ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತ - ಮದಗಜಗಳ ದಿಢೀರ್ ಕಾಳಗಕ್ಕೆ ಸಿಲುಕಿ ಚೆನ್ನೈ ಮಹಿಳೆ ಸ್ಥಳದಲ್ಲೇ ಸಾ*ವು!!

ಕೊಡಗಿನ ಅದ್ಭುತ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಪ್ರವಾಸಿಗರಿಗೆ ಇವತ್ತು ಮಧ್ಯಾಹ್ನ ದುಬಾರೆಯಲ್ಲಿ ಅಕ್ಷರಶಃ ಒಂದು ಘೋರ ದುರಂತ ಎದುರಾಗಿದೆ. ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಬೃಹತ್ ಸಾಕಾನೆಗಳ ನಡುವೆ ಸಡನ್ ಆಗಿ ನಡೆದ ಜಗಳಕ್ಕೆ ಸಿಲುಕಿ, ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಸ್ಥಳದಲ್ಲೇ ಧಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಇನ್ಸಿಡೆಂಟ್ ಇಡೀ ಕೊಡಗು ಜಿಲ್ಲೆಯನ್ನು ಕಂಪ್ಲೀಟ್ ಆಗಿ ನಡುಗಿಸಿದೆ.

ಪ್ರವಾಸಿಗರ ಕಣ್ಣೆದುರೇ ಘಟಿಸಿತು ಘೋರ ವಿಧಿಲಿಖಿತ!
ಪ್ರವಾಸಿಗರ ಕಣ್ಣೆದುರೇ ಘಟಿಸಿತು ಘೋರ ವಿಧಿಲಿಖಿತ!

ಆನೆ ಸ್ನಾನ ಮಾಡಿಸುವಾಗ ನಡೆದಿದ್ದೇನು?

ತಮಿಳುನಾಡಿನ ಚೆನ್ನೈ ಮೂಲದ ಜಿನ್ನು 33 ಎಂಬುವವರೇ ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಇವತ್ತು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ದುಬಾರೆ ಶಿಬಿರದಲ್ಲಿ ಎಂದಿನಂತೆ ಆನೆಗಳಿಗೆ ಸ್ನಾನ ಮಾಡಿಸುವ (Elephant Bathing) ಪ್ರಕ್ರಿಯೆ ನಡೀತಾ ಇತ್ತು. ದುಬಾರೆಗೆ ಬರೋ ಪ್ರವಾಸಿಗರಿಗೆ ಆನೆಗಳು ನೀರೊಳಗೆ ಮಲಗುವುದು, ಸ್ನಾನ ಮಾಡುವುದನ್ನು ಹತ್ತಿರದಿಂದ ನೋಡೋದು ಅಂದ್ರೆ ಸಖತ್ ಇಷ್ಟ. ಅದೇ ರೀತಿ ಇವತ್ತು ಕೂಡ ಶಿಬಿರದ ಸಾಕಾನೆಗಳಾದ 'ಮಾರ್ತಾಂಡ' ಮತ್ತು 'ಕಂಜನ್' ಎಂಬ ಎರಡು ಆನೆಗಳನ್ನು ಕಾವೇರಿ ನದಿಗೆ ಸ್ನಾನಕ್ಕಾಗಿ ಕರೆತರಲಾಗಿತ್ತು.

ಈ ವೇಳೆ ಮಾರ್ತಾಂಡ ಆನೆಯ ಮಾವುತನಾದ ಗೌಸ್ ಎಂಬುವವರು ಆನೆಯನ್ನು ಸ್ನಾನ ಮಾಡಿಸಲು ನೀರಿಗೆ ಇಳಿಸುತ್ತಿದ್ದರು. ಆದರೆ ನೀರಿಗೆ ಇಳಿಸುವಾಗ ಮಾರ್ತಾಂಡ ಆನೆ ಸ್ವಲ್ಪ ಜೋರಾಗಿ ನೀರಿಗೆ ಬಿದ್ದಿದೆ (ಇಳಿದಿದೆ). ದುರದೃಷ್ಟವಶಾತ್, ಹಾಗೆ ಇಳಿಯುವಾಗ ಮಾರ್ತಾಂಡನ ದೇಹವು ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಸಾಕಾನೆ 'ಕಂಜನ್'ಗೆ ಸಲ್ಪ ಜೋರಾಗಿಯೇ ತಗುಲಿದೆ.

ಸಿಡಿದೆದ್ದ ಕಂಜನ್: ಕಾಲಡಿ ಸಿಲುಕಿದ ಪ್ರವಾಸಿ ಮಹಿಳೆ!

ತನ್ನ ಮೈಗೆ ಮಾರ್ತಾಂಡ ಆನೆ ಬಂದು ಮುಟ್ಟಿದ್ದೇ ತಡ, ಕಂಜನ್ ಆನೆಗೆ ಎಲ್ಲಿಲ್ಲದ ಕೋಪ ಬಂದಿದೆ. ವಿಪರೀತ ಆಕ್ರೋಶಗೊಂಡ ಕಂಜನ್ ಆನೆ ಸೆಕೆಂಡ್ ಕೂಡ ಯೋಚಿಸದೆ ಮಾರ್ತಾಂಡನ ಮೇಲೆ ಅಟ್ಯಾಕ್ ಮಾಡಲು ಮುನ್ನುಗ್ಗಿದೆ. ಎರಡು ಬೃಹತ್ ಮದಗಜಗಳು ನದಿಯ ಮಧ್ಯೆ ಇದ್ದಕ್ಕಿದ್ದಂತೆ ಘೋರವಾಗಿ ಕಾದಾಟಕ್ಕೆ ಇಳಿಯುತ್ತಿದ್ದಂತೆ ಅಲ್ಲಿದ್ದ ಮಾವುತರು ಮತ್ತು ಪ್ರವಾಸಿಗರು ಕಂಪ್ಲೀಟ್ ಆಗಿ ಶಾಕ್ ಆಗಿದ್ದಾರೆ.

ದಿಕ್ಕಾಪಾಲಾಗಿ ಓಡಿದ ಜನ: ಆನೆಗಳ ಅಟ್ಟಹಾಸ ನೋಡಿ ಅಲ್ಲಿದ್ದ ಪ್ರವಾಸಿಗರೆಲ್ಲಾ ತಮ್ಮ ಜೀವ ಉಳಿಸಿಕೊಳ್ಳಲು ಕಿರುಚಾಡುತ್ತಾ ಸಿಕ್ಕ ಸಿಕ್ಕ ಕಡೆ ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದಾರೆ. ಆದರೆ ಈ ಗೊಂದಲ ಮತ್ತು ಓಟದ ಮಧ್ಯೆ ಪ್ರವಾಸಿ ಮಹಿಳೆ ಜಿನ್ನು ಅವರು ಆನೆಗಳ ಜಗಳದ ಭೀಕರ ರಭಸಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ರೊಚ್ಚಿಗೆದ್ದ ಆನೆಯ ಕಾಲಡಿ ಸಿಲುಕಿದ ಜಿನ್ನು ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮಾವುತರ ಪ್ರಯತ್ನ ವಿಫಲ: ಸ್ಥಳದಲ್ಲಿ ಆಕ್ರಂದನ!

ಅನಾಹುತ ನಡೆಯುತ್ತಿದ್ದಂತೆ ಮಾರ್ತಾಂಡ ಆನೆಯ ಮಾವುತ ಗೌಸ್ ಹಾಗೂ ಕಂಜನ್ ಆನೆಯ ಮಾವುತ ವಿಜಯ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಆನೆಗಳನ್ನು ಕಂಟ್ರೋಲ್ ಮಾಡಲು ಹರಸಾಹಸ ಪಟ್ಟಿದ್ದಾರೆ. ಆದರೆ ಆನೆಗಳು ಕಂಟ್ರೋಲ್‌ಗೆ ಬರುವಷ್ಟರಲ್ಲೇ ಆಗಬಾರದ ಅನಾಹುತ ನಡೆದು ಹೋಗಿತ್ತು. ಜಿನ್ನು ಅವರ ಮೃತದೇಹವನ್ನು ನೋಡಿದ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣವೇ ಮೃತದೇಹವನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಪೋಸ್ಟ್‌ಮಾರ್ಟಮ್‌ಗಾಗಿ ರವಾನಿಸಲಾಗಿದೆ.

ಈ ಘಟನೆ ದುಬಾರೆಯಲ್ಲಿ ಪ್ರವಾಸಿಗರ ಸೇಫ್ಟಿ ಬಗ್ಗೆ ಮತ್ತೆ ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದೆ. ದುಬಾರೆಗೆ ದಿನಾ ಸಾವಿರಾರು ಜನ ಬರ್ತಾರೆ, ಅದರಲ್ಲೂ ಆನೆಗಳ ಹತ್ತಿರ ಹೋಗಿ ಫೋಟೋ ತಗೊಳ್ಳಲು ಮುಗಿಬೀಳ್ತಾರೆ. ಆದರೆ ಪ್ರಾಣಿಗಳನ್ನು ಎಷ್ಟೇ ಪಳಗಿಸಿದ್ದರೂ ಅವುಗಳ ಮೂಡ್ ಯಾವಾಗ ಚೇಂಜ್ ಆಗುತ್ತೆ ಅಂತ ಹೇಳೋಕೆ ಆಗಲ್ಲಅರಣ್ಯ ಇಲಾಖೆ ಅಧಿಕಾರಿಗಳು ಈಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಖುಷಿಯಾಗಿ ಎಂಜಾಯ್ ಮಾಡೋಕೆ ಬಂದಿದ್ದ ಜಾಗದಲ್ಲೇ ಮಹಿಳೆ ಹೆಣವಾಗಿರೋದು ನಿಜಕ್ಕೂ ಕರುಳು ಹಿಂಡುವಂತಿದೆ. ನೀವು ಕೂಡ ಇಂತಹ ವೈಲ್ಡ್ ಲೈಫ್ ಸ್ಪಾಟ್‌ಗಳಿಗೆ ಹೋದಾಗ ಪ್ರಾಣಿಗಳಿಂದ ಒಂಚೂರು ದೂರ ಇರಿ!

Latest News