್ ಬರ್ತಿದ್ದಂಗೆ ಜನ ಮುಗಿಬೀಳೋದು, ಕಿಟಕಿಯಿಂದ ಬ್ಯಾಗ್ ಹಾಕಿ ಸೀಟ್ ಹಿಡಿಯೋದು ಮಾಮೂಲಿ ಆಗಿಬಿಟ್ಟಿದೆ. ಇನ್ನು ಬಸ್ಸಿನ ಒಳಗೆ ಹೋದ್ರೆ, ಕಾಲನ್ನ ನೆಲದ ಮೇಲೆ ಇಡೋಕೂ ಜಾಗ ಇರಲ್ಲ. ಜನರನ್ನು ಕುರಿ-ನಾಯಿಗಳನ್ನ ತುಂಬಿಸಿದ ಹಾಗೆ ಬಸ್ಸೊಳಗೆ ತುರುಕಲಾಗ್ತಿದೆ. "ಜನರೇನೋ ಫ್ರೀಯಾಗಿ ಬರ್ತಿದ್ದಾರೆ, ಹೇಗಾದ್ರೂ ಹೋಗಲಿ" ಅನ್ನೋ ಧೋರಣೆ ಅಧಿಕಾರಿಗಳಲ್ಲಿ ಇದ್ದಂಗೆ ಕಾಣಿಸ್ತಿದೆ.
ನಮಸ್ತೆ ಎಲ್ಲರಿಗೂ, ಇತ್ತೀಚಿಗೆ ನಮ್ಮ KSRTC ಸರ್ವಿಸ್ ತುಂಬಾನೇ ಹದಗೆಟ್ಟಿದೆ. ಜನರಿಗೆ ಏನೋ ಫ್ರೀ ಕರ್ಕೊಂಡು ಹೋಗೋ ಥರ ಹೇಳಿ, ಒಳ್ಳೇ ನಾಯಿ ಕುರಿಗಳು ತುಂಬಿದಂಗೆ ಬಸ್ಸಿಗೆ ಜನಾನಾ ತುಂಬಿಸ್ತವರೇ. ಯಾಕೆ ಸರ್ಕಾರದ್ದು ನೋಡಿ.
ಅದೇ ಬೈಕ್ ಅಲ್ಲಿ ನೀವು 3 ಜನ ಹೋಗಿ, ಫೈನ್ ಹಾಕ್ತಾರೆ ಕಾರಲ್ಲಿ ಒಬ್ಬರೋ ಇಬ್ಬರೋ ಜಾಸ್ತಿ ಇದ್ರೆ ಅದ್ಕು ಫೈನ್… pic.twitter.com/XhwzLHjuHy— ಭೀಮಾ ತೀರದಲ್ಲಿ.. (@bharatvarsha03) April 27, 2026
ರೂಲ್ಸ್ ಬರೀ ನಮಗಾ? ಸರ್ಕಾರಕ್ಕಿಲ್ವಾ?
ಇಲ್ಲೇ ನೋಡಿ ಅಸಲಿ ಮಜಾ ಇರೋದು! ಈಗ ನಾವು ಬೈಕಲ್ಲಿ ಮೂರು ಜನ ಹೋದ್ರೆ ಸಾಕು, ಎಲ್ಲಿಂದಲೋ ಟ್ರಾಫಿಕ್ ಪೊಲೀಸ್ ಬಂದು ಫೈನ್ ಹಾಕ್ತಾರೆ. ಕಾರಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಅಂದ್ರೆ ಫೈನ್, ಹೆಲ್ಮೆಟ್ ಇಲ್ಲ ಅಂದ್ರೆ ಫೈನ್, ಕಾರಿನ ಕೆಪಾಸಿಟಿಗಿಂತ ಒಬ್ಬ ಜಾಸ್ತಿ ಇದ್ರೂ ಕೇಸ್ ಹಾಕ್ತಾರೆ. ಈ ರೂಲ್ಸ್ ಎಲ್ಲಾ ಯಾವುದಕ್ಕೆ? ಅಂದ್ಹಾಗೆ "ಜನರ ಸುರಕ್ಷತೆಗಾಗಿ" ಅಂತೆ!
ಹಾಗಾದ್ರೆ ಒಂದು ಡೌಟ್.. ಈ ಸುರಕ್ಷಾ ನಿಯಮಗಳು ಬರೀ ಬೈಕ್ ಅಥವಾ ಕಾರ್ ಓಡಿಸೋರಿಗೆ ಮಾತ್ರನಾ? ಬಸ್ಸಲ್ಲಿ 50 ಜನ ಇರಬೇಕಾದ ಜಾಗದಲ್ಲಿ 100 ಜನರನ್ನು ತುಂಬಿಸ್ತಾರಲ್ಲ, ಆವಾಗ ಯಾಕೆ ಈ 'ಸೇಫ್ಟಿ' ರೂಲ್ಸ್ ನೆನಪಿಗೆ ಬರಲ್ಲ? ಫುಟ್‌ಬೋರ್ಡ್ ಮೇಲೆ ನೇತಾಡಿಕೊಂಡು ಜೀವದ ಹಂಗು ತೊರೆದು ಜನ ಹೋಗ್ತಾರಲ್ಲ, ಅದು ಕಾನೂನು ಬಾಹಿರ ಅಲ್ವಾ?
ಒಂದೇ ನಾಡು, ಎರಡು ಕಾನೂನು!
ಸಾಮಾನ್ಯ ಮನುಷ್ಯ ಏನಾದ್ರೂ ಒಂದು ಸಣ್ಣ ತಪ್ಪು ಮಾಡಿದ್ರೆ ಸಾಕು, ನಿಯಮಗಳ ಬುಕ್ ತೆಗೆದು ಫೈನ್ ಹಾಕೋಕೆ ಸರ್ಕಾರ ರೆಡಿ ಇರುತ್ತೆ. ಆದ್ರೆ ಅದೇ ಸರ್ಕಾರಿ ಬಸ್ಸುಗಳಲ್ಲಿ ನಿಯಮಗಳು ಗಾಳಿಗೆ ತೂರುತ್ತಿದ್ರೂ ಯಾರೂ ಕೇಳೋರಿಲ್ಲ. ಬಸ್ಸಿನಲ್ಲಿ ಜನ ಅತಿಯಾಗಿ ತುಂಬಿರೋದ್ರಿಂದ ಅಪಘಾತಗಳಾದ್ರೆ ಅದಕ್ಕೆ ಹೊಣೆ ಯಾರು? ಬಸ್ಸಿನ ಬಾಗಿಲಲ್ಲಿ ನೇತಾಡೋದು ಸವಾರನ ತಪ್ಪೋ ಅಥವಾ ಸರಿಯಾಗಿ ಬಸ್ ಸೌಲಭ್ಯ ಒದಗಿಸದ ಸರ್ಕಾರದ್ದೋ?