ಇನ್ಮೇಲೆ ದೇವಸ್ಥಾನಗಳಲ್ಲಿ ರೀಲ್ಸ್ ಮಾಡಿದ್ರೆ ಬೀಳುತ್ತೆ ಬಾರಿ ದಂಡ - ಮುಜರಾಯಿ ಇಲಾಖೆಯಿಂದ ಬಂತು ಹೊಸ ಆದೇಶ!!

ಇಂದಿನ ಕಾಲದಲ್ಲಿ ಎಲ್ಲೆಂದರಲ್ಲಿ ವಿಡಿಯೋ ಮತ್ತು ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಇದು ದೇವಸ್ಥಾನಗಳಿಗೂ ಹಬ್ಬಿ ಭಕ್ತರ ನೆಮ್ಮದಿ ಕೆಡಿಸಿದೆ. ಈ ಸಮಸ್ಯೆಯನ್ನ ಹೋಗಲಾಡಿಸಲು ಮುಂದಾಗಿರುವ ಕರ್ನಾಟಕ ಸರ್ಕಾರವು, ಮುಜರಾಯಿ ಇಲಾಖೆಯ ಮೂಲಕ ಹೊಸ ಮಾರ್ಗಸೂಚಿಯನ್ನು ತಂದಿದೆ. ಇನ್ನು ಮುಂದೆ ದೇವಸ್ಥಾನದ ಒಳಗೆ ಫೋಟೋಶೂಟ್ ಮಾಡಲು ಇಲಾಖೆಯ ಅನುಮತಿ ಮತ್ತು ನಿಯಮಗಳು ಕಡ್ಡಾಯವಾಗಲಿವೆ ಎಂದು ತಿಳಿದುಬಂದಿದೆ. 

ದೇವಸ್ಥಾನಗಳಲ್ಲಿ ರೀಲ್ಸ್ ನಿಷೇಧ – ಮುಜರಾಯಿ ಇಲಾಖೆಯ ಹೊಸ ನಿಯಮಗಳು!!
ದೇವಸ್ಥಾನಗಳಲ್ಲಿ ರೀಲ್ಸ್ ನಿಷೇಧ – ಮುಜರಾಯಿ ಇಲಾಖೆಯ ಹೊಸ ನಿಯಮಗಳು!!

ದೇವಸ್ಥಾನಗಳು ಭಕ್ತಿ ಮತ್ತು ಶಾಂತಿಯ ಕೇಂದ್ರಗಳು ಆಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಸಿನಿಮೀಯ ಶೈಲಿಯಲ್ಲಿ ಹಾಡುಗಳಿಗೆ ನೃತ್ಯ ಮಾಡುವುದು, ವಿಚಿತ್ರವಾದ ವಿಡಿಯೋಗಳನ್ನು ಚಿತ್ರೀಕರಿಸುವುದು ದೇವಸ್ಥಾನದ ಗರ್ಭಗುಡಿ ಮತ್ತು ಆವರಣದ ಮರ್ಯಾದೆಗೆ ಚ್ಯುತಿ ತರುತ್ತಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು. ಭಕ್ತರು ದೇವರ ದರ್ಶನಕ್ಕೆ ಬಂದಾಗ ಈ ರೀಲ್ಸ್ ಮಾಡುವವರಿಂದ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯು ಈಗ ನಿಯಂತ್ರಣ ಹೇರಿದೆ.

ಹೊಸ ನಿಯಮಗಳಲ್ಲಿ ಏನಿದೆ?

ಮುಜರಾಯಿ ಇಲಾಖೆಯ ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ದೇವಸ್ಥಾನಗಳ ಒಳಗೆ ಯಾವುದೇ ರೀತಿಯ ವಾಣಿಜ್ಯ ಉದ್ದೇಶದ ಶೂಟಿಂಗ್ ಅಥವಾ ವೈಯಕ್ತಿಕ ರೀಲ್ಸ್‌ಗಳನ್ನು ಮನಬಂದಂತೆ ಮಾಡುವಂತಿಲ್ಲ. ಒಂದು ವೇಳೆ ಶೂಟಿಂಗ್ ಮಾಡಲೇಬೇಕೆಂದರೆ, ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

  • ಪೂರ್ವಾನುಮತಿ - ಶೂಟಿಂಗ್ ಮಾಡುವ ಮೊದಲು ದೇವಸ್ಥಾನದ ಆಡಳಿತ ಮಂಡಳಿ ಅಥವಾ ಮುಜರಾಯಿ ಇಲಾಖೆಯಿಂದ ಲಿಖಿತ ಅನುಮತಿ ಪಡೆಯಬೇಕು.
  • ನಿಗದಿತ ಶುಲ್ಕ - ಪ್ರೀ ವೆಡ್ಡಿಂಗ್ ಶೂಟಿಂಗ್, ಸಿನೆಮಾ ಚಿತ್ರೀಕರಣ ಅಥವಾ ವಾಣಿಜ್ಯ ಜಾಹೀರಾತುಗಳಿಗಾಗಿ ಇಲಾಖೆಯು ನಿರ್ದಿಷ್ಟ ಶುಲ್ಕವನ್ನು ನಿಗದಿಪಡಿಸಿದೆ. ಈ ಶುಲ್ಕವನ್ನು ಪಾವತಿಸಿದ ನಂತರವಷ್ಟೇ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತದೆ.
  • ಭಕ್ತರಿಗೆ ತೊಂದರೆಯಾಗದಂತೆ - ಯಾವುದೇ ಚಿತ್ರೀಕರಣವು ಭಕ್ತರ ದರ್ಶನದ ಮೇಲೆ ಅಥವಾ ದೇವಸ್ಥಾನದ ನಿತ್ಯದ ಪೂಜಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಬಾರದು.
  • ಗರ್ಭಗುಡಿ ನಿರ್ಬಂಧ - ಯಾವುದೇ ಕಾರಣಕ್ಕೂ ದೇವಸ್ಥಾನದ ಗರ್ಭಗುಡಿಯ ಒಳಗೆ ಚಿತ್ರೀಕರಣ ಮಾಡಲು ಅವಕಾಶವಿಲ್ಲ.

ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಭಕ್ತರು ಮತ್ತು ಹಿರಿಯರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. 'ದೇವಸ್ಥಾನಕ್ಕೆ ಹೋಗುವುದು ದೈವಿಕ ಅನುಭವಕ್ಕಾಗಿ, ಅಲ್ಲಿ ಕ್ಯಾಮೆರಾ ಹಿಡಿದು ನಾಟಕ ಮಾಡುವುದಕ್ಕಲ್ಲ' ಎಂಬುದು ಅವರ ವಾದ. ಮತ್ತೊಂದೆಡೆ, ಸೃಜನಶೀಲ ಕೆಲಸಗಳಿಗಾಗಿ ದೇವಸ್ಥಾನದ ಸುಂದರ ವಾಸ್ತುಶಿಲ್ಪವನ್ನು ಬಳಸಿಕೊಳ್ಳಲು ಶುಲ್ಕದ ಹೊರೆ ಹೆಚ್ಚಾಯಿತು ಎಂದು ಕೆಲವು ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.

ದೇವಸ್ಥಾನದ ಆಚಾರ ವಿಚಾರಗಳನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆಧುನಿಕತೆಯ ಹೆಸರಿನಲ್ಲಿ ಧಾರ್ಮಿಕ ಕೇಂದ್ರಗಳನ್ನು ಮನರಂಜನಾ ತಾಣಗಳನ್ನಾಗಿ ಮಾಡುವುದು ಸರಿಯಲ್ಲ ಎಂಬ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಇನ್ನು ಮುಂದೆ ದೇವಸ್ಥಾನಗಳಲ್ಲಿ ರೀಲ್ಸ್ ಮಾಡುವ ಮುನ್ನ ಹತ್ತು ಬಾರಿ ಯೋಚಿಸಬೇಕಾಗಿದೆ. ಈ ಹೊಸ ನಿಯಮಗಳು ದೇವಸ್ಥಾನಗಳಲ್ಲಿ ಶಿಸ್ತು ಮತ್ತು ಶಾಂತಿಯನ್ನು ಕಾಪಾಡಲು ಸಹಕಾರಿಯಾಗಲಿವೆ ಎಂಬ ಆಶಯ ಎಲ್ಲರದ್ದಾಗಿದೆ. 

Latest News