ಕೇರಳ ರಾಜಕೀಯದಲ್ಲಿ ಇಂದು ಹೊಸ ಇತಿಹಾಸ? ವಿ.ಡಿ. ಸತೀಶನ್ ಸಿಎಂ ಆಗ್ತಿದ್ದಾರೆ ಅನ್ನೋ ಸುದ್ದಿಯ ಅಸಲಿ ಸತ್ಯವೇನು?

ಕೇರಳ ರಾಜಕೀಯದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗ್ತಿದೆ. ಹೌದು, ದೇವರ ನಾಡು ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಜನಪ್ರಿಯ ನಾಯಕ ವಿ.ಡಿ. ಸತೀಶನ್‌ ಅವರು ಇಂದು (ಮೇ 18, ಸೋಮವಾರ) ಅಧಿಕಾರ ವಹಿಸಿಕೊಳ್ತಿದ್ದಾರೆ. ಪಕ್ಷದೊಳಗೆ ಸಿಎಂ ಕುರ್ಚಿಗಾಗಿ ಭಾರಿ ಪೈಪೋಟಿ, ಹೈಡ್ರಾಮಾಗಳು ನಡೆದರೂ, ಕೊನೆಗೂ ಹೈಕಮಾಂಡ್ ಜನರ ನಾಡಿಮಿಡಿತ ಅರಿತು ಸತೀಶನ್ ಅವರನ್ನೇ ಸಿಎಂ ಸ್ಥಾನಕ್ಕೆ ಫೈನಲ್ ಮಾಡಿದೆ. ಇವತ್ತಿನ ಈ ಗ್ರ್ಯಾಂಡ್ ಪದಗ್ರಹಣ ಸಮಾರಂಭಕ್ಕೆ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಲೈವ್ ಆಗಿ ಸಾಕ್ಷಿಯಾಗ್ತಿದ್ದಾರೆ.

ತಿರುವನಂತಪುರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಲೈವ್ ಸಾಕ್ಷಿ | Photo Credit: https://x.com/siddaramaiah
ತಿರುವನಂತಪುರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಲೈವ್ ಸಾಕ್ಷಿ | Photo Credit: https://x.com/siddaramaiah

ತಿರುವನಂತಪುರದಲ್ಲಿ ಸಖತ್ ತಯಾರಿ: ಯಾರೆಲ್ಲ ಬರ್ತಿದ್ದಾರೆ?

ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ಇಂದು ನೂತನ ಸಿಎಂ ಹಾಗೂ ಅವರ ಟೀಮ್‌ನ ಪ್ರಮಾಣ ವಚನ ಸಮಾರಂಭ ಅದ್ಧೂರಿಯಾಗಿ ನಡೀತಿದೆ. ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ನೂತನ ಸಿಎಂ ಸತೀಶನ್ ಹಾಗೂ ಅವರ ಸಂಪುಟದ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಕಾಂಗ್ರೆಸ್ ಪಾಲಿಗೆ ಇದು ಭರ್ಜರಿ ಗೆಲುವಿನ ಸಂಭ್ರಮ ಆಗಿರೋದ್ರಿಂದ ದೆಹಲಿ ನಾಯಕರೆಲ್ಲ ಕೇರಳಕ್ಕೆ ದೌಡಾಯಿಸ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಸೇರಿದಂತೆ ಘಟಾನುಘಟಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ.

ನಮ್ಮ ಸಿಎಂಗೆ ಸ್ಪೆಷಲ್ ಇನ್ವಿಟೇಷನ್: ನೂತನ ಸಿಎಂ ವಿ.ಡಿ. ಸತೀಶನ್ ಅವರೇ ಸ್ವತಃ ಫೋನ್ ಮಾಡಿ ನಮ್ಮ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದರು. ಹಾಗಾಗಿ, ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರು ಹೆಚ್‌ಎಎಲ್ ಏರ್‌ಪೋರ್ಟ್‌ನಿಂದ ವಿಶೇಷ ವಿಮಾನದ ಮೂಲಕ ತಿರುವನಂತಪುರಕ್ಕೆ ಹಾರಿದ್ದಾರೆ. ಸಮಾರಂಭ ಮುಗಿಸಿಕೊಂಡು ಸಂಜೆ ಹೊತ್ತಿಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

20 ಮಂದಿಯ ಸಚಿವ ಸಂಪುಟ: ಜಾತಿ, ರೀಜನ್ ಲೆಕ್ಕಾಚಾರ ಫುಲ್ ಪಕ್ಕಾ!

ಅಧಿಕಾರ ವಹಿಸಿಕೊಳ್ಳೋಕೆ ಒಂದು ದಿನ ಮುಂಚಿತವಾಗಿಯೇ, ಅಂದ್ರೆ ಭಾನುವಾರವೇ ಸತೀಶನ್ ತಮ್ಮ ಕ್ಯಾಬಿನೆಟ್ ಮಂತ್ರಿಗಳ ಲಿಸ್ಟ್ ಅನೌನ್ಸ್ ಮಾಡಿಬಿಟ್ಟಿದ್ದಾರೆ. ಸೀನಿಯಾರಿಟಿ, ಜಾತಿ ಮತ್ತು ಪ್ರಾಂತ್ಯವಾರು ಬ್ಯಾಲೆನ್ಸ್ ಮಾಡಿ ಒಟ್ಟು 20 ಶಾಸಕರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.

ಸಿಎಂ ರೇಸ್‌ನಲ್ಲಿದ್ದ ರಮೇಶ್ ಚೆನ್ನಿತ್ತಲ ಮತ್ತು ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಇವರ ಜೊತೆಗೆ ಕೆ.ಮುರಳಿಧರನ್, ಪಿ.ಕೆ. ಕುಂಞಲಿಕುಟ್ಟಿ, ಮೋನ್ಸ್ ಜೋಸೆಫ್, ಶಿಬು ಬೇಬಿ ಜಾನ್, ಅನೂಪ್ ಜೇಕಬ್, ಸಿ.ಪಿ. ಜಾನ್, ಎ.ಪಿ. ಅನಿಲ್ ಕುಮಾರ್, ಎನ್. ಶಂಸುದ್ದೀನ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ, ಎಂ.ಲಿಜು, ಟಿ. ಸಿದ್ದೀಕ್, ಕೆ.ಎಂ. ಶಾಜಿ, ಪಿ.ಕೆ. ಬಷೀರ್, ವಿ.ಇ. ಅಬ್ದುಲ್ ಗಫೂರ್, ಕೆ.ಎ. ತುಳಸಿ, ಮತ್ತು ಒ.ಜೆ. ಜನೀಶ್ ಸಂಪುಟ ಸೇರಲಿದ್ದಾರೆ. ಇನ್ನು ಹಿರಿಯ ಶಾಸಕ ತಿರುವಾಂಕುರು ರಾಧಾಕೃಷ್ಣನ್ ಸ್ಪೀಕರ್ ಆಗಿ ಹಾಗೂ ಶಾನಿಮೋಲ್ ಉಸ್ಮಾನ್ ಡೆಪ್ಯೂಟಿ ಸ್ಪೀಕರ್ ಆಗಲಿದ್ದಾರೆ.

ಮೈತ್ರಿಕೂಟದಲ್ಲಿ ಸೀಟುಗಳ ಹಂಚಿಕೆ ಹೀಗಿದೆ:

ಕಾಂಗ್ರೆಸ್: 12 ಸಚಿವ ಸ್ಥಾನ

ಮುಸ್ಲಿಂ ಲೀಗ್: 5 ಸಚಿವ ಸ್ಥಾನ

ಇತರ ಮೈತ್ರಿ ಪಕ್ಷಗಳು: 3 ಸಚಿವ ಸ್ಥಾನ

ಕೇರಳದ 140 ಸೀಟುಗಳ ಅಸೆಂಬ್ಲಿಯಲ್ಲಿ ಈ ಬಾರಿ ಯುಡಿಎಫ್ (UDF) ಮೈತ್ರಿಕೂಟ ಬರೊಬ್ಬರಿ 102 ಸೀಟುಗಳನ್ನು ಗೆದ್ದು ಬೀಗಿದೆ. ಎಡಪಕ್ಷಗಳ ಎಲ್‌ಡಿಎಫ್ (LDF) ಕೇವಲ 35 ಸೀಟುಗಳಿಗೆ ಸುರುಟಿಕೊಂಡಿದೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್: ಸತೀಶನ್ ಸಿಎಂ ಆಗಿದ್ದು ಹೆಂಗೆ?

ವಿ.ಡಿ. ಸತೀಶನ್ ಕೇರಳದಲ್ಲಿ ಸಖತ್ ಪಾಪ್ಯುಲರ್ ಲೀಡರ್. ಕಳೆದ 5 ವರ್ಷಗಳಿಂದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಅಸೆಂಬ್ಲಿಯಲ್ಲಿ ಸಿಂಹಸ್ವಪ್ನವಾಗಿದ್ದವರೇ ಇವರು. ಆದರೆ, ಚುನಾವಣೆ ಮುಗಿದು ಸಿಎಂ ಆಯ್ಕೆ ಬರುವಾಗ ಹೈಕಮಾಂಡ್ ಮಟ್ಟದ ಪ್ರಭಾವ ಬಳಸಿ ಕೆ.ಸಿ. ವೇಣುಗೋಪಾಲ್ ಅವರು ಸಿಎಂ ಪಟ್ಟಕ್ಕೆ ಭಾರಿ ಪೈಪೋಟಿ ನಡೆಸಿದ್ದರು. ಶಾಸಕರ ವೋಟಿಂಗ್‌ನಲ್ಲೂ ವೇಣುಗೋಪಾಲ್ ಪರವೇ ಮ್ಯಾಂಡೇಟ್ ಇತ್ತು ಎನ್ನಲಾಗಿತ್ತು. ರಮೇಶ್ ಚೆನ್ನಿತ್ತಲ ಕೂಡ ಲೈನ್ನಲ್ಲಿದ್ದರು.

ಆದರೆ ಸತೀಶನ್ ಪರವಾಗಿ ಕೇರಳದಲ್ಲಿ ದೊಡ್ಡ ಜನಬೆಂಬಲ ವ್ಯಕ್ತವಾಯಿತು. ಜೊತೆಗೆ ಯುಡಿಎಫ್ ಮೈತ್ರಿ ಪಕ್ಷವಾದ ಮುಸ್ಲಿಂ ಲೀಗ್‌ನ ಎಲ್ಲಾ 22 ಶಾಸಕರು "ಸತೀಶನ್ ಅವರನ್ನೇ ಸಿಎಂ ಮಾಡಿ" ಅಂತ ಹೈಕಮಾಂಡ್‌ಗೆ ಖಡಕ್ ಸಂದೇಶ ಕಳಿಸಿದರು. ಸೋಶಿಯಲ್ ಮೀಡಿಯಾದಲ್ಲೂ ಸತೀಶನ್ ಪರ ಸಖತ್ ಟ್ರೆಂಡ್ ಕ್ರಿಯೇಟ್ ಆಗಿತ್ತು. ಕೊನೆಗೆ ಎ.ಕೆ. ಆಂಟನಿ ಅವರಂಥ ಹಿರಿಯ ನಾಯಕರ ಸಲಹೆ ಪಡೆದ ರಾಹುಲ್ ಗಾಂಧಿ, ಜನರ ಮತ್ತು ಮೈತ್ರಿ ಪಕ್ಷಗಳ ಇಷ್ಟದಂತೆ ವಿ.ಡಿ. ಸತೀಶನ್ ಹೆಸರನ್ನು ಫೈನಲ್ ಮಾಡಿದರು. ಒಟ್ಟಿನಲ್ಲಿ ಕೇರಳದಲ್ಲಿ ಇಂದಿನಿಂದ 'ಸತೀಶನ್ ಯುಗ' ಶುರುವಾಗ್ತಿದೆ!

Latest News

Related News