Dec 12, 2025 Languages : ಕನ್ನಡ | English

ಕಲಬುರಗಿಯಲ್ಲಿ ಅಪರೂಪದ ಮದುವೆ!! ಅಥಿತಿಗಳಿಗೆ ಕನ್ನಡ ಬಾವುಟ, ಪುಸ್ತಕ ಉಡುಗೊರೆ ಕೊಟ್ಟ ಈ ಜೋಡಿ

ಕಲಬುರಗಿ ನಗರದಲ್ಲಿ ನಡೆದ ಪ್ರಕಾಶ್ ಮತ್ತು ಪಾರ್ವತಿ ಮದುವೆ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿದ್ದು, ಅತಿಥಿಗಳಿಗೆ ನೀಡಿದ ವಿಶಿಷ್ಟ ಉಡುಗೊರೆಯಿಂದ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಮದುವೆಗಳಲ್ಲಿ ಅತಿಥಿಗಳಿಗೆ ಭೋಜನದ ಮೂಲಕ ಆತಿಥ್ಯ ನೀಡುವುದು ಸಂಪ್ರದಾಯ. ಆದರೆ ಈ ಮದುವೆಯಲ್ಲಿ ಅತಿಥಿಗಳಿಗೆ ಕನ್ನಡ ಬಾವುಟ ಮತ್ತು ಪುಸ್ತಕ ನೀಡುವ ಮೂಲಕ ಕನ್ನಡಾಭಿಮಾನವನ್ನು ಮೆರೆದಿದ್ದಾರೆ. ಮದುವೆಗೆ ಬಂದಿದ್ದ ಅತಿಥಿಗಳಿಗೆ ಭೂರಿ ಭೋಜನದ ಜೊತೆಗೆ ಕನ್ನಡದ ರಸದೌತಣವನ್ನು ಉಣಬಡಿಸಲಾಯಿತು. ಅತಿಥಿಗಳನ್ನು ಗೌರವಿಸುವ ಸಂದರ್ಭದಲ್ಲಿ, ನಾಡ ಧ್ವಜದ ಶಾಲು ಹೊದಿಸಿ ಕನ್ನಡ ಪುಸ್ತಕವನ್ನು ಹಸ್ತಾಂತರಿಸುವ ಮೂಲಕ ಕುಟುಂಬವು ತಮ್ಮ ಕನ್ನಡ ಪ್ರೀತಿಯನ್ನು ವ್ಯಕ್ತಪಡಿಸಿದೆ. ಈ ಕೃತ್ಯವು ಅತಿಥಿಗಳಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಅತಿಥಿಗಳಿಗೆ ಕನ್ನಡ ಬಾವುಟ ಮತ್ತು ಪುಸ್ತಕ ಉಡುಗೊರೆ
ಅತಿಥಿಗಳಿಗೆ ಕನ್ನಡ ಬಾವುಟ ಮತ್ತು ಪುಸ್ತಕ ಉಡುಗೊರೆ

ಮದುವೆಯ ಅತಿಥಿಗಳು, “ಇದು ನಿಜಕ್ಕೂ ಅಪರೂಪದ ಸಂಭ್ರಮ. ಮದುವೆಯಲ್ಲಿ ಕನ್ನಡದ ಗೌರವವನ್ನು ಹೀಗೆ ತೋರಿಸುವುದು ಹೆಮ್ಮೆಗೇ ಕಾರಣ” ಎಂದು ಅಭಿಪ್ರಾಯಪಟ್ಟರು. ಕನ್ನಡದ ಸಂಸ್ಕೃತಿ, ಸಾಹಿತ್ಯ ಮತ್ತು ನಾಡದ್ರೋಹಿ ಚಳುವಳಿಗಳ ವಿರುದ್ಧದ ಬದ್ಧತೆಯನ್ನು ಈ ರೀತಿಯ ಉಡುಗೊರೆಗಳು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಈ ಮದುವೆಯ ಮೂಲಕ ಪ್ರಕಾಶ–ಪಾರ್ವತಿ ಕುಟುಂಬವು ಕನ್ನಡದ ಪರಂಪರೆ ಮತ್ತು ಭಾಷೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ಮದುವೆಯಂತಹ ಸಾಮಾಜಿಕ ಸಂದರ್ಭಗಳಲ್ಲಿ ಕನ್ನಡದ ಗೌರವವನ್ನು ಕಾಪಾಡುವ ಪ್ರಯತ್ನವು ಸಮಾಜದಲ್ಲಿ ಹೊಸ ಸಂದೇಶವನ್ನು ಹರಡಿದೆ.

ಕಲಬುರಗಿಯ ಈ ಮದುವೆ, ಅತಿಥಿಗಳಿಗೆ ನೀಡಿದ ಕನ್ನಡ ಬಾವುಟ ಮತ್ತು ಪುಸ್ತಕದ ಉಡುಗೊರೆಯಿಂದ, ಕನ್ನಡಾಭಿಮಾನವನ್ನು ಆಚರಿಸಿದ ಅಪರೂಪದ ಕ್ಷಣವಾಗಿ ನೆನಪಾಗಲಿದೆ. ನೂತನ ದಾಂಪತ್ಯ ಜೀವನ ಆರಂಭಿಸಲಿರುವ ಈ ಜೋಡಿಗೆ ಶುಭಕೋರಿ ಧನ್ಯವಾದಗಳು. 

Latest News