ಉದ್ಯೋಗಾಕಾಂಕ್ಷಿಗಳಿಗೆ ಶಿಕ್ಷಣ ಇಲಾಖೆಯಿಂದ ಬಂಪರ್ ಗಿಫ್ಟ್ - ಮುಂದಿನ 100 ದಿನಗಳಲ್ಲಿ 15,000 ಶಿಕ್ಷಕರ ನೇಮಕಾತಿ!!

ರಾಜ್ಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ಕನಸು ಕಾಣ್ತಾ ಇರೋ ಉದ್ಯೋಗಾಕಾಂಕ್ಷಿಗಳಿಗೆ ಶಿಕ್ಷಣ ಇಲಾಖೆ ಇವತ್ತು ಒಂದು ಸೂಪರ್ ಗುಡ್ ನ್ಯೂಸ್ ಕೊಟ್ಟಿದೆ. ಕಳೆದ ಕೆಲವು ವರ್ಷಗಳಿಂದ ನೋಟಿಫಿಕೇಶನ್‌ಗಾಗಿ ಕಾಯ್ತಾ ಕುಳಿತಿದ್ದ ಅಭ್ಯರ್ಥಿಗಳಿಗೆ ಇದು ನಿಜಕ್ಕೂ ಒಂದು ಸುವರ್ಣ ಅವಕಾಶ. ಹೌದು, ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲೂ ಭರ್ಜರಿ ಸುಧಾರಣೆಗೆ ಕೈ ಹಾಕಿದ್ದು, ಮುಂದಿನ ಬರೀ 100 ದಿನಗಳ ಒಳಗಾಗಿ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕಂಪ್ಲೀಟ್ ಮಾಡಲು ಶಿಕ್ಷಣ ಇಲಾಖೆ ಭರ್ಜರಿ ಪ್ಲಾನ್ ಮಾಡಿಕೊಂಡಿದೆ.

1ನೇ ತರಗತಿಯಿಂದಲೇ ಕಂಪ್ಯೂಟರ್ ಪಾಠ ಮಾಡಲು ಬರ್ತಿದ್ದಾರೆ 2,500 ಐಟಿ ಶಿಕ್ಷಕರು | Photo Credit: www.telegraphindia.com
1ನೇ ತರಗತಿಯಿಂದಲೇ ಕಂಪ್ಯೂಟರ್ ಪಾಠ ಮಾಡಲು ಬರ್ತಿದ್ದಾರೆ 2,500 ಐಟಿ ಶಿಕ್ಷಕರು | Photo Credit: www.telegraphindia.com

ಅತಿ ಮುಖ್ಯವಾದ ವಿಷಯ ಅಂದ್ರೆ, ಮುಂದಿನ ವಾರದಲ್ಲೇ ಈ ಬೃಹತ್ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ (Notification) ಹೊರಬೀಳಲಿದೆ. ಅಲ್ಲಿಂದ ಕೇವಲ ಎರಡು ತಿಂಗಳ ಒಳಗೆ ಪರೀಕ್ಷೆ ನಡೆಸಿ, ರಿಸಲ್ಟ್ ಕೂಡ ಅನೌನ್ಸ್ ಮಾಡಲು ಇಲಾಖೆ ಶರವೇಗದಲ್ಲಿ ತಯಾರಿ ನಡೆಸಿದೆ.

ಇವತ್ತಿನ ಬಿಗ್ ಅಪ್ಡೇಟ್ಸ್ ಏನು?

  • ಮುಂದಿನ 100 ದಿನಗಳ ಒಳಗೆ 15,000 ಪ್ರಾಥಮಿಕ ಶಾಲಾ ಶಿಕ್ಷಕ ರ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಲಿದೆ.
  • ಸರ್ಕಾರಿ ಶಾಲೆಗಳ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ಸಿಗಬೇಕು ಅನ್ನೋ ಉದ್ದೇಶದಿಂದ ಹೊಸದಾಗಿ 2,500 ಐಟಿ (IT) ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ.
  • ಮುಂದಿನ ವಾರವೇ ಅಫೀಶಿಯಲ್ ನೋಟಿಫಿಕೇಶನ್ ಪ್ರಕಟವಾಗಲಿದ್ದು, ಅಲ್ಲಿಂದ ಎರಡೇ ತಿಂಗಳಲ್ಲಿ ಎಕ್ಸಾಮ್ ಮುಗಿಯಲಿದೆ.

ಸರ್ಕಾರಿ ಶಾಲೆಗಳಿಗೆ ಸಿಗಲಿದ್ದಾರೆ 2500 ಐಟಿ ಶಿಕ್ಷಕರು

ಸದ್ಯದ ಲೆಕ್ಕಾಚಾರದ ಪ್ರಕಾರ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬರೋಬ್ಬರಿ 80 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆಯಿದೆ. ಇದರಿಂದಾಗಿ ಸರ್ಕಾರಿ ಶಾಲಾ ಮಕ್ಕಳ ಓದಿಗೆ ತೊಂದರೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಒಟ್ಟು 51 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ.

ಈ 51 ಸಾವಿರ ಹುದ್ದೆಗಳ ಪೈಕಿ ಮೊದಲ ಹಂತವಾಗಿ ಈಗ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ದೈಹಿಕ ಶಿಕ್ಷಣ (Physical Education) ಶಿಕ್ಷಕರು ಇರಲಿದ್ದಾರೆ. ಇದರ ಜೊತೆಗೆ ಇವತ್ತಿನ ಡಿಜಿಟಲ್ ಜಮಾನಾಕ್ಕೆ ತಕ್ಕಂತೆ, ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿಯೇ ವಿಶೇಷವಾಗಿ 2,500 ಐಟಿ (ಮಾಹಿತಿ ತಂತ್ರಜ್ಞಾನ) ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿರುವುದು ಈ ಬಾರಿಯ ನೇಮಕಾತಿಯ ಅತಿ ದೊಡ್ಡ ಹೈಲೈಟ್. ಈ ಎಲ್ಲಾ ಹೊಸ ಶಿಕ್ಷಕರು ಇದೇ ಶೈಕ್ಷಣಿಕ ವರ್ಷದಲ್ಲೇ ಶಾಲೆಗಳಲ್ಲಿ ಪಾಠ ಮಾಡಲು ಲಭ್ಯವಾಗಲಿದ್ದಾರೆ.

ಕೇವಲ ಎರಡೇ ತಿಂಗಳಲ್ಲಿ ಪರೀಕ್ಷೆ ಮತ್ತು ರಿಸಲ್ಟ್ಸ್

ಇಷ್ಟು ದಿನ ಸರ್ಕಾರಿ ಹುದ್ದೆಗಳ ನೇಮಕಾತಿ ಅಂದ್ರೆ ವರ್ಷಗಟ್ಟಲೆ ನುಜ್ಜುಗುಜ್ಜಾಗಬೇಕಿತ್ತು. ಆದರೆ ಈ ಬಾರಿ ಶಿಕ್ಷಣ ಇಲಾಖೆ ಹೊಸ ಸಿಆರ್‌ ಆಂಡ್ ಆರ್‌ (C&R) ನಿಯಮಾವಳಿಗಳ ಅಡಿಯಲ್ಲಿ PSTR, GPSTR ಹಾಗೂ HSTR ಹುದ್ದೆಗಳ ಕಂಪ್ಲೀಟ್ ವಿವರಗಳನ್ನು ಬಿಡುಗಡೆ ಮಾಡಲಿದೆ. ಎಲ್ಲೂ ತಡ ಮಾಡದೆ, ನೋಟಿಫಿಕೇಶನ್ ಹೊರಬಿದ್ದ ಕೇವಲ ಎರಡು ತಿಂಗಳ ಒಳಗೆ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವ ಮೂಲಕ ಇಡೀ ಪ್ರಕ್ರಿಯೆಯನ್ನು ರಾಕೆಟ್ ವೇಗದಲ್ಲಿ ಮುಗಿಸಲು ಇಲಾಖೆ ಸಜ್ಜಾಗಿದೆ.

ಹಲವು ವರ್ಷಗಳಿಂದ ಬಿಎಡ್, ಡಿಎಡ್ ಮುಗಿಸಿ ಟಿಇಟಿ ಪಾಸ್ ಮಾಡಿಕೊಂಡು ಮನೆಯಲ್ಲೇ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದು ಕೊನೆಗೂ ಸಿಕ್ಕ ಸುವರ್ಣ ಅವಕಾಶ. ಇಲಾಖೆ ಕೂಡ ಅಭ್ಯರ್ಥಿಗಳಿಗೆ ತಡ ಮಾಡದೆ ತಕ್ಷಣವೇ ಪರೀಕ್ಷಾ ಸಿದ್ಧತೆ ಆರಂಭಿಸುವಂತೆ ಕೋರಿದೆ.

Latest News