May 4, 2026 Languages : ಕನ್ನಡ | English

ಪಕ್ಕಾ 'ಬುಲ್ಸ್ ಐ' ಹೊಡೆದ ಪ್ರಶಾಂತ್ ಕಿಶೋರ್ ಭವಿಷ್ಯ - ವಿಜಯ್ ಅಬ್ಬರಕ್ಕೆ ನಡುಗಿದ ದ್ರಾವಿಡ ಕೋಟೆಗಳು!!

ತಮಿಳುನಾಡು ಪಾಲಿಟಿಕ್ಸ್ ಅಂದ್ರೆ ಅದು ಬರಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಈ ಲೆಕ್ಕಾಚಾರವನ್ನೆಲ್ಲಾ ಒಬ್ಬ ವ್ಯಕ್ತಿ ಮಾತ್ರ ಮೊದಲೇ ಉಲ್ಟಾ ಮಾಡಿದ್ದರು. ಅವರು ಬೇರೆ ಯಾರೂ ಅಲ್ಲ, ರಾಜಕೀಯದ ಚಾಣಕ್ಯ ಪ್ರಶಾಂತ್ ಕಿಶೋರ್ (PK). ಈಗ ವಿಜಯ್ ಅವರ ಟಿವಿಕೆ (TVK) ಪಕ್ಷ 100ಕ್ಕೂ ಹೆಚ್ಚು ಸೀಟ್‌ಗಳಲ್ಲಿ ಮುನ್ನುಗ್ಗುತ್ತಿರೋದನ್ನ ನೋಡಿ ಜನ ಕಿಶೋರ್ ಅವರ ಹಳೆ ಇಂಟರ್ವ್ಯೂ ಹುಡುಕಿ ಹುಡುಕಿ ಶೇರ್ ಮಾಡ್ತಿದ್ದಾರೆ!

ತಮಿಳುನಾಡಿನಲ್ಲಿ ಪಿಕೆ ತಂತ್ರಗಾರಿಕೆ ಸಕ್ಸಸ್ | Photo Credit: https://x.com/Benarasiyaa
ತಮಿಳುನಾಡಿನಲ್ಲಿ ಪಿಕೆ ತಂತ್ರಗಾರಿಕೆ ಸಕ್ಸಸ್ | Photo Credit: https://x.com/Benarasiyaa

ಆ ಸಂದರ್ಶನದಲ್ಲಿ ಪಿಕೆ ಹಾಕಿದ್ದ ಚಾಲೆಂಜ್ ಏನು?

ಕೆಲವು ತಿಂಗಳುಗಳ ಹಿಂದೆ 'ತಂತಿ ಟಿವಿ'ಗೆ ನೀಡಿದ ಇಂಟರ್ವ್ಯೂನಲ್ಲಿ ಪ್ರಶಾಂತ್ ಕಿಶೋರ್ ಒಂದು ಮಾತು ಹೇಳಿದ್ದರು, ಅದು ಇವತ್ತು ಅಕ್ಷರಶಃ ನಿಜವಾಗಿದೆ:

ಒಬ್ಬಂಟಿಯಾಗಿ ಬನ್ನಿ: "ವಿಜಯ್ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಬಾರದು. ಅವರು ಏಕಾಂಗಿಯಾಗಿ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ರೆ ಮಾತ್ರ ಗೆಲ್ಲೋಕೆ ಸಾಧ್ಯ" ಅಂತ ಕಿಶೋರ್ ಸಖತ್ ಕಾನ್ಫಿಡೆಂಟ್ ಆಗಿ ಹೇಳಿದ್ದರು.

ನೋ ಮೈತ್ರಿ: ಎಐಎಡಿಎಂಕೆ ಜೊತೆ ಕೈ ಜೋಡಿಸ್ತಾರಾ ಅಂತ ಕೇಳಿದ್ದಕ್ಕೆ, "ಖಂಡಿತ ಇಲ್ಲ, ಅವರು ಒನ್ ಮ್ಯಾನ್ ಶೋ ನಡೆಸಿದ್ರೆನೇ ತಮಿಳುನಾಡನ್ನ ಗೆಲ್ಲೋಕೆ ಸಾಧ್ಯ" ಅಂದಿದ್ರು.

"ಈ ವಿಡಿಯೋ ರೆಕಾರ್ಡ್ ಮಾಡಿ ಇಟ್ಕೊಳ್ಳಿ" ಅಂದಿದ್ದ ಕಿಶೋರ್!

ಆ ಇಂಟರ್ವ್ಯೂನಲ್ಲಿ ಜರ್ನಲಿಸ್ಟ್ ಅಚ್ಚರಿಯಿಂದ, "ಸರ್ಕಾರ ಮಾಡೋಕೆ ಬೇಕಾದ 118 ಸೀಟ್ ವಿಜಯ್ ಗೆಲ್ಲೋಕೆ ಸಾಧ್ಯನಾ?" ಅಂತ ಕೇಳಿದಾಗ ಕಿಶೋರ್ ನಗುತ್ತಾ ಸವಾಲು ಹಾಕಿದ್ರು: "ಖಂಡಿತ ಗೆಲ್ತಾರೆ. ಬೇಕಾದ್ರೆ ಈ ವಿಡಿಯೋ ಎತ್ತಿಟ್ಟುಕೊಳ್ಳಿ, ರಿಸಲ್ಟ್ ದಿನ ಇದನ್ನೇ ಪ್ಲೇ ಮಾಡಿ!"

ಇವತ್ತು ವಿಜಯ್ ಅವರ ಪಾರ್ಟಿ ಟ್ರೆಂಡ್ ನೋಡ್ತಿದ್ರೆ, ಕಿಶೋರ್ ಅವರು ಹೇಳಿದ ಮಾತು ಪಕ್ಕಾ 'ಬುಲ್ಸ್ ಐ' ಹೊಡೆದಂತೆ ಅಷ್ಟೇ ನಿಖರವಾಗಿದೆ.

ವಿಜಯ್-ಪಿಕೆ 'ಮಾಸ್ಟರ್ ಪ್ಲಾನ್' ವರ್ಕ್ ಆಯ್ತಾ?

ದಳಪತಿ ವಿಜಯ್ ಅವರು ರಾಜಕೀಯಕ್ಕೆ ಬರೋ ಮೊದಲೇ ಪ್ರಶಾಂತ್ ಕಿಶೋರ್ ಅವರನ್ನ ಸಲಹೆಗಾರರಾಗಿ ನೇಮಿಸಿಕೊಂಡಿದ್ದರು ಅನ್ನೋದು ಈಗ ಓಪನ್ ಸೀಕ್ರೆಟ್. ಸಿನಿಮಾದಲ್ಲಿ ಹೇಗೆ ಕಥೆ ಮುಖ್ಯವೋ, ಪಾಲಿಟಿಕ್ಸ್‌ನಲ್ಲಿ 'ಡೇಟಾ' ಅಷ್ಟೇ ಮುಖ್ಯ ಅನ್ನೋದನ್ನ ವಿಜಯ್ ಅಪ್ಪಿಕೊಂಡಿದ್ದರು. ಪಿಕೆ ಕೊಟ್ಟ ಐಡಿಯಾದಂತೆಯೇ ವಿಜಯ್ ಯಾವುದೇ ದೊಡ್ಡ ಪಾರ್ಟಿಯ ಹಂಗಿಲ್ಲದೆ ಏಕಾಂಗಿಯಾಗಿ ಕಣಕ್ಕಿಳಿದ್ರು. ಅದರ ರಿಸಲ್ಟ್ ಈಗ ಇಡೀ ದೇಶದ ಕಣ್ಣ ಮುಂದಿದೆ!

ಬದಲಾಗುತ್ತಾ ತಮಿಳುನಾಡು ಮ್ಯಾಪ್?

ಸದ್ಯದ ಟ್ರೆಂಡ್ ನೋಡಿದ್ರೆ ವಿಜಯ್ 100ಕ್ಕೂ ಹೆಚ್ಚು ಸೀಟ್‌ಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಗೆ ನಡುಕ ಹುಟ್ಟಿಸಿದ್ದಾರೆ. ಇದು ಬರಿ ಸಿನಿಮಾದ ಕ್ರೇಜ್ ಅಲ್ಲ, ಅದರ ಹಿಂದೆ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಕೂಡ ಅಡಗಿದೆ.

"ನಾನು ಹೇಳಿದ್ದು ಸುಳ್ಳಾದ್ರೆ ನನ್ನನ್ನ ಕೇಳಿ" ಅಂದಿದ್ದ ಪ್ರಶಾಂತ್ ಕಿಶೋರ್ ಇವತ್ತು ಮತ್ತೊಮ್ಮೆ ತಮ್ಮ 'ಕಿಂಗ್ ಮೇಕರ್' ಪಟ್ಟ ಉಳಿಸಿಕೊಂಡಿದ್ದಾರೆ. ವಿಜಯ್ ಅಭಿಮಾನಿಗಳಂತೂ "ನಮ್ಮ ಅಣ್ಣ ಸಿಎಂ ಆಗೋದು ಮೊದಲೇ ಫಿಕ್ಸ್ ಆಗಿತ್ತು" ಅಂತ ಫುಲ್ ಖುಷಿಯಲ್ಲಿದ್ದಾರೆ.

Latest News