ಮೇ 17 – ಡಿಜಿಟಲ್ ಇಂಡಿಯಾ ಟು ಡಿಜಿಟಲ್ ವರ್ಲ್ಡ್ ವಿಶೇಷ - ಯಾಕೆ ಗೋತ್ತಾ?

ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ನಾವೆಲ್ಲಾ ಮಾಡುವ ಮೊದಲ ಕೆಲಸವೇ ಮೊಬೈಲ್ ಚೆಕ್ ಮಾಡೋದು. ಒಂದೋ ವಾಟ್ಸಾಪ್ ನೋಟಿಫಿಕೇಶನ್, ಇಲ್ಲಾಂದ್ರೆ ಇನ್‌ಸ್ಟಾಗ್ರಾಮ್ ರೀಲ್ಸ್! ನಮಗೇ ಗೊತ್ತಿಲ್ಲದ ಹಾಗೆ ಇಂಟರ್ನೆಟ್ ನಮ್ಮ ಉಸಿರಾಗಿಬಿಟ್ಟಿದೆ. ಒಂದು ಕ್ಷಣ ಯೋಚಿಸಿ, ಇವತ್ತು ಇಂಟರ್ನೆಟ್ ಬಂದ್ ಆದ್ರೆ ಏನಾಗಬಹುದು? ಅಬ್ಬಬ್ಬಾ! ಇಡೀ ಪ್ರಪಂಚವೇ ಉಸಿರು ಬಿಗಿ ಹಿಡಿದು ನಿಂತ ಹಾಗೆ ಆಗುತ್ತೆ ಅಲ್ವಾ? ನಮಗೆ ಇಂತಹ ಸೂಪರ್ ಫಾಸ್ಟ್ 'ಕನೆಕ್ಷನ್' ಕೊಟ್ಟ ಈ ದೂರಸಂಪರ್ಕ ವ್ಯವಸ್ಥೆಗೆ ಥ್ಯಾಂಕ್ಸ್ ಹೇಳೋ ದಿನವೇ ಈ ಮೇ 17.

ಇಂಟರ್ನೆಟ್ ಇಲ್ಲದ ಪ್ರಪಂಚ ಊಹಿಸಿಕೊಳ್ಳಿ | Photo Credit: AI
ಇಂಟರ್ನೆಟ್ ಇಲ್ಲದ ಪ್ರಪಂಚ ಊಹಿಸಿಕೊಳ್ಳಿ | Photo Credit: AI

ಇದ್ಯಾಕೆ ಮೇ 17 ರಂದೇ?

ನಾವು ಇವತ್ತು 5G ಸ್ಪೀಡ್‌ನಲ್ಲಿ ಹಾರಾಡುತ್ತಿದ್ದೇವೆ ನಿಜ, ಆದ್ರೆ ಈ ಕಥೆ ಶುರುವಾಗಿದ್ದು ಬರೋಬ್ಬರಿ 160 ವರ್ಷಗಳ ಹಿಂದೆ! 1865ರ ಮೇ 17ರಂದು, ಜಗತ್ತಿನ ಹಲವಾರು ದೇಶಗಳು ಸೇರಿ 'ಟೆಲಿಗ್ರಾಫ್' (ಅವತ್ತಿನ ಕಾಲದ ಮೆಸೇಜ್ ಕಿಂಗ್) ಬಗ್ಗೆ ಒಂದು ದೊಡ್ಡ ಒಪ್ಪಂದ ಮಾಡಿಕೊಂಡವು. ಅಂದೇ ಅಂತರರಾಷ್ಟ್ರೀಯ ದೂರಸಂಪರ್ಕ ಸಂಘಟನೆ (ITU) ಜನ್ಮತಾಳಿತು. ಅದರ ನೆನಪಿಗಾಗಿ ಪ್ರತಿ ವರ್ಷ ಈ ಹಬ್ಬ! 2006ರಿಂದ ಇದಕ್ಕೆ 'ಮಾಹಿತಿ ಸಮಾಜ ದಿನ' ಅನ್ನೋ ಹೆಸರನ್ನೂ ಸೇರಿಸಲಾಯಿತು.

ಬದಲಾದ ಬದುಕು: ಅಂದಿನ ಪತ್ರದಿಂದ ಇಂದಿನ ವೀಡಿಯೊ ಕಾಲ್‌ವರೆಗೆ!

ಒಂದು ಕಾಲದಲ್ಲಿ ಪತ್ರ ತಲುಪಲು ವಾರಗಟ್ಟಲೆ ಕಾಯಬೇಕಿತ್ತು. ಇವತ್ತು ಅಮೇರಿಕಾದಲ್ಲಿರೋ ಫ್ರೆಂಡ್ ಯಾವ ಹೋಟೆಲ್‌ನಲ್ಲಿ ಕೂತು ಏನು ತಿನ್ನುತ್ತಿದ್ದಾನೆ ಅಂತ ವೀಡಿಯೊ ಕಾಲ್‌ನಲ್ಲಿ ಲೈವ್ ಆಗಿ ನೋಡಬಹುದು!

ಹಳ್ಳಿ ಮಕ್ಕಳೂ ಹೈಟೆಕ್: ಹಳ್ಳಿಯ ಯಾವುದೋ ಮೂಲೆಯಲ್ಲಿರೋ ಮಗು ಇವತ್ತು ಯೂಟ್ಯೂಬ್ ನೋಡಿ ಕೋಡಿಂಗ್ ಕಲಿತು ಸಾಫ್ಟ್‌ವೇರ್ ಮಾಡಬಲ್ಲದು.

ಟ್ರಾಫಿಕ್ ಕಿರಿಕಿರಿ ಇಲ್ಲ: ಇಂಟರ್ನೆಟ್ ಇರೋದ್ರಿಂದಲೇ ಮನೆಯಲ್ಲೇ ಕೂತು ಆರಾಮಾಗಿ ಆಫೀಸ್ ಕೆಲಸ (Work From Home) ಮಾಡೋಕೆ ಸಾಧ್ಯವಾಗಿದೆ.

ಆರೋಗ್ಯ ಹಸ್ತ: ಫೋನಿನಲ್ಲೇ ಡಾಕ್ಟರ್ ಹತ್ತಿರ ಮಾತಾಡಿ ಪ್ರಿಸ್ಕ್ರಿಪ್ಷನ್ ಪಡೆಯೋದು ಈಗ ನೀರು ಕುಡಿದಷ್ಟೇ ಸುಲಭ.

ಎಲ್ಲರಿಗೂ ಈ ಸೌಲಭ್ಯ ಸಿಕ್ಕಿದೆಯೇ?

ಇಲ್ಲೇ ನೋಡಿ ಅಸಲಿ ಕಿರಿಕಿರಿ ಇರೋದು. ನಾವು ಬೆಂಗಳೂರಿನಲ್ಲಿ ಕೂತು ಸಖತ್ ಸ್ಪೀಡ್ ಇಂಟರ್ನೆಟ್ ಎಂಜಾಯ್ ಮಾಡ್ತೀವಿ. ಆದ್ರೆ ಇವತ್ತಿಗೂ ಎಷ್ಟೋ ಹಳ್ಳಿಗಳಲ್ಲಿ ಒಂದು ಫೋನ್ ಕಾಲ್ ಮಾಡೋಕೆ ಜನ ಬೆಟ್ಟ ಹತ್ತಬೇಕಿದೆ. ಇದನ್ನೇ 'ಡಿಜಿಟಲ್ ವಿಭಜನೆ' ಅನ್ನೋದು. ಅಂದ್ರೆ ಸೌಲಭ್ಯ ಇರೋರಿಗೂ ಮತ್ತು ಇಲ್ಲದವರಿಗೂ ಇರೋ ದೊಡ್ಡ ಕಂದಕ. ಈ ಅಂತರವನ್ನು ಮುಚ್ಚೋದೇ ಈ ದಿನದ ನಿಜವಾದ ಟಾರ್ಗೆಟ್.

ಸ್ವಲ್ಪ ಹುಷಾರು ಸಹ ಇರಲಿ!

ತಂತ್ರಜ್ಞಾನ ಬೆಳೆದ ಹಾಗೆ ಡಿಜಿಟಲ್ ಕಳ್ಳರು ಕೂಡ ಸ್ಮಾರ್ಟ್ ಆಗಿದ್ದಾರೆ. ಓಟಿಪಿ ಶೇರ್ ಮಾಡೋದು, ಅನಾಮಧೇಯ ಲಿಂಕ್ ಕ್ಲಿಕ್ ಮಾಡೋದು ನಮಗೆ ದೊಡ್ಡ ಆಪತ್ತು ತರಬಹುದು. ಫೋನ್ ಸ್ಮಾರ್ಟ್ ಆದ್ರೆ ಸಾಲದು, ಬಳಸೋ ನಾವೂ 'ಡಿಜಿಟಲ್ ಸೆಕ್ಯೂರಿಟಿ' ವಿಷಯದಲ್ಲಿ ಸ್ವಲ್ಪ ಸ್ಮಾರ್ಟ್ ಆಗಿರಬೇಕು.

ನಮ್ಮಿಂದ ಏನಾಗುತ್ತೆ?
ಬರೀ ವಾಟ್ಸಾಪ್ ಸ್ಟೇಟಸ್ ಹಾಕೋದ್ರಿಂದ ಈ ದಿನಕ್ಕೆ ಅರ್ಥ ಬರಲ್ಲ. ನಾವೇನು ಮಾಡಬಹುದು ಅಂದ್ರೆ:

ನಿಮ್ಮ ಅಮ್ಮನಿಗೆ ಆನ್‌ಲೈನ್‌ನಲ್ಲಿ ಕರೆಂಟ್ ಬಿಲ್ ಕಟ್ಟೋದು ಹೇಗೆ ಅಂತ ಫ್ರೆಂಡ್ಲಿಯಾಗಿ ಕಲಿಸಿಕೊಡಿ.

ನಿಮ್ಮ ತಂದೆಗೆ ಮೊಬೈಲ್ ಬ್ಯಾಂಕಿಂಗ್ ಮಾಡುವಾಗ ಯಾವ ಸುಳ್ಳು ಕರೆಗಳಿಗೆ ಮರುಳಾಗಬಾರದು ಅಂತ ತಿಳಿಸಿ ಹೇಳಿ.

ರೈತರಿಗೆ ಮಳೆ ಮತ್ತು ಬೆಳೆಗಳ ಮಾಹಿತಿ ನೀಡೋ ಆಪ್‌ಗಳನ್ನು ಅವರ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಡಿ.

Latest News