ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಡಿ.ಎಡ್, ಬಿ.ಎಡ್ ಮುಗಿಸಿ ಮನೆ ಮುಂದೆ ಕಾಯುತ್ತಿರುವ ಶಿಕ್ಷಕ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ! 2026-27ನೇ ಹೊಸ ಶೈಕ್ಷಣಿಕ ಸಾಲು ಆರಂಭವಾಗುತ್ತಿರುವ ಬೆನ್ನಲ್ಲೇ, ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 51,000 ಅತಿಥಿ ಶಿಕ್ಷಕರ (Guest Teachers) ತಾತ್ಕಾಲಿಕ ನೇಮಕಾತಿಗೆ ಅಧಿಕೃತ ಆದೇಶ ಹೊರಬಿದ್ದಿದೆ.
ಬೇಸಿಗೆ ರಜೆ ಮುಗಿದು ಮೇ ತಿಂಗಳಿನಲ್ಲೇ ಶಾಲೆಗಳು ಬೇಗನೆ ಶುರುವಾಗುತ್ತಿರುವುದರಿಂದ, ಮಕ್ಕಳಿಗೆ ಮೊದಲ ದಿನದಿಂದಲೇ ಪಾಠ ಪ್ರವಚನಗಳಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಹುದ್ದೆಗಳ ಕಂಪ್ಲೀಟ್ ವಿವರ ಹೀಗಿದೆ:
ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಒಟ್ಟು 51,000 ಶಿಕ್ಷಕರನ್ನು ತಗೆದುಕೊಳ್ಳಲಾಗುತ್ತಿದೆ. ಅದರ ಡಿಟೇಲ್ಸ್ ಇಲ್ಲಿದೆ:
ಸರ್ಕಾರಿ ಪ್ರಾಥಮಿಕ ಶಾಲೆಗಳು - 40,000 ಹುದ್ದೆಗಳು
ಸರ್ಕಾರಿ ಪ್ರೌಢಶಾಲೆಗಳು - 11,000 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ - 51,000 ಹುದ್ದೆಗಳು
ನೇಮಕಾತಿಯ ಪ್ರಮುಖ ನಿಯಮಗಳು ಮತ್ತು ಷರತ್ತುಗಳು;
ಇದು ಖಾಯಂ ಕೆಲಸವಲ್ಲ, ಸಂಪೂರ್ಣವಾಗಿ ತಾತ್ಕಾಲಿಕ ನೇಮಕಾತಿಯಾಗಿದೆ. ಸರ್ಕಾರವು ಈ ಹುದ್ದೆಗಳಿಗೆ ಕೆಲವು ಪ್ರಮುಖ ರೂಲ್ಸ್ ಫಿಕ್ಸ್ ಮಾಡಿದೆ;
ಸೇವಾ ಅವಧಿ - ಈ ಅತಿಥಿ ಶಿಕ್ಷಕರನ್ನು ಪ್ರಸ್ತುತ ಶೈಕ್ಷಣಿಕ ವರ್ಷದ (2026-27) ಕೊನೆಯವರೆಗೆ ಅಥವಾ ಸರ್ಕಾರದಿಂದ ಖಾಯಂ ಶಿಕ್ಷಕರು ನೇಮಕವಾಗಿ ಬರುವವರೆಗೆ ಮಾತ್ರ ಕೆಲಸದಲ್ಲಿ ಇಟ್ಟುಕೊಳ್ಳಲಾಗುತ್ತದೆ.
ಆರ್ಥಿಕ ಇಲಾಖೆ ಒಪ್ಪಿಗೆ - ಈ ನೇಮಕಾತಿಗೆ ಮೇ 20, 2026 ರಂದು ರಾಜ್ಯ ಆರ್ಥಿಕ ಇಲಾಖೆಯು ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ, ಇವರ ಗೌರವಧನ (Salary) ಪಾವತಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಯಾರಿಗೆ ಲಾಭ? - ಕಳೆದ ವರ್ಷವೂ ಸರ್ಕಾರ ಇಷ್ಟೇ ಸಂಖ್ಯೆಯ ಶಿಕ್ಷಕರನ್ನು ನೇಮಿಸಿತ್ತು. ಈ ಬಾರಿಯೂ ಶಾಲೆಯ ಮೊದಲ ದಿನದಿಂದಲೇ ಇವರು ಲಭ್ಯವಾಗುವುದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಶಿಕ್ಷಕ ಆಕಾಂಕ್ಷಿಗಳಿಗೆ ಇಲ್ಲಿದೆ ಕಿವಿಮಾತು:
ಅತಿಥಿ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳು ಒಂದು ಪ್ರಮುಖ ವಿಷಯವನ್ನು ನೆನಪಿನಲ್ಲಿಡಬೇಕು. ಈ ನೇಮಕಾತಿಗೆ ಯಾವುದೇ ತರಹದ ಕೇಂದ್ರೀಕೃತ ಆನ್‌ಲೈನ್ ಅರ್ಜಿ ಅಥವಾ ವೆಬ್‌ಸೈಟ್ ಇರುವುದಿಲ್ಲ!
ಹಾಗಾದರೆ ಆಯ್ಕೆ ಹೇಗೆ ನಡೆಯುತ್ತದೆ?
ನಿಮ್ಮ ಭಾಗದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿ ಅಥವಾ ಆಯಾ ಸರ್ಕಾರಿ ಶಾಲೆಯ ಹಂತದಲ್ಲೇ ಈ ಪ್ರಕ್ರಿಯೆ ನಡೆಯುತ್ತದೆ. ಆಯಾ ಶಾಲೆಯ ಮುಖ್ಯೋಪಾಧ್ಯಾಯರು (Headmasters) ಮತ್ತು ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (SDMC) ಪದಾಧಿಕಾರಿಗಳು ಮೆರಿಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಆದ್ದರಿಂದ, ಡಿ.ಎಡ್ (D.Ed) ಅಥವಾ ಬಿ.ಎಡ್ (B.Ed) ಮುಗಿಸಿ ರೆಡಿಯಾಗಿರುವ ಅಭ್ಯರ್ಥಿಗಳು ತಡ ಮಾಡದೆ ತಮ್ಮ ಮೂಲ ದಾಖಲಾತಿಗಳು, ಅಂಕಪಟ್ಟಿಗಳು ಮತ್ತು ರೆಸ್ಯೂಮ್ (Resume) ಅನ್ನು ಕೈಯಲ್ಲಿ ಇಟ್ಟುಕೊಳ್ಳಿ. ನಿಮ್ಮ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸುವುದು ಒಳ್ಳೆಯದು. ಶಾಲೆಗಳು ಆರಂಭವಾಗುತ್ತಿದ್ದಂತೆಯೇ ಪ್ರಕ್ರಿಯೆ ಚುರುಕಾಗಲಿದ್ದು, ಮೊದಲು ಬಂದವರಿಗೆ ಆದ್ಯತೆ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.