ಹುಂಡೈ ಕಾರ್ ಪ್ರೇಮಿಗಳಿಗೆ ತಟ್ಟಿದ ಭಾರಿ ಶಾಕ್ - ತಮಿಳುನಾಡಿನ ಪ್ರಮುಖ ಪ್ಲಾಂಟ್‌ನಲ್ಲಿ ಆಕಾಶ ಮುಟ್ಟಿದ ಬೆಂಕಿಯ ಕೆನ್ನಾಲಿಗೆ!!

ಕಾರ್ ಪ್ರೇಮಿಗಳಿಗೆ ಮತ್ತು ಹುಂಡೈ ಕಂಪನಿಗೆ ಭಾರಿ ಶಾಕಿಂಗ್ ಸುದ್ದಿಯೊಂದು ಬಂದಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಇರುಂಗಟ್ಟುಕೊಟ್ಟೈನಲ್ಲಿರುವ ಹುಂಡೈ ಮೊಬಿಸ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದಿಢೀರನೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಕಾರ್ಖಾನೆಯಲ್ಲಿದ್ದ ಹೊಸ ಕಾರುಗಳು ಮತ್ತು ಬಿಡಿಭಾಗಗಳು ಸುಟ್ಟು ಕರಕಲಾಗಿವೆ. ಘಟನೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಶೋರೂಂಗೆ ಹೋಗಬೇಕಿದ್ದ ಹೊಸ ಕಾರುಗಳು ಕ್ಷಣಾರ್ಧದಲ್ಲಿ ಬೂದಿ
ಶೋರೂಂಗೆ ಹೋಗಬೇಕಿದ್ದ ಹೊಸ ಕಾರುಗಳು ಕ್ಷಣಾರ್ಧದಲ್ಲಿ ಬೂದಿ

ಆಕಾಶ ಮುಟ್ಟಿದ ದಟ್ಟ ಹೊಗೆ!

ಕಾರ್ಖಾನೆಯಲ್ಲಿ ಕೆಲಸ ನಡೀತಿರುವಾಗಲೇ ಇದ್ದಕ್ಕಿದ್ದಂತೆ ಒಂದು ಕಡೆ ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯಲ್ಲಿ ಪ್ಲಾಸ್ಟಿಕ್, ವೈರ್ ಹಾಗೂ ಆಯಿಲ್‌ನಂತಹ ಬೇಗನೆ ಬೆಂಕಿ ಹರಡುವ ವಸ್ತುಗಳು ಇದ್ದಿದ್ದರಿಂದ, ನೋಡನೋಡುತ್ತಿದ್ದಂತೆಯೇ ಬೆಂಕಿ ಇಡೀ ಬಿಲ್ಡಿಂಗ್‌ಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಇಡೀ ಏರಿಯಾವನ್ನು ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತ್ತು. ಕಿಲೋಮೀಟರ್ ದೂರದವರೆಗೂ ಈ ಭೀಕರ ಹೊಗೆ ಕಾಣಿಸುತ್ತಿದ್ದು, ಸ್ಥಳೀಯರು ಭಯಭೀತರಾಗಿದ್ದರು.

ಡಜನ್‌ಗಟ್ಟಲೆ ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

ಘಟನೆ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಒಂದಾದ ಮೇಲೊಂದರಂತೆ ಡಜನ್‌ಗಟ್ಟಲೆ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ತರಿಸಿಕೊಳ್ಳಲಾಯಿತು. ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಕೊನೆಗೂ ಬೆಂಕಿಯನ್ನು ಪೂರ್ಣವಾಗಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರಿ ಪ್ರಮಾಣದ ಆಸ್ತಿ ಹಾನಿ

ಬೆಂಕಿ ಆರಿಕೆಯಾಗುವಷ್ಟರಲ್ಲಿ ಆಗಬೇಕಾದ ಭಾರಿ ಅನಾಹುತ ನಡೆದುಹೋಗಿತ್ತು. ಕಾರ್ಖಾನೆಯ ಒಳಗಡೆ ಇದ್ದ ಹೊಸ ಕಾರುಗಳು, ಶೋರೂಂಗೆ ಕಳುಹಿಸಲು ರೆಡಿಯಾಗಿದ್ದ ವಾಹನಗಳು ಮತ್ತು ಬೆಲೆಬಾಳುವ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಂಪನಿಗೆ ಇದರಿಂದ ಭಾರಿ ಮೊತ್ತದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗಾದರೂ ಪ್ರಾಣಾಪಾಯವಾಗಿದೆಯೇ ಅಥವಾ ಗಾಯಗಳಾಗಿವೆಯೇ ಎಂಬ ಬಗ್ಗೆ ಇನ್ನು ನಿಖರ ಮಾಹಿತಿ ಬಂದಿಲ್ಲ.

ತನಿಖೆ ಕೈಗೆತ್ತಿಕೊಂಡ ಪೊಲೀಸರು

ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಂಚಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣನಾ ಅಥವಾ ಬೇರೆನಾದರೂ ಎಡವಟ್ಟಾಗಿದೆಯಾ? ಎಂಬ ನಿಟ್ಟಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಫ್ಯಾಕ್ಟರಿಯ ಸುರಕ್ಷತಾ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಹುಂಡೈ ಸಂಸ್ಥೆಯ ಪ್ರಮುಖ ಪೂರೈಕೆ ಘಟಕಗಳಲ್ಲಿ ಒಂದಾದ ಹುಂಡೈ ಮೊಬಿಸ್‌ನಲ್ಲಿ ಇಂತಹದೊಂದು ದೊಡ್ಡ ದುರಂತ ನಡೆದಿರುವುದು ಆಟೋಮೊಬೈಲ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

Latest News