ಭಾರತೀಯ ನೌಕಾಪಡೆಯಲ್ಲಿ (Indian Navy) ಸೇವೆ ಸಲ್ಲಿಸಬೇಕು, ದೇಶದ ಹೆಮ್ಮೆಯ ಅಧಿಕಾರಿಯಾಗಿ ಮಿಂಚಬೇಕು ಎಂಬ ಕನಸು ನಿಮಗಿದೆಯೇ? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಇಂಡಿಯನ್ ನೇವಿ ಇದೀಗ ಶಾರ್ಟ್ ಸರ್ವಿಸ್ ಕಮಿಷನ್ (SSC) ಅಡಿಯಲ್ಲಿ ಇನ್ಫಾರ್ಮೇಷನ್ ಟೆಕ್ನಾಲಜಿ (IT) ವಿಭಾಗದ ಎಕ್ಸಿಕ್ಯೂಟಿವ್ ಹುದ್ದೆಗಳನ್ನ ಭರ್ತಿ ಮಾಡಲು ಅಧಿಕೃತ ನೋಟಿಫಿಕೇಶನ್ ಹೊರಡಿಸಿದೆ.
ವಿಶೇಷ ಅಂದ್ರೆ, ಈ ಹುದ್ದೆಗೆ ಯಾವುದೇ ಕಠಿಣವಾದ ಲಿಖಿತ ಪರೀಕ್ಷೆ ಇರುವುದಿಲ್ಲ! ಹೌದು, ನೀವು ಓದಿದ್ದು ಸರಿ. ನಿಮ್ಮ ಡಿಗ್ರಿ ಅಂಕಗಳ ಆಧಾರದ ಮೇಲೆ ನೀವು ನೇರವಾಗಿ ಅಧಿಕಾರಿ ಹುದ್ದೆಗೆ ಏರಬಹುದು!
ಹುದ್ದೆಗಳ ವಿವರ ಮತ್ತು ಸಂಬಳ;
ಈ ನೇಮಕಾತಿಯಲ್ಲಿ ಒಟ್ಟು 15 ಖಾಲಿ ಹುದ್ದೆಗಳಿದ್ದು, ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇರಳದ ಎಳಿಮಲಾದಲ್ಲಿರುವ ನೇವಲ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಮುಗಿದ ಮೇಲೆ ನಿಮಗೆ 'ಸಬ್-ಲೆಫ್ಟಿನೆಂಟ್' (Sub Lieutenant) ಹುದ್ದೆ ಸಿಗಲಿದ್ದು, ತಿಂಗಳಿಗೆ ಬರೋಬ್ಬರಿ ₹56,100/- ಆರಂಭಿಕ ಮೂಲ ವೇತನ ಸಿಗಲಿದೆ. ಇದರ ಜೊತೆಗೆ ಇತರ ಭತ್ಯೆಗಳೂ ಇರಲಿವೆ.
ಈ ಕೆಲಸಕ್ಕೆ ಅರ್ಹತೆ ಏನು?
ಅರ್ಜಿ ಸಲ್ಲಿಸುವ ಮೊದಲು ನೀವು ಈ ಕೆಳಗಿನ ಅರ್ಹತೆಗಳನ್ನು ಹೊಂದಿದ್ದೀರಾ ಎಂದು ಚೆಕ್ ಮಾಡಿಕೊಳ್ಳಿ:
ವಿದ್ಯಾರ್ಹತೆ: - ನೀವು BE/B.Tech, M.Tech, MSc (Computer Science/IT/Software) ಅಥವಾ MCA ಮುಗಿಸಿರಬೇಕು. ನಿಮ್ಮ ಪದವಿಯಲ್ಲಿ ಕನಿಷ್ಠ 60% ಅಂಕ ಇರುವುದು ಕಡ್ಡಾಯ.
ಇಂಗ್ಲಿಷ್ ಅಂಕ: - ನಿಮ್ಮ 10 ಅಥವಾ 12ನೇ ತರಗತಿಯ ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
ವಯೋಮಿತಿ - ಅಭ್ಯರ್ಥಿಗಳು 01 ಜನವರಿ 2002 ರಿಂದ 01 ಜುಲೈ 2007 ರ ನಡುವೆ ಜನಿಸಿರಬೇಕು.
ವಿಶೇಷ ಸೂಚನೆ: - ಅಂತಿಮ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು (ಜೂನ್ 2026ರ ಒಳಗೆ ರಿಸಲ್ಟ್ ಬರುವಂತಿರಬೇಕು).
ಆಯ್ಕೆ ಪ್ರಕ್ರಿಯೆ ಹೇಗೆ?
ಇಲ್ಲಿ ಯಾವುದೇ ಎಂಟ್ರೆನ್ಸ್ ಎಕ್ಸಾಮ್ ಇರೋದಿಲ್ಲ. ಆಯ್ಕೆ ಹಂತಗಳು ಹೀಗಿವೆ;
ಶಾರ್ಟ್‌ಲಿಸ್ಟಿಂಗ್ - ನೀವು ಡಿಗ್ರಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಲಿಸ್ಟ್ ತಯಾರಿಸಲಾಗುತ್ತದೆ.
SSB ಇಂಟರ್ವ್ಯ - ಶಾರ್ಟ್‌ಲಿಸ್ಟ್ ಆದವರಿಗೆ 5 ದಿನಗಳ ಕಾಲ ಸೈಕಲಾಜಿಕಲ್ ಮತ್ತು ಫಿಸಿಕಲ್ ಇಂಟರ್ವ್ಯೂ ಇರುತ್ತದೆ.
ಮೆಡಿಕಲ್ ಚೆಕಪ್- ಇಂಟರ್ವ್ಯೂ ಪಾಸ್ ಆದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಫೈನಲ್ ಮಾಡಲಾಗುತ್ತದೆ.
(ಸೂಚನೆ: NCC 'ಸಿ' ಸರ್ಟಿಫಿಕೇಟ್ ಇರುವವರಿಗೆ ಕಟ್-ಆಫ್ ಅಂಕಗಳಲ್ಲಿ 5% ರಿಯಾಯಿತಿ ಸಿಗಲಿದೆ.)
ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸಲು ನೀವು ಯಾವುದೇ ಶುಲ್ಕ (Fee) ಪಾವತಿಸುವ ಅಗತ್ಯವಿಲ್ಲ.
ಅರ್ಜಿ ಸಲ್ಲಿಕೆ ಆರಂಭ - 16 ಮೇ 2026
ಅರ್ಜಿ ಸಲ್ಲಿಸಲು ಕೊನೆಯ ದಿನ - 01 ಜೂನ್ 2026
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಇಂಡಿಯನ್ ನೇವಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಿಮ್ಮ ಇಮೇಲ್ ಐಡಿ, ಫೋನ್ ನಂಬರ್ ಮತ್ತು ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಮೇ 16ರ ನಂತರ ಲಿಂಕ್ ಲೈವ್ ಆಗಲಿದ್ದು, ಅಂದೇ ನೀವು ಅಪ್ಲೈ ಮಾಡಬಹುದು.
ದೇಶಸೇವೆ ಮಾಡುವ ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಮಾಹಿತಿಯನ್ನು ಉದ್ಯೋಗದ ನಿರೀಕ್ಷೆಯಲ್ಲಿರುವ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.