ಅಹಂಕಾರದ ಡ್ರೈವಿಂಗ್‌ಗೆ ಬಲಿಯಾದನೇ ಬಡ ಡೆಲಿವರಿ ಬಾಯ್? ಕಾರು ಹರಿಸಿದ ಯುವತಿಯ ದುರಹಂಕಾರ ನೋಡಿ;

ರಸ್ತೆಯಲ್ಲಿ ಐಷಾರಾಮಿ ಕಾರು ಸಿಕ್ಕರೆ ಸಾಕು, ತಾವೇ ಈ ಲೋಕದ ದೊರೆಗಳು ಅಂದುಕೊಂಡು ಅತಿವೇಗವಾಗಿ ಗಾಡಿ ಓಡಿಸುವ ಶ್ರೀಮಂತರ ಆಟಕ್ಕೆ ಮತ್ತೊಬ್ಬ ಬಡ ಯುವಕ ಬಲಿಯಾಗುವ ಸ್ಥಿತಿ ಬಂದಿದೆ. ಕೊಲ್ಕತ್ತಾದ ನ್ಯೂ ಟೌನ್ ಸರ್ಕಲ್‌ನಲ್ಲಿ ಮೈ ನಡುಗಿಸುವಂತಹ ಅಪಘಾತವೊಂದು ನಡೆದಿದೆ. ಬೇಜವಾಬ್ದಾರಿಯಿಂದ ಕಾರು ಚಲಾಯಿಸಿಕೊಂಡು ಬಂದ ಯುವತಿಯೊಬ್ಬಳು, ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್‌ಗೆ ಢಿಕ್ಕಿ ಹೊಡೆದಿದ್ದಾಳೆ. ಅಷ್ಟಕ್ಕೇ ನಿಲ್ಲದೆ ಆತನ ದೇಹದ ಮೇಲೆಯೇ ಕಾರು ಹರಿಸಿಕೊಂಡು ಹೋಗಿರುವ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.

ಬಡ ಡೆಲಿವರಿ ಬಾಯ್ ಮೇಲೆ ಕಾರು ಹರಿಸಿದ ಯುವತಿ! | Photo Credit: https://x.com/Tabassum__2
ಬಡ ಡೆಲಿವರಿ ಬಾಯ್ ಮೇಲೆ ಕಾರು ಹರಿಸಿದ ಯುವತಿ! | Photo Credit: https://x.com/Tabassum__2

ರಸ್ತೆಯಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಆ ಡೆಲಿವರಿ ಬಾಯ್ ತನ್ನ ದೈನಂದಿನ ಆರ್ಡರ್ ತಲುಪಿಸಲು ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರು ಆತನಿಗೆ ಬಲವಾಗಿ ಗುದ್ದಿದೆ. ಕಾರು ಡಿಕ್ಕಿಯಾದ ತಕ್ಷಣವೇ ಆ ಯುವಕ ಕೆಳಗೆ ಬಿದ್ದಿದ್ದಾನೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಯಾರೇ ಆದರೂ ಗಾಡಿ ನಿಲ್ಲಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಮಾನವೀಯತೆ ತೋರಿಸುತ್ತಾರೆ..!

ಆದರೆ ಈ ಕಾರು ಚಾಲಕಿ ಮಾತ್ರ ಕ್ರೌರ್ಯದ ಮಿತಿಯನ್ನೇ ಮೀರಿದ್ದಾಳೆ! ಕೆಳಗೆ ಬಿದ್ದಿದ್ದ ಯುವಕನನ್ನು ನೋಡಿಯೂ ಬ್ರೇಕ್ ಹಾಕದ ಆಕೆ, ಕಾರನ್ನು ನೇರವಾಗಿ ಆತನ ಮೇಲೆಯೇ ಚಲಾಯಿಸಿಕೊಂಡು ಹೋಗಿದ್ದಾಳೆ. ರಸ್ತೆಯಲ್ಲಿದ್ದ ಜನರೆಲ್ಲಾ "ಗಾಡಿ ನಿಲ್ಲಿಸು.. ನಿಲ್ಲಿಸು" ಎಂದು ಕಿರುಚಾಡಿದರೂ ಆಕೆ ಕಾರು ನಿಲ್ಲಿಸದೆ ಕ್ರೂರವಾಗಿ ವರ್ತಿಸಿದ್ದಾಳೆ.

ಘಟನಾ ಸ್ಥಳದಲ್ಲಿ ನೋಡನೋಡುತ್ತಿದ್ದಂತೆ ದೊಡ್ಡ ಜನಸಮೂಹವೇ ನೆರೆದಿದೆ. ರ*ಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವಕನನ್ನು ಕಂಡು ಸಾರ್ವಜನಿಕರ ಕೋಪ ನೆತ್ತಿಗೇರಿದೆ. ಜನರ ಆಕ್ರೋಶದ ತೀವ್ರತೆ ಕಂಡು ಹೆದರಿದ ಯುವತಿ, ಕಾರಿನಿಂದ ಕೆಳಗಿಳಿಯದೆ ಒಳಗಡೆಯೇ ಕುಳಿತು ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಪ್ರೊಟೆಕ್ಷನ್ ಕೇಳಿದ್ದಾಳೆ.

ಘಟನೆ ನಡೆದಿದ್ದು ಎಲ್ಲಿ? - ಪಶ್ಚಿಮ ಬಂಗಾಳದ ಕೊಲ್ಕತ್ತಾದ ಪ್ರಮುಖ ಜಂಕ್ಷನ್ ಆದ 'ನ್ಯೂ ಟೌನ್ ಸರ್ಕಲ್' ರಸ್ತೆಯಲ್ಲಿ ಈ ಮೈ ನಡುಗಿಸುವಂತಹ ಅಪಘಾತ ನಡೆದಿದೆ.

ಬೇಜವಾಬ್ದಾರಿ ಡ್ರೈವಿಂಗ್ - ಯುವತಿಯೊಬ್ಬಳು ರಸ್ತೆಯಲ್ಲಿ ತನ್ನ ಐಷಾರಾಮಿ ಕಾರನ್ನು ಸಿಕ್ಕಾಪಟ್ಟೆ ರಶ್ ಆಗಿ ಹಾಗೂ ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದಿದ್ದಾಳೆ.

ಡೆಲಿವರಿ ಬಾಯ್‌ಗೆ ಢಿಕ್ಕಿ - ಇದೇ ಸಮಯದಲ್ಲಿ ಪ್ರಾಮಾಣಿಕವಾಗಿ ಕಷ್ಟಪಟ್ಟು ತನ್ನ ದೈನಂದಿನ ಆರ್ಡರ್ ತಲುಪಿಸಲು ಬೈಕ್‌ನಲ್ಲಿ ಹೋಗುತ್ತಿದ್ದ ಬಡ ಡೆಲಿವರಿ ಬಾಯ್‌ಗೆ ಈಕೆ ಜೋರಾಗಿ ಗುದ್ದಿದ್ದಾಳೆ. ಢಿಕ್ಕಿಯಾದ ತಕ್ಷಣ ಯುವಕ ರಸ್ತೆಗೆ ಬಿದ್ದಿದ್ದಾನೆ.

ಮನುಷ್ಯತ್ವ ಮರೆತ ಕ್ರೌರ್ಯ - ಅಪಘಾತದ ನಂತರ ಕಾರು ನಿಲ್ಲಿಸಿ ಆತನಿಗೆ ಹೆಲ್ಪ್ ಮಾಡೋದು ಬಿಟ್ಟು, ಆ ಕಿರಾತಕಿ ಕೆಳಗೆ ಬಿದ್ದಿದ್ದ ಯುವಕನ ದೇಹದ ಮೇಲೆಯೇ ಕಾರನ್ನು ಹರಿಸಿಕೊಂಡು ಮುಂದೆ ಹೋಗಿದ್ದಾಳೆ! ರಸ್ತೆಯಲ್ಲಿದ್ದ ಜನ "ಗಾಡಿ ನಿಲ್ಲಿಸು" ಅಂತ ಕೂಗಿಕೊಂಡ್ರೂ ಆಕೆ ಕ್ಯಾರೇ ಅಂದಿಲ್ಲ.

ಸ್ಥಳದಲ್ಲಿ ಸಾರ್ವಜನಿಕರ ಆಕ್ರೋಶ - ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವಕನನ್ನು ನೋಡಿ ಅಲ್ಲಿದ್ದ ನೂರಾರು ಜನ ಒಟ್ಟಿಗೆ ಜಮಾಯಿಸಿದ್ದಾರೆ. ಸಾರ್ವಜನಿಕರು ಸಿಕ್ಕಾಪಟ್ಟೆ ಗರಂ ಆಗಿರೋದನ್ನು ಕಂಡು, ತನಗೆ ಧರ್ಮದೇಟು ಬೀಳಬಹುದು ಅಂತ ಹೆದರಿದ ಯುವತಿ ಕಾರಿನ ಒಳಗಡೆ ಕೂತು ತಕ್ಷಣ ಪೊಲೀಸರಿಗೆ ಫೋನ್ ಮಾಡಿದ್ದಾಳೆ.

"ಕಾರ್ ಕೀ ಕೊಡಲ್ಲ" ಅಂತ ರಂಪಾಟ - ಸ್ಥಳಕ್ಕೆ ಪೊಲೀಸರು ಬಂದ ಮೇಲಂತೂ ಯುವತಿಯ ಅಹಂಕಾರದ ಪರಮಾವಧಿ ಬಯಲಾಗಿದೆ. ತನಿಖೆಗಾಗಿ ಪೊಲೀಸರು ಕಾರನ್ನು ಸ್ಟೇಷನ್‌ಗೆ ತಗೆದುಕೊಂಡು ಹೋಗಲು ಮುಂದಾದಾಗ, "ನನ್ನ ಕಾರ್ ಕೀಲಿಯನ್ನು ನಾನು ಯಾರಿಗೂ ಕೊಡಲ್ಲ" ಎಂದು ಪೊಲೀಸರ ಎದುರೇ ರಂಪಾಟ ಮಾಡಿದ್ದಾಳೆ.

ಮುಖದಲ್ಲಿಲ್ಲ ಕಿಂಚಿತ್ತೂ ಪಶ್ಚಾತ್ತಾಪ - ತನ್ನಿಂದ ಒಬ್ಬ ಅಮಾಯಕ ಯುವಕ ಸಾವು-ಬದುಕಿನ ಮಧ್ಯೆ ಹೋರಾಡುವಂತಾಗಿದ್ದರೂ, ಆಕೆಯ ಮುಖದಲ್ಲಿ ಒಂದೇ ಒಂದು ಪರ್ಸೆಂಟ್ ಕೂಡ ಗಿಲ್ಟ್ ಅಥವಾ ಬೇಸರ ಇರಲಿಲ್ಲ. ತಾನೇನೋ ದೊಡ್ಡ ಸಾಹಸ ಮಾಡಿರೋ ಹಾಗೆ ಪೊಲೀಸರ ಎದುರು ಆಟಿಟ್ಯೂಡ್ ತೋರಿಸುತ್ತಾ ನಿಂತಿದ್ದಾಳೆ.

ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ - ಸದ್ಯ ತೀವ್ರವಾಗಿ ಜಜ್ಜಲ್ಪಟ್ಟಿರುವ ಆ ಡೆಲಿವರಿ ಬಾಯ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಹೆಲ್ತ್ ಕಂಡೀಷನ್ ಸದ್ಯಕ್ಕೆ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ಯುವತಿ - ಪೊಲೀಸರು ಯುವತಿಯ ಅಹಂಕಾರಕ್ಕೆ ಬ್ರೇಕ್ ಹಾಕಿ ಆಕೆಯನ್ನು ವಶಕ್ಕೆ ಪಡೆದಿದ್ದು, ಹಿಟ್ ಅಂಡ್ ರನ್ ಕೇಸ್ ಅಡಿಯಲ್ಲಿ ಕಂಪ್ಲೀಟ್ ತನಿಖೆ ಕೈಗೊಂಡಿದ್ದಾರೆ.

ರಸ್ತೆಗಿಳಿದಾಗ ಅಹಂಕಾರ ಬಿಟ್ಟು ಜವಾಬ್ದಾರಿಯಿಂದ ಡ್ರೈವಿಂಗ್ ಮಾಡಬೇಕು. ಇಂತಹ ಬೇಜವಾಬ್ದಾರಿ ಶ್ರೀಮಂತ ಚಾಲಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಸಖತ್ ಆಕ್ರೋಶ ಹೊರಹಾಕ್ತಿದ್ದಾರೆ!

Latest News